PhotoGrid Site 1671421892347

ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ವ್ಯಕ್ತಿ! ತಪ್ಪೇನು ಇಲ್ಲ ಬಿಡು ಚಿನ್ನ, ಇಂತಾ ಅವಾಮಾನ ಸಾಕಷ್ಟು ಅನುಭವಿಸಿದ್ದೀನಿ ಎಂದ ನಟ ದರ್ಶನ್! ವಿಡಿಯೋ

ಸುದ್ದಿ

ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಹೆಚ್ಚು ಗುರುತಿಸಿಕೊಳ್ಳುತ್ತಿರುವ ಸ್ಟಾರ್ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂಚೂಣಿಯಲ್ಲಿ ಇದ್ದಾರೆ. ಅವರು ವರ್ಷಕ್ಕೆ ಒಂದು ಎರಡು ಸಿನಿಮಾಗಳನ್ನು ಮಾಡಿದರೂ ಕೂಡ ಜನರು ಅದನ್ನು ಮುಗಿಬಿದ್ದು ನೋಡುತ್ತಾರೆ. ಅವರ ಸಿನಿಮಾಗಳು ಎಲ್ಲವೂ ಸೂಪರ್ ಡೂಪರ್ ಹಿಟ್ ಕಂಡಿವೆ. ಅದರಲ್ಲೂ ಇತ್ತೀಚಿಗೆ ದರ್ಶನ್ ಅವರ ಅಭಿಮಾನಿಗಳ ಸಂಖ್ಯೆಯು ಜಾಸ್ತಿಯಾಗಿದೆ. ಲಕ್ಷಾಂತರ ಅಭಿಮಾನಿಗಳನ್ನ ಹೊಂದಿರುವ ದರ್ಶನ್ ಸಾಮಾಜಿಕ ಸಭೆ ಸಮಾರಂಭಗಳಲ್ಲಿಯೂ ಕೂಡ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಹೀಗೆ ಹೊಸಪೇಟೆಯಲ್ಲಿ ದರ್ಶನ್ ಬಂದಿದ್ದಾಗ ಒಂದು ಅವಘಡ ನಡೆದು ಹೋಗಿದೆ.

ಇದೇ ಬರುವ ಜನವರಿಯಲ್ಲಿ ರಾಜ್ಯಾದ್ಯಂತ ಬಿಡುಗಡೆ ಆಗಲಿರುವ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯ ಭರ್ಜರಿಯಿಂದ ನಡೆಯುತ್ತಿದೆ. ದರ್ಶನ್ ಅವರನ್ನು ಯಾವ ಮಾಧ್ಯಮಗಳು ಪ್ರಮೋಟ್ ಮಾಡೋದಿಲ್ಲ ಎಂದು ಹೇಳಿದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅವರ ಸಿನಿಮಾ ಪ್ರಚಾರ ಹೆಚ್ಚಾಗಿ ಕಾಣುತ್ತಿದೆ. ಅಲ್ಲದೆ ದರ್ಶನ್ ಅವರ ಅಭಿಮಾನಿಗಳು ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಹೆಚ್ಚಾಗಿ ತೊಡಗಿದ್ದಾರೆ.

ಇನ್ನು ದಾಸ ಅವರ ಕ್ರಾಂತಿ ಸಿನಿಮಾ ಚಿತ್ರ ತಂಡ ಕರ್ನಾಟಕ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾ ಕ್ರಾಂತಿ ಸಿನಿಮಾದ ಪ್ರಮೋಷನ್ ಮಾಡುತ್ತಿದೆ. ಜೊತೆಗೆ ಸಾಕಷ್ಟು ಯೂಟ್ಯೂಬ್ ಚಾನೆಲ್ ಗಳಲ್ಲಿ ಡಿ ಬಾಸ್ ಅವರ ಸಂದರ್ಶನ ಕೂಡ ಪ್ರಸಾರವಾಗುತ್ತಿದೆ. ಸಂದರ್ಶನದ ವೇಳೆ ಕ್ರಾಂತಿ ಸಿನಿಮಾದ ಜೊತೆಗೆ ಇನ್ನೂ ಹಲವಾರು ಸಿನಿಮಾ ಇಂಡಸ್ಟ್ರಿಗೆ ಸಂಬಂಧ ಪಟ್ಟ ವಿಷಯಗಳನ್ನು ಶೇರ್ ಮಾಡುತ್ತಿದ್ದಾರೆ ದರ್ಶನ್.

ಇನ್ನು ಇತ್ತೀಚಿಗೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ದರ್ಶನ್ ಹಾಗೂ ರಚಿತಾ ರಾಮ್ ಕ್ರಾಂತಿ ಸಿನಿಮಾದ ಪ್ರಮೋಷನ್ ಗಾಗಿ ಬಂದಿದ್ದರು ಈ ಸಮಯದಲ್ಲಿ ಕ್ರಾಂತಿ ಸಿನಿಮಾದ ಹಾಡು ಬಿಡುಗಡೆ ಮಾಡಲಾಗಿತ್ತು. ಕ್ರಾಂತಿ ಸಿನಿಮಾದ ಹಾಡು ಬಿಡುಗಡೆಯ ಈ ಸಮಾರಂಭದಲ್ಲಿ ರಚಿತಾ ರಾಮ್ ಮಾತನಾಡುತ್ತಿರುವಾಗ.

ಪಕ್ಕದಲ್ಲಿ ನಟ ದರ್ಶನ್ ಕೂಡ ಇದ್ದರು ಅವರನ್ನು ಜನ ಸುತ್ತುವರೆದಿದ್ರು. ಈ ಸಂದರ್ಭದಲ್ಲಿ ಆ ಚಾತುರ್ಯವೊಂದು ನಡೆದು ಹೋಗಿದೆ ಜನರ ಗುಂಪಿನ ಮಧ್ಯದಲ್ಲಿ ಇದ್ದ ಒಬ್ಬ ವ್ಯಕ್ತಿ ದರ್ಶನ್ ಕಡೆಗೆ ಶೂ ಎಸೆದಿದ್ದಾನೆ. ತಕ್ಷಣವೇ ಅಲ್ಲಿಯೇ ಇದ್ದ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ ಆದರೆ ಶೂ ಎಸೆದ ವ್ಯಕ್ತಿ ಯಾರು ಯಾಕೆ ಎಸೆದಿದ್ದಾನೆ ಎಂಬುದು ಇನ್ನು ತಿಳಿದು ಬಂದಿಲ್ಲ.

ದರ್ಶನ್ ಅವರು ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ ಅವರು ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ಕೂಡ ರಿಯಲ್ ಹೀರೋ ಎನಿಸಿದ್ದಾರೆ ಅಂತದ್ರಲ್ಲಿ ದರ್ಶನ್ ಅವರಿಗೆ ಯಾರು ಈ ರೀತಿ ಅವಮಾನ ಮಾಡ್ತಾರೆ ಅನ್ನೋದು ನಿಜಕ್ಕೂ ಆಶ್ಚರ್ಯಕರವಾದ ವಿಷಯ. ಆ ವ್ಯಕ್ತಿ ಶೂ ಎಸೆದಿದ್ದರಿಂದ ದರ್ಶನ್ ಅವರ ಅಭಿಮಾನಿಗಳು ಗರಂ ಆಗಿದ್ದಾರೆ. ಪೊಲೀಸರು ಹೀಗೆ ದರ್ಶನ್ ಅವರನ್ನು ಅವಮಾನ ಮಾಡಿರುವ ವ್ಯಕ್ತಿಯನ್ನು ತನಿಖೆ ಮಾಡುವುದಕ್ಕೆ ಹುಡುಕಾಟ ನಡೆಸಿದ್ದಾರೆ.

Leave a Reply

Your email address will not be published. Required fields are marked *