ಸೀರೆಯಲ್ಲಿ ನವಿಲು ನಾಚುವಂತೆ ಹೆಜ್ಜೆ ಹಾಕಿದ ಚಿಕ್ಕಮಗಳೂರ ಚಿಕ್ಕಮಲ್ಲಿಗೆ ಭೂಮಿಕಾ ಬಸವರಾಜ್! ವಿಡಿಯೋ ನೋಡಿ ನೀವೇ ನೆಕ್ಸ್ಟ್ ಹೀರೋಯಿನ್ ಎಂದ ಜನತೆ!!

ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿರುವ ಈ ಚಿಕ್ಕಮಗಳೂರಿನ ಮಲ್ಲಿಗೆ ಘಮ ಇಂದು ರಾಜ್ಯಾದ್ಯಂತ ಪಸರಿಸಿದೆ. ಅತ್ಯಂತ ಮುದ್ದಾದ ಹುಡುಗಿ, ಮನಮೋಹಕ ಮೈಮಾಟ, ಆಹಾ ನೋಡಿದ್ರೆ ಕೈ ತೊಳೆದು ಮುಟ್ಟಬೇಕು ಎನ್ನುವಂಥ ಚೆಲುವೆ. ಯಾರ ಬಗ್ಗೆ ಮಾತನಾಡುತ್ತಿರಬಹುದು? ಹೌದು ನಿಮ್ಮ ಊಹೆ ಸರಿಯಾಗಿಯೇ ಇದೆ. ನಾವು ಮಾತನಾಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿರುವ ಲಕ್ಷಾಂತರ ಅಭಿಮಾನಿಗಳಾನ್ನು ಗಳಿಸಿಕೊಂಡಿರುವ ಭೂಮಿಕಾ ಬಸವರಾಜು ಅವರ ಬಗ್ಗೆ.

ಹೌದು, ಸ್ನೇಹಿತರೆ ಇಂದು ನಾವು ಕುಳಿತಲ್ಲಿಯೇ ಜಗತ್ತೇ ನಮ್ಮತ್ತ ತಿರುಗಿ ನೋಡುವಂತೆ ಮಾಡಬಹುದು. ಅದು ಕೇವಲ ಸೋಶಿಯಲ್ ಮಿಡಿಯಾದಿಂದ ಮಾತ್ರ ಸಾಧ್ಯ. ಈಗ ಒಬ್ಬ ನಟಿಯಾಗುವುದಕ್ಕೂ ಅಷ್ಟು ಕಷ್ಟಪಡಬೇಕಾಗಿಲ್ಲ. ನಿಮ್ಮಲ್ಲಿ ಪ್ರತಿಭೆ ಇದ್ದರೆ, ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ರೆ ಜನ ನಿಮ್ಮನ್ನ ಹುಡುಕಿಕೊಂಡು ಬರುತ್ತಾರೆ. ಈಗಾಗಲೇ ರಾತ್ರಿ ಬೆಳಗಾಗುವಷ್ಟರಲ್ಲಿ ಕಾಫಿ ನಾಡ ಚಂದು ಫೇಮಸ್ ಆಗಿದ್ದು ಗೊತ್ತೇ ಇದೆ ಅಲ್ವಾ?

ಹೀಗೆ ಇನ್ನೂ ಹಲವಾರು ಯುವಕ ಯುವತಿಯರು ಸೋಶಿಯಲ್ ಮೀಡಿಯಾ ಮೂಲಕವೇ ಹೆಸರುವಾಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾ ಎಷ್ಟು ಪವರ್ ಫುಲ್ ಅಂದ್ರೆ ಇತ್ತೀಚಿಗೆ ಕನ್ನಡ ಬಿಗ್ ಬಾಸ್ ಒಟಿಟಿಯಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದ ಸೋನು ಶ್ರೀನಿವಾಸ್ ಗೌಡ, ಸ್ಪೂರ್ತಿ ಗೌಡ ಮೊದಲಾದವರು ಸೋಶಿಯಲ್ ಮೀಡಿಯಾ ಮೂಲಕವೇ ಫೇಮಸ್ ಆದವರು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದ ಭೂಮಿಕಾ ಬಸವರಾಜ್ ಅವರ ಬಗ್ಗೆ ಹೇಳಲೇಬೇಕು.

ಅತ್ಯಂತ ಸ್ಪರದ್ರೂಪಿಯಾಗಿರುವ ಭೂಮಿಕಾ ಬಸವಾರ್, ಅತ್ಯುತ್ತಮ ಟ್ಯಾಲೆಂಟ್ ಕೂಡ ಹೊಂದಿದ್ದಾರೆ. ಯಾವ ಟ್ರೆಂಡಿ ಹಾಡಾಗಿದ್ರೂ ಸಾಕು ಅದಕ್ಕೆ ಸ್ಟೆಪ್ ಹಾಕುತ್ತಾರೆ. ಅಷ್ಟೇ ಅಲ್ಲ ಸ್ನೇಹಿತರೆ, ಭೂಮಿಕಾ ಬಸವರಾಜು ಅವರಿಂದಲೇ ಸಾಕಷ್ಟು ಹಾಡುಗಳು ಟ್ರೆಂಡ್ ಆಗಿವೆ ಅಂದ್ರೆ ತಪ್ಪಾಗಲ್ಲ. ಭೂಮಿಕಾ ಅವರ ಅಭಿಮಾನಿಗಳು ಅವರೂ ಕೂಡ ಬಿಗ್ ಬಾಸ್ ಮನೆಗೆ ಹೋಗಬೇಕು ಅಂತ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ರು.

ಬಿಗ್ ಬಾಸ್ ಸೀಸನ್ 9ನಲ್ಲಿ ಬಿಗ್ ಬಾಸ್ ಮನೆಗೆ ಹೋಗುವ ನಿರೀಕ್ಷಿತ ಸ್ಪರ್ಧಿಗಳ ಪಟ್ಟಿಯಲ್ಲಿ ಭೂಮಿಕಾ ಬಸವರಾಜು ಅವರ ಹೆಸರೂ ಕೂಡ ಇತ್ತು. ಸಾಮಾಜಿಕ ಜಾಲತಾಣದಲ್ಲಿ ಅದರಲ್ಲೂ ಇನ್ಸ್ಟಾಗ್ರಾಮ್ ನಲ್ಲಿ ರಿಲ್ಸ್ ಗಳ ಮೂಲಕ ಜನರ ಗಮನ ಸೆಳೆದಿರುವ ಭೂಮಿಕಾ ಬಸವರಾಜ್, ಕನ್ನಡ ಸಿನಿಮಾರಂಗದಲ್ಲಿ ಅಭಿನಯಿಸಿ ಉತ್ತಮ ಸ್ಟಾರ್ ಎನಿಸಿಕೊಳ್ಳುವ ಕನಸು ಹೊತ್ತಿದ್ದಾರೆ. ಚಿಕ್ಕಮಗಳೂರಿನ ಈ ಚೆಲುವೆ, ಪದವೀಧರೆ.

ಪಕ್ಕಾ ಹಳ್ಳಿ ಸೊಗಡಿನ ಸುಂದರಿ. ಆದರೆ ಭೂಮಿಕಾ ಬಸವರಾಜು ಮಾರ್ಡನ್ ಬಟ್ಟೆ ತೊಡುವುದರಲ್ಲಿಯೂ ಹಿಂದೆ ಬಿಂದಿಲ್ಲ. ಆದರೂ ಇವರು ಹೆಚ್ಚು ಗುರುತಿಸಿಕೊಳ್ಳುವುದೇ ಸೀರೆಯುಟ್ಟ ನಾರಿಯಾಗಿ. ಈ ಹಿಂದೆ ಟಿಕ್ ಟಾಕ್ ಮೂಲಕ ಫೇಮಸ್ ಆಗಿದ್ದರು ಭೂಮಿಕಾ. ಟಿಕ್ ಟಾಕ್ ಬ್ಯಾನ್ ಅದ ನಂತರ ಇನ್ಸ್ಟಗ್ರಾಮ್ ಮೂಲಕ ಮತ್ತೆ ವಿಡಿಯೋಗಳನ್ನು ಮಾಡುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

ಈಗಾಗಲೇ 4ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್ ಹೊಂದಿರುವ ಭೂಮಿಕಾ ಬಸವರಾಜ್ ಇನ್ಸ್ಟಾಗ್ರಾಮ್ ವಿಡಿಯೋ ಕ್ರಿಯೇಟರ್ ಆಗಿದ್ದು, ಸಾಕಷ್ಟು ಕನ್ನಡ ಹಾಗೂ ಇತರ ಭಾಷಾ ಹಾಡಿಗೆ ನೃತ್ಯ ಮಾಡಿ ವಿಡಿಯೋ ಅಪ್ಲೋಡ್ ಮಾಡುತ್ತಾರೆ. ಅದರಲ್ಲೂ ಭೂಮಿಕಾ ಸೀರೆ ಉಟ್ಟು ನೃತ್ಯ ಮಾಡುತ್ತಿದ್ರೆ, ನೋಡಿದವರ ಬಿಟ್ಟ ಬಾಯಿ ಬಿಟ್ಟಂತೆಯೇ ಇರುತ್ತೆ. ಭೂಮಿಕಾ ಬಸವರಾಜ್ ಅವರ ಎಲ್ಲಾ ವಿಡಿಯೋಗಳನ್ನು ನೀವು ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಕ್ಷಿಸಬಹುದು.

ಅವರ ಇತ್ತೀಚಿನ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೀಲಿ ಬಣ್ಣದ ಶೇಡ್ಸ್ ಇರುವ ಸೀರೆ, ಸೊಂಟಕ್ಕೊಂದು ಡಾಬು ತೊಟ್ಟು ಭೂಮಿಕಾ ಹಾಡೊಂದಕ್ಕೆ ಸೊಂಟ ಬಳುಕಿಸಿದ್ದಾರೆ. ಭೂಮಿಕಾ ಹೀಗೇ ಫೇಮಸ್ ಆಗುತ್ತಿದ್ದರೆ ಸಿನಿಮಾ ತಾರೆಯರನ್ಣೂ ಹಿಂದಿಕ್ಕೋದು ಪಕ್ಕಾ ನೋಡಿ.

 

View this post on Instagram

 

A post shared by Bhumika (@bhumika_basavaraj)

Leave a Reply

Your email address will not be published. Required fields are marked *