ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ನಟಿಯರು ಇಂದು ಉತ್ತಮ ಹೆಸರು ಗಳಿಸಿದ್ದಾರೆ ಅಲ್ಲದೆ ಇಲ್ಲಿಗೆ ಸ್ಟಾರ್ ನಟರನ್ನು ಮದುವೆಯಾಗಿ ಮದುವೆಯ ನಂತರವೂ ನಟನೆಯನ್ನು ಮುಂದುವರಿಸಿದ್ದಾರೆ. ಅಂಥವರಲ್ಲಿ ರಾಗಿಣಿ ಪ್ರಜ್ವಲ್ ಕೂಡ ಒಬ್ಬರು. ಕನ್ನಡದ ಉತ್ತಮ ನಟಿ ಹಾಗೂ ಮಾಡೆಲ್ ಕೂಡ ಆಗಿರುವ ರಾಗಿಣಿ ಸ್ಯಾಂಡಲ್ ವುಡ್ ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರನ್ನು ವಿವಾಹವಾಗಿದ್ದಾರೆ.
ರಾಗಿಣಿ ಪ್ರಜ್ವಲ್, ಪ್ರಜ್ವಲ್ ದೇವರಾಜ್ ಅವರನ್ನು ಮದುವೆಯಾಗುವುದಕ್ಕೂ ಮೊದಲು ರಾಗಿಣಿ ಚಂದ್ರನ ಆಗಿದ್ದರು. ರಾಗಿಣಿ ಅವರ ತಂದೆ ಚಂದ್ರನ ಬಾಲು ತಾಯಿ ರಮಾ. ರಾಗಿಣಿ ತಂಜಾವೂರಿನವರು. ಕರ್ನಾಟಕಕ್ಕೆ ಬಂದ ಮೇಲೆ ಕನ್ನಡವನ್ನು ಕಲಿತ ರಾಗಿಣಿ ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಉತ್ತಮ ಡ್ಯಾನ್ಸರ್ ಆಗಿರುವ ರಾಗಿಣಿ ಪುನೀತ್ ರಾಜಕುಮಾರ್ ನಿರ್ಮಾಣದ ಲಾ ಸಿನಿಮಾದ ಮೂಲಕ ನಾಯಕಿ ನಟಿಯಾಗಿ ತಮ್ಮವೃತ್ತಿಯನ್ನ ಆರಂಭಿಸಿದರು.
ರಘು ಸಮರ್ಥ ನಿರ್ದೇಶನದ ವಿಜಯದಶಮಿ, ರಚಿತಾ ರಾಮ್ ನಿರ್ಮಾಣದ ರಿಷಭಪ್ರಿಯ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ರಾಗಿಣಿ ಪ್ರಜ್ವಲ್ ಸಾಮಾಜಿಕ ಜಾಲತಾಣದಲ್ಲಿಯೂ ಆಕ್ಟಿವ್ ಆಗಿ ಇರುತ್ತಾರೆ. ಪ್ರಜ್ವಲ್ ದೇವರಾಜ್ ಹಾಗು ರಾಗಿಣಿ ಅವರದು ಲವ್ ಮ್ಯಾರೇಜ್ ಎಂದು ಹೇಳಲಾಗುತ್ತೆ. ಆದರೆ ಇವರಿಬ್ಬರ ಬಗ್ಗೆ ಎಲ್ಲಿಯೂ ಗಾಸಿಬ್ ಅಥವಾ ಇತರ ಸುದ್ದಿಗಳು ಹರಿದಾಡಲಿಲ್ಲ.
ಕನ್ನಡದಲ್ಲಿ ನಟ ಪ್ರಜ್ವಲ್ ಅವರನ್ನು ಹೆಚ್ಚಾಗಿ ಇಷ್ಟಪಟ್ಟ ರಾಗಿಣಿ ಅವರೊಂದಿಗೆ ಹಸೆಮಣೆ ಏರಿದರು. ಇನ್ನೂ ರಾಗಿಣಿ ಪ್ರಜ್ವಲ್ ಅವರ ಜೊತೆ ಸೇರಿ ಕೆಲವು ವಿಡಿಯೋಗಳನ್ನು ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಟ್ರಾವೆಲ್ ಪ್ರಿಯರು ಆಗಿರುವ ರಾಗಿಣಿ ಟ್ರಾವೆಲಿಂಗ್ ಸಮಯದಲ್ಲಿ ತೆಗೆದ ವಿಶೇಷ ಪೋಟೋಗಳನ್ನು ಶೇರ್ ಮಾಡುತ್ತಾರೆ. ಇನ್ನು ರಾಗಿಣಿ ಪ್ರಜ್ವಲ್ ಸಾಕಷ್ಟು ಹಾಟ್ ಫೋಟೋ ಶೂಟ್ ಗಳನ್ನ ಕೂಡ ಮಾಡಿಸಿ ಪೋಸ್ಟ್ ಮಾಡುತ್ತಾರೆ.
ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿರುವ ರಾಗಿಣಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿಯು ಕೂಡ ಸಕ್ರಿಯರಾಗಿದ್ದಾರೆ. ನಟಿ ರಾಗಿಣಿ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಇವರು ಅತ್ಯುತ್ತಮ ಕಥಕ್ ಡ್ಯಾನ್ಸರ್ ಕೂಡ ಹೌದು. ಪ್ರಜ್ವಲ ದೇವರಾಜ್ ಹಾಗು ರಾಗಿಣಿ ಪ್ರಜ್ವಲ್ ಅವರು ಇನ್ಸ್ಪೆಕ್ಟರ್ ವಿಕ್ರಮ ಸಿನಿಮಾದಲ್ಲಿ ಜೋಡಿಯಾಗಿಯೇ ಕಾಣಿಸಿಕೊಂಡಿದ್ದಾರೆ.
ರಾಗಿಣಿ ಪ್ರಜ್ವಲ್ ಮಾಡಲಿಂಗ್ ಆರಂಭಿಸಿದ ನಂತರ 6 ವರ್ಷಗಳಿಂದ ಅದೇ ಕ್ಷೇತ್ರದಲ್ಲಿ ಇದ್ದಾರೆ ಜೊತೆಗೆ ನೃತ್ಯದಲ್ಲಿಯೂ ಕೂಡ ಹೆಚ್ಚು ಹೆಸರು ಗಳಿಸಿದ್ದಾರೆ. ತಮ್ಮ ಮೇಕಪ್ ಆರ್ಟಿಸ್ಟ್ ತಾವೇ ಆಗಿರುವ ರಾಗಿಣಿ, ಸೌಂದರ್ಯದ ವಿಷಯದಲ್ಲಿಯೂ ಹೆಚ್ಚು ಎಕ್ಯುರೆಟ್ ಆಗಿದ್ದಾರೆ. ಇತ್ತೀಚಿಗೆ ಹಬ್ಬದ ಪ್ರಯುಕ್ತ ಹೊಸ ಉಡುಗೆ ತೊಟ್ಟು ಅಭಿಮಾನಿಗಳಿಗೆ ಗಣೇಶ ಹಬ್ಬಕ್ಕೆ ಶುಭಾಶಯ ತಿಳಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.ರಾಗಿಣಿ ಪ್ರಜ್ವಲ್ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರ ಅತ್ಯಂತ ಸುಂದರವಾದ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ನೋಡಬಹುದು.