ಸೋಶಿಯಲ್ ಮೀಡಿಯಾ ಇನ್ಫುಯೆನ್ಸರ್, ಸೋಶಿಯಲ್ ಮೀಡಿಯಾ ಸ್ಟಾರ್ ಗಳ ಹವಾ ಜೋರಾಗಿದೆ. ಇಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರು ಕೂಡ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೆ ಸಾಧ್ಯ. ಹೌದು, ಇದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಜನರು ತಮ್ಮ ಪ್ರತಿಭೆಯನ್ನು ತೋರಿಸಿಕೊಳ್ಳುವುದಕ್ಕೆ ಇಂದು ವೇದಿಕೆಗಾಗಿ ಹುಡುಕಾಡಬೇಕಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ರೀತಿಯ ಪ್ರತಿಭೆ ಇದ್ದರೂ ಅದನ್ನು ಜಗತ್ತಿಗೆ ತೋರಿಸಿ ಬಿಡಬಹುದು.
ಸೋಶಿಯಲ್ ಮೀಡಿಯಾ ಬಳಸಲು ನಿಮಗೆ ಚೆನ್ನಾಗಿ ಗೊತ್ತಿದ್ರೆ ಅದರಲ್ಲಿ ನೇಮು ಫೇಮು ಹಣ ಎಲ್ಲವನ್ನ ತಂದುಕೊಡತ್ತೆ. ಹೀಗೆ ಸೋಶಿಯಲ್ ಮೀಡಿಯಾದ ಮೂಲಕವೇ ಬೆಳೆದು ನಿಂತ ಹಲವು ಯುವತಿಯರು ಇಂದು ಸಾಕಷ್ಟು ಫೇಮಸ್ ಆಗುತ್ತಿದ್ದಾರೆ. ಹೌದು, ಸೋಶಿಯಲ್ ಮೀಡಿಯಾ ಅನ್ನೋದು ಮಹಾ ಸಮುದ್ರ. ಇದನ್ನು ಯಾರು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು. ಅದೃಷ್ಟವೊಂದು ಕೈ ಹಿಡಿದ್ರೆ ಸುಲಭವಾಗಿ ಸೋಶಿಯಲ್ ಮೀಡಿಯಾ ಸ್ಟಾರ್ ಎನಿಸಿಕೊಳ್ಳಬಹುದು.
ಇಂದು ಸಾಕಷ್ಟು ಮಹಿಳೆಯರು ಸಾಮಾಜಿಕ ಜಾಲತಾಣವನ್ನು ತಮ್ಮ ಆದಾಯದ ಮೂಲವನ್ನಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಯಾವ ಸಿನಿಮಾ ನಟಿಯರಿಗೂ ಕಮ್ಮಿ ಇಲ್ಲದ ರೀತಿಯಲ್ಲಿ ಸಿನಿಮಾ ಡೈಲಾಗ್ ಗಳಿಗೆ ಲಿಪ್ ಸಿಂಕ್ ಮಾಡುವುದು, ಯಾವುದೇ ಹಾಡಿಗೆ ಸೊಂಟ ಬಳುಕಿಸುವುದು ಇವುಗಳ ಮೂಲಕವೂ ಕೂಡ ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಳ್ಳುತ್ತಾರೆ.
ಈಗಾಗಲೇ ಕರ್ನಾಟಕದಲ್ಲಿ ಹೆಸರನ್ನು ಗಳಿಸಿಕೊಂಡು ಜೊತೆಗೆ ಟ್ರೋಲ್ ಕೂಡ ಆಗಿರುವ ಸೋನು ಶ್ರೀನಿವಾಸ ಗೌಡ ಸೋಶಿಯಲ್ ಮೀಡಿಯಾ ಸ್ಟಾರ್ ಎನಿಸಿಕೊಂಡಿದ್ದು ಮಾತ್ರವಲ್ಲದೆ ಇದೀಗ ಬಿಗ್ ಬಾಸ್ ಕನ್ನಡ ಓಟಿಟಿ ಯಲ್ಲಿಯೂ ಕೂಡ ಮಿಂಚುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ! ಇನ್ನು ಇವರಂತೆಯೇ ಹಲವು ಯುವತಿಯರು ಟಿಕ್ ಟಾಕ್ ಮೂಲಕ ವಿಡಿಯೋ ಮಾಡೋದಕ್ಕೆ ಆರಂಭಿಸಿ ಇದೀಗ ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಫೇಮಸ್ ಆಗಿದ್ದಾರೆ. ಅಂಥವರಲ್ಲಿ ನಂದಿನಿ ಗೌಡ ಕೂಡ ಒಬ್ಬರು.
ಹೌದು, ನಂದಿನಿ ಗೌಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೆಮ್ಮೆಯ ಕನ್ನಡತಿ ಅಂತ ಬರೆದುಕೊಂಡಿದ್ದು, ಇವರಿಗೆ ಸಾಕಷ್ಟು ಹಾಡುಗಳಿಗೆ ರೀಲ್ ಮಾಡಿದ್ದಾರೆ. ಅಲ್ಲದೆ ಪ್ರಮೋಷನ್ ವಿಡಿಯೋಗಳನ್ನು ಕೂಡ ಮಾಡುವ ನಂದಿನಿ ಗೌಡ ಸೋಶಿಯಲ್ ಮೀಡಿಯಾದ ಮೂಲಕವೇ ಸಾಕಷ್ಟು ಆದಾಯ ಗಳಿಸುತ್ತಾರೆ. ಈ ಹಿಂದೆ ಟಿಕ್ ಟಾಕ್ ನಲ್ಲಿ ಹಲವು ಬಗೆಯ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಿದ್ದರು.
ಅಲ್ಲಿಂದಲೇ ನಂದಿನಿ ಗೌಡ ಗುರುತಿಸಿಕೊಳ್ಳಲು ಆರಂಭಿಸಿದರು ನಂತರ ಟಿಕ್ ಟಾಕ್ ಬ್ಯಾನ್ ಆಗಿ, ಇನ್ಸ್ಟಾಗ್ರಾಮ್ ನತ್ತ ಮುಖ ಮಾಡಿದರು. ಇದೀಗ 70 ಸಾವಿರಕ್ಕೂ ಅಧಿಕ ಫೋನ್ ಓವರ್ಗಳನ್ನ ಹೊಂದಿರುವ ನಂದಿನಿ ಗೌಡ, ಸಾಕಷ್ಟು ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಇತ್ತೀಚಿಗೆ ನಂದಿನಿ ಗೌಡ ರವಿಚಂದ್ರನ್ ಅವರ ಸಿನಿಮಾದ ಹಾಡೊಂದಕ್ಕೆ ನೃತ್ಯ ಮಾಡಿದ್ದು ಇನ್ಸ್ಟಾಗ್ರಾಮ್ ನಲ್ಲಿ ಹಲ್ ಚೆಲ್ ಎಬ್ಬಿಸಿದೆ.
ಇದೀಗ ನಂದಿನಿ ಗೌಡ ಅವರ ಈ ಹಾಡನ್ನು ನೋಡಿ ಇನ್ನೂ ಸಾಕಷ್ಟು ಜನ ಅದೇ ರೀತಿ ರೀಲ್ ಗಳನ್ನ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ನೀವು ನಂದಿನಿ ಗೌಡ ಅವರ ಇನ್ಟಾಗ್ರಾಮ್ ಖಾತೆಯಲ್ಲಿಯೂ ನೋಡಬಹುದು. ಸೋಶಿಯಲ್ ಮಿಡಿಯಾ ಸ್ಟಾರ್ ಗಳ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.
View this post on Instagram