ಕನ್ನಡದಲ್ಲಿ ಮಾತ್ರವಲ್ಲದೇ ಮಲಯಾಳಂ, ತಮಿಳು ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿದ ನಟಿ ಮೇಘನಾ ರಾಜ್ ಇದೀಗ ಹೆಚ್ಚು ಸುದ್ದಿಯಲ್ಲಿದ್ದಾರೆ. ತಮ್ಮ ಜೀವನದ ಕಹಿ ಘಟನೆಗಳನ್ನು ಮರೆತು ಮುಂದುವರೆಯಲು ಪ್ರಯತ್ನಿಸುತ್ತಿದ್ದಾರೆ ಈಗಾಗಲೇ ಸಿನಿಮಾ ರಂಗದಲ್ಲಿ ಮತ್ತೆ ಬ್ಯುಸಿಯಾಗಿದ್ದಾರೆ ಮೇಘನಾ ರಾಜ್.
ತಮ್ಮದೇ ಸಿನಿಮಾ ಪ್ರೌಢಕ್ಷನ್ ಹೌಸ್ ಹೊಂದಿರುವ ಮೇಘನಾ ರಾಜ್ ಆ ಮೂಲಕ ಸಿನಿಮಾಗಳನ್ನು ನಿರ್ಮಿಸಿ ನಟನೆಯನ್ನು ಕೂಡ ಮಾಡಲು ಮುಂದಾಗಿದ್ದಾರೆ. ಪ್ರಮೀಳಾ ಜೋಷಾಯಿ ಹಾಗೂ ನಟ ಸುಂದರ್ ರಾಜ್ ಅವರ ಮಗಳು ಮೇಘನಾ ರಾಜ್ ಕೂಡ ಅತ್ಯುತ್ತಮ ನಟಿ ಮಲಯಾಳಂನಲ್ಲಿ ಅಭಿನಯಿಸುವ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ಮೇಘನಾ ರಾಜ್.
ನಂತರ ಕನ್ನಡದಲ್ಲಿಯೂ ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಖ್ಯಾತ ನಟ ದಿವಂಗತ ಚಿರಂಜೀವಿ ಸರ್ಜಾ ಅವರನ್ನು ಮದುವೆಯಾದ ಬಳಿಕ ಸಿನಿಮಾದಲ್ಲಿ ಅಷ್ಟಾಗಿ ಮೇಘನಾ ರಾಜ್ ನಟಿಸಲಿಲ್ಲ. ಚಿರು ಹಾಗೂ ಮೇಘನ ಇಬ್ಬರ ಜೋಡಿ ಸ್ಯಾಂಡಲ್ ವುಡ್ ನ ಮುದ್ದಾದ ಜೋಡಿ ಎನಿಸಿಕೊಂಡಿತ್ತು. ಇಬ್ಬರು ಬಹಳ ಅನ್ಯೂನ್ಯವಾಗಿ ಜೀವನ ನಡೆಸಿದವರು.
ಆದರೆ ದುರಾದೃಷ್ಟವಶಾತ್ ನಾವು ಚಿರಂಜೀವಿ ಸರ್ಜಾ ಅಂತ ಅತ್ಯುತ್ತಮ ನಟನನ್ನು ಕಳೆದುಕೊಂಡು ಆಗಲೇ ಎರಡು ವರ್ಷ ಕಳೆದಿವೆ. ಕಿರು ಹೋಗುವಾಗಲೇ ಮೇಘನಾ ರಾಜ್ ಗರ್ಭಿಣಿ ಆಗಿದ್ರು ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾ ರಾಜ್ ಹೊಟ್ಟೆಯಲ್ಲಿ ಮತ್ತೆ ಚಿರು ಹುಟ್ಟಿ ಬಂದಿದ್ದಾನೆ ಎಂದೆ ಎಲ್ಲರೂ ಭಾವಿಸುತ್ತಾರೆ. ಚಿರು ನಿ-ಧನದ ನಂತರ ಮೇಘನಾ ರಾಜ್ ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ.
ಮಗನ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾ ಮರೆಯಲೇ ಇರುತ್ತಿದ್ದರು ಆದರೆ ಇದೀಗ ಮಗನಿಗಾಗಿ ನಾನು ಮತ್ತೆ ಕೆಲಸ ಮಾಡಬೇಕು ಎಲ್ಲರೊಂದಿಗೂ ಬೆರೆಯಬೇಕು ಎಂಬ ನಿಟ್ಟಿನಲ್ಲಿ ಮೇಘನಾ ರಾಜ್ ಸಿನಿಮಾಗಳಲ್ಲಿ ನಟಿಸುವುದಕ್ಕೂ ಕೂಡ ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿಯೂ ಕೂಡ ಕಾಣಿಸಿಕೊಂಡಿದ್ದರು ಮೇಘನಾ ರಾಜ್.
ಸದಾ ಚಿರು ನೆನಪಿನಲ್ಲಿಯೇ ಇರುವ ಮೇಘನಾ ರಾಜ್ ಯಾವುದೇ ಸಂತೋಷದ ಹಾಗೂ ದುಃಖದ ಸಂಗತಿಗಳನ್ನು ಚಿರು ಫೋಟೋ ಮುಂದೆ ಹೇಳಿಕೊಳ್ಳುತ್ತಾರೆ ಅದೇ ರೀತಿ ಚಿರುವಿಗೆ ಮರಣೋತ್ತರ ಫಿಲಂ ಫೇರ್ ಅವಾರ್ಡ್ ಕೂಡ ಸಿಕ್ಕಿದೆ ಇದನ್ನು ಮೇಘನಾ ರಾಜ್ ಸ್ವೀಕರಿಸಿ ಚಿರು ಫೋಟೋ ಮುಂದೆ ಇಟ್ಟು ನಿನ್ನ ಪ್ರೀತಿಯ ಬ್ಲಾಕ್ ಹುಡುಗಿ ಎಂದು ಪ್ರಶಸ್ತಿಯನ್ನು ತೋರಿಸಿ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಬಹಳ ಸಮಯದ ನಂತರ ಈಗ ಮೇಘನಾ ರಾಜ್ ಮತ್ತೆ ತಮಗಾಗಿ ಸ್ವಲ್ಪ ಖುಷಿಯ ಸಮಯವನ್ನು ಕಳೆಯಲು ಮುಂದಾಗಿದ್ದಾರೆ ಹಾಗಾಗಿ ಅವರು ಥೈಲ್ಯಾಂಡ್ ಗೆ ಪ್ರವಾಸ ಬೆಳೆಸಿದ್ದಾರೆ. ತನ್ನ ಸ್ನೇಹಿತೆಯರ ಜೊತೆ ಮೇಘನಾ ಥೈಲ್ಯಾಂಡ್ ಪ್ರವಾಸದಲ್ಲಿದ್ದಾರೆ. ಸ್ನೇಹಿತೆಯರ ಜೊತೆ ಇರುವ ಫೋಟೋಗಳನ್ನು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಮೇಘನಾ ರಾಜ್. ಮೇಘನಾ ರಾಜ್ ಅವರ ಈ ಫೋಟೋಗಳನ್ನು ನೋಡಿ ಸಾಕಷ್ಟು ಕಮೆಂಟ್ ಹಾಗೂ ಲೈಕ್ ಗಳು ಬಂದಿವೆ. ಅವರ ಅಭಿಮಾನಿಗಳು ಮೇಘನಾ ಇನ್ನಾದರೂ ಖುಷಿಯಿಂದ ಇರಲಿ ಎಂದು ವಿಶ್ ಮಾಡಿದ್ದಾರೆ.