ನಮ್ಮ ಪ್ರತಿಭೆಯನ್ನ ಇತರರಿಗೆ ತೋರಿಸಲು, ಒಂದು ವೇದಿಕೆ ಬೇಕು. ಆದರೆ ಇದು ಎಲ್ಲರಿಗೂ ಸಿಗುವುದಿಲ್ಲ. ಇದು ಕೆಲವರಿಗೆ ಮಾತ್ರ ಲಭ್ಯ. ಆದರೆ ಇನ್ನೊಂದು ಕಡೆಯಿಂದ ನೋಡಿದರೆ, ನಮ್ಮಲ್ಲಿನ ಪ್ರತಿಭೆ ಹೇಗೆ ನಮ್ಮದೂ ಹಾಗೆ ಆ ಪ್ರತಿಭೆಯನ್ನು ಬೆಳೆಸಿಕೊಳ್ಳುವುದು ಇತರರಿಗೆ ತೋರಿಸುವುದು ಕೂಡ ನಮ್ಮ ಕೈನಲ್ಲಿಯೆ ಇದೆ. ಹೌದು, ಇಂದು ಸೋಶಿಯಲ್ ಮೀಡಿಯಾದಷ್ಟು ಉತ್ತಮ ವೇದಿಕೆ ಮತ್ತೊಂದಿಲ್ಲ. ಇದರಲ್ಲಿ ಯಾರು ಯಾವುದೇ ಮೂಲೆಯಲ್ಲಿ ಇರಲಿ. ಜಗತ್ತಿನ ಇನ್ನೊಂದು ಮುಳೆಯಲ್ಲರುವವರು ಗುರುತಿಸಿಕೊಳ್ಳುವಂತೆ ಮಾಡಿಕೊಳ್ಳಬಹುದು.
ಇಂದು ಹೀಗೆಯೇ ಸಾಕಷ್ಟು ಜನ ಸಾಮಾನ್ಯರು ಎನಿಸಿದ್ದವರು ಇಂದು ಸೋಶಿಯಲ್ ಮೀಡಿಯಾ ಸ್ಟಾರ್ ಗಳಾಗಿ ಮಿಂಚುತ್ತಿದ್ದಾರೆ. ಈ ಮೂಲಕವೇ ಸಿನಿಮಾ, ಮಾಡಲಿಂಗ್ ಮೊದಲಾದ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಬಿಗ್ ಬಾಸ್ ನಂತಹ ವೇದಿಕೆಯಲ್ಲಿ ಭಾಗವಹಿಸಲು ಅವಕಾಶಗಳನ್ನು ಪಡೆಯುತ್ತಿದ್ದಾರೆ. ಈ ಹಿಂದೆ ಹಿಂದಿ ಬಿಗ್ ಬಾಸ್ ನಲ್ಲಿ ಒಟಿಟಿ ಆರಂಭಿಸಿ ಇದರಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಗಳನ್ನು ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡಲಾಗಿತ್ತು.
ಈಗ ಕನ್ನಡದಲ್ಲಿಯೂ ಕೂಡ ಇದೇ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಇನ್ನು ಬಿಗ್ ಬಾಸ್ ಮನೆಗೆ ಹೋದ ಸ್ಪರ್ಧಿಗಳ ಬಗ್ಗೆ ಕೆಲವರಿಗೆ ಅಸಮಾಧಾನವಿದೆ. ಹಾಘೂ ಭೂಮಿಕಾ ಬಸವರಾಜ್, ಬಿಂದು ಗೌಡ ನಂತಹ ಸೋಶಿಯಲ್ ಮೀಡಿಯಾ ಸ್ಟಾರ್ ಗಳು ಬಿಗ್ ಬಾಸ್ ಮನೆಗೆ ಹೋಗಿದ್ರೆ ಚೆನ್ನಾಗಿತ್ತು ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ಇಂದು ಕರ್ನಾಟಕದಲ್ಲಿ ಭೂಮಿಕಾ ಬಸವರಾಜ್ ಹಾಗೂ ಬಿಂದು ಗೌಡ ಇಬ್ಬರೂ ದೊಡ್ಡ ಹೆಸರು ಸಂಪಾದಿಸಿದ್ದಾರೆ.
ಈ ಇಬ್ಬರೂ ಯುವತಿಯರೂ ಲಕ್ಷಾಂತರ ಫಾಲೇವರ್ಸ್ ನ್ನು ಹೊಂದಿದ್ದು, ಪ್ರತಿನಿತ್ಯ ಒಂದಲ್ಲಾ ಒಂದು ರೀತಿಯ ಪೋಸ್ಟ್ ಮಾಡುತ್ತಿರುತ್ತಾರೆ. ಇನ್ಸ್ಟಾ ಗ್ರಾಮ್ ನಲ್ಲಿ ಸದಾ ಆಕ್ಟಿವ್ ಆಗಿರುವ ಬಿಂದು ಗೌಡ ಇದುವರೆಗೆ ಸಾಕಷ್ಟು ಸಿನಿಮಾ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಇನ್ನು ಭೂಮಿಕಾ ಬಸವರಾಜ್ ಅವರೂ ಕೂಡ ಲಿಪ್ ಸಿಂಕ್ ಮಾಡುವುದರಲ್ಲಿ ಎತ್ತಿದ ಕೈ.
ಈ ಇಬ್ಬರೂ ಮುದ್ದಾದ ಯುವತಿಯರು, ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡಿತ್ತಾರೆ. ಭೂಮಿಕಾ ಬಸವರಾಜು ಉತ್ತಮ ಯೋಗಪಟುವೂ ಹೌದು. ಇನ್ಸಾಗ್ರಾಮ್ ಮಾತ್ರವಲ್ಲದೇ, ತಮ್ಮದೇ ಆದ ಯೂಟ್ಯೂಬ್ ಚಾನೆಲ್ ನ್ನು ಕೂಡ ಹೊಂದಿದ್ದು, ಅಲ್ಲಿಯೂ ತಾವು ಟ್ರಾವೆಲ್ ಮಾಡಿದ ವಿಡಿಯೋ ಗಳನ್ನು ಹಾಕುತ್ತಾರೆ. ಜೊತೆಗೆ ಪ್ರಮೋಶನ್ ಗಳನ್ನೂ ಕೂಡ ಮಾಡುತ್ತಾರೆ. ಕೇವಲ ಸೋಶಿಯಲ್ ಮೀಡಿಯಾದಿಂದಲೇ ಲಕ್ಷಾಂತರ ಹಣ ಸಂಪಾದಿಸುತ್ತಾರೆ ಅಂದ್ರೆ ಖಂಡಿತ ನೀವು ನಂಬಲೇಬೇಕು.
ಕಿಚ್ಚ ಸುದೀಪ್ ಅಭಿನಯದ ಎವರ್ ಗ್ರೀನ್ ಹಾಡು ’ಸೊಂಟದ ವಿಷ್ಯ ಬ್ಯಾಡವೋ ಶಿಷ್ಯ’ ಹಾದು. ಈ ಹಾಡನ್ನು ಈಗಲೂ ಜನ ಗುನುಗುನಿಸುತ್ತಾರೆ. ಅದರಲ್ಲೂ ಈ ಹಾಡಿಗೆ ಭೂಮಿಕಾ ಬಸವರಾಜ್ ಹಾಗೂ ಬಿಂದು ಗೌಡ ಇಬ್ಬರೂ ಸೇರಿ ಸೊಂಟ ಬಳುಕಿಸುತ್ತಿದ್ದರೆ ಯುವಕರಿಗೆ ಸ್ವರ್ಗಕ್ಕೆ ಮೂರೇ ಗೇಣು! ಹೌದು ಅವರ ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ನೀವು ಈ ವೀಡಿಯೋ ನೋಡಬಹುದು.
ಭೂಮಿಕಾ ಬಸವರಾಜ್ ಹಾಗೂ ಬಿಂದು ಗೌಡ ಇಬ್ಬರೂ ಆಧುನಿಕ ಬಟ್ಟೆಯನ್ನೂ ಹಾಗೂ ಸಾಂಪ್ರದಾಯಿಕ ಉಡುಗೆಯನ್ನೂ ತೊಟ್ಟು ರಿಲ್ಸ್ ಗಳನ್ನು ಮಾಡುತ್ತಾರೆ. ಇತ್ತೀಚಿಗೆ ಸೊಂಟದ ಹಾಡಿಗೆ ಸೀರೆ ಉಟ್ಟು ಇಬ್ಬರೂ ಜೋಡಿಯಾಗಿ ನೃತ್ಯ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
View this post on Instagram