ಸೋಶಿಯಲ್ ಮೀಡಿಯಾದ ಪ್ರಭಾವ ಇಂದು ಎಷ್ಟರಮಟ್ಟಿಗೆ ಇದೆ ಅನ್ನೋದು ಎಲ್ಲರಿಗೂ ಗೊತ್ತು. ಇಂದು ಜನ ಊಟ ತಿಂಡಿ ಬಿಟ್ರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿ ಇರೋದನ್ನ ಬಿಡೋದಿಲ್ಲ. ಅದರಲ್ಲೂ ಇನ್ಸ್ಟಾಗ್ರಾಮ್ ಇಂದು ಹೆಚ್ಚು ಪ್ರಚಲಿತದಲ್ಲಿದೆ. ಇಂದಿನ ಎಲ್ಲಾ ಯುವ ಯುವತಿಯರು ಕೂಡ ಇನ್ಸ್ಟಾಗ್ರಾಮ್ ನಲ್ಲಿ ರೀಲ್ ಮಾಡುತ್ತಾ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದಾರೆ.
ಹೀಗೆ ತಮಿಳುನಾಡಿನ ಒಬ್ಬ ಗ್ರಹಿಣಿ ಸದಾ ಇನ್ಸ್ಟಾಗ್ರಾಮ್ ನಲ್ಲಿಯೇ ಮುಳುಗಿರುತ್ತಿದ್ದಳು. ಇದನ್ನ ನೋಡಿ ಸಹಿಸಲಾರದ ಆಕೆಯ ಪತಿ ಮಾಡಿದ್ದೇನು ಗೊತ್ತೇ? ಈ ಘಟನೆ ನಡೆದಿರುವುದು ತಮಿಳುನಾಡಿನ ತಿರುಪುರ್ ಜಿಲ್ಲೆಯ ದಿಂಡುಗಲ್ ಎಂಬಲ್ಲಿ. ಅಲ್ಲಿ ವಾಸವಾಗಿದ್ದ 38 ವರ್ಷದ ಅಮೃತಲಿಂಗಂ ಎಂಬಾತ ತನ್ನ ಪತ್ನಿ ಚಿತ್ರ ಎಂಬಾಕೆಯನ್ನು ಹೊಡೆದು ಹ-ತ್ಯೆ ಮಾಡಿರುವ ಪ್ರಕರಣ ದಾಖಲಾಗಿದೆ.
ಆರೋಪಿ ಅಮೃತಲಿಂಗಂ ತೆನ್ನಂಪಾಳ್ಯಂ ತರಕಾರಿ ಮಾರ್ಕೆಟ್ ನಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆತನ ಪತ್ನಿ ಚಿತ್ರ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು. ಚಿತ್ರ ದಿನದ ಹೆಚ್ಚಿನ ಸಮಯವನ್ನು ಇನ್ಸ್ಟಾಗ್ರಾಮ್ ನಲ್ಲಿ ರೀಲ್ ಮಾಡುವುದರಲ್ಲಿಯೇ ಕಳೆಯುತ್ತಿದ್ದಳು. ಆಕೆ ಇತ್ತೀಚಿಗೆ ಹೆಚ್ಚು ಫೇಮಸ್ ಆಗಿದ್ದು ಸುಮಾರು 33,000 ಫಾಲೋವರ್ಸ್ ಹೊಂದಿದ್ದಳು.
ಅಮೃತಲಿಂಗಂ ಹಾಗೂ ಚಿತ್ರ ಇಬ್ಬರು ಸೇಲಂ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು. ಮೊದಲು ಟಿಕ್ ಟಾಕ್ ನಲ್ಲಿ ಈಗ ಇನ್ಸ್ಟಾಗ್ರಾಮ್ ನಲ್ಲಿ ರೀಲ್ ಮಾಡಿ ಶೇರ್ ಮಾಡುವ ಚಿತ್ರ ಹೆಚ್ಚಿನ ಸಮಯ ಇದರಲ್ಲಿಯೇ ಕಳೆಯುತ್ತಿದ್ದಳು. ಹಾಗಾಗಿ ಅಮೃತಲಿಂಗಂ ಸಾಕಷ್ಟು ಬಾರಿ ಚಿತ್ರ ಬಳಿ ಜಗಳ ಮಾಡಿದ್ದಾನೆ. ಕೆಲವೊಮ್ಮೆ ಇವರಿಬ್ಬರ ಜಗಳ ತಾರಕಕ್ಕೆ ಹೋಗಿದ್ದು ಇದೆ.
ಇನ್ನು ಚಿತ್ರ ಹೆಚ್ಚು ಫೇಮಸ್ ಆಗುತ್ತಿದ್ದ ಹಾಗೆ ಆಕೆ ತಾನು ನಟನೆಯಲ್ಲಿಯೂ ತೊಡಗಿಸಿಕೊಳ್ಳಬೇಕು ಎನ್ನುವ ಆಸೆ ಶುರುವಾಯಿತು. ಇದಕ್ಕಾಗಿ ಹಿಂದಿನ ತಿಂಗಳು ಚೆನ್ನೈಗೂ ಕೂಡ ಹೋಗಿದ್ದಳು ಎನ್ನಲಾಗಿದೆ. ಕಳೆದ ವಾರ ಮನೆಗೆ ವಾಪಸ್ ಆಗಿದ್ದ ಚಿತ್ರ ಮತ್ತೆ ಚೆನ್ನೈಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದಳು. ಆದರೆ ಅಮೃತಲಿಂಗ ಹೋಗಬೇಡ ಎಂದು ಬಹಳ ಕೇಳಿಕೊಳ್ಳುತ್ತಾನೆ.
ಗಂಡನ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳದೆ ಇನ್ನಷ್ಟು ವಾಗ್ವಾದ ನಡೆಸಿದ ಚಿತ್ರ ಹೊರಡಲು ಮುಂದಾಗುತ್ತಾಳೆ. ಆಗ ಅಮೃತಲಿಂಗಂ ತನ್ನ ಶಾಲನ್ನು ಚಿತ್ರ ಕು’ತ್ತಿಗೆಗೆ ಸುತ್ತಿ ಕ’ತ್ತು ಹಿ’ಸುಕಿ ಸಹಿಸುತ್ತಾನೆ. ಅಮೃತಲಿಂಗಂ ಪತ್ನಿಯ ಕ’ತ್ತು ಹಿ’ಸುಕಿದ ನಂತರ ಆಕೆ ಪ್ರ’ಜ್ಞಾ ಹೀನ ಸ್ಥಿತಿಯಲ್ಲಿ ಕೆಳಗೆ ಬೀಳುತ್ತಾಳೆ. ಇದರಿಂದ ಭ’ಯಗೊಂಡ ಅಮೃತಲಿಂಗಂ ಮನೆಯಿಂದ ಓಡಿ ಹೋಗಿ ನಂತರ ಮಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ.
ಚಿತ್ರಾ ಮನೆಯವರು ಕೂಡ ವಿಚಾರ ತಿಳಿದು ಮನೆಗೆ ಬಂದು ನೋಡಿದಾಗ ಚಿತ್ರ ಶ-ವವಾಗಿ ಬಿದ್ದಿದಳು. ಚಿತ್ರಾಳ ಶ-ವವನ್ನು ಪೊಲೀಸರು ಮ’ರಣೋತ್ತರ ಪರೀಕ್ಷೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಅಮೃತಲಿಂಗಂನನ್ನು ಪೆರುಮನಲ್ಲೂರಿನಲ್ಲಿ ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದ ಹುಚ್ಚು ಒಂದು ಪ್ರಾ’ಣವನ್ನೇ ತೆಗೆದುಕೊಂಡಿತು ಎಂದರೆ ನಿಜಕ್ಕೂ ಬೇಸರದ ಸಂಗತಿ.