ನಟಿ ಸಪ್ತಮಿ ಗೌಡ ಕನ್ನಡದಲ್ಲಿ ಬೇರೆ ಸಿನಿಮಾದಲ್ಲಿ ನಟಿಸಿದ್ರು ಕೂಡ ಅವರು ಗುರುತಿಸಿಕೊಂಡದ್ದು ಕಾಂತರಾ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ನಂತರ. ಕಾಂತರಾ ಸಿನಿಮಾ ಸೂಪರ್ ಡೂಪರ್ ಹಿಟ್ ಆಯ್ತು. ಆ ಮೂಲಕ ಇದರಲ್ಲಿ ಅಭಿನಯಿಸಿದ್ದ ಕಲಾವಿದರಿಗೂ ಕೂಡ ದೊಡ್ಡ ಬ್ರೇಕ್ ಸಿಕ್ತು. ಸಪ್ತಮಿ ಗೌಡ ಕೂಡ ಸಾಕಷ್ಟು ಇತರ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ.
ಹೌದು, ಕಾಂತರಾ ಸಿನಿಮಾದ ನಂತರ ಸಪ್ತಮಿ ಗೌಡ ಅವರ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಸಂದರ್ಶನಗಳಲ್ಲಿ ಮಾತನಾಡಿದ ಸಪ್ತಮಿ ಗೌಡ ತನಗೆ ಬೇರೆ ಭಾಷೆಯಿಂದಲೂ ಆಫರ್ ಗಳು ಬರುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಕಾಂತರಾ ಸಿನಿಮಾದಲ್ಲಿ ಕರಾವಳಿಯ ಭಾಷೆಯನ್ನು ಕಲಿತು ಅಲ್ಲಿಯವರಂತೆ ಕಾಣಿಸಿಕೊಂಡ ಸಪ್ತಮಿ ಗೌಡ ಅವರ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದರು.
ಹಾಗಾಗಿ ಸಪ್ತಮಿ ಗೌಡ ಅವರ ಮೇಲೆ ನಿರೀಕ್ಷೆಗಳು ಕೂಡ ಹೆಚ್ಚಾಗಿದೆ. ಅಭಿಮಾನಿಗಳೂ ಕೂದ ಹೆಚ್ಚಾಗಿದ್ಡಾರೆ. ಸಪ್ತಮಿ ಗೌಡ ಈಗ ಮೂಗುತಿಯ ಸುಂದರಿ ಎಂದೇ ಗುರುತಿಸಿಕೊಂಡಿದ್ಡಾರೆ. ಅವರ ಸೌಂದರ್ಯಕ್ಕೆ ಸಿನಿಮಾ ಇಂಡಸ್ಟ್ರಿಯೇ ಮರುಳಾಗಿದೆ. ಅವರನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ಹಿಟ್ ಆಗುತ್ತೆ ಅಂತ ನಿರ್ಮಾಪಕರು ಸಪ್ತಮಿ ಗೌಡ ಅವರ ಕಾಲ್ ಶೀಟ್ ಕೇಳುತ್ತಿದ್ದಾರೆ.
ಇನ್ನು ಸಪ್ತಮಿ ಗೌಡ ಕನ್ನಡದಲ್ಲಿ ಮತ್ತೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಅದು ಯಾವ ಸಿನಿಮಾ ಗೊತ್ತಾ? ಕನ್ನಡದಲ್ಲಿ ಪೈಲ್ವಾನ್ ಅಂತಹ ಹಿಟ್ ಸಿನಿಮಾವನ್ನು ಕೊಟ್ಟ ನಿರ್ದೇಶಕ ಕೃಷ್ಣ ಅವರ ಮುಂದಿನ ಸಿನಿಮಾ ಕಾಳಿ. ಈ ಸಿನಿಮಾದಲ್ಲಿ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರು ನಾಯಕನಾಗಿ ನಟಿಸುತ್ತಿದ್ದಾರೆ.
ಇನ್ನು ಈ ಸಿನಿಮಾಕ್ಕೆ ಸಪ್ತಮಿ ಗೌಡ ಅವರನ್ನ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ನಿರ್ದೇಶಕ ಕೃಷ್ಣ ಅವರು ಸಪ್ತಮಿ ಗೌಡ ಅವರನ್ನ ಭೇಟಿ ಮಾಡಿ ಸಿನಿಮಾದ ಕಥೆಯನ್ನು ಬ್ರೀಫ್ ಮಾಡಿದ್ದಾರೆ. ಕಾಳಿ ಸಿನಿಮಾದ ಕಥೆ ಕೇಳಿ ಸಪ್ತಮಿ ಗೌಡ ಅಭಿನಯಿಸುವುದಕ್ಕೆ ರೆಡಿ ಎಂದಿದ್ದಾರೆ ಎನ್ನುವ ಮಾಹಿತಿ ಇದೆ.
ಈಗಾಗಲೇ ಸಪ್ತಮಿ ಗೌಡ ಅವರ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಇನ್ನೇನು ಕಾಳಿ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಕಾಳಿ ಸಿನಿಮಾ ಕಾವೇರಿ ನದಿ ವಿವಾದದ ಸಮಯದಲ್ಲಿ ನಡೆದ ಪ್ರೇಮ ಕಥೆಯೊಂದರ ಆಧಾರಿತ ಕಥೆ ಇದು ನೈಜ ಕಥೆ ಏನಾಗುತ್ತಿದೆ. ಅಭಿಷೇಕ್ ಅಂಬರೀಶ್ ಈಗಾಗಲೇ ಬ್ಯಾಡ್ ಮ್ಯಾನರ್ಸ್ ಎನ್ನುವ ಸಿನಿಮಾದ ಚಿತ್ರೀಕರಣದ ಕೊನೆಯ ಹಂತದಲ್ಲಿ ಇದ್ದು.
ಇನ್ನು ಕೆಲವೇ ದಿನಗಳಲ್ಲಿ ಸೆಟ್ಟೇರಲಿರುವ ಕಾಳಿ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ನಟಿ ಸಪ್ತಮಿ ಗೌಡ ಮಾತ್ರ ಒಳ್ಳೇ ಫಾರ್ಮ್ ನಲ್ಲಿ ಇದ್ದಾರೆ. ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.