7 Hot News
A Karnataka Times Affiliate Kannada News Portal

ಸಿಹಿ ಸುದ್ದಿ, 2024 ರಲ್ಲಿ ಪ್ರಗ್ನೆಂಟ್ ಆದ ನಟಿ ಅದಿತಿ ಪ್ರಭುದೇವ! ಫೋಟೋಗಳನ್ನು ಹಂಚಿಕೊಂಡು ಹೇಳಿದ್ದೇನು ನೋಡಿ!!

advertisement

ನಮ್ಮ ಕನ್ನಡದ ಹುಡುಗಿ ಅದಿತಿ ಪ್ರಭುದೇವ(Adithi Prabhudeva) ಅವರು 2024ರ ಹೊಸ ವರ್ಷದ ಸಂಭ್ರಮದಲ್ಲಿ ಅಭಿಮಾನಿಗಳ ಜೊತೆಗೆ ಸಿಹಿ ಸುದ್ದಿಯನ್ನು ಹಂಚಿಕೊಂಡು ಖುಷಿಪಟ್ಟಿದ್ದಾರೆ. ಅತಿಥಿ ಪ್ರಭುದೇವ ಅವರು ತಮ್ಮ ಪತಿಯೊಂದಿಗೆ ಸಂತೋಷವಾಗಿ ಸಮಯ ಕಳೆಯುವಂತಹ ಕೆಲವು ಸುಂದರ ಕ್ಷಣಗಳ ಫೋಟೋಗಳನ್ನು ಶೇರ್ ಮಾಡಿ ಇಷ್ಟು ದಿನಗಳಿಂದ ಗುಟ್ಟಾಗಿ ಇಟ್ಟಿದಂತಹ ಸಂಭ್ರಮ ಒಂದನ್ನು ರಿವಿಲ್ ಮಾಡಿದ್ದಾರೆ.

advertisement

ಹೌದು ಸ್ನೇಹಿತರೆ ಅದಿತಿ ಮತ್ತು ಯಶಸ್(Adithi Yashas) ದಂಪತಿಗಳು ಪೋಷಕರಾಗುತ್ತಿರುವ ಖುಷಿಯಲ್ಲಿ ಇದ್ದು ಇದರ ಸಂಭ್ರಮವನ್ನು ಅದಿತಿಯವರು ತಮ್ಮ instagram ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ “ ಸಂಬಂಧಗಳಲ್ಲಿ ಶ್ರೇಷ್ಠವಾದದ್ದು ಹುಟ್ಟಿದಾಗಿನಿಂದ ಸಾ!ಯುವವರೆಗೂ ಪ್ರತಿಯೊಂದು ನೋವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ “ಅಮ್ಮ”… ಜೀವನದಲ್ಲಿ ಪ್ರತಿಯೊಬ್ಬರು ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ “ಅಮ್ಮ”… ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ “ಅಮ್ಮ”…

advertisement

2024ಕ್ಕೆ ನಾನು “ಅಮ್ಮ” ಬಹಳ ಸುಂದರವಾದ ಕ್ಯಾಪ್ಷನ್ ಬರೆದು ಅದಿತಿಯವರು ತಮ್ಮ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ನಟಿ ಅತಿಥಿ ಪ್ರಭುದೇವ(Adithi Prabhudeva) ಅವರು ಬಿಳಿ ಹಾಗೂ ಹಸಿರು ಮಿಶ್ರಿತವಿರುವಂತಹ ಗೌನ್ ಧರಿಸಿ ತಮ್ಮ ಪತಿಯ ತೋಳುಗಳನ್ನು ಹಿಡಿದು ಪ್ರೀತಿಯಿಂದ ಹಿಡಿದುಕೊಂಡು ನಸು ನಗುತಾ ಹೆಜ್ಜೆ ಹಾಕಿದ್ದಾರೆ. ಹಾಗೂ ಮತ್ತಷ್ಟು ಫೋಟೋಗಳಲ್ಲಿ ತಮ್ಮ ಬೇಬಿ ಬಂಪ್ ಮೇಲೆ ಪ್ರೀತಿ ಗಾಳಿಯಲ್ಲಿ ಕೂದಲನ್ನು ಹರಿಬಿಟ್ಟು ಬಹಳ ಮುದ್ದಾಗಿ ಫೋಟೋ ತೆಗೆಸಿಕೊಂಡಿದ್ದು.

advertisement

advertisement

ಈ ಎಲ್ಲಾ ಕ್ಯಾಂಡೇಟ್ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರುವ ಜೊತೆಗೆ ತಾಯಿಯಾಗುತ್ತಿರುವ ಸಂಭ್ರಮವನ್ನು ಹಂಚಿಕೊಂಡು ಖುಷಿಪಟ್ಟಿದ್ದಾರೆ. ಫೋಟೋ ಹಂಚಿಕೊಳ್ಳಲಾದ ಕೆಲವೇ ಕೆಲವು ಗಂಟೆಗಳಲ್ಲಿ ಐವತ್ತು ಸಾವಿರಕ್ಕೂ ಹೆಚ್ಚಿನ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಗೆ ಹರಿದು ಬಂದಿದೆ.

advertisement

 

View this post on Instagram

 

A post shared by ADITI PRABHUDEVA (@aditiprabhudeva)

advertisement

advertisement

ತನ್ನ ನೆಚ್ಚಿನ ನಟಿಯ ತಾಯಿತನದ ಸಂಭ್ರಮವನ್ನು ಕಂಡ ಫ್ಯಾನ್ಸ್ ತಾಯಿ ಮಗುವಿಗೆ ಶುಭ ಹಾರೈಸುವುದರ ಜೊತೆಗೆ ತಮ್ಮ ಮೊದಲ ಮಗುವನ್ನು ಬರ ಮಾಡಿಕೊಳ್ಳುತ್ತಿರುವ ಅತಿಥಿ ಪ್ರಭುದೇವ(Adithi Prabhudeva) ಮತ್ತು ಯಶಸ್ ಪಾಟ್ಲಾ(Yashas Patla) ದಂಪತಿಗಳಿಗೆ ಶುಭ ಕೋರಿದ್ದಾರೆ. ಕಂಗ್ರಾಜುಲೇಷನ್ಸ್ ಮೇಡಂ, ಮೊದಲು ದೃಷ್ಟಿ ತೆಗೆಸಿಕೊಳ್ಳಿ, ಸೂಪರ್ ಕ್ಯೂಟ್, ಅಭಿನಂದನೆಗಳು ಎಂಬಲ್ಲ ಕಮೆಂಟ್ಗಳ ಸುರಿಮಳೆಯನ್ನು ನೆಟ್ಟಿಗರು ಹರಿಸಿದ್ದಾರೆ

advertisement

Leave A Reply

Your email address will not be published.