ಹೈದರಾಬಾದ್ ಅಭಿಮಾನಿಗಳ ಮಧ್ಯ ಸಿಕ್ಕಿಬಿದ್ದ ನಟಿ ರಶ್ಮಿಕಾ ಮಂದಣ್ಣ ಪಾಡು ನೋಡಿ! ವಿಡಿಯೋ ನೋಡಿ ಬಾಯಲ್ಲಿ ಬೆರಳಿಟ್ಟುಕೊಂಡ ಜನತೆ!!

ಸುದ್ದಿ

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಅಂದ್ರೆ ಜನರಿಗೆ ಹೆಚ್ಚಿನ ಆಕರ್ಷಣೆ ಇರುತ್ತೆ ಅದರಲ್ಲೂ ತಮ್ಮ ನೆಚ್ಚಿನ ನಾಯಕ ನಟ ಅಥವಾ ನಟಿ ಯಾವುದಾದರು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡರೆ ಅವರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಬೇಕು ಅವರ ಜೊತೆ ಮಾತನಾಡಬೇಕು ಅಂತ ಹಾತೊರೆಯುತ್ತಾರೆ. ಕೆಲವು ಸಲ ರಸ್ತೆ ಮೇಲೆ ಕಾಣಿಸಿಕೊಂಡರೆ ಸಾಕು ಅವರ ಕಾರ್ ಮೂವ್ ಆಗದ ರೀತಿಯಲ್ಲಿ ಜನ ಅವರನ್ನ ಮುತ್ತಿಕೊಳ್ಳುತ್ತಾರೆ.

ಇಂತಹದ್ದೇ ಒಂದು ಸಂದರ್ಭವನ್ನು ಇತ್ತೀಚಿಗೆ ರಶ್ಮಿಕಾ ಮಂದಣ್ಣ ಕೂಡ ಅನುಭವಿಸಿದರು. ಹೌದು, ಕಾರ್ಯಕ್ರಮ ಒಂದರಲ್ಲಿ ರಶ್ಮಿಕ ಮಂದಣ್ಣ ಅವರಿಗೆ ಅವರ ಅಭಿಮಾನಿಗಳು ಮುಜುಗರ ಆಗುವಂತೆ ನಡೆದುಕೊಂಡಿದ್ದು ನಿಜಕ್ಕೂ ಬೇಸರ ತರಿಸುವ ಸಂಗತಿ. ನಟಿ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಆಗಿದ್ದಾರೆ.

ಕನ್ನಡದಲ್ಲಿ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಿನಿ ಆರಂಭಿಸಿದ ರಶ್ಮಿಕ ಮಂದಣ್ಣ ಆಗಿದ್ದು ಮಾತ್ರ ತೆಲುಗು ಚಿತ್ರರಂಗದಲ್ಲಿ. ಇಂದು ಹೈದರಾಬಾದ್ ನಲ್ಲಿ ಸ್ವಂತ ಮನೆಯನ್ನು ಖರೀದಿ ಮಾಡಿರುವ ರಶ್ಮಿಕ ಮಂದಣ್ಣ ಟಾಲಿವುಡ್ ನಲ್ಲಿಯೇ ಹೆಚ್ಚು ಸಿನಿಮಾಗಳನ್ನ ಮಾಡುತ್ತಾರೆ ರಶ್ಮಿಕ ಅವರಿಗೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಆಫರ್ ಗಳು ಹುಡುಕಿಕೊಂಡು ಬರುತ್ತಿವೆ.

ನಟಿ ರಶ್ಮಿಕಾ ಮಂದಣ್ಣ, ಅವರ ಪುಷ್ಪಾ ಸಿನಿಮಾದ ಶ್ರೀವಲ್ಲಿ ಪಾತ್ರವನ್ನು ಎಲ್ಲರೂ ಬಹುವಾಗಿ ಮುಚ್ಚಿಕೊಂಡಿದ್ದರು. ಇನ್ನೇನು ಪುಷ್ಪ ಭಾಗ 2ರ ಚಿತ್ರೀಕರಣ ಕೂಡ ಆರಂಭವಾಗಲಿದೆ. ಅದರಲ್ಲಿಯೂ ಕೂಡ ರಶ್ಮಿಕ ಅವರಿಗೆ ಬಹುಮುಖ್ಯ ರೋಲ್ ನೀಡಲಾಗಿದೆ. ಇನ್ ಸೌತ್ ನಲ್ಲಿ ಮಾತ್ರವಲ್ಲದೆ ನಾರ್ತ್ ನಲ್ಲಿಯೂ ಕೂಡ ರಶ್ಮಿಕ ಕಮಾಲ್ ಮಾಡುತ್ತಿದ್ದಾರೆ. ಹೌದು ರಶ್ಮಿಕ ಮಂದಣ್ಣ ಇದೀಗ ಬಾಲಿವುಡ್ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ.

ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಸೂಪರ್ ಸ್ಟಾರ್ ಸಿದ್ದಾರ್ಥ್ ಮಲ್ಹೊತ್ರ ಮೊದಲದವರ ಜೊತೆ ತೆರೆ ಹಂಚಿಕೊಂಡಿದ್ದಾರೆ ರಶ್ಮಿಕ ಮಂದಣ್ಣ. ಬಾಲಿವುಡ್ ನಲ್ಲಿಯೂ ಹೆಚ್ಚು ಅವಕಾಶಗಳನ್ನ ಪಡೆದುಕೊಳ್ಳುತ್ತಿರುವ ರಶ್ಮಿಕ ಮಂದಣ್ಣ ಆಗಾಗ ಫ್ರೀ ಟೈಮ್ ಮಾಡಿಕೊಂಡು ಪ್ರಯಾಣ ಬೆಳೆಸುವುದನ್ನು ಮರೆಯುವುದಿಲ್ಲ. ಇತ್ತೀಚಿಗೆ ನಟ ವಿಜಯ ದೇವರಕೊಂಡ ಅವರ ಜೊತೆಗೆ ಮಾಲ್ಡೀವ್ಸ್ ಸುತ್ತಿ ಬಂದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಇನ್ನು ರಶ್ಮಿಕ ಆಗಾಗ ವಿಜಯ್ ದೇವರಕೊಂಡ ಅವರ ಬಗ್ಗೆ ಉತ್ತಮ ಮಾತುಗಳನ್ನು ಆಡುವುದು ಇವರ ನಡುವೆ ಏನು ಸಂಥಿಂಗ್ ಸಂಥಿಂಗ್ ಇದೆ ಅನ್ನುವ ರೀತಿ ಭಾಸವಾಗುತ್ತದೆ. ಇನ್ನು ಈ ನಡುವೆ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಕಾರ್ಯಕ್ರಮ ಒಂದಕ್ಕೆ ಭೇಟಿ ನೀಡಿದ್ದರು ಅಭಿಮಾನಿಗಳು ಮುಗಿಬಿದ್ರು. ಆ ಜನರ ಗುಂಪಿನಿಂದ ಹೊರಬರಲು ರಶ್ಮಿಕ ಮಂದಣ್ಣ ಪರದಾಡಿದ್ದು ಅಷ್ಟಿಷ್ಟಲ್ಲ.

ಹೌದು ರಶ್ಮಿಕಾ ಮಂದಣ್ಣ ಅವರ ಜೊತೆಗೆ ಇದ್ದ ಸೆಕ್ಯೂರಿಟಿ ಗಾರ್ಡ್ಸ್ ಕೂಡ ಜನರನ್ನ ಚದುರಿಸಲು ಸಾಕಷ್ಟು ಕಷ್ಟಪಟ್ರು. ರಶ್ಮಿಕಾ ಮಂದಣ್ಣ ಮುಂದೆ ಹೋಗಲಾರದಷ್ಟು ಜನ ಅವರನ್ನು ಸುತ್ತುವರೆದಿದ್ರು. ಇನ್ನು ಈ ನೂಕು ನುಗ್ಗಲಿನ ನಡುವೆ, ಜನರು ರಶ್ಮಿಕಾ ಮಂದಣ್ಣ ಅವರನ್ನು ಮುಟ್ಟಲು ಮುಂದಾದರು ಇದರಿಂದ ತಪ್ಪಿಸಿಕೊಳ್ಳುವಲ್ಲಿ ಸಾಕಷ್ಟು ಕಷ್ಟ ಪಡುವಂತಾಯಿತು ರಶ್ಮಿಕಾ ಮಂದಣ್ಣ ಅವರಿಗೆ. ಸೆಲೆಬ್ರಿಟಿಗಳು ಜನರ ನಡುವೆ ಹೀಗೆ ಸಿಲುಕಿಕೊಳ್ಳುವುದು ಬಹಳ ಕಾಮನ್. ಆದರೆ ಅಭಿಮಾನದ ಹೆಸರಿನಲ್ಲಿ ನಟಿಯರಿಗೆ ಮುಜುಗರವಾಗುವಂತೆ ನಡೆದುಕೊಳ್ಳುವುದು ಮಾತ್ರ ತಪ್ಪು.

Leave a Reply

Your email address will not be published. Required fields are marked *