PhotoGrid Site 1659248360074

ಸೌಂದರ್ಯದಲ್ಲಿ ಅಪ್ಸರೆಯನ್ನೇ ಮೀರಿಸುವ ನಟಿ ಪ್ರಿಯಾಮಣಿಗೆ ಒಂದು ಚಿತ್ರಕ್ಕೆ ನಿರ್ಮಾಪಕರು ನೀಡುವ ಸಂಭಾವನೆ ಅದೆಷ್ಟು ಗೊತ್ತಾ? ಸಂಭಾವನೆ ತಿಳಿದು ಕೆಳಗೆ ಕುಳಿತ ಸ್ಟಾರ್ ನಟಿಯರು ನೋಡಿ!!

ಸುದ್ದಿ

ಬಹುಭಾಷಾ ನಟಿಯಾಗಿರುವ ಪ್ರಿಯಾಮಣಿ ಬಗ್ಗೆ ಎಲ್ಲರಿಗೂ ಗೊತ್ತು. ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ ಖ್ಯಾತಿ ಅವರದ್ದು. ತಾವು ಸಿನಿಮಾ ರಂಗಕ್ಕೆ ಕಾಲಿಟ್ಟಾಗಿನಿಂದ ಪ್ರಿಯಾಮಣಿ ತಿರುಗಿ ನೋಡಿದೆ ಇಲ್ಲ ಒಂದಲ್ಲೊಂದು ಸಿನಿಮಾಗಳಲ್ಲಿ ಸದಾ ಬ್ಯುಸಿಯಾಗಿಯೇ ಇರುತ್ತಾರೆ. ಮಲಯಾಳಂ, ತೆಲುಗು, ತಮಿಳು, ಹಿಂದಿ, ಕನ್ನಡ ಹೀಗೆ ಪಂಚ ಭಾಷೆಗಳಲ್ಲಿ ನಟಿಸಿ ಅದ್ಭುತ ನಟಿ ಅನ್ನಿಸಿಕೊಂಡವರು ಪ್ರಿಯಾಮಣಿ.

ನಟಿ ಪ್ರಿಯಾಮಣಿ ಅತ್ಯದ್ಭುತ ಅಭಿನೇತ್ರಿ. ಅವರ ನಟನಿಗೆ ಇದುವರೆಗೆ ಸಾಕಷ್ಟು ಪ್ರಶಸ್ತಿಗಳು ಕೂಡ ಲಭಿಸಿವೆ. ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ, ಫಿಲಂ ಫೇರ್ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಮೂಡಿಗೇರಿಸಿಕೊಂಡ ನಟಿ ಇವರು. ತಮಿಳು ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಪ್ರಿಯಾಮಣಿ ಹುಟ್ಟಿದ್ದು 1984 ಜೂನ್ 4.ರಂದು. ಇವರ ತಾಯಿ ಲತಾ ಮಾಜಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಆಗಿದ್ದವರು. ಪ್ರಿಯಾಮಣಿ ವಿದ್ಯಾಭ್ಯಾಸವಾಗಿದ್ದು ಶ್ರೀ ಅರಬಿಂದು ಮೆಮೋರಿಯಲ್ ಶಾಲೆಯಲ್ಲಿ.

ಬಿಷಪ್ ಕಾಟನ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಾರೆ. ಪ್ರಿಯಾಮಣಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು 2002ರಲ್ಲಿ ಇವರೇ ಆಟಗಾಡು ಎನ್ನುವ ಸಿನಿಮಾದ ಮೂಲಕ ಸಿನಿಮಾ ಅಭಿನಯವನ್ನು ಆರಂಭಿಸಿದರು. ಅದಾದ ಮೇಲೆ ಪ್ರಿಯಾಮಣಿ ಅವರಿಗೆ ಸಾಲು ಸಾಲು ಆಫರ್ ಗಳು ಬಂದವು. ನಟಿ ಪ್ರಿಯಾಮಣಿ ಅವರು ಚಾರುಲತಾ ಎನ್ನುವ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದರು.

ಏನು ಪ್ರಿಯಾಮಣಿ ಕನ್ನಡದಲ್ಲಿಯೂ ಕೂಡ ಅಭಿನಯಿಸಿದ್ದಾರೆ ಅಲ್ಲದೇ ರಿಯಾಲಿಟಿ ಶೋಗಳ ಜಡ್ಜ್ ಆಗಿಯೂ ಕೂಡ ಪ್ರಿಯಾಮಣಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಿಯಾಮಣಿ ಅವರು ಮುಸ್ತಫ ಅನ್ನುವ ವ್ಯಕ್ತಿಯ ಜೊತೆ ಹಸಿ ಮನೆ ಇರುತ್ತಾರೆ ಅದಾದ ಮೇಲೆ ಅವರು ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ ಆದರೆ ಅವರ ಬೇಡಿಕೆ ಮಾತ್ರ ಯಾವತ್ತೂ ಕಡಿಮೆಯಾಗಿಲ್ಲ.

ಮದುವೆ ಆದ ಮೇಲೆಯೂ ವೆಬ್ ಸೀರೀಸ್ ಗಳಲ್ಲಿ ಪ್ರಿಯಾಮಣಿ ನಟಿಸುತ್ತಾ ಬಂದಿದ್ದಾರೆ. ಈ ನಟಿಕೆ ಈಗ 37 ವರ್ಷ ವಯಸ್ಸು ಆದರೆ ಪ್ರಿಯಾಮಣಿಯವರ ಮೈಮಾಟವನ್ನು ನೋಡಿದ್ರೆ ಯಾರು ಅವರಿಗೆ ಇಷ್ಟು ವರ್ಷ ಅಂತ ಹೇಳೋದಕ್ಕೆ ಸಾಧ್ಯವೇ ಇಲ್ಲ. ಅಷ್ಟು ಫಿಟ್ ಆಗಿರುವ ನಟಿ ಪ್ರಿಯಾಮಣಿ. ಪ್ರಿಯಾಮಣಿಯವರು ಸಾಧಾರಣ ವೇಷ ಭೂಷಣ ತೊಟ್ಟು ಅಭಿನಯಿಸುವುದು ಹಾಗೂ ಹಾಟ್ ಲುಕ್ ನಲ್ಲಿ ಮಿಂಚುವುದು ಎರಡಕ್ಕೂ ಸೈ.

ಹಾಗಾಗಿ ಅವರಿಗೆ ಅಭಿಮಾನಿಗಳ ಬಳಗವು ಬಹಳ ದೊಡ್ಡದಿದೆ. ನಟಿ ಪ್ರಿಯಾಮಣಿ ಇತ್ತೀಚಿಗೆ ತೆರೆಕಂಡ ಭಾಮಾ ಕಲಾಪಂ ಎನ್ನುವ ಸಿನಿಮಾದಲ್ಲಿ ಅಭಿನಯಿಸಿದ್ರು ಈ ಸಿನಿಮಾ ಸೂಪರ್ ಹಿಟ್ ಕೂಡ ಆಗಿದೆ ಅಲ್ಲದೆ ಪ್ರಿಯಾಮಣಿ ಈ ಸಿನಿಮಾದ ನಂತರ ತಮ್ಮ ಸಂಭಾವನೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರಂತೆ. ಯಾಕಂದ್ರೆ ಪ್ರಿಯಾಮಣಿ ಇವತ್ತಿಗೂ ಬಹು ಬೇಡಿಕೆಯ ನಟಿ.

ಅದರಲ್ಲೂ ಬಿ ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ನಲ್ಲಿ ಅಭಿನಯಿಸಿದ ನಂತರ ಪ್ರಿಯಾಮಣಿ ಅವರ ಬೇಡಿಕೆ ಇನ್ನಷ್ಟು ಹೆಚ್ಚಿದೆ ಜೊತೆಗೆ ಅವರ ಸಂಬಳವೂ ಡಬಲ್ ಆಗಿದೆ. ಹಾಗಾದ್ರೆ ಪ್ರಿಯಾಮಣಿ ಪಡೆಯುತ್ತಿರುವ ಸಂಬಳ ಎಷ್ಟು ಗೊತ್ತಾ. ಪ್ರತಿಭಾನ್ವಿತ ನಟಿಯಾಗಿರುವ ಪ್ರಿಯಾಮಣಿ ಅವರು ಇದುವರಿಗೆ ಸಾಕಷ್ಟು ವಿಭಿನ್ನವಾದ ಪಾತ್ರಗಳನ್ನು ನಿಭಾಯಿಸಿದ್ದಾರೆ. ರಾಣಾ ದಗ್ಗು ಪಾರ್ಟಿ ಅಭಿನಯದ ವಿರಾಟ ಪರ್ವಂ ಚಿತ್ರದಲ್ಲಿಯೂ ಕೂಡ ಪ್ರಿಯಾಮಣಿ ಅವರನ್ನು ನೋಡಬಹುದು.

PhotoGrid Site 1659248374482

ಅಲ್ಲದೆ ಅಜಯ್ ದೇವಗನ್ ನಟನೆಯ ಮೈದಾನ ಚಿತ್ರದಲ್ಲಿಯೂ ಪ್ರಿಯಾಮಣಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಕೈಯಲ್ಲಿ ಕೆಲವು ಪ್ರಾಜೆಕ್ಟ್ ಗಳನ್ನು ಇಟ್ಟುಕೊಂಡಿರುವ ಪ್ರಿಯಾಮಣಿ ದಿನಕ್ಕೆ ಕನಿಷ್ಠ ಅಂದ್ರು ಮೂರರಿಂದ ನಾಲ್ಕು ಲಕ್ಷ ಸಂಭಾವನೆ ಪಡೆಯುತ್ತಾರೆ. ಹೌದು ಮದುವೆಯ ಬಳಿಕವೂ ಸಿನಿಮಾ ಅಭಿನಯದಲ್ಲಿ ಸಕ್ರಿಯವಾಗಿರುವ ನಟಿ ಪ್ರಿಯಾಮಣಿ ಉತ್ತಮ ಸಂಭಾವನೆಯನ್ನು ಗಳಿಸಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *