ಕೆಲವು ಕಲಾವಿದರು ಸಿನಿಮಾಗಳಲ್ಲಿ ಹೆಚ್ಚು ಫೇಮಸ್ ಆಗುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಸೋಶಿಯಲ್ ಮೀಡಿಯಾದ ಮೂಲಕವಂತು ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ತಾವು ಸಾಮಾಜಿಕ ಜಾಲತಾನದಲ್ಲಿ ಹಾಕುವ ವಿಭಿನ್ನ ಫೋಟೋಗಳಿಂದ, ವಿಡಿಯೋಗಳಿಂದ ಹೆಚ್ಚು ಫೇಮಸ್ ಆಗುತ್ತಾ ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ. ಇಂದು ಸಾಕಷ್ಟು ಸಿನಿಮಾ ತಾರೆಯರನ್ನ ಧಾರವಾಹಿ ಕಲಾವಿದೆಯರನ್ನ ಹೆಚ್ಚಾಗಿ ಇನ್ಸ್ಟಾಗ್ರಾಮ್ ನಲ್ಲಿಯೇ ನೋಡಬಹುದು.
ತಮ್ಮ ದೈನಂದಿನ ಚಟುವಟಿಕೆಗಳಿಂದ ಹಿಡಿದು, ಶೂಟಿಂಗ್, ಔಟಿಂಗ್, ಊಟ ತಿಂಡಿ ಎಲ್ಲವನ್ನೂ ಕೂಡ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುವುದು ಮಾತ್ರವಲ್ಲದೇ, ಆಗಾಗ ಲೈವ್ ಬಂದು ಅಭಿಮಾಣಿಗಳ ಪ್ರಶ್ನೆಗಳಿಗೆ ಉತ್ತರಿಸುವ ಅಭ್ಯಾಸವನ್ನೂ ಕೂಡ ಮಾಡಿಕೊಂಡಿದ್ದಾರೆ ನಟಿಯರು. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವುದರಲ್ಲಿ ನಟಿ ಐಶ್ವರ್ಯ ಅರ್ಜುನ್ ಅವರು ಕೂಡ ಒಬ್ಬರು.
ಸೌತ್ ನಲ್ಲಿ ಅದರಲ್ಲೂ ತಮಿಳು ಮಾತ್ರವಲ್ಲದೇ ಕನ್ನಡದಲ್ಲಿಯೂ ಫೇಮಸ್ ಆಗಿರುವ ನಟ ಹಾಗೂ ನಿರ್ದೇಶಕ ಅರ್ಜುನ್ ಸರ್ಜಾ ಅವರ ಬಗ್ಗೆ ಎಲ್ಲರಿಗೂ ಗೊತ್ತು. ಒಬ್ಬ ಅದ್ಭುತ ನಟ ಅರ್ಜಿನ್ ಸರ್ಜಾ. ಸಾಕಷ್ತು ವರ್ಷಗಳ ಖಾಲ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದಾರೆ. ಇಂಥ ಫೇಮಸ್ ನಟನ ಮಗಳೇ ಐಶ್ವರ್ಯ ಅರ್ಜುನ್. ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದೆ ಇದ್ದರೂ ಐಶ್ವರ್ಯ ಅರ್ಜುನ್ ಅಭಿಮಾನಿಗಳನ್ನು ಮಾತ್ರ ಸಾಕಷ್ಟು ಗಳಿಸಿಕೊಂಡಿದ್ದಾರೆ.
ಐಶ್ವರ್ಯ ಅರ್ಜುನ್ ಅವರ ಹೆಸರಿನಲ್ಲಿ ಫ್ಯಾನ್ ಪೇಜ್ ಗಳು ಕೂಡ ಇವೆ. ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುವ ನಟಿ ಐಶ್ವರ್ಯ ಅರ್ಜುನ್ ಇನ್ಸ್ಟಾಗ್ರಾಮ್ ನ ತಮ್ಮ ಖಾತೆಯಲ್ಲಿ ಪ್ರಮೋಷನ್ ವಿಡಿಯೋಗಳನ್ನೂ ಕೂಡ ಮಾಡುತ್ತಾರೆ. ಜೊತೆಗೆ ಸಾಕಷ್ಟು ಹಾಟ್ ಫೋಟೊಗಳನ್ನೂ ಕೂಡ ಆಗಾಗ ಶೇರ್ ಮಾಡುತ್ತಾರೆ. ನಟಿ ಐಶ್ವರ್ಯ ಅರ್ಜುನ್ ಅವರ ಮೊದಲ ಚಿತ್ರ 2013ರಲ್ಲಿ ತೆರೆಕಂಡ ತಮಿಳಿನ ಪಟ್ಟತು ಯಾನೈ ಎಂಬ ಸಿನಿಮಾ.
ಅದಾದ ಬಳಿಕ 2018ರಲ್ಲಿ ‘ಪ್ರೇಮ ಬರಹ’ ಚಿತ್ರದಲ್ಲಿ ಅಭಿನಯಿಸುವುದರ ಮೂಲಕ ಸ್ಯಾಂಡಲ್ ವುಡ್ ಗೂ ಎಂಟ್ರಿ ಕೊಟ್ತರು ಐಶ್ಚರ್ಯಾ. ಈ ಸಿನಿಮಾವನ್ನು ಐಶ್ವರ್ಯ ಅವರ ತಂದೆ ಅರ್ಜುನ್ ಸರ್ಜಾ ಅವರೇ ನಿರ್ದೇಶಿಸಿ ಕನ್ನಡ ಹಾಗೂ ತಮಿಳು ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಿದ್ರು. ಅದಾದ ಬಳಿಕ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಲಿಲ್ಲ ನಟಿ ಐಶ್ವರ್ಯ ಅರ್ಜುನ್. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸದಾ ಆಕ್ಟಿವ್ ಆಗಿರುತ್ತಾರೆ.
ಐಶ್ವರ್ಯ ಅರ್ಜುನ್ ಅವರು ಉತ್ತಮ ಡ್ಯಾನ್ಸರ್ ಕೂಡ ಹೌದು. ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ನೋಡಿದ್ರೆ ಸಾಕಷ್ಟು ಡ್ಯಾನ್ಸ್ ರೀಲ್ ಗಳು ಅಪ್ಲೋಡ್ ಆಗುರುವುದನ್ನು ನೋಡಬಹುದು. ಅವರ ರೀಲ್ ಗಳಲ್ಲಿ ಹೆಚ್ಚು ಲೈಕ್ ಗಳನ್ನೂ ಪಡೆದುಕೊಂಡ ಹಾಡುಗಳಲ್ಲಿ ಶಾರ್ಟ್ ಸ್ಕರ್ಟ್, ವೈಟ್ ಶರ್ಟ್ ಧರಿಸಿ ನೃತ್ಯ ಮಾಡಿದ್ದು. ಹೊರಗಡೆ ಹೋಗುವುದಕ್ಕೆ ಕನ್ನಡಿ ಮುಂದೆ ಕುಳಿತು ಸಿದ್ಧವಾಗುವುದನ್ನು ಡ್ಯಾನ್ಸ್ ಮಾಡುತ್ತಲೇ ತೋರಿಸಿ.
ಶೋ, ರೆಡ್ ಶರ್ಟ್ ಧರಿಸಿ ಬ್ಯಾಗ್ ಹಿಡಿದು ಬಾಯ್ ಮಾಡಿ ಹೊಡುವವರೆಗಿನ ವಿಡಿಯೋ ಇದಾಗಿದೆ. ಮ್ಯೂಸಿಕ್ ಒಂದಕ್ಕೆ ಹೀಗೆ ಸ್ಟೆಪ್ ಬೈ ಸ್ಟೆಪ್ ಆಗಿ ತಾವು ಸಿದ್ಧಗೊಳ್ಳುವುದನ್ನು ಐಶ್ವರ್ಯ ಅರ್ಜುನ್ ತೋರಿಸಿದ್ದಾರೆ. ಈ ವಿಡಿಯೋ ನೋಡಿ ಐಶ್ವರ್ಯ ಅರ್ಜುನ್ ಅವರಿಗೆ ಒಂದು ಪಟ್ಟು ಅಭಿಮಾನಿಗಳು ಹೆಚ್ಚಾಗಿರೋದಂತೂ ಸುಳ್ಳಲ್ಲ! ಐಶ್ವರ್ಯಾ ಅರ್ಜುನ್ ಅವರ ಈ ನೃತ್ಯ ನಿಮಗೆ ಹೇಗೆ ಅನ್ನಿಸ್ತು? ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.
View this post on Instagram