ಸದ್ಯ ಕನ್ನಡ ಕಿರುತೆರೆ ಲೋಕದಲ್ಲಿ ಬಿಗ್ ಬಾಸ್ ದ್ದೇ ಮಾತು. ಈಗಾಗಲೇ ಬಿಗ್ ಬಾಸ್ ಓಟಿಟಿ ವರ್ಷನ್ ಮುಗಿದಿದೆ. ವೂಟ್ ಸೆಲೆಕ್ಟ್ ನಲ್ಲಿ ಮಾತ್ರ ಪ್ರಸಾರವಾಗುತ್ತಿದ್ದ ಓಟಿಟಿ ಕನ್ನಡ ವರ್ಷನ್ ಸಾಕಷ್ಟು ಜನರಿಗೆ ನೋಡಲು ಸಾಧ್ಯವಾಗುತ್ತಿರಲಿಲ್ಲ. ಇಂದು ಜನರ ಬೇಡಿಕೆಯಂತೆ ಬಿಗ್ ಬಾಸ್ ಸೀಸನ್ 9 ಕಲರ್ಸ್ ಕನ್ನಡ ವಾಹಿನಿಯಲ್ಲಿಯೇ ಪ್ರಸಾರವಾಗುತ್ತಿದೆ. ಕಿಚ್ಚ ಸುದೀಪ್ ಕಳೆದ ವಾರಾಂತ್ಯದಲ್ಲಿ ಭರ್ಜರಿಯಾಗಿಯೇ ಚಾಲನೆ ನೀಡಿದರು.
ಬಿಗ್ ಬಾಸ್ ಸೀಸನ್ 9ರ ಭರಾಟೆ ಆರಂಭವಾಗಿದೆ. 18 ಜನ ಸ್ಪರ್ಧಿಗಳು ಪ್ರವೇಶಿಸಿದ್ದಾರೆ. ಇದರಲ್ಲಿ ನಾಲ್ಕು ಸ್ಪರ್ದಿಗಳು ವುಟ್ ಸೆಲೆಕ್ಟ್ ನಲ್ಲಿ ಪ್ರಸಾರವಾಗಿದ್ದ ಬಿಗ್ ಬಾಸ್ ಓಟಿಟಿ ವರ್ಷನ್ ನ ಟಾಪ್ 4 ಕಂಟೆಸ್ಟೆಂಟ್ ಗಳು. ಸಾನಿಯಾ ಅಯ್ಯರ್, ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ, ಹಾಗೂ ರಾಕೇಶ್ ಅವರು ಓಟಿಟಿಯಿಂದ ಬಿಗ್ ಬಾಸ್ ದೊಡ್ಡಮನೆಗೆ ಪ್ರವೇಶ ಪಡೆದಿದ್ದಾರೆ.
ಇದರಲ್ಲಿ ರೂಪೇಶ್ ಶೆಟ್ಟಿ ವಿನ್ನರ್ ಕೂಡ ಆಗಿದ್ರು. ಇನ್ನು ಬಿಗ್ ಬಾಸ್ ಓಟಿಟಿ ವರ್ಷನ್ ನಲ್ಲಿ ಹೆಚ್ಚು ಕೇಳಿ ಬರುತ್ತಿದ್ದ ಹೆಸರು ಸೋನು ಶ್ರೀನಿವಾಸ್ ಗೌಡ. ಇವರು ಕೂಡ ದೊಡ್ಮನೆ ಪ್ರವೇಶ ಮಾಡಬಹುದು ಅಂತ ಹಲವರ ನೀರಿಕ್ಷೆ ಇತ್ತು. ಟಾಪ್ 5ಗೆ ಬಂದ ಸೋನು ಶ್ರೀನಿವಾಸ್ ಗೌಡ ಅವರ ಲಕ್ ಕೈಕೊಟ್ಟಿತು. ಅವರು ದೊಡ್ಮನೆ ಪ್ರವೇಶ ಪಡೆಯುವುದಕ್ಕೆ ಸಾಧ್ಯವಾಗಲೇ ಇಲ್ಲ. ಸೋನು ಶ್ರೀನಿವಾಸ್ ಗೌಡ ಅವರ ಬಗ್ಗೆ ಸಾಕಷ್ಟು ಟ್ರೋಲ್ ಪೇಜ್ ಗಳು ಹುಟ್ಟಿಕೊಂಡಿವೆ.
ಅವರು ಬಿಗ್ ಬಾಸ್ ಮನೆಗೆ ಹೋಗುವುದಕ್ಕೂ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಬಹಳ ಫೇಮಸ್ ಆಗಿದ್ದವರು. ಹೌದು, ಸೋನು ಶ್ರೀನಿವಾಸ ಗೌಡ ಕನ್ನಡಿಗರಿಗೆ ಚಿರಪರಿಚಿತ. ಅವರು ಹೆಚ್ಚು ಟ್ರೋಲ್ ಆಗಿದ್ದೆ ಅವರ ಖಾಸಗಿ ವಿಡಿಯೋ ಒಂದು ಪಬ್ಲಿಕ್ ಆದ ನಂತರ. ಸೋನು ಶ್ರೀನಿವಾಸ ಗೌಡ ಅವರ ಖಾಸಗಿ ವಿಡಿಯೋ ಲೀಕ್ ಆಗಿತ್ತು ಈ ಬಗ್ಗೆಯು ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ ಸೋನು ಶ್ರೀನಿವಾಸ್ ಗೌಡ ಅವರು ಇದು ತನ್ನ ನಂಬಿಕೆಗೆ ಆದ ದ್ರೋಹ ಅಂತ ಹೇಳಿಕೊಂಡಿದ್ದರು.
ಇದೆಲ್ಲದರ ನಡುವೆ ಸೋನು ಅವರು ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಆಟವಾಡಿದ್ದಾರೆ ಹಾಗಾಗಿ ಕೊನೆಯ ಹಂತದವರೆಗೂ ಅವರು ಬಿಗ್ ಬಾಸ್ ಮನೆಯಲ್ಲಿ ಉಳಿಯುವುದಕ್ಕೆ ಸಾಧ್ಯವಾಗಿತ್ತು. ಇನ್ನು ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಸೋನು ಶ್ರೀನಿವಾಸ್ ಗೌಡ ತಮ್ಮ ಪ್ರಮೋಷನ್ ವಿಡಿಯೋಗಳಿಂದಲೇ ಸಾಕಷ್ಟು ಹಣ ಗಳಿಸುತ್ತಾರೆ. ಹೌದು ಸಾಮಾಜಿಕ ಜಾಲತಾಣದ ಮೂಲಕ ಹಣವನ್ನು ಕೂಡ ಗಳಿಸಬಹುದು ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.
ಹೀಗೆ ಈಗಾಗಲೇ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೋನು ಅವರು ಕೂಡ ಪ್ರಮೋಷನ್ ವಿಡಿಯೋಗಳ ಮೂಲಕ ಹಾಗೂ ಇತರ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದರ ಮೂಲಕವೂ ತಿಂಗಳಿಗೆ ಲಕ್ಷಾನುಗಟ್ಟಲೆ ಹಣವನ್ನು ಗಳಿಸುತ್ತಿದ್ದರು. ಅಂದಹಾಗೆ ಬಿಗ್ ಬಾಸ್ ಮನೆಯಿಂದ ಸೋನು ಶ್ರೀನಿವಾಸ್ ಗೌಡ ಗಳಿಸಿರುವ ಹಣ ಎಷ್ಟು ಗೊತ್ತಾ?
ಸೋನು ಬಗ್ಗೆ ಸಾಕಷ್ಟು ಟ್ರೋಲ್ ಗಳು ಆಗುತ್ತಿದ್ರೂ ಕೂಡ ಇವರ ನೇಮ್ -ಫೇಮ್ ಗೇನು ಕಡಿಮೆ ಇಲ್ಲ. ಅಂದಹಾಗೆ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದ ಸೋನು ಶ್ರೀನಿವಾಸ್ ಗೌಡ ಅವರಿಗೆ ಕನಿಷ್ಠ ಅಂದ್ರು ಆರು ಲಕ್ಷ ಸಂಭಾವನೆ ನೀಡಲಾಗಿದೆ ಎಂದು ವರದಿಯಾಗಿದೆ. ಜೊತೆಗೆ ಅವರು ಸಿನಿಮಾದಲ್ಲಿಯೂ ಅಭಿನಯಿಸುತ್ತಾರೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ.