ಕನ್ನಡ ಚಿತ್ರರಂಗದಲ್ಲಿ ಟಾಪ್ 5 ನಿರ್ದೇಶಕರಲ್ಲಿ ಒಬ್ಬರನ್ನು ಹೆಸರಿಸಿ ಅಂದ್ರೆ ಅಲ್ಲಿ ಸೂರಿ ಹೆಸರು ಖಂಡಿತ ಇದ್ದೇ ಇರುತ್ತೆ. ಚಂದನವನ ಕಂಡ ಅದ್ತ್ಯದ್ಭುತ ಹಾಗೂ ವಿಭಿನ್ನ ನಿರ್ದೇಶಕ ಅಂದ್ರೆ ಅದು ಸುಕ್ಕಾ ಸೂರಿ. ಒಬ್ಬ ನಿರ್ದೇಶಕನಾಗುವುದಕ್ಕೂ ಮೊದಲು ಅವರು ಒಬ್ಬ ಕಲಾಕಾರ, ಚಿಂತರ, ಬರಹಗಾರರಾಗಿದ್ದವರು. ಅವರ ಬಗ್ಗೆ ಹೇಳಿದ್ರೆ ನಿಜಕ್ಕೂ ನೀವೂ ಥ್ರಿಲ್ ಆಗುತ್ತೀರಿ.
ಮೂಲತಃ ಬೆಂಗಳೂರಿನವರಾದ ಸೂರಿ ಗೊಟ್ಟಿಗೇರೆ ಗ್ರಾಮದವರು. ಕಲಾಮಂದಿರ ಕಲಾಶಾಲೆಯಲ್ಲಿ ಆರ್ಟ್ಸ್ ಪದವಿಯನ್ನ ಪಡೆದ ಸೂರಿ ನಿಜಕ್ಕೂ ಯಾರು ಗೊತ್ತಾ? ಅಂದು ಸೈನ್ ಬೋರ್ಡ್ ಗಳಿಗೆ ಪೇಂಟ್ ಹಾಕುತ್ತಿದ್ದ ಸೂರಿಗೆ ಇಂದು ತಾನು ಇಷ್ಟು ದೊಡ್ಡ ನಿರ್ದೇಶಕನಾಗುತ್ತೇನೆ ಅಂತ ಬಹುಶಃ ಗೊತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಇಂದು ಕನ್ನಡದ ಪಕ್ಕಾ ರೌಡಿಸಂ ಸಿನಿಮಾಗಳನ್ನ ಜನರು ಮೆಚ್ಚುವ ರೀತಿಯಲ್ಲಿ ಕಟ್ಟಿಕೊಡುವಲ್ಲಿ ಸೂರಿ ಯಶಸ್ವಿಯಾಗಿದ್ದಾರೆ.
ಬ್ರಶ್ ವರ್ಕ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಸೂರಿ ಅದನ್ನೇ ವೃತ್ತಿಯಾಗಿ ಆಯ್ದುಕೊಂಡ್ರು. ಆದರೆ ಅವರ ಒಳಗೆ ಒಬ್ಬ ನಿರ್ದೇಶಕನಿದ್ದ. ಹಾಗಾಗಿ ಕನ್ನಡದ ಸಾಧನಾ ಎನ್ನುವ ಧಾರಾವಾಹಿ ಸೇರಿ ಮೊದಲಾದ ಇನ್ನಿತರ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಸಹಾಯಕ ನಿರ್ದೇಶಕನಾಗಿ, ಬರಹಗಾರರಾಗಿ ಕೆಲಸ ಮಾಡಿದರು. ಕೊನೆಗೂ ಒಂದು ಸಿನಿಮಾವನ್ನು ನಿರ್ದೇಶನ ಮಾಡಿಯೇ ಬಿಟ್ಟರು ಸೂರಿ. ಅವರ ಮೊದಲ ನಿರ್ದೇಶನದ ಸಿನಿಮಾ ದುನಿಯಾ.
ನಟ ವಿಜಯ್ ಗೆ ಈ ಸಿನಿಮಾ ಮೂಲಕ ದುನಿಯಾ ವಿಜಯ್ ಎಂದು ಹೆಸರು ಬಂದಂತೆ ಸೂರಿ ಕೂಡ ದುನಿಯಾ ಸೂರಿ ಎಂದೇ ಹೆಸರುವಾಸಿಯಾದರು. ಮೊದಲ ಸಿನಿಮಾದಲ್ಲಿಯೇ ದೊಡ್ದ ಬ್ರೇಕ್ ಸಿಕ್ತು ಸೂರಿಅವರಿಗೆ. 2013ರ ಅವ್ರೆಗೂ ಕನ್ನಡ ಚಿತ್ರರಂಗದಲ್ಲಿ ತೆರೆಮರೆಯಲ್ಲಿಯೇ ಕೆಲಸ ಮಾಡುತ್ತಿದ್ದ ಸೂರಿ ದುನಿಯಾ ಸಿನಿಮಾದ ಮೂಲಕ ಯಶಸ್ಸು ಕಾಣುತ್ತಾರೆ. ಅದಾದ ಮೇಲೆ ದೊಡ್ಮನೆ ಕಲಾವಿದರನ್ನ ಹಾಕಿಕೊಂಡು ಸಿನಿಮಾ ಮಾಡೋದಕ್ಕೆ ಮುಂದಾಗುತ್ತಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿನಯದ ಜಾಕಿ ಸಿನಿಮಾ ಸೂರಿ ನಿರ್ದೇಶನದಲ್ಲಿ ಅತ್ಯದ್ಭುತವಾಗಿ ಮೂಡಿ ಬರುತ್ತೆ. ಕನ್ನಡ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ನೂರು ದಿನಗಳನ್ನು ಕೂಡ ಪೂರೈಸುತ್ತೆ. ಅದಾದ ಬಳಿಕ ಅಪ್ಪು ನಟನೆಯ ಅಣ್ಣಾಬಾಂಡ್, ದೊಡ್ಮನೆ ಹುಡ್ಗ ಸಿನಿಮಾಕ್ಕೂ ಕೂಡ ಸೂರಿ ಆಕ್ಷನ್ ಕಟ್ ಹೇಳುತ್ತಾರೆ.
ಅಷ್ಟೇ ಅಲ್ಲ ನಟ ಶಿವಣ್ಣ ಜೊತೆಗೂ ಎರಡು ಸಿನಿಮಾ ಮಾಡಿರುವ ಸೂರಿ ಕಡ್ಡಿಪುಡಿ ಸಿನಿಮಾ ಸೋತರೂ ಟಗರು ಸಿನಿಮಾ ಆ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾವಾಗಿ ಹೊರ ಹೊಮ್ಮುತ್ತದೆ. ಟಗರು ಸಿನಿಮಾದ ಬಳಿಕ ಬ್ರೇಕ್ ತೆಗೆದುಕೊಂಡ ಸೂರಿ ಡಾಲಿ ದನಂಜಯ ಅಭಿನಯದ ಮಂಕಿ ಪಾಪ್ ಕಾರ್ನ್ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ.
ಆದರೆ ದುರಾದೃಷ್ಟವಶಾತ್ ಆ ಸಮಯದಲ್ಲಿಯೇ ಕರೋನಾ ಮಹಾಮಾರಿ ಬಂದು ಥಿಯೇಟರ್ ಗಳು ಮುಚ್ಚುತ್ತವೆ, ಮಂಕಿ ಪಾಪ್ ಕಾರ್ನ್ ಸಿನಿಮಾ ಸದ್ದಿಲ್ಲದೇ ಸಿನಿಮಾ ಮಂದಿರದಿಂದ ಹೊರಗುಳಿಯುತ್ತದೆ. ಕನ್ನಡಕ್ಕೆ ಹಲವು ಯುವ ನಟರನ್ನು ಪರಿಚಯಿಸಿರುವ ಸೂರಿ ನಿಜಕ್ಕೂ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸಿಕ್ಕ ’ದಿ ಬೆಸ್ಟ್ ಡೈರೆಕ್ಟರ್’ ಅಂದ್ರೆ ತಪ್ಪಾಗಲ್ಲ.