ಸೋಶಿಯಲ್ ಮೀಡಿಯಾ ಅದರಲ್ಲೂ ಈ ಇನ್ಸ್ಟಾಗ್ರಾಂ ರೀಲ್ಸ್ ನೋಡುವವರಿಗೆ ಭೂಮಿಕಾ ಬಸವರಾಜ್ ಅಂದರೆ ಗೊತ್ತಿರಲೇ ಬೇಕು. ಇದೀಗ ಭೂಮಿಕಾ ಬಸವರಾಜ್ ಗೊತ್ತಿಲ್ಲ ಎಂದು ಹೇಳುವವರನ್ನು ನಾವು ಕಾಣಲು ಸಾಧ್ಯವೇ ಇಲ್ಲ. ಹೌದು, ಈ ಹಿಂದೆ ಟಿಕ್ ಟಾಕ್ ನಿಂದ ಅನೇಕ ಪ್ರತಿಭೆ ಗಳು ಹುಟ್ಟಿಕೊಂಡಿದ್ದರು. ಆದರೆ ಅದು ಬ್ಯಾನ್ ಆದಮೇಲೆ ಇನ್ಸ್ಟಾಗ್ರಾಂ ರೀಲ್ಸ್ ಆಪ್ ನಿಂದಾಗಿ ಮತ್ತೆ ಲಕ್ಷಾಂತರ ಪ್ರತಿಭೆಗಳು ಹುಟ್ಟಿಕೊಂಡಿದ್ದಾರೆ.
ಟಿಕ್ ಟಾಕ್ ಬಳಕೆದಾರರು ಈಗ ರೀಲ್ಸ್ ನಲ್ಲಿ ತಮ್ಮ ಮನೋರಂಜನೆ ಮುಂದುವರಿಸಿದ್ದಾರೆ. ಇದೇ ನಿಟ್ಟಿನಲ್ಲಿ ನಮ್ಮ ಭೂಮಿಕಾ ಬಸವರಾಜ್ ಕೂಡ ಇದ್ದಾರೆ. ಇವರು ಮೂಲತಃ ಚಿಕ್ಕ ಮಗಳೂರಿನವರು. ಕಾಫಿನಾಡಿನ ಸುಂದರಿ ಯಾವುದೇ ವಿಡಿಯೋ ಅಪ್ಲೋಡ್ ಮಾಡಿದರೂ ಅದು ವೈರಲ್ ಆಗಿ ಬಿಡುತ್ತದೆ. ಭೂಮಿಕಾ ಬಸವರಾಜ್ ಅವರು ಉಳಿದ ಸೋಶಿಯಲ್ ಮೀಡಿಯಾ ಸ್ಟಾರ್ ಗಳಿಗಿಂತ ಭಿನ್ನ ಅನ್ನಿಸಿಕೊಂಡಿದ್ದಾರೆ.
ಕಾರಣ ಅವರು ಹೆಚ್ಚಾಗಿ ಸಾಂಪ್ರದಾಯಿಕ ಉಡುಗೆಯಾದ ಸೀರೆಯಲ್ಲಿ ರೀಲ್ಸ್ ಮಾಡುತ್ತಾರೆ. ಇವರು ಸೀರೆ ಉಟ್ಟು ಸೊಂಟ ಕುಣಿಸಿದರೆ ಇತ್ತ ಪಡ್ಡೆ ಹುಡುಗರ ಹಾರ್ಟ್ ಬೀಟ್ ಕೂಡ ಕುಣಿಯುತ್ತಿರುತ್ತದೆ. ಹೌದು, ಭೂಮಿಕಾ ಬಸವರಾಜ್ ಅಂದರೆ ಹುಡುಗರ ಹಾಟ್ ಫೆವರಿಟ್. ಇವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಟ್ಟು 263 ಪೋಸ್ಟ್ ಅಪ್ಲೋಡ್ ಮಾಡಿದ್ದಾರೆ. ಇವರಿಗೆ ಬರೋಬ್ಬರಿ 9 ಲಕ್ಷದ 45 ಸಾವಿರ ಫಾಲೋವರ್ಸ್ ಇದ್ದಾರೆ.
ಇವರು ಸೀರೆಯಲ್ಲಿ ಅದ್ಭುತವಾಗಿ ಡ್ಯಾನ್ಸ್ ಮಾಡಿದರೆ, ಇವರ ಮೈಮಾಟಕ್ಕೆ, ಅಭಿನಯಕ್ಕೆ,ಸೌಂದರ್ಯಕ್ಕೆ, ಅದೇ ರೀತಿ ಕಣ್ಣಿನ ಎಕ್ಸ್ ಪ್ರೆಷನ್ ಗೆ ಹುಡುಗರು ಸೋತು ಹೋಗುತ್ತಾರೆ. ಇವರ ಅನೇಕ ವಿಡಿಯೋಗಳನ್ನು ನೋಡಿದ ಪಡ್ಡೆ ಹುಡುಗರ ನಿದ್ದೆಯೇ ಹಾರಿ ಹೋಗಿದೆ. ಇವರ ರೀಲ್ಸ್ ನೋಡಿದರೆ ಯಾರಿಗೂ ಬೋರ್ ಆಗುವುದಿಲ್ಲ. ಇನ್ನು ಕೇವಲ ಸೀರೆಯಲ್ಲಿ ಮಾತ್ರ ಅಲ್ಲ, ಆಗಾಗ್ಗೆ ಮಾರ್ಡನ್ ಡ್ರೆಸ್ ನಲ್ಲಿ ಕೂಡ ರೀಲ್ಸ್ ಮಾಡುತ್ತಿರುತ್ತಾರೆ.
ಭೂಮಿಕಾ ಬಸವರಾಜ್ ಅವರ ರೀಲ್ಸ್ ಎಷ್ಟರಮಟ್ಟಿಗೆ ಫೇಮಸ್ ಆಗಿದೆ ಅಂದರೆ ಇವರ ಹೆಸರಲ್ಲಿ ಫ್ಯಾನ್ ಪೇಜ್ ಗಳು ಕೂಡ ಹುಟ್ಟಿಕೊಂಡಿವೆ. ಯಾವ ಹೀರೋಯಿನ್ ಗಳಿಗೂ ಕಮ್ಮಿ ಇಲ್ಲದಂತಹ ಮೈ ಮಾಟ ಹಾಗೂ ಸೌಂದರ್ಯ ಹೊಂದಿರುವ ಭೂಮಿಕಾ ಬಸವರಾಜ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಇಷ್ಟರಮಟ್ಟಿಗೆ ಹೆಸರು ಗಳಿಸಲು ಕಾರಣ ಆದ ಡ್ಯಾನ್ಸ್ ಯಾವುದು ಗೊತ್ತಾ?! ಅದುವೇ ಡ್ರೀಮಂ ವೇಕಪಂ ಅನ್ನುವ ಹಾಡು.
2012 ರಲ್ಲಿ ಬಿಡುಗಡೆಯಾದ ಅಯ್ಯಾ ಹಿಂದಿ ಸಿನಿಮಾದಲ್ಲಿ ರಾಣಿ ಮುಖರ್ಜಿ ಈ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದರು. ಆದರೆ ಭೂಮಿಕಾ ಬಸವರಾಜ್ ಅವರು ರಾಣಿ ಮುಖರ್ಜಿಯನ್ನೇ ಮೀರಿಸುವಂತೆ ಅದು ಕೂಡ ಸೀರೆಯಲ್ಲಿ ಸೂಪರ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ಒಂದೇ ವಿಡಿಯೋ ಮಿಲಿಯನ್ ಗಟ್ಟಲೆ ಲೈಕ್ಸ್ ಪಡೆದಿದೆ. ಸ್ಯಾಟಿನ್ ಸೀರೆ, ಫುಲ್ ಸ್ಲೀವ್ ಬ್ಲೌಸ್ ಹಾಕಿ, ಸೆರಗನ್ನು ಸೊಂಟಕ್ಕೆ ಕಟ್ಟಿಕೊಂಡು ಇವರು ಡ್ಯಾನ್ಸ್ ಮಾಡಿದ್ದಾರೆ.
ಇದೀಗ ಮತ್ತೆ ಭೂಮಿಕಾ ಬಸವರಾಜ್ ಅವರು ಆ ವಿಡಿಯೋವನ್ನು ರಿಶೇರ್ ಮಾಡಿದ್ದಾರೆ. ಇದನ್ನು ನಾನು ಹೇಗೆ ಮರೆಯಲಿ ಎಂದು ಹ್ಯಾಷ್ ಟ್ಯಾಗ್ ಹಾಕಿ ಶೇರ್ ಮಾಡಿದ್ದಾರೆ. ಇದನ್ನು ನೋಡಿ ಮತ್ತೆ ಅವರ ಫ್ಯಾನ್ಸ್ ಖುಷಿಯಾಗಿದ್ದಾರೆ. ಈ ವಿಡಿಯೋಗೆ ಕಾಮೆಂಟ್ ಮೇಲೆ ಕಾಮೆಂಟ್ ಹಾಕುತ್ತಿದ್ದಾರೆ.ಈ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಭೂಮಿಕಾ ಬಸವರಾಜ್ ನಿಮಗೆಷ್ಟು ಇಷ್ಟ ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.
View this post on Instagram