ಇತ್ತೀಚಿಗೆ ಮನುಷ್ಯ ನಗುವುದನ್ನೇ ಮರೆತಿದ್ದಾನೆ. ಬರಿ ಬ್ಯುಸಿ ಲೈಫ್! ಆಫೀಸ್ ಕೆಲಸ, ಮನೆ ಕೆಲಸ ಅಂತ ಇನ್ನೊಬ್ಬರೊಂದಿಗೆ ಮಾತನಾಡುವುದಕ್ಕೂ ಪುರುಸೋತ್ತೆ ಇರಲ್ಲ. ಬೇರೆಯವರೊಂದಿಗೆ ಬಿಡಿ ಮನೆಯಲ್ಲೇ ಇರುವ ತಂದೆ ತಾಯಿಗಳ ಜೊತೆಯೂ ಮಕ್ಕಳೊಂದಿಗೆ ಮಾತನಾಡುವುದಕ್ಕೆ ಸಮಯ ಇರಲ್ಲ. ಅದರಲ್ಲೂ ಇಂದು ಜನ ಹೆಚ್ಚು ಸಮಯ ಕಳೆಯುವುದು ಮೊಬೈಲ್ ನಲ್ಲಿ. ಊಟ ತಿಂಡಿ ಬಿಟ್ರು ಪರ್ವಾಗಿಲ್ಲ ಸಾಮಾಜಿಕ ಜಾಲತಾಣದಲ್ಲಿ ಅಂತೂ ಆಕ್ಟಿವ್ ಆಗಿ ಇರುತ್ತವೆ.
ಹೌದು, ಇಂದು ಜನರಿಗೆ ನಗುವುದಕ್ಕೂ ಪುರುಸೊತ್ತಿಲ್ಲ. ಹೆಚ್ಚು ಕಡಿಮೆ ನಗುವುದನ್ನು ಮರೆತೆ ಬಿಟ್ಟಿದ್ದಾರೆ. ಅದೆಷ್ಟೋ ಜನ ಹೊಟ್ಟೆ ತುಂಬಾ ನಕ್ಕಿ ಅದೆಷ್ಟು ಕಾಲವಾಯಿತು ಏನೋ! ಹಾಗಾಗಿ ಜನರನ್ನ ಆಗಾಗ ನಗಿಸುವುದಕ್ಕೆ ಕೆಲವು ಫ್ರ್ಯಾಂಕ್ ವಿಡಿಯೋಗಳು ಸಹಾಯ ಮಾಡುತ್ತವೆ. ದಾರಿಯಲ್ಲಿ ಸಿಕ್ಕ ಜನರನ್ನ ಬಕ್ರ ಮಾಡುವ ಕಾರ್ಯಕ್ರಮಗಳು ಸಾಕಷ್ಟು ವಾಹಿನಿಗಳಲ್ಲಿಯೂ ಪ್ರಸಾರವಾಗಿತ್ತು.
ಕೆಲವೊಮ್ಮೆ ಹೀಗೆ ಅಲ್ಲಸಲ್ಲದ ಫ್ರ್ಯಾಂಕ್ ಮಾಡಲು ಹೋಗಿ ಜನರಿಂದ ಗೂಸ ತಿಂದವರೂ ಇದ್ದಾರೆ. ಆದರೂ ಫ್ರ್ಯಾಂಕ್ ವಿಡಿಯೋ ಮಾಡುವವರು ಜನರನ್ನ ನಗಿಸುವುದಂತು ಸುಳ್ಳಲ್ಲ. ಇತ್ತೀಚಿಗೆ ಯೂಟ್ಯೂಬ್ ನಲ್ಲಿ ತಮ್ಮದೇ ಆದ ಚಾನೆಲ್ ನಲ್ಲಿ ಜನರನ್ನ ಫ್ರ್ಯಾಂಕ್ ಮಾಡಿದ ವಿಡಿಯೋಗಳನ್ನು ಸಾಕಷ್ಟು ಜನ ಅಪ್ಲೋಡ್ ಮಾಡುತ್ತಿದ್ದಾರೆ. ಫ್ರ್ಯಾಂಕ್ ಬಾಯ್ ಕನ್ನಡ ಎನ್ನುವ ಯೂಟ್ಯೂಬ್ ಚಾನೆಲ್ ಮೂಲಕ ಕೆಲವು ಯುವಕರ ಗುಂಪು ಜನರನ್ನು ಫ್ರ್ಯಾಂಕ್ ಮಾಡಿ ನಗಿಸುವಲ್ಲಿ ತೊಡಗಿಕೊಂಡಿದ್ದಾರೆ.
ಇತ್ತೀಚಿಗೆ ಕಾಲೇಜು ವಿದ್ಯಾರ್ಥಿಗಳನ್ನು ಹೋಗುವಾಗ ತಡೆ ಹಿಡಿದು ಕೆಲವು ಪ್ರಶ್ನೆಗಳನ್ನು ಕೇಳಿ ಅವರು ತಬ್ಬಿಬ್ಬಾಗುವಂತೆ ಮಾಡಿದ್ರು. ಫ್ರ್ಯಾಂಕ್ ಮಾಡುವ ಹುಡುಗರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೇಲೆ ಕೆಳಗೆ ನೋಡುತ್ತಿದ್ದರೂ ವಿದ್ಯಾರ್ಥಿಗಳು. ಹೌದು ವಿದ್ಯಾರ್ಥಿಗಳು ದಾರಿಯಲ್ಲಿ ಹೋಗುವಾಗ ಅವರನ್ನ ನಿಲ್ಲಿಸಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು ಮುಖ್ಯವಾಗಿ ನಾಲ್ಕು ಪ್ರಶ್ನೆಗಳನ್ನು ಕೇಳಿದಾಗ ಕೆಲವು ವಿದ್ಯಾರ್ಥಿಗಳು ಒಂದು ಉತ್ತರವನ್ನು ಕೂಡ ಕೊಡಲು ಸಾಧ್ಯವಾಗಲಿಲ್ಲ.
ಇನ್ನು ಕೆಲವರು ಚೂರುಪಾರು ಉತ್ತರ ಕೊಟ್ಟರು ಅದು ಸಮಂಜಸವಾಗಿರಲಿಲ್ಲ. ಇನ್ನು ಕೆಲವು ತಮಾಷೆ ಆದಂತಹ ಪ್ರಶ್ನೆಗಳನ್ನ ಹುಡುಗಿಯರ ಬಳಿಯೂ ಕೇಳಲಾಗಿತ್ತು. ಇಂತಹ ಪ್ರಶ್ನೆಗಳನ್ನ ನಮಗೆ ಕೇಳಬೇಡಿ ನಾವು ಅಮಾಯಕರು ಅಂತ ಹುಡುಗಿಯರು ನಾಚಿಕೊಂಡಿದ್ರು. ಹಾಗಾದರೆ ಫ್ರ್ಯಾಂಕ್ ಮಾಡುವ ಹುಡುಗರು ಆ ಕಾಲೇಜು ವಿದ್ಯಾರ್ಥಿನಿಯರಿಗೆ ಕೇಳಿದ ಪ್ರಶ್ನೆ ಏನು ಗೊತ್ತಾ?
ಮಾಡುವ ಯುವಕರು ವಿದ್ಯಾರ್ಥಿನಿಯರನ್ನು ಹೀಗೆ ಕೇಳುತ್ತಾರೆ ‘ಕೌ’ ಗೆ ಹಿಂದೆ ಇರುತ್ತೆ ‘ವಿಮೆನ್’ ಗೆ ಮುಂದೆ ಇರುತ್ತೆ. ಅದು ಏನು ಅಂತ ಪ್ರಶ್ನೆಯಾಗಿತ್ತು. ಆದರೆ ಇದಕ್ಕೆ ಉತ್ತರ ಮಾತ್ರ ಹುಡುಗಿಯರಿಗೆ ಗೊತ್ತಾಗಲೇ ಇಲ್ಲ ಏನೇನೋ ಕಲ್ಪನೆ ಮಾಡಿಕೊಂಡು ಹುಡುಗಿಯರಂತೂ ನಕ್ಕಿದ್ದೂ ನಕ್ಕಿದ್ದೆ. ಈ ಪ್ರಶ್ನೆಯನ್ನು ಇಂಗ್ಲಿಷ್ ವರ್ಡ್ ನಲ್ಲಿ ಅರ್ಥ ಮಾಡಿಕೊಂಡ್ರೆ ಸುಲಭವಾಗಿ ಉತ್ತರಿಸಬಹುದು ಅದೇ ಕನ್ನಡದಲ್ಲಿ ಅರ್ಥ ಮಾಡಿಕೊಂಡರೆ ಅದಕ್ಕೆ ಬೇರೆದೇ ಅರ್ಥ ಬರಬಹುದು.
ಕೌ ಅಂದ್ರೆ cow ಇಲ್ಲಿ ಡಬ್ಲ್ಯೂ ಎನ್ನುವ ವರ್ಲ್ಡ್ ಕೊನೆಯಲ್ಲಿ ಇದೆ ಅದರಂತೆ ವಿಮೆನ್ women ಇಲ್ಲಿ ಡಬ್ಲ್ಯೂ ಎನ್ನುವ ವರ್ಡ್ ಮೊದಲಿನಲ್ಲಿ ಇದೆ. ಈ ಉತ್ತರ ತಿಳಿಯುತ್ತಿದ್ದಂತೆ ಹುಡುಗಿಯರು ಕಕ್ಕಾಬಿಕ್ಕಿ ಆದ್ರು. ಸ್ವಲ್ಪ ಸಮಯದ ಬಳಿಕ ಈ ಪ್ರಶ್ನೆಯ ಉತ್ತರ ಕೇಳಿ ಅದನ್ನು ಅರ್ಥ ಮಾಡಿಕೊಂಡು ಅಯ್ಯೋ ಇಷ್ಟು ಸಿಂಪಲ್ ಆಗಿರೋದು ನಮಗೆ ಹೊಳೆದೆ ಇಲ್ವಲ್ಲ ಅಂತ ತಲೆ ಮೇಲೆ ಕೈಹೊತ್ತುಕೊಂಡರು. ಅದೇನೆ ಇರಲಿ ಈ ಪ್ರಶ್ನೆಯನ್ನು ಕೇಳಿಸಿಕೊಂಡರೆ ಒಮ್ಮೆ ಎಲ್ಲರಿಗೂ ತಲೆ ಕೆಡೋದು ಗ್ಯಾರಂಟಿ. ಈಗ ಹೇಳಿ ಉತ್ತರ ಗೊತ್ತಾದ ಮೇಲೆ ನಿಮ್ಮ ಮುಖದಲ್ಲೂ ಒಂದು ನಗು ಮೂಡಿರುತ್ತೆ ಅಲ್ವಾ?