PhotoGrid Site 1657628220623

ಸ್ಟಾರ್ ನಟಿಯರೇ ಒಂದು ಕ್ಷಣ ಬೆಕ್ಕಸ ಬೆರಗಾಗುವಂತೆ ಫೋಟೋ ಶೂಟ್ ಮಾಡಿಸಿದ ಅಗ್ನಿಸಾಕ್ಷಿ ಸೀರಿಯಲ್ ಖ್ಯಾತಿಯ ಪ್ರಿಯಾಂಕ ಶಿವಣ್ಣ! ಹೇಗಿದೆ ನೋಡಿ ಫೋಟೋಸ್!!

ಸುದ್ದಿ

ಸೋಶಿಯಲ್ ಮೀಡಿಯಾಗಳಲ್ಲಿ ಸೆಲೆಬ್ರಿಟಿಗಳು ಫೋಟೋ ಶೇರ್ ಮಾಡುವುದು ಕಾಮನ್. ಬೇರೆ ಬೇರೆ ಕಾಸ್ಟ್ಯೂಮ್ ಗಳನ್ನು ಬಳಸಿ ಫೋಟೊ ಶೂಟ್ ಮಾಡಿಸಿಕೊಂಡು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಇದೇ ರೀತಿ ಅಭಿಮಾನಿಗಳ ಮನಸ್ಸು ಗೆದ್ದ ನಟಿ ಅಂದರೆ ಅದು ಪ್ರಿಯಾಂಕ ಶಿವಣ್ಣ. ಈ ಹೆಸರು ಕೇಳಿದ ಕೂಡಲೇ ನಿಮಗೆ ವಿಲನ್ ರೂಪದಲ್ಲಿಯೇ ಪ್ರಿಯಾಂಕ ಶಿವಣ್ಣ ಕಂಡು ಬಂದರೆ ಅದರಲ್ಲಿ ಅಚ್ಚರಿ ಇಲ್ಲ. ಯಾಕಂದರೆ ಇವರು ಸೀರಿಯಲ್ ಗಳಲ್ಲಿ ವಿಲನ್ ಆಗಿಯೇ ಮಿಂಚಿದವರು.

ಇವರು ಮೊಟ್ಟ ಮೊದಲು ಜನರಿಗೆ ಪರಿಚಯ ಆಗಿದ್ದು ಅಗ್ನಿಸಾಕ್ಷಿ ಧಾರವಾಹಿಯಲ್ಲಿ. ಅದರಲ್ಲಿ ಮೊದಲ ಚಂದ್ರಿಕಾ ಪಾತ್ರಧಾರಿ ಬಿಟ್ಟು ಹೋದಾಗ ಆ ಜಾಗ ತುಂಬಿದವರು ಪ್ರಿಯಾಂಕ ಶಿವಣ್ಣ. ಅದರಲ್ಲಿ ಪಕ್ಕಾ ವಿಲನ್ ಆಗಿಯೇ ಎಂಟ್ರಿ ಕೊಟ್ಟಿದ್ದರು. ಅವರ ಹುಬ್ಬು, ನಗು, ಮಾತು ಎಲ್ಲವೂ ವಿಲನ್ ರೋಲ್ ಗೆ ಹೇಳಿ ಮಾಡಿಸಿದಂತಿದೆ. ಅದಕ್ಕೆ ಸರಿಯಾಗಿ ಅವರ ಡ್ರೆಸ್ಸಿಂಗ್ ಸ್ಟೈಲ್ ಎಲ್ಲರನ್ನು ಆಕರ್ಷಿಸಿತ್ತು. ಸ್ಟೈಲಿಷ್ ವಿಲನ್ ಆಗಿ ಮಿಂಚಿದ್ದರು ಪ್ರಿಯಾಂಕ ಶಿವಣ್ಣ.

ವಿಲನ್ ಗಳನ್ನು ಕಂಡರೆ ಉರಿ ಬೀಳುತ್ತಿದ್ದವರನ್ನು, ಪ್ರಿಯಾಂಕ ಶಿವಣ್ಣ ತನ್ನ ಸ್ಟೈಲ್ ನಿಂದ ತನ್ನನ್ನೂ ಪ್ರೀತಿಸುವಂತೆ ಮಾಡಿದ್ದರು. ಗಂಡು ಮಕ್ಕಳು ತನ್ನನ್ನು ನೋಡಲು ಸಲುವಾಗಿ ಧಾರವಾಹಿ ನೋಡುವಂತೆ ಮಾಡಿದ್ದರು. ಅಷ್ಟೊಂದು ಸುಂದರವಾಗಿ ಅವರು ಕಾಣುತ್ತಿದ್ದರು. ಅಗ್ನಿಸಾಕ್ಷಿ ಧಾರವಾಹಿ ಮುಗಿದು ಹೋದರೂ ಈಗಲೂ ನಾವು ಅದೇ ಪ್ರಿಯಾಂಕ ರನ್ನು ಕಾಣುತ್ತೇವೆ. ಹೌದು, ಇದೀಗ ಪ್ರಿಯಾಂಕ ಶಿವಣ್ಣ ಅವರು, ಜೀ ಕನ್ನಡದ ಸತ್ಯ ಧಾರವಾಹಿಯಲ್ಲಿ ಅದೇ ವಿಲನ್ ಆಗಿ ಪಾತ್ರ ಮಾಡುತ್ತಿದ್ದಾರೆ.

ಇದರಲ್ಲಿ ಅವರು ಬಡತನದ ಕುಟಂಬದವರಾಗಿರುವುದರಿಂದ ಹೆಚ್ಚಾಗಿ ಕುರ್ತಾಗಳಲ್ಲಿ ಕಾಣಿಸಿದ್ದರು. ಆದರೆ ಕೆಲ ಸಂದರ್ಭದಲ್ಲಿ ಅದೇ ಸೀರೆಯುಟ್ಟು ಕಂಗೊಳಿಸುತ್ತಾರೆ. ಜೊತೆಗೆ ಇದೀಗ ಪ್ಯಾಷನ್ ಡ್ರೆಸ್ ನಲ್ಲೂ ಮಿಂಚುತ್ತಿದ್ದಾರೆ. ಗೌತಮಿ ಜಾದವ್​ ಮತ್ತು ಸಾಗರ್​ ಬಿಳಿಗೌಡ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ಸತ್ಯ ಧಾರಾವಾಹಿಯಲ್ಲಿ ಪ್ರಿಯಾಂಕಾ ಶಿವಣ್ಣ ಸತ್ಯಾ ಅವರ ಅಕ್ಕನ ಪಾತ್ರ ಮಾಡಿದ್ದಾರೆ.

ಸತ್ಯ ಧಾರಾವಾಹಿ ಸೇರಿದಂತೆ, ಕೃಷ್ಣ ಸುಂದರಿ ಅನ್ನುವ ಧಾರವಾಹಿಯಲ್ಲಿ ಕೂಡ ಪ್ರಿಯಾಂಕ ಶಿವಣ್ಣ ವಿಲನ್ ರೋಲ್ ಮಾಡುತ್ತಿದ್ದಾರೆ.‌ ಆಕ್ಟಿಂಗ್ ಬ್ಯುಸಿ ನಡುವೆಯೂ ಇವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ್ಗೆ ಫೋಟೋಗಳನ್ನು, ವಿಡಿಯೋಗಳನ್ನು ಹಂಚುತ್ತಾ, ಹಾಡು, ಡ್ಯಾನ್ಸ್ ಅಂತ ಸೆಟ್‌ನಲ್ಲಿ ಗ್ಯಾಪ್ ಸಿಕ್ಕಾಗಲೆಲ್ಲಾ ಎಂಜಾಯ್ ಮಾಡುತ್ತಿರುತ್ತಾರೆ.‌ ಜೊತೆಗೆ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ.

ಇನ್ನು ಪ್ರಿಯಾಂಕ ಶಿವಣ್ಣ ಅವರು ಧಾರಾವಾಹಿಗಳಲ್ಲಿ ಮಾತ್ರವಲ್ಲದೇ ರಿಯಾಲಿಟಿ ಶೋ ಮೂಲಕವೂ ಪ್ರೇಕ್ಷಕರಿಗೆ ಹತ್ತಿರವಾದವರು. ಬಿಗ್​ ಬಾಸ್​ ಕನ್ನಡ ಸೀಸನ್​ 7ರಲ್ಲಿ ಅವರು ಸ್ಪರ್ಧಿಸಿದ್ದರು. ಇವರು ಯಾವ ರೀತಿಯ ಪಾತ್ರ ಕೊಟ್ಟರೂ ಅವರು ನಿಭಾಯಿಸಬಲ್ಲ ಪ್ರತಿಭಾವಂತೆ. ಇವರು ಆಗಾಗ್ಗೆ ಬಗೆಬಗೆಯ ರೀಲ್ಸ್​ ಮೂಲಕ ಅಭಿಮಾನಿಗಳನ್ನು ರಂಜಿಸುತಿರುತ್ತಾರೆ.ಇನ್ಸ್ಟ್ರಾಗ್ರಾಂ ​ ನಲ್ಲಿ ಸದ್ಯ ಪ್ರಿಯಾಂಕಾ ಅವರನ್ನು ನಾಲ್ಕುವರೆ ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ.

ಹೊಸ ಹೊಸ ಫೋಟೋಶೂಟ್​ನಿಂದಲೂ ಅವರು ಗಮನ ಸೆಳೆಯುತ್ತಾರೆ. ಇದೀಗ ಇನ್ಸ್ಟಾಗ್ರಾಂ ರೀಲ್ಸ್ ನಲ್ಲಿ ವೈನ್ ಕಲರ್ ನ ಸೂಪರ್ ಡ್ರೆಸ್ ನಲ್ಲಿ ಮಿಂಚಿರುವ ಪ್ರಿಯಾಂಕ ಶಿವಣ್ಣ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಅದರಲ್ಲಿ ‌ಊರ್ವಶಿ ಊರ್ವಶಿ ಟೇಕ್ ಇಟ್ ಈಸಿ ಊರ್ವಶಿ ಹಾಡಿಗೆ ಸರಿಯಾಗಿ ಊರ್ವಶಿಯಂತೆಯೇ ಕಂಗೊಳಿಸಿದ್ದಾರೆ.‌ ಈ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *