PhotoGrid Site 1667446026399

ಸಿನೆಮಾ ಬಿಟ್ಟು ಪಾಪ್ ಕಾರ್ನ್ ಮಾರೋದಕ್ಕೆ ಶುರು ಮಾಡಿದ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್! ಪಾಪ್ ಕಾರ್ನ್ ಕೊಳ್ಳಲು ಕಿಲೋ ಮೀಟರ್ ಗಟ್ಟಲೆ ಕ್ಯೂ ನಲ್ಲಿ ನಿಂತ ಜನತೆ ನೋಡಿ!!

ಸುದ್ದಿ

ಖ್ಯಾತ ಬಹುಭಾಷಾ ನಟಿ ಶ್ರೀದೇವಿ ಅವರ ಮಗಳು ಜಾನ್ವಿವಿ ಕಪೂರ್. ನೋಡೋದಕ್ಕೆ ಸಕ್ಕತ್ ಹಾಟ್ ಆಗಿರುವ ಜಾನ್ವಿ, ಸಾಕಷ್ಟು ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸುತ್ತಾರೆ. ಇದರ ಜೊತೆಗೆ ಇತ್ತೀಚಿಗೆ ಹೆಚ್ಚು ಹೆಚ್ಚು ಸಿನಿಮಾ ಅವಕಾಶಗಳು ಕೂಡ ಜಾನ್ವಿಗೆ ಒಲಿದು ಬರುತ್ತಿವೆ. ಹಾಗಾಗಿ ಸಾಲು ಸಾಲು ಬಾಲಿವುಡ್ ಸಿನಿಮಾಗಳಲ್ಲಿ ಸದ್ಯ ಜಾನ್ವಿ ಕಪೂರ್ ಬ್ಯುಸಿಯಾಗಿದ್ದಾರೆ. ಆದರೆ ಜಾನ್ವಿ ಕಪೂರ್ ಸಾಕಷ್ಟು ಬಾರಿ ಟ್ರೋಲ್ ಗಳಿಗೆ ಗುರಿಯಾಗುತ್ತಾರೆ.

ಇತ್ತೀಚಿಗಂತೂ ಅವರ ಬಗ್ಗೆ ಟ್ರೋಲ್ ಹೆಚ್ಚಾಗುತ್ತಿದ್ದು ಅವರು ಮಾಡುವ ಎಲ್ಲಾ ಕೆಲಸಗಳ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ಜಾನ್ವಿ ಕಪೂರ್ ಇತ್ತೀಚೆಗೆ ಮಿಲಿ ಚಿತ್ರದ ಪ್ರಚಾರಕ್ಕಾಗಿ ದೆಹಲಿಗೆ ಹೋಗಿದ್ದರು. ಅಲ್ಲಿ ಮಲ್ಟಿಪ್ಲೆಕ್ಸ್ ನಲ್ಲಿ ಪಾಪ್ ಕಾರ್ನ್ ಮಾರಾಟ ಮಾಡುತ್ತಿದ್ದರು ಇದು ಸಿನಿಮಾದ ವಿಭಿನ್ನ ರೀತಿಯ ಪ್ರಚಾರವು ಹೌದು.

ಆದರೆ ಅಭಿಮಾನಿಗಳು ಕೆಲವರು ಈ ಪ್ರಚಾರದ ಸ್ಟ್ರಾಟಜೀಯನ್ನು ಮೆಚ್ಚಿಕೊಂಡಿದ್ದರೆ ಇನ್ನೂ ಕೆಲವರು ಬಾಯಿಗೆ ಬಂದಂತೆ ಟ್ರೋಲ್ ಮಾಡಿದ್ದಾರೆ. ಹೌದು, ಜಾನ್ವಿ ಕಪೂರ್ ಸದ್ಯ ಮಿಲಿ ಸಿನಿಮಾದ ಪ್ರಚಾರದ ಭರಾಟೆಯಲ್ಲಿ ಇದ್ದಾರೆ. ಈ ಚಿತ್ರವನ್ನು ಹೇಗಾದರೂ ಗೆಲ್ಲಿಸಬೇಕು ಅಂತ ಹಟ ತೊಟ್ಟಿದ್ದಾರೆ. ಯಾಕಂದ್ರೆ ಜಾನ್ವಿ ಅವರಗಿನ ಯಾವ ಸಿನಿಮಾಗಳು ಕೂಡ ಹೆಚ್ಚು ಸಕ್ಸಸ್ ಆಗಿಲ್ಲ.

ಇನ್ನು ಜಾನ್ವಿ ಕಪೂರ್ ಅಭಿನಯದ ಮಿಲಿ ಚಿತ್ರವನ್ನು ಅವರ ತಂದೆ ಬೋನಿ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ. ಇದೇ ನವೆಂಬರ್ 4ರಂದು ರಾಜ್ಯಾದ್ಯಂತ ಈ ಸಿನಿಮಾ ತೆರೆ ಕಾಣಲಿದೆ. ಮಿಲಿ ಸಿನಿಮಾ ಹೆಲನ್ ಸಿನಿಮಾದ ರಿಮೇಕ್. ಹಿಂದಿಯಲ್ಲಿ ಸನ್ನಿ ಕೌಶಲ್ಯ ಹಾಗೂ ಮನೋಜ್ ಪಾಹ್ವಾ ಕೂಡ ಅಭಿನಯಿಸಿದ್ದಾರೆ. ಏನು ಮಿಲಿ ಸಿನಿಮಾದ ಟ್ರೈಲರ್ ಈಗಾಗಲೇ ರಿಲೀಸ್ ಆಗಿದ್ದು ಸಿನಿಪ್ರಿಯರು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.

ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವ ಹಿನ್ನೆಲೆಯಲ್ಲಿ ಜಾನ್ವಿ ಕಪೂರ್ ಅಭಿನಯದ ಮಿಲಿ ಸಿನಿಮಾ ಹಿಟ್ ಆಗುವ ಸಾಧ್ಯತೆ ಹೆಚ್ಚಾಗಿ ಕಾಣಿಸುತ್ತಿದೆ. ಆದರೆ ಮಲ್ಟಿಪ್ಲೆಕ್ಸ್ ನಲ್ಲಿ ಹೀಗೆ ಪಾಪ್ ಕಾರ್ನ್ ಮಾರಿ ಸಿನಿಮಾ ಪ್ರಚಾರ ಮಾಡಿರುವುದಕ್ಕೆ ಸಿನಿಮಾ ಚೆನ್ನಾಗಿದ್ದರೆ ಟಿಕೆಟ್ ಮಾರಿ, ಪಾಪ್ ಕಾರ್ನ್ ಅಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇತ್ತೀಚಿಗೆ ಬಾಲಿವುಡ್ ಸಿನಿಮಾಗಳೆಲ್ಲವೂ ಮಕಾಡೆ ಮಲಗಿರುವುದು ನಿಮಗೆ ಗೊತ್ತೇ ಇದೆ.

ಹಾಗಾಗಿ ಬಿಡುಗಡೆಯಾಗುವ ಪ್ರತಿ ಸಿನಿಮಾದ ಬಗ್ಗೆಯೂ ಬಾಲಿವುಡ್ ಸಿನಿ ಪ್ರಿಯರಿಗೆ ನಿರೀಕ್ಷೆ ಹೆಚ್ಚಾಗಿದೆ. ಮಿಲಿ ಆ ನಿಟ್ಟಿನಲ್ಲಿ ಸಿನಿ ಪ್ರಿಯರಿಗೆ ಖುಷಿ ನೀಡುತ್ತಾ ಕಾದು ನೋಡಬೇಕು. ಸದ್ಯ ಪಾಪ್ ಕಾರ್ನ್ ಮಾರಿದಕ್ಕಾದರೂ ಮಿಲಿ ಸಿನಿಮಾ ಹಿಟ್ ಕಂಡು ಜಾನ್ವಿ ಬಾಲಿವುಡ್ ನಲ್ಲಿ ನೆರೆಯೂರುತ್ತಾರಾ ಕಾದು ನೋಡಬೇಕು. ಸ್ನೇಹಿತರೆ, ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *