PhotoGrid Site 1663394924303

ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಮಿ-ಟು ಘಾಟು, ಸ್ಯಾಂಡಲ್ವುಡ್ ಮುಖವಾಡ ಕಳಚಿದ ನಟಿ ಆಶಿತಾ! ಸತ್ಯ ತಿಳಿದು ಬೆಚ್ಚಿಬಿದ್ದ ಕನ್ನಡ ಜನತೆ!!

ಸುದ್ದಿ

ಸಿನಿಮಾ ಕ್ಷೇತ್ರದಲ್ಲಿ ಕಲಾವಿದೆಯರು ಅವಕಾಶಗಳು ಸಿಗಬೇಕು ಅಂದ್ರೆ ಮಂ’ಚಕ್ಕೆ ಬರಬೇಕು ಅನ್ನುವಂತಹ ಪರಿಪಾಠ ಬೆಳೆದುಕೊಂಡು ಬಂದುಬಿಟ್ಟಿದೆ. ಹಾಗಾಗಿ ಅದೆಷ್ಟೊ ಅತ್ಯುತ್ತಮ ಪ್ರತಿಭೆಗಳು ಕಮರಿ ಹೋಗಿವೆ. ಹೀಗೆ ಅವಕಾಶಗಳಿಗಾಗಿ ಬೇರೆಯವರ ಜೊತೆ ದೈ-ಹಿಕವಾಗಿ ಸ್ಪಂದಿಸಬೇಕು ಎಂದು ಹೇಳುವ ನಿರ್ದೇಶಕ, ನಿರ್ಮಾಪಕರಿಗೆ ನಟಿಯರು ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಡುವುದಕ್ಕೆ ವೇದಿಕೆಯಾಗಿದ್ದು ಮೀ ಟೂ ಅಭಿಯಾನ.

ಹೌದು, ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ಕಾ’ಸ್ಟಿಂಗ್ ಕೌಚ್ ಕೂಗು ಕೇಳಿ ಬರುತ್ತೆ ಹಾಗಾಗಿ ಮೀ ಟೂ ಅಭಿಯಾನದ ಮೂಲಕ ತಮಗೆ ಯಾರಿಂದ ತೊಂದರೆ ಆಗಿದೆ ಅನ್ನೋದನ್ನ ಹಲವು ನಾಯಕಿಯರು ಈಗಾಗಲೇ ಬಹಿರಂಗಪಡಿಸಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹಾಗೂ ಬಾಲಿವುಡ್ ನಲ್ಲಿಯೂ ಕೂಡ ಸಾಕಷ್ಟು ಮೀ ಟೂ ಪ್ರ’ಕರಣಗಳು ನಡೆದಿದೆ. ಈ ಹಿಂದೆ ಖ್ಯಾತ ನಟಿ ಶೃತಿ ಹರಿಹರನ್ ಅವರು ನಾಯಕನೊಬ್ಬನ ಬಗ್ಗೆ ಮೀ ಟೂ ಆರೋಪ ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ. ಇದೀಗ ಸ್ಯಾಂಡಲ್ವುಡ್ ನ ಮತ್ತೊಬ್ಬ ನಟಿ ನಿರ್ದೇಶಕಕೊಬ್ಬರ ಮೇಲೆ ಮೀ ಟೂ ಆರೋಪ ಮಾಡಿದ್ದಾರೆ.

ರೋಡ್ ರೋಮಿಯೋ ಸಿನಿಮಾದ ನಾಯಕಿ ಆಶಿತಾ ಕನ್ನಡದಲ್ಲಿ ಅತ್ಯುತ್ತಮ ನಾಯಕಿ ಅಂತ ಗುರುತಿಸಿಕೊಂಡಿದ್ದರು. ಬಾ ಬಾರೋ ರಸಿಕ ಖ್ಯಾತಿಯ ಆಶಿತಾಅವರಿಗೆ ಮೊದಲ ಸಿನಿಮಾದಲ್ಲಿಯೇ ಸಕ್ಸಸ್ ಸಿಕ್ತು. ಹಾಗಾಗಿ ಒಂದು ಕಾಲದಲ್ಲಿ ಆಶಿತಾ ಅವರಿಗೆ ಅವಕಾಶಗಳು ಕೂಡ ಹುಡುಕಿಕೊಂಡು ಬಂದಿದ್ದವು. ಆದರೆ ನಾಯಕಿಯಾಗಿ ಪಿಕ್ ನಲ್ಲಿ ಇರುವಾಗಲೇ ಆಶಿತಾ ಚಿತ್ರರಂಗದಿಂದ ದೂರ ಸರಿಯುತ್ತಾರೆ. ಇತ್ತೀಚಿಗೆ ಮತ್ತೆ ಕ್ಯಾಮರಾ ಮುಂದೆ ನಿಂತು ಮಾತನಾಡಿರುವ ಆಶಿತಾ ತಾನು ಸಿನಿಮಾ ರಂಗದಿಂದ ದೂರವಾಗುವುದಕ್ಕೂ ಕೂಡ ನಿರ್ದೇಶಕರ ಸ್ವಭಾವವೇ ಕಾರಣ ಅಂತ ಹೇಳಿದ್ದಾರೆ.

ನನ್ನ ಸಿನಿಮಾ ರಂಗದ ಆರಂಭದ ಜರ್ನಿ ಚೆನ್ನಾಗಿಯೇ ಇತ್ತು, ಸಿನಿಮಾಕ್ಕೆ ಬರಲು ನನಗೆ ಯಾವುದೇ ಸಮಸ್ಯೆ ಆಗಲಿಲ್ಲ ಆದರೆ ನಾಯಕಿಯಾಗಿ ಗುರುತಿಸಿಕೊಂಡ ಮೇಲೆ ಸಾಕಷ್ಟು ನೋವು ಕಿ’ರುಕುಳ ಅನುಭವಿಸಿದ್ದೇನೆ ಅಂತ ಆಶಿತಾ ನೊಂದುಕೊಂಡು ಹೇಳಿದ್ದಾರೆ. ಒಬ್ಬ ನಿರ್ದೇಶಕ ನನಗೆ ಸಾಕಷ್ಟು ಕಷ್ಟ ಕೊಟ್ಟಿದ್ರು ಅವರ ಹೆಸರನ್ನ ಹೇಳುವುದಿಲ್ಲ ಆದರೆ ಅವರ ಜೊತೆಗೆ ನಾನು ಸ್ಪಂದಿಸಿಲ್ಲ ಎನ್ನುವ ಕಾರಣಕ್ಕೆ ಸಿನಿಮಾದಲ್ಲಿ ಟೇಕ್ ಸರಿಯಾಗಿದ್ದರೂ ಅವಮಾನ ಮಾಡುತ್ತಾ ಮತ್ತೆ ಮತ್ತೆ ರೀಟೆಕ್ ಮಾಡಿಸುತ್ತಿದ್ದರು.

ನಾನು ಅವರನ್ನ ಸರ್ ಸರ್ ಅಂತ ಕರೀತಾ ಅವರ ಹಿಂದಿಂದೇ ಸುತ್ತುತ್ತ ಇರಲಿಲ್ಲ ಅನ್ನುವುದೇ ಅವರಿಗೆ ಸಿಟ್ಟಿತ್ತು. ಇನ್ನು ನಾನು ಸಾಕಷ್ಟು ದೊಡ್ಡ ನಟರ ಜೊತೆಗೆ ಅಭಿನಯಿಸಿದ್ದೇನೆ ಆಗಲು ನನಗೆ ಯಾವುದೇ ಸಮಸ್ಯೆ ಆಗಲಿಲ್ಲ ಬದಲಿಗೆ ಹೊಸಬರ ಜೊತೆಗೆ ಕೆಲಸ ಮಾಡುವಾಗ ತೊಂದರೆ ಅನುಭವಿಸಿದ್ದೇನೆ. ನಾನು ಇಂದು ಸಿನಿಮಾ ರಂಗದಿಂದ ದೂರವಾಗಿದ್ದೇನೆ ಅಂತ ಬೇಸರ ಇಲ್ಲ, ಆದರೆ ನಾನು ಸಿನಿಮಾದಿಂದ ದೂರವಾಗುವುದಕ್ಕೆ ನನಗೆ ತೊಂದರೆ ಕೊಟ್ಟಿದ್ದೆ ಕಾರಣ ಅಂತ ಆಶಿತಾ ಹೇಳಿಕೊಂಡಿದ್ದಾರೆ.

ಇನ್ನು ಆಶಿತಾ ಮತ್ತೆ ತನಗೆ ಒಳ್ಳೆಯ ಟೀಮ್ ಹಾಗೂ ಉತ್ತಮ ಪಾತ್ರ ಸಿಕ್ಕರೆ ಅಭಿನಯಿಸುತ್ತೇನೆ ಎನ್ನುವ ಮಾತನ್ನು ಕೂಡ ಸಂದರ್ಶನದ ವೇಳೆ ಹೇಳಿದ್ದಾರೆ. ಆಶಿತಾ ಅವರು ಅತ್ಯುತ್ತಮ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ ಅವರು ನಟಿಸಿದ ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಹಾಗಾಗಿ ಒಂದೊಳ್ಳೆ ಪಾತ್ರದ ಮೂಲಕ ಮತ್ತೆ ಆಶಿಕ ಕನ್ನಡ ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಬರುತ್ತಾರಾ? ಅವರಿಗೆ ಬೇಕಾದಂತಹ ಪಾತ್ರ ಸಿಗುತ್ತಾ ಕಾದು ನೋಡಬೇಕು.

Leave a Reply

Your email address will not be published. Required fields are marked *