PhotoGrid Site 1663048901261

ಸ್ಟಾರ್ ನಟಿಯರು ಬೆರಗಾಗುವಂತೆ ಮಸ್ತ್ ಡಾನ್ಸ್ ಮಾಡಿದ ಭೂಮಿಕಾ ಬಸವರಾಜ್! ಎಲ್ಲೆಡೆ ಸೌಂಡ್ ಮಾಡುತ್ತಿದೆ ವಿಡಿಯೋ ನೋಡಿ!!

ಸುದ್ದಿ

ಚಿಕ್ಕಮಂಗಳೂರ ಒ ಚಿಕ್ಕಮಲ್ಲಿಗೆ… ಸೋಶಿಯಲ್ ಮೀಡಿಯಾ ಇನ್ಫ್ಲುಯೆರ್ ಆಗಿರುವ ಭೂಮಿಕಾ ಬಸವರಾಜ್ ಅವರನ್ನು ನೋಡಿದ್ರೆ ಈ ಹಾಡು ನೆನಪಿಗೆ ಬರಬಹುದು. ಸೋಶಿಯಲ್ ಮೀಡಿಯಾದ ಮೂಲಕವೇ ಇಂದು ರಾಜ್ಯಾದ್ಯಂತ ಗುರುತಿಸಿಕೊಂಡಿರುವ ಭೂಮಿಕಾ ಬಸವರಾಜ್ ಕೇವಲ ಕನ್ನಡದಲ್ಲಿ ಮಾತ್ರವಲ್ಲ ಇತರ ಭಾಷಾ ಅಭಿಮಾನಿಗಳನ್ನು ಕೂಡ ಗಳಿಸಿಕೊಂಡಿರುವುದು ನಿಜಕ್ಕೂ ವಿಶೇಷ.

ಸಿನಿಮಾ ಸ್ಟಾರ್ ಅಲ್ಲ ಅಥವಾ ಮತ್ಯಾವುದೋ ಚಟುವಟಿಕೆಯಿಂದ ಫೇಮಸ್ ಆದವರು ಅಲ್ಲ ಇವರು ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ ಅಂದ್ರೆ, ಜನ ಅವರನ್ನ ಗುರುತಿಸುತ್ತಿದ್ದಾರೆ ಅಂದ್ರೆ ಅದಕ್ಕೆ ಕಾರಣ ಅವರ ಸೋಶಿಯಲ್ ಮೀಡಿಯಾ ಆಕ್ಟಿವ್ನೆಸ್. ಎಸ್ ಯುವತಿಯರಿಗೆ ಸೋಶಿಯಲ್ ಮೀಡಿಯಾ ಒಂದು ಅದ್ಭುತ ವೇದಿಕೆ. ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಬೇರೆ ಎಲ್ಲೋ ಯಾವುದೋ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿಯೋ ತೋರಿಸಿಕೊಳ್ಳಬೇಕಾಗಿಲ್ಲ.

ಸಾಮಾಜಿಕ ಜಾಲತಾಣವನ್ನು ಬಳಸಲು ಗೊತ್ತಿದ್ರೆ ಸಾಕು. ಹೌದು, ಸ್ನೇಹಿತರೆ ಇಂದು ನಾವು ಕುಳಿತಲ್ಲಿಯೇ ಜಗತ್ತೇ ನಮ್ಮತ್ತ ತಿರುಗಿ ನೋಡುವಂತೆ ಮಾಡಬಹುದು. ಈಗಾಗಲೇ ರಾತ್ರಿ ಬೆಳಗಾಗುವಷ್ಟರಲ್ಲಿ ಕಾಫಿ ನಾಡ ಚಂದು ಫೇಮಸ್ ಆಗಿದ್ದು ಗೊತ್ತೇ ಇದೆ ಅಲ್ವಾ?! ಹೀಗೆ ಇನ್ನೂ ಹಲವಾರು ಜನ ಸೋಶಿಯಲ್ ಮೀಡಿಯಾ ಮೂಲಕವೇ ಹೆಸರುವಾಸಿಯಾಗಿದ್ದಾರೆ.

ಸೋಶಿಯಲ್ ಮೀಡಿಯಾ ಎಷ್ಟು ಸ್ಟ್ರಾಂಗ್ ಅಂದ್ರೆ ಇಂದು ಕನ್ನಡ ಬಿಗ್ ಬಾಸ್ ಒಟಿಟಿಯಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ ಕೆಲವು ಮಂದಿ ಸೋಶಿಯಲ್ ಮೀಡಿಯಾ ಮೂಲಕವೇ ಫೇಮಸ್ ಆದವರು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದ ಭೂಮಿಕಾ ಬಸವರಾಜ್ ಕೂಡ ಫೇಮಸ್ ಆಗಿದ್ದು ಅವರ ಅಭಿಮಾನಿಗಳು ಅವರೂ ಕೂಡ ಬಿಗ್ ಬಾಸ್ ಮನೆಗೆ ಹೋಗಬೇಕು ಅಂತ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ರು.

ಬಿಗ್ ಬಾಸ್ ಸೀಸನ್ 9 ಇನ್ನೇನು ಆರಂಭವಾಗಲಿದ್ದು ಅದ್ರಲ್ಲಿ ಭೂಮಿಕಾ ಬಸವರಾಜು ಹೋಗುವ ಸಾಧ್ಯತೆಯೂ ಇದೇ. ಅಂದ ಹಾಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅದರಲ್ಲೂ ರಿಲ್ಸ್ ಗಳ ಮೂಲಕ ಜನರ ಗಮನ ಸೆಳೆದಿರುವ ಭೂಮಿಕಾ ಬಸವರಾಜ್, ಕನ್ನಡ ಸಿನಿಮಾರಂಗದಲ್ಲಿ ಅಭಿನಯಿಸಿ ಉತ್ತಮ ಸ್ಟಾರ್ ಎನಿಸಿಕೊಳ್ಳುವ ಕನಸು ಹೊತ್ತಿದ್ದಾರೆ. ಚಿಕ್ಕಮಗಳೂರಿನ ಚೆಲುವೆ, ಪದವೀಧರೆ ಆಗಿರುವ ಪಕ್ಕಾ ಹಳ್ಳಿ ಸೊಗಡಿನ ಸುಂದರಿ ಭೂಮಿಕಾ ಬಸವರಾಜು ಈ ಹಿಂದೆ ಟಿಕ್ ಟಾಕ್ ಮೂಲಕ ಫೇಮಸ್ ಆಗಿದ್ದರು.

ಟಿಕ್ ಟಾಕ್ ಬ್ಯಾನ್ ಅದ ನಂತರ ಇನ್ಸ್ಟಗ್ರಾಮ್ ಮೂಲಕ ಮತ್ತೆ ವಿಡಿಯೋಗಳನ್ನು ಮಾಡುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಈಗಾಗಲೇ 4ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್ ಹೊಂದಿರುವ ಭೂಮಿಕಾ ಬಸವರಾಜ್ ಇನ್ಸ್ಟಾಗ್ರಾಮ್ ವಿಡಿಯೋ ಕ್ರಿಯೇಟರ್ ಆಗಿದ್ದು, ಸಾಕಷ್ಟು ಕನ್ನಡ ಹಾಗೂ ಇತರ ಭಾಷಾ ಹಾಡಿಗೆ ನೃತ್ಯ ಮಾಡಿ ವಿಡಿಯೋ ಅಪ್ಲೋಡ್ ಮಾಡುತ್ತಾರೆ.

ಅದರಲ್ಲೂ ಭೂಮಿಕಾ ಸೀರೆ ಉಟ್ಟು ನೃತ್ಯ ಮಾಡಿದ್ರೆ ಯುವಕರ ಹಾರ್ಟ್ ಸ್ತಬ್ಧಗೊಳ್ಳೋದು ಗ್ಯಾರಂಟಿ. ಭೂಮಿಕಾ ಬಸವರಾಜ್ ಅವರ ಎಲ್ಲಾ ವಿಡಿಯೋಗಳನ್ನು ನೀವು ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಕ್ಷಿಸಬಹುದು. ಅವರ ಇತ್ತೀಚಿನ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಪ್ಪು ಸೀರೆ, ಸೊಂಟಕ್ಕೊಂದು ಡಾಬು ತೊಟ್ಟು ಭೂಮಿಕಾ ಸೊಂಟ ಬಳುಕಿಸಿದ್ರೆ ಸಿನಿಮಾ ತಾರೆಯರು ಸೈಡ್ ಲೈನ್ ಆಗೋದು ಗ್ಯಾರಂಟಿ.

Leave a Reply

Your email address will not be published. Required fields are marked *