ಮದುವೆ, ಸಂಸಾರ, ಸಂಬಂಧ ಅನ್ನೋದು ಇದೀಗ ಅನ್ ಪ್ರೆಡಿಕ್ಟೆಬಲ್. ಯಾಕೆ ಗೊತ್ತಾ? ಜನರಿಗೆ ಸಂಬಂಧಗಳಲ್ಲಿ ಮೊದಲಿದ್ದ ಗೌರವವಾಗಲಿ, ಪ್ರೀತಿಯಾಗಲಿ, ವಿಶ್ವಾಸವಾಗಲಿ ಇಲ್ಲ. ಅದರಲ್ಲೂ ಸಂಸಾರ ಅಂದ್ರೆ ಜೀವನ ಪರ್ಯಂತ ಜೊತೆಯಾಗಿ ಗಂಡ ಹೆಂಡತಿ ಸಾಗುವಂಥದ್ದು. ಆದರೆ ಇದೀಗ ಈ ಕಲ್ಪನೆಯ ಬದಲಾಗಿ ಹೋಗಿದೆ. ಕೇವಲ ಶೋಕಿಗಾಗಿ ಜನ ಮದುವೆ ಆಗುತ್ತಾರೋ ಏನೋ ಅನ್ನಿಸುತ್ತೆ.
ಮದುವೆಯಾಗಿ ಒಟ್ಟೆಗೆ ದೀರ್ಘಕಾಲದವರಿಗೆ ಸಂಸಾರ ಮಾಡುವುದು ಹಾಗಿರಲಿ, ಕೆಲವೇ ದಿನಗಳಿಗೆ ಮದುವೆಯಾಗಿ ಬೇಸರ ಬಂತು ಅನ್ನೋ ಕಾರಣಕ್ಕೂ ವಿ-ಚ್ಛೇದನ ಪಡೆದುಕೊಳ್ಳುವವರಿದ್ದಾರೆ. ಹೌದು, ಇಂದು ಯಾವೆಲ್ಲಾ ಕಾರಣಕ್ಕೆ ಜನ ವಿ-ಚ್ಛೇದನ ಪಡೆದುಕೊಳ್ಳುತ್ತಾರೆ ಅಂತ ಹೇಳುವುದೇ ಕಷ್ಟ. ಮದುವೆಯಾದ ಮೇಲೆ ಗಂಡ ಅಥವಾ ಹೆಂಡತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರೆ, ವರದಕ್ಷಿಣೆ ಅಥವಾ ಕಾರಣಕ್ಕೆ ಕಿ’ರುಕುಳ ನೀಡುತ್ತಿದ್ದರೆ ಮತ್ತೆ ಅವರೊಂದಿಗೆ ಸಂಸಾರ ನಡೆಸುವುದಕ್ಕೆ ಸಾಧ್ಯವಿಲ್ಲ ಅಂತ.
ವಿ-ಚ್ಛೇದನದ ಮೊರೆ ಹೋದರೆ ಅದಕ್ಕೊಂದು ಅರ್ಥ ಇದೆ. ಆದರೆ ಈಗ ಹಾಗಿಲ್ಲ, ಹೆಂಡತಿ ಹೆಚ್ಚು ಮಾತನಾಡುತ್ತಾಳೆ, ಗಂಡ ಮಾತೇ ಆಡುವುದಿಲ್ಲ, ಆತ ಗೊರಕೆ ಹೊಡೆಯುತ್ತಾನೆ, ಗಂಡ ಹೆಚ್ಚು ಮೊಬೈಲ್ ಬಳಸುತ್ತಾನೆ, ನನಗೆ ಸಮಯ ಕೊಡುವುದಿಲ್ಲ, ಆಕೆ ಮೇಕಪ್ ಮಾಡಿಕೊಳ್ಳುತ್ತಾಳೆ ಹೀಗೆ ಹಲವಾರು ಸಿಲ್ಲಿ ಸಿಲ್ಲಿ ಕಾರಣಗಳಿಗೆ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ ದಂಪತಿಗಳು.
ಮದುವೆಯ ನಿಜಾರ್ಥ ಗೊತ್ತಿಲ್ಲದೆ ಇದ್ರೆ ಹೀಗೆ ಆಗೋದು. ಒಬ್ಬರನ್ನ ಒಬ್ಬರು ಅರಿತುಕೊಂಡು ಸಂಸಾರ ಮಾಡುವುದರ ಬದಲು ತಮಗೆ ಸಣ್ಣ ಹೊಂದಾಣಿಕೆ ಆಗುವುದಿಲ್ಲ ಅಂತ ಗೊತ್ತಾದ್ರೂ ಸಾಕು ’ತಲಾಕ್’ ಎನ್ನುತ್ತಾರೆ. ಹಾಗಾಗಿ ಇಂದು ದೇಶದಲ್ಲಿ ದಿನವೂ ಲಕ್ಷಾಂತರ ಡಿವೋಸ್ ಕೇಸ್ ಗಳು ಕೋರ್ಟ್ ನಲ್ಲಿ ನಡೆಯುತ್ತವೆ. ಇನ್ನು ಇಲ್ಲೊಬ್ಬ ಮಹಾನುಭಾವ ಹೆಂಡತಿಯ ವಿರುದ್ಧ ಕೋರ್ಟ್ ನಲ್ಲಿ ಡೈ-ವೋರ್ಸ್ ಬೇಕು ಅಂತ ಕೇಳಿಕೊಂಡಿದ್ದಾನೆ.
ಅದರ ಕಾರಣ ಕೇಳಿದರೆ ನೀವು ನಿಜಕ್ಕೂ ಬೆಚ್ಚಿ ಬೀಳ್ತಿರಿ! ಆತ ತನ್ನ ಹೆಂಡತಿಯಿಂದ ಮುಕ್ತಿ ಬೇಕು ಅಂತ ನ್ಯಾಯಾಲಯದ ಮೊರೆ ಹೋಗಿರುವುದಕ್ಕೆ ಕಾರಣವಾದರೂ ಏನು ಗೊತ್ತಾ? ಅವರಿಬ್ಬರೂ ಕಳೆದ ಕೆಲವು ವರ್ಷಗಳಿಂದ ಚೆನ್ನಾಗಿಯೇ ಸಂಸಾರ ಮಾಡಿಕೊಂಡು ಇದ್ದರು. ಈ ದಂಪತಿಗಳಿಗೆ ಮಕ್ಕಳು ಕೂಡ ಇದ್ದಾರೆ.
ಆದರೆ ಇತ್ತೀಚಿಗೆ ಹೆಂಡತಿಯ ಈ ಒಂದು ವರ್ತನೆ ಗಂಡನಿಗೆ ಇಷ್ಟವಾಗುತ್ತಿಲ್ಲ ಹಾಗಾಗಿ ತನಗೆ ಆಕೆಯಿಂದ ಡೈವೋರ್ಸ್ ಬೇಕು ಅಂತ ಕೇಳಿದ್ದಾನೆ. ತನ್ನ ಹೆಂಡತಿ ದಿನವೂ ಸ್ನಾನ ಮಾಡುವುದಿಲ್ಲ ಶುಚಿತ್ವದ ಬಗ್ಗೆ ಅವಳು ಗಮನ ಹರಿಸುವುದಿಲ್ಲ ಅನ್ನೋದೇ ಆತನ ಕಂ’ಪ್ಲೇಂಟ್. ಗಂಡ ಡೈವೋರ್ಸ್ ಕೇಳಿದ ಬಳಿಕ ಹೆಂಡತಿ ನನ್ನನ್ನ ಬಿಡಬೇಡಿ ಅಂತ ಪರಿಪರಿಯಾಗಿ ಕೇಳಿಕೊಂಡಿದ್ದಾಳೆ. ಇನ್ನೂ ಪೊಲೀಸರು ನ್ಯಾಯಾಧೀಶರು ಕೂಡ ಆತನ ಮನ ಒಲಿಸಲು ಪ್ರಯತ್ನಿಸಿದ್ದಾರೆ.
ಆದರೆ ಆತ ಮಾತ್ರ ಸುತಾರಂ ಇದಕ್ಕೆ ಒಪ್ಪುತ್ತಿಲ್ಲ ಸ್ವಚ್ಛತೆಯ ಬಗ್ಗೆ ನಿಗಾ ಇಲ್ಲದ ಹೆಂಡತಿ ನನಗೆ ಬೇಡ ನನಗೆ ಆಕೆಯಿಂದ ವಿ-ಚ್ಛೇದನ ಬೇಕೇ ಬೇಕು ಅಂತ ಹಠ ಹಿಡಿದು ಕುಳಿತಿದ್ದಾನೆ. ನೋಡಿ ಇದು ಎಂಥ ವಿಚಿತ್ರ ಘಟನೆ ಎಷ್ಟು ಸಣ್ಣ ಕಾರಣಕ್ಕೆ ಗಂಡ ಹೆಂಡತಿ ಸಂಸಾರ ಮಾಡುವುದನ್ನು ಬಿಟ್ಟು ಬೇರೆ ಆಗಬೇಕು ಅಂತ ನಿರ್ಧಾರ ಮಾಡಿದ್ದಾರೆ. ಈ ಹಿಂದೆ ಸಿನಿಮಾ ತಾರೆಯರು ಮಾತ್ರ ವಿ-ಚ್ಛೇದನದ ಶೋಕಿಗೆ ಒಳಗಾಗಿದ್ದರು. ಈಗ ಸಾಮಾನ್ಯರು ಕೂಡ ಸಿಲ್ಲಿ ಕಾರಣಕ್ಕೆ ಡೈ-ವೋರ್ಸ್ ಪಡೆದುಕೊಳ್ಳುತ್ತಿರುವುದು ನಿಜಕ್ಕೂ ದುರದೃಷ್ಟಕರ.