ಸ್ನೇಹಿತರೆ, ಪ್ರೀತಿಗೆ ಕಣ್ಣಿಲ್ಲ- ಪ್ರೀತಿ ಕುರುಡು ಎಂಬ ಮಾತು ನಾವಿವತ್ತು ತಿಳಿಸುತ್ತಿರುವ ಈ ಒಂದು ಘಟನೆಯ ಅಸಲಿ ಮಾಹಿತಿ ತಿಳಿದ್ರೆ ನಿಜಕ್ಕೂ ನಿಜವೇನೋ ಅನ್ನಿಸಿಬಿಡುತ್ತದೆ. ಹೌದು 18 ವರ್ಷದ ಸುಂದರ ಯುವತಿ ತನಗಿಂತ ಮೂರು ಪಟ್ಟು ಹೆಚ್ಚು ವಯಸ್ಸಾದಂತಹ ಅಂದರೆ 61 ವರುಷದ ಮುದುಕನನ್ನು ಮದುವೆಯಾಗಲು ತುದಿ ಕಾಲಿನಲ್ಲಿ ಕಾದು ನಿಂತಿದ್ದಾಳೆ. ಕೇಳಿದ ತಕ್ಷಣ ನಿಮ್ಮೆಲ್ಲರಿಗೂ ಒಮ್ಮೆಲೇ ಆಶ್ಚರ್ಯವಾಗಿರಬಹುದು ಅಲ್ಲವೇ?
ಬರೋಬ್ಬರಿ 43 ವರ್ಷ ವಯಸ್ಸಿನ ಅಂತರವಿರುವ ಈ ಜೋಡಿಗಳ ಕುರಿತು ಸಾಕಷ್ಟು ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಮೂಡಿರುತ್ತದೆ. ಹೌದು ಅಷ್ಟಕ್ಕೂ ವಯಸ್ಸಾದವನನ್ನಲ್ಲಿ ಈಕೆ ಏನನ್ನು ಕಂಡಳು? ಯಾವ ಕಾರಣದಿಂದ ಆತನನ್ನೇ ಮದುವೆಯಾಗಲು ಹಠ ಹಿಡಿದಿದ್ದಾಳೆ? ಹೀಗೆ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಸ್ನೇಹಿತರೆ, ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿ ಬಿಟ್ಟಿರುತ್ತದೆ ಎಂಬ ಮಾತಿದೆ. ಈ ಒಂದು ಹೆಣ್ಣಿನ ಜೊತೆ ಇದೆ ಗಂಡು ಸಾಂಸರಿಕ ಸವಿಯನ್ನು ಅನುಭವಿಸಬೇಕು ಎಂಬುದು ಭಗವಂತನ ಮೊದಲೇ ನಿಶ್ಚಯ ಮಾಡಿ ನಮ್ಮೆಲ್ಲರನ್ನು ಭೂಮಿಗೆ ತಂದು ಬಿಟ್ಟಿರುತ್ತಾನೆ. ನಡೆಯುವುದನ್ನು ಯಾರಿಂದ ತಾನೆ ತಪ್ಪಿಸಲು ಸಾಧ್ಯ ಹೇಳಿ?
ಅದರಂತೆ ನಮ್ಮ ಇವತ್ತಿನ ಕಥೆಯ ಸುಂದರ ಮದುವೆಯು ನಡೆದಿದೆ. ಹೌದು ಸ್ನೇಹಿತರೆ ಆಸಿಯಾ ಎಂಬ 18 ವರ್ಷದಾಕೆ ಶಂಶದ್ ಎಂಬ 61 ವರ್ಷದ ಮುದುಕರನ್ನು ಮದುವೆಯಾಗಲು ಮುಂದಾಗಿದ್ದಾಳೆ. ಶಂಶದ್ ಸಾಮಾಜಿಕ ಕಾಳಜಿಯನ್ನು ಹೊಂದಿದಂತಹ ವ್ಯಕ್ತಿಯಾಗಿದ್ದು, ಬಡ ಹುಡುಗಿಯರಿಗೆ ಮದುವೆ ಮಾಡಿಸುವ ಮೂಲಕ ಸಾಮಾಜಿಕ ಕಾಳಜಿಯೊಂದಿಗೆ ನೈತಿಕ ಕಳಕಳಿಯನ್ನು ಹೊಂದಿದಂತಹ ವ್ಯಕ್ತಿ.
ಹೀಗಾಗಿ ಆಸಿಯಾಗೆ ಶಂಶದವರ ಮೇಲೆ ಅತಿ ಹೆಚ್ಚಾದ ಅಭಿಮಾನದೊಂದಿಗೆ ಪ್ರೀತಿ ಮೂಡುತ್ತದೆ. ಮೊದಲಿಗೆ ಆಸಿಯಾ ಮನೆಯವರು ಇವರಿಬ್ಬರ ಮದುವೆಗೆ ಸಂಪೂರ್ಣ ವಿರೋಧವನ್ನು ವ್ಯಕ್ತಪಡಿಸಿದರು. ಆನಂತರ ಆಸಿಯಾ ನೀಡಿದ ಭರವಸೆಯನ್ನು ಉಳಿಸಿಕೊಂಡಂತಹ ಶಂಸದ್ ಸದ್ಯ ಆಕೆಯನ್ನು ಮಾತ್ರವಲ್ಲದೆ ಅವಳ ಸಂಪೂರ್ಣ ಕುಟುಂಬವನ್ನೇ ಬಹಳನೇ ಖುಷಿಯಿಂದ ನೋಡಿಕೊಳ್ಳುತ್ತಿದ್ದಾರೆ.
ಒಂದು ಹೆಣ್ಣು ಇದಕ್ಕಿಂತ ಹೆಚ್ಚಾಗಿ ಏನನ್ನು ತಾನೇ ಬಯಸಲು ಸಾಧ್ಯ ಹೇಳಿ? ನಾನು ಮಾತ್ರವಲ್ಲದೆ ತನ್ನ ತವರು ಮನೆ ಕೂಡ ಬಹಳನೇ ಸಂತೋಷವಾಗಿರಬೇಕು ಎಂದು ಸದಾ ಕಾಲ ದೇವರಲ್ಲಿ ಪ್ರಾರ್ಥಿಸುವಂತಹ ಹೆಣ್ಣಿಗೆ ಒಳ್ಳೆಯ ಗಂಡ ಸಿಕ್ಕರೆ ಎಲ್ಲವೂ ಸರಿಯಾಗಿರುತ್ತದೆ. ಆಸ್ತಿ ಅಂತಸಿಗೋಸ್ಕರ ಒಳ್ಳೆಯ ಗುಣಗಳಿರುವಂತಹ ಹುಡುಗನನ್ನು ನಾವೆಲ್ಲರೂ ರಿಜೆಕ್ಟ್ ಮಾಡುತ್ತಾ ಸೌಂದರ್ಯ ಹಾಗೂ ಹಣಕ್ಕೆ ಬೆಲೆ ಕೊಟ್ಟರೆ ಯಾರು ಕೂಡ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ.
ಬದಲಿಗೆ 18 ವರ್ಷದ ಹುಡುಗಿ ಆಸಿಯಾ ರೀತಿ ವ್ಯಕ್ತಿಯಲ್ಲಿರುವಂತಹ ಒಳ್ಳೆಯ ಗುಣಗಳನ್ನು ಗಮನಿಸಿದರೆ ಸಂಸಾರ ಸ್ವರ್ಗವಾಗಿ ಮಾರ್ಪಟ್ಟಾಗುತ್ತದೆ. ಇವರಿಬ್ಬರ ಮುದ್ದಾದ ಪ್ರೇಮ ಕಹಾನಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.