ಸಿನಿಮಾ ತಾರೆಯರು ತಮ್ಮ ವೈಯಕ್ತಿಕ ಜೀವನದಲ್ಲಿ ಏನೇ ಮಾಡಿದ್ರು ಹೈಲೈಟ್ ಆಗ್ತಾರೆ ಇತ್ತೀಚಿಗೆ ಕನ್ನಡದಲ್ಲಿ ಧಾರಾವಾಹಿ ನಟಿಯರ ಹವಾ ಜೋರಾಗಿದೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ವಿಡಿಯೋ ಹಾಗೂ ಫೋಟೋ ಅಥವಾ ವೈಯಕ್ತಿಕ ಜೀವನದ ಕೆಲವು ಘಟನೆಗಳ ವಿಷಯವನ್ನು ಹಂಚಿಕೊಳ್ಳುತ್ತಾರೆ. ಈ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ ಧಾರಾವಾಹಿಯ ತಾರೆಯರು. ಇಂತಹ ನಟಿಯರಲ್ಲಿ ನಮ್ಮ ಕವಿತಾ ಗೌಡ ಕೂಡ ಒಬ್ರು.
ಕವಿತಾ ಗೌಡ ಎನ್ನುವುದಕ್ಕಿಂತ ಚಿನ್ನು ಅಂದ್ರೆ ಬಹಳಷ್ಟು ಮಂದಿಗೆ ಬೇಕಾ ಗೊತ್ತಾಗುತ್ತೆ ಹೌದು, ಕವಿತಾ ಗೌಡ ಲಕ್ಷ್ಮಿ ಬಾರಮ್ಮ ಎನ್ನುವ ಧಾರಾವಾಹಿಯಲ್ಲಿ ಚಿನ್ನು ಪಾತ್ರವನ್ನು ನಿಭಾಯಿಸುತ್ತಿದ್ದರು. ಈ ಪಾತ್ರದ ಹೆಸರಿನ ಮೂಲಕವೇ ಕವಿತಾ ಗೌಡ ಇಂದಿಗೂ ಗುರುತಿಸಿಕೊಳ್ಳುತ್ತಾರೆ. ಕವಿತಾ ಗೌಡ ಇತ್ತೀಚಿಗಷ್ಟೇ ಮದುವೆಯಾಗಿದ್ದಾರೆ. ತಾವು ಜೊತೆಯಾಗಿ ನಟಿಸುತ್ತಿದ್ದ ಚಂದನ್ ಕುಮಾರ್ ಅವರನ್ನು ಕವಿತಾ ಗೌಡ ವಿವಾಹವಾಗಿದ್ದಾರೆ.
ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ಆರಂಭದಲ್ಲಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್ ಇಬ್ಬರು ಒಟ್ಟಾಗಿ ಅಭಿನಯಿಸುತ್ತಿದ್ದರು. ಕಾಲಾನಂತರದಲ್ಲಿ ಈ ಇಬ್ಬರು ಪಾತ್ರದಾರಿಗಳು ಧಾರಾವಾಹಿಯನ್ನು ಬಿಟ್ಟಿದ್ದರು. ಕವಿತಾ ಗೌಡ ಕೆಲವು ಸಿನಿಮಾಗಳಲ್ಲಿ ಬ್ಯುಸಿ ಆದ್ರೆ ಚಂದನ್ ಕುಮಾರ್ ತಮಿಳು ತೆಲುಗು ಹಾಗೂ ಕನ್ನಡ ಧಾರಾವಾಹಿಗಳಲ್ಲಿ ನಟಿಸುವುದರಲ್ಲಿ ಬ್ಯುಸಿ ಆದ್ರು. ನಂತರ ಸುಮಾರು ಕರೋನದ ಸಮಯದಲ್ಲಿ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಬಹಳ ಸರಳವಾಗಿ ವಿವಾಹವಾದರು.
ಇವರ ಮದುವೆಗೆ ಕೆಲವು ಆಪ್ತ ಸ್ನೇಹ ಬಳಗವನ್ನ ಮಾತ್ರ ಕರೆಯಲಾಗಿತ್ತು. ಕವಿತಾ ಗೌಡ ಹಾಗೂ ಚಂದನ್ ಕುಮಾರ್ ಇಬ್ಬರು ವಿವಾಹವಾದ ಮೇಲೆ ಕೆಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು ಅದಾದ ಬಳಿಕ ಈಗ ಕಿರುತೆರೆಯಲ್ಲಿ ಚಂದನ್ ಕುಮಾರ್ ಮಾತ್ರ ತುಂಬಾ ಬ್ಯುಸಿಯಾಗಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಧಾರಾವಾಹಿಗಳಲ್ಲಿಯೂ ಕೂಡ ಚಂದನ್ ಕುಮಾರ್ ಅಭಿನಯಿಸುತ್ತಿದ್ದಾರೆ.
ಆದರೆ ಕವಿತಾ ಗೌಡ ಮಾತ್ರ ಮದುವೆಯ ನಂತರ ನಟನೆಯಿಂದ ದೂರ ಸರಿದಿದ್ದಾರೆ. ಯಾವ ಧಾರವಾಹಿ ಹಾಗೂ ಸಿನಿಮಾಗಳು ನ್ಯೂ ಕಾಣಿಸಿಕೊಳ್ಳದ ಕವಿತಾ ಗೌಡ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಆಕ್ಟಿವ್ ಆಗಿರುತ್ತಾರೆ. ಹೌದು ನಟಿ ಕವಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಅದರಲ್ಲೂ ಇನ್ಸ್ಟಾಗ್ರಾಂ ತಮ್ಮ ಖಾತೆಯಲ್ಲಿ ಹಲವಾರು ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಾರೆ. ಕೆಲವು ರಿಲ್ ಗಳನ್ನು ಕೂಡ ಕವಿತಾ ಗೌಡ ಮಾಡುತ್ತಾರೆ ಈ ಮೂಲಕ ಅಭಿಮಾನಿಗಳ ಜೊತೆಗೆ ಇಂದಿಗೂ ಸಂಪರ್ಕದಲ್ಲಿದ್ದಾರೆ ಕವಿತಾ ಗೌಡ.
ನಟಿ ಕವಿತಾ ಗೌಡ ಇತ್ತೀಚಿಗೆ ತಾವು ಶಾಪಿಂಗ್ ಮಾಡಿದ ರಶೀದಿ ಎಂದು ಪೋಸ್ಟ್ ಮಾಡಿದ್ರು. ಅವರಷ್ಟು ಉದ್ದದ ಆರ್ ಲಿಸ್ಟ್ ನೋಡಿ ಹುಡುಗರು ತಲೆ ತಿರುಗಿ ಬಿದ್ದಿದ್ದಾರೆ. ಮದುವೆಯಾದರೆ ಹೆಂಡತಿಯನ್ನು ಕರೆದುಕೊಂಡು ಹೋಗಿ ಇಷ್ಟೆಲ್ಲಾ ಶಾಪಿಂಗ್ ಮಾಡಿಸ್ಬೇಕ ಅಂತ ಹುಡುಗರು ಈಗಾಗಲೇ ಭಯಗೊಂಡಿದ್ದಾರೆ. ಕವಿತಾ ಗೌಡ ಅವರ ಶಾಪಿಂಗ್ ಲಿಸ್ಟ್ ನೋಡಿ ನಾವು ಮದುವೆ ಆಗುವುದಿಲ್ಲ ಅಂತ ಕೆಲವು ಪಡ್ಡೆ ಹುಡುಗರು ಕಮೆಂಟ್ ಕೂಡ ಮಾಡಿದ್ದಾರೆ.
ಮೊದಲೇ ದುಬಾರಿ ಸಮಯ. ಎಲ್ಲಾ ವಸ್ತುಗಳ ಬೆಲೆಯು ತಾರಕಕ್ಕೆ ಏರಿದೆ. ಅಂತದ್ರಲ್ಲಿ ಇಷ್ಟೆಲ್ಲ ಶಾಪಿಂಗಾ ಅಂತ ಜನ ಬಾಯಿ ಮೇಲೆ ಬೆರಳಿಟ್ಟು ಕೊಂಡಿದ್ದಾರೆ. ಅದೇನೇ ಇರಲಿ ಕವಿತಾ ಗೌಡ ಅವರ ಈ ಪೋಸ್ಟ್ ನೋಡಿ ಚಂದನ್ ಕುಮಾರ್ ಅವಸ್ಥೆ ಹೇಗಿರಬಹುದು ಅಂತ ಕೆಲವರು ಫನ್ನಿಯಾಗಿ ಕೂಡ ಕಾಮೆಂಟ್ ಮಾಡಿದ್ದಾರೆ. ಇನ್ನು ನಮ್ಮ ನೆಚ್ಚಿನ ನಟಿ ಕವಿತಾ ಗೌಡ ಮತ್ತೆ ಅಭಿನಯ ಲೋಕವನ್ನು ಪ್ರವೇಶಿಸಲಿ ಅನ್ನೋದು ಅವರ ಅಭಿಮಾನಿಗಳ ಆಸೆ.