PhotoGrid Site 1660822636210

ಸ್ಟಾರ್ ನಟಿಯರೇ ದಂಗಾಗುವಂತೆ ಮಸ್ತ್ ಫೋಟೋಶೂಟ್ ಮಾಡಿಸಿದ ನಟಿ ಶ್ವೇತಾ ಚೆಂಗಪ್ಪ! ಇಲ್ಲಿವೆ ನೋಡಿ ಸೌಂಡ್ ಮಾಡುತ್ತಿರುವ ಫೋಟೋಸ್!!

ಸುದ್ದಿ

ಕನ್ನಡ ಕಿರುತೆರೆ ಲೋಕದಲ್ಲಿ ಸಿನಿಮಾದಲ್ಲಿ ಮಿಂಚುವ ಹೀರೋಯಿನ್ ಗಳಿಗಿಂತಲೂ ಹೆಚ್ಚು ಚಾಲ್ತಿಯಲ್ಲಿರುವ ಕಲಾವಿದರು ಇದ್ದಾರೆ. ಅಷ್ಟೇ ಅಲ್ಲ ಕೆಲವು ನಟಿಯರನ್ನ ಜನರು ತಮ್ಮ ಮನೆಯ ಮಗಳಂತೆ ಪ್ರೀತಿಸುತ್ತಾರೆ. ಹೀಗೆ ಕನ್ನಡಿಗರ ಮನಸ್ಸನ್ನು ಗೆದ್ದಿರುವ ನಟಿ ನಿರೂಪಕಿ ಕೊಡಗಿನ ಬೆಡಗಿ ಶ್ವೇತಾ ಚಂಗಪ್ಪ. ಶ್ವೇತ ಚಂಗಪ್ಪ ಅವರು ಇದೀಗ ಹೆಚ್ಚಾಗಿ ನಿರೂಪಣೆಯಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ನಲ್ಲಿ ಶ್ವೇತ ಚಂಗಪ್ಪ ತಮ್ಮ ವಿಭಿನ್ನ ನಟನೆಯಿಂದ ಹಾಸ್ಯ ಪ್ರಜ್ಞೆಯಿಂದ ಫೇಮಸ್ ಆಗಿದ್ರು.

ನಂತರ ಮಗುವಾದ ಕಾರಣಕ್ಕೆ ಕಿರುತೆರೆಯಿಂದ ಸ್ವಲ್ಪ ದೂರ ಇದ್ದರು. ಆದರೆ ಇದೀಗ ಮತ್ತೆ ರಿಯಾಲಿಟಿ ಶೋಗಳ ನಿರೂಪಕಿಯಾಗಿ ಶ್ವೇತಾ ಚಂಗಪ್ಪ ಕಂಬ್ಯಾಕ್ ಮಾಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜೋಡಿ ನಂಬರ್ ಒನ್ ಕಾರ್ಯಕ್ರಮದ ನಿರೂಪಕಿಯಾಗಿ ಶ್ವೇತಾ ಚಂಗಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ಕಿರುತೆರೆಯಲ್ಲಿ ಶ್ವೇತಾ ಚಂಗಪ್ಪ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ ಕಾದಂಬರಿ ಧಾರವಾಹಿಯ ಮೂಲಕ ಜನಪ್ರಿಯತೆಯನ್ನು ಪಡೆದ ಶ್ವೇತ.

ಅವರು ನಂತರ ನಿರೂಪಕಿಯಾಗಿಯೇ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದು ಹೆಚ್ಚು. ಯಾರಿಗುಂಟು ಯಾರಿಗಿಲ್ಲ, ಕುಣಿಯೋಣ ಬಾ,ರ ಡಾನ್ಸ್ ಶೋ, ಮೊದಲಾದ ಶೋಗಳ ನಿರೂಪಕಿಯಾಗಿ ಶ್ವೇತಾ ಚಂಗಪ್ಪ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅದರಲ್ಲೂ ಮಜಾ ಟಾಕೀಸ್ ಮೂಲಕ ಕನ್ನಡಿಗರ ಮೆಚ್ಚಿನ ನಟಿ ಎಂದು ಎನಿಸಿಕೊಂಡವರು ಶ್ವೇತ. ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿರುವ ಶ್ವೇತಾ ಚಂಗಪ್ಪ.

ತಮ್ಮ ಕುಟುಂಬದ ಫೋಟೋಗಳನ್ನ ಮಗನ ಜೊತೆಗಿನ ಮಸ್ತಿ ವಿಡಿಯೋಗಳನ್ನು ಆಗಾಗ ಪೋಸ್ಟ್ ಮಾಡುತ್ತಾ ಇರುತ್ತಾರೆ. ಸುಮಾರು 9 ಲಕ್ಷಕ್ಕೂ ಹೆಚ್ಚು ಫಾಲೋಸ್ ಹೊಂದಿರುವ ಶ್ವೇತಾ ಚಂಗಪ್ಪ ಅವರ ಕೆಲವು ಫೋಟೋಗಳು ಸಿಕ್ಕಾಪಟ್ಟೆ ಲೈಕ್ ಪಡೆಯುತ್ತವೆ. ಇತ್ತೀಚಿಗೆ ಶ್ವೇತ ಚಂಗಪ್ಪ ಮಳೆಯಲ್ಲಿ ಮಾಡ್ರನ್ ಡ್ರೆಸ್ ಧರಿಸಿ ತೆಗೆಸಿದ ಫೋಟೋಗಳು ಅತಿ ಹೆಚ್ಚು ಲೈಕ್ ಪಡೆದುಕೊಂಡಿವೆ. ನಾವು ನಮ್ಮ ಬಗ್ಗೆ ನಂಬಿಕೆ ಇಟ್ಟುಕೊಂಡರೆ ನಮ್ಮ ನಡುವಿನ ರಿಲೇಶನ್ಶಿಪ್ ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿ ಇರುತ್ತೆ ಅಂತ ಟ್ಯಾಗ್ ಲೈನ್ ಬರೆದು ಫೋಟೋಗಳನ್ನ ಅಪ್ಲೋಡ್ ಮಾಡಿದ್ದಾರೆ.

ಅವರ ಈ ಗೊರ್ಜಿಯಸ್ ಲುಕ್ ಗೆ ಫ್ಯಾನ್ ಗಳು ಫಿದಾ ಆಗಿದ್ದಾರೆ. ಬ್ಲಾಕ್ ಪ್ಯಾಂಟ್, ಪಚ್ಚೆ ಹಸಿರು ಬಣ್ಣದ ಸ್ಲೀವ್ಲೆಸ್ ಟಾಪ್, ಕೈಯಲ್ಲಿ ಒಂದು ಲೆದರ್ ಜಾಕೆಟ್, ಕಣ್ಣಿಗೆ ಗಾಗಲ್ ಹಾಕಿ ಹಾಟ್ ಲುಕ್ ನಲ್ಲಿ ಶ್ವೇತಾ ಚಂಗಪ್ಪ ಮಿಂಚಿದ್ದಾರೆ. ಕೊಡಗಿನ ಸೋಮವಾರಪೇಟೆಯಲ್ಲಿ 1987 ಫೆಬ್ರುವರಿ 9ರಲ್ಲಿ ಜನಿಸಿದ ಶ್ವೇತಾ ಚಂಗಪ್ಪ ಮೊದಲಿಗೆ ಕಿರುತೆರೆಯ ಪಯಣವನ್ನು ಆರಂಭಿಸಿದ್ರು. ನಂತರ ನಿರೂಪಕಿಯಾಗಿ ಕಾಣಿಸಿಕೊಂಡರು.

PhotoGrid Site 1660822656786

ಅಲ್ಲದೆ ಬಿಗ್ ಬಾಸ್ ಸೀಸನ್ 2 ಭಾಗವಹಿಸಿದ್ದರು. ಕೃಷ್ಣನ್ ಮ್ಯಾರೇಜ್ ಸ್ಟೋರಿ, ಗನ್, ದರ್ಶನ್ ಅಭಿನಯದ ತಂಗಿಗಾಗಿ, ಸಾಹಸ ಸಿಂಹ ವಿಷ್ಣುವರ್ಧನ್ ಅವರ ವರ್ಷ ಮೊದಲಾದ ಸಿನಿಮಾದಲ್ಲಿ ಕೆಲವು ಪಾತ್ರಗಳನ್ನ ನಿಭಾಯಿಸಿದ್ದಾರೆ ಶ್ವೇತ ಚಂಗಪ್ಪ. ಆದರೆ ಇವರ ಇವತ್ತಿನ ಇಂಟರೆಸ್ಟ್ ನಿರೂಪಣೆ ಮಾಡುವುದು. ಹಾಗಾಗಿ ಕಿರುತೆರೆಯಲ್ಲಿ ತುಂಬಾನೇ ಬೇಡಿಕೆ ಇರುವ ಶ್ವೇತ ಚಂಗಪ್ಪ ನೋಡುವುದಕ್ಕೂ ಅಷ್ಟೇ ಸುಂದರವಾಗಿದ್ದಾರೆ. ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೋಶೂಟ್ ಗಳ ಫೋಟೋವನ್ನು ನೀವು ನೋಡಬಹುದು.

Leave a Reply

Your email address will not be published. Required fields are marked *