ಇಂದು ಮಾಧ್ಯಮದಿಂದಾಗಿ ನಮ್ಮ ಸುತ್ತ ಮುತ್ತ ನಡೆಯುವ ಸಾಕಷ್ಟು ವಿಷಯಗಳು ನಮ್ಮ ಗಮನಕ್ಕೆ ಬರುತ್ತವೆ. ಕೆಲವು ಘಟನೆಗಳನ್ನ ನೋಡಿದ್ರೆ ನಿಜಕ್ಕೂ ಜನ ಹೀಗೂ ಇರ್ತಾರಾ ಅಂತ ಅನ್ನಿಸುತ್ತೆ. ಇದೊಂದು ಮದುವೆಯ ಕಥೆ. ಮದುವೆ ಅನ್ನೋದು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತೆ ಅಂತ ಹೇಳಲಾಗುತ್ತದೆ. ಆದರೆ ಹಲವರ ವಿಚಾರದಲ್ಲಿ ಇದು ಸುಳ್ಳು ಆಗಿರಬಹುದು. ಯಾಕಂದ್ರೆ ಇಚ್ಛಿಸಿದವರ ಜೊತೆ ಕೆಲವೊಮ್ಮೆ ಮದುವೆಯಾಗುವುದು ಸಾಧ್ಯವೇ ಇಲ್ಲ.
ಇದು ವಿಧಿ ಲಿಖಿತ ಎನ್ನಬಹುದು. ಆದರೆ ಇಲ್ಲೊಂದು ಜೋಡಿ ವಿಧಿಯ ಬರಹವನ್ನೂ ಕೂಡ ಬದಲಾಯಿಸಿದಂತೆ ಅನ್ನಿಸುತ್ತೆ. ಸಂಬಂಧಗಳಿಗೆ ಭಾರತದಲ್ಲಿ ಹೆಚ್ಚಿನ ವ್ಯಾಲ್ಯೂ ಕೊಡಲಾಗುತ್ತೆ. ಅದರಲ್ಲೂ ಗಂಡ ಹೆಂಡತಿ ಸಂಬಂಧ ಬಹಳ ಶ್ರೇಷ್ಠಕರವಾದದ್ದು ಎಂದೂ ಪರಿಗಣಿಸಲಾಗುತ್ತದೆ. ಹಾಗೆಯೇ ತಂದೆ ತಾಯಿ ಮಕ್ಕಳ ಸಂಬಂಧವೂ ಕೂಡ. ಹಾಗಾಗಿ ತಂದೆ ತಾಯಿಗಳು ತನ್ನ ಮಗಳಿಗೆ ಅಥವಾ ಮಗನಿಗೆ ಉತ್ತಮ ವರ ಅಥವಾ ಅದು ಸಿಗಬೇಕು ಅಂತ ಶತಾಯಗತಾಯ ಪ್ರಯತ್ನಿಸುತ್ತಾರೆ.
ಅದರಲ್ಲೂ ಹೆಣ್ಣು ಹೆತ್ತವರು ತಮಗೆ ಅತ್ಯಂತ ಒಳ್ಳೆಯ ಅಳಿಯ ಸಿಗಬೇಕು, ಮಗಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಉತ್ತಮ ಹುಡುಗನಿಗಾಗಿ ಹುಡುಕಾಟ ನಡೆಸುತ್ತಾರೆ. ಉತ್ತಮ ಕೆಲಸದಲ್ಲಿರುವ ಹುಡುಗನನನೇ ಹುಡುಕುತ್ತಾರೆ. ಮಗಳನ್ನು ಚೆನ್ನಾಗಿ ನೋಡಿಕೊಳ್ಳುವಂತಹ ಮನೆಗೆ ಮದುವೆ ಮಾಡಿಕೊಡುತ್ತಾರೆ. ಇಲ್ಲೊಬ್ಬ ತಾಯಿಯೂ ಕೂಡ ಮಗಳಿಗೆ ಇಂಥದ್ದೇ ಉತ್ತಮ ವರನ ಹುಡುಕಾಟದಲ್ಲಿ ಇದ್ದರು.
ಮೊದಲಿಗೆ ಅವರ ಉದ್ದೇಶ ಒಳ್ಳೆಯದೇ ಆಗಿತ್ತು ಆದರೆ ಕೊನೆಗೆ ಅವರು ಮಾಡಿದ್ದನ್ನ ನೆನೆಸಿಕೊಂಡರೆ ಜಗತ್ತಿನಲ್ಲಿ ಇಂತಹ ತಾಯಂದಿರು ಇರ್ತಾರ ಅಂತ ಅನಿಸಬಹುದು. ಹೌದು, ಇದು ನಮ್ಮ ಸುತ್ತಮುತ್ತ ನಡೆದಿರುವಂತಹ ಘಟನೆ. ತಾಯಿ ಮಗಳಿಗೋಸ್ಕರ ಒಂದು ಉತ್ತಮ ಅವರ ನನ್ನ ಹುಡುಕುತ್ತಾಳೆ. ಆತ 25 ವರ್ಷದ ಯುವಕ. ಆಕೆಯ ಮಗಳನ್ನ ನೋಡುವುದಕ್ಕೆ ಮನೆಗೆ ಬರುತ್ತಾನೆ ಯುವಕ.
ಆದರೆ ಅವನ ಉದ್ದೇಶವೇನಿತ್ತೋ ಗೊತ್ತಿಲ್ಲ ಅವಳನ್ನ ನೋಡಲು ಬಂದಾಗ ಮನೆಯಲ್ಲಿ ನಡೆದ ಘಟನೆ ಮಾತ್ರ ವಿಚಿತ್ರವಾಗಿತ್ತು. ಮಗಳನ್ನು ನೋಡಲು ಬಂದ ಹುಡುಗ 45 ವರ್ಷದ ಆಕೆಯ ತಾಯಿಯನ್ನು ಇಷ್ಟಪಟ್ಟಿದ್ದಾನೆ! ಇದೆಂತಹ ವಿಪರ್ಯಾಸ ನೋಡಿ. ಆಕೆಯೂ ಅಷ್ಟೇ ಮಗಳಿಗೆ ಮದುವೆ ಮಾಡುವುದು ಬಿಟ್ಟು 25 ವರ್ಷದ ಹುಡುಗನ ಜೊತೆ ಪ’ರಾರಿಯಾಗಿದ್ದಾಳೆ.
ಹೌದು, ಹೆಚ್ಚು ಕಮ್ಮಿ ಮಗನ ವಯಸ್ಸಿನ ಹುಡುಗನ ಜೊತೆ ಹೆಂಗಸೊಬ್ಬಳು ನಾಪತ್ತೆಯಾಗಿದ್ದಾಳೆ. ಇನ್ನು ತಾಯಿ ಹಾಗೂ ತನ್ನನ್ನು ನೋಡಲು ಬಂದ ಯುವಕ ತನಗೆ ಮಾಡಿದ ಮೋಸವನ್ನು ನೆನೆಸಿಕೊಂಡು ಹುಡುಗಿ ಕಣ್ಣೀರಿಡುತ್ತಾಳೆ. ನಿಜಕ್ಕೂ ಕಂಗೆಟ್ಟು, ಏನು ಮಾಡಬೇಕು ಎಂದೇ ದಿಕ್ಕು ತೋಚದೆ ಇರುವ ಆ ಹುಡುಗಿಗೆ ಸಾಂತ್ವಾನ ಹೇಳುವುದಕ್ಕೂ ಜೊತೆಯಲ್ಲಿ ಅಮ್ಮನೇ ಇಲ್ಲ.
ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಇರೋದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಾರೆ. ಆದರೆ ಇಂತಹ ಘಟನೆಗಳನ್ನು ನೋಡಿದ್ರೆ ಏನು ಅನಿಸುತ್ತೆ! ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ!