ಇಂದು ಮಹಿಳೆಯರು ಈ ಎಲ್ಲಾ ಕ್ಷೇತ್ರದಲ್ಲಿಯೂ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. ಆದರೆ ಒಂದು ಹೆಣ್ಣು ಸುಲಭವಾಗಿ ಯಾವುದೇ ಕಿರುಕುಳ ಅವಮಾನ ಇಲ್ಲದೆ ಯಾವ ಕ್ಷೇತ್ರದಲ್ಲಿಯೂ ಕೆಲಸ ಮಾಡಲು ಸಾಧ್ಯವಿಲ್ಲ. ಎಷ್ಟೋ ಬಾರಿ ಗಂಡಸರು ಹೆಣ್ಣು ಮಕ್ಕಳನ್ನು ನೋಡುವ ರೀತಿಯೇ ಬೇರೆ. ಸಿನಿಮಾ ಕ್ಷೇತ್ರದಲ್ಲಿ ಇಂತಹ ಸಮಸ್ಯೆಗಳು ಹೆಚ್ಚು ಸರಿಯಾದ ಅವಕಾಶ ಸಿಗಬೇಕು ಅಂದ್ರೆ ಹೆಣ್ಣು ಮಕ್ಕಳು ಅದೆಷ್ಟೋ ನಿರ್ಮಾಪಕರಿಗೆ ನಿರ್ದೇಶಕರಿಗೆ ತಲೆ ಬಾಗಲೇಬೇಕಾದ ಅನಿವಾರ್ಯತೆ ಇರುತ್ತೆ.
ಇನ್ನು ಸಿನಿಮಾ ನಿರ್ಮಾಣ ಮಾಡುವವರು ಅಷ್ಟೇ ಅವಕಾಶ ಕೊಡ್ತೀವಿ ಅನ್ನುವ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ತಮಗೆ ಬೇಕಾದ ಹಾಗೆ ಬ’ಳಸಿಕೊಳ್ಳುತ್ತಾರೆ. ನಮಗೆ ಸರಿಯಾಗಿ ಸ್ಪಂದಿಸಿದರೆ ಮಾತ್ರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಅವಕಾಶ ಕೊಡುತ್ತೀವಿ ಅಂತ ಹೇಳುತ್ತಾರೆ ಇದಕ್ಕೆ ಸಿನಿಮಾ ಭಾಷೆಯಲ್ಲಿ ಕಾಸ್ಟಿಂಗ್ ಕೌಚ್ ಎಂದು ಹೇಳಲಾಗುತ್ತೆ. ಸಿನಿಮಾದಲ್ಲಿ ನಟಿಯಾಗಿ ಮಿಂಚಬೇಕು ಅಂತ ಬಯಸುವ ಬಹುತೇಕ ನಾಯಕಿಯರಿಗೆ ಈ ಸಮಸ್ಯೆ ಎದುರಾಗುತ್ತೆ.
ಹೊಸಬರಿಗೆ ಏನು ಗೊತ್ತಿರುವುದಿಲ್ಲ ಆಗ ಸಿನಿಮಾರಂಗದಲ್ಲಿ ಇಂತದ್ದು ನಡೆಯುವುದು ಸಹಜ ಅದನ್ನು ಎದುರಿಸಬೇಕಾಗಿದ್ದು ಅವರ ಕೈಯಲ್ಲೇ ಇದೆ. ಆದರೆ ಇಂತಹ ವಿಷಯದಲ್ಲಿ ಇನ್ನು ಆಶ್ಚರ್ಯಕರವಾದ ಸಂಗತಿ ಏನೆಂದರೆ ಸಾಕಷ್ಟು ದೊಡ್ಡ ಸ್ಟಾರ್ ನಟಿ ಎನಿಸಿಕೊಂಡ ಮೇಲೆ ಕೂಡ ಕೆಲವರು ಇಂತಹ ಸಮಸ್ಯೆಗಳನ್ನು ಮತ್ತೆ ಮತ್ತೆ ಎದುರಿಸಬೇಕಾಗುತ್ತದೆ.
ಈಗಾಗಲೇ ಕಾ-ಸ್ಟಿಂಗ್ ಕೌ’ಚ್ ಬಗ್ಗೆ ಹಲವು ತಾರೆಯರು ತಮ್ಮ ಅನುಭವಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಆದರೂ ತಮಗೆ ಆಗಿರುವ ಅವಮಾನಗಳನ್ನಾಗಲಿ ಅಥವಾ ತಾವು ಅನುಭವಿಸಿದ ಕಿ-ರುಕು-ಳುಗಳನ್ನಾಗಿ ಸುಲಭವಾಗಿ ಎಲ್ಲಾ ತಾರೆಯರು ಹೇಳಿಕೊಳ್ಳುವುದಿಲ್ಲ. ಅದರಿಂದ ಮುಂದೇನಾದರೂ ಸಮಸ್ಯೆ ಆಗಬಹುದು ಎನ್ನುವ ಭಯದಲ್ಲಿಯೇ ಇರುತ್ತಾರೆ ಈ ನಡುವೆ ಇನ್ನೂ ಕೆಲವು ನಟಿಯರು ಓಪನ್ ಆಗಿ ಈ ಬಗ್ಗೆ ಹೇಳಿಕೊಂಡಿದ್ದಾರೆ.
ನಟಿ ರಮ್ಯಕೃಷ್ಣ ಅವರ ಬಗ್ಗೆ ಗೊತ್ತಿಲ್ಲದೆ ಇರುವವರೆಲ್ಲ ಬಹುಭಾಷಾ ನಟಿಯಾಗಿರುವ ರಮ್ಯಾ ಕೃಷ್ಣ ಕನ್ನಡದಲ್ಲಿ ಕೂಡ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರಮ್ಯಕೃಷ್ಣ ಹೆಚ್ಚಾಗಿ ಅಭಿನಯಿಸಿದ್ದು ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರ ಜೊತೆ. ಹಾಗಾಗಿ ಸಾಕಷ್ಟು ಗ್ಲಾಮರ್ ಪಾತ್ರಗಳನ್ನು ಮಾಡಿದ್ದಾರೆ ರಮ್ಯಕೃಷ್ಣ. 80-90 ರ ದಶಕದ ಟಾಪ್ ಹೀರೋಯಿನ್ ಗಳಲ್ಲಿ ಮುಂಜೂಣಿಯಲ್ಲಿದ್ದ ರಮ್ಯಕೃಷ್ಣ ಅವರು ಇಂದಿಗೂ ಬಹು ಬೇಡಿಕೆಯಲ್ಲಿರುವ ನಟಿ.
ಬಾಹುಬಲಿ ಸಿನಿಮಾದಲ್ಲಿ ಅತ್ಯಂತ ಅಭಿನಯವನ್ನು ತೋರಿಸಿದ ರಮ್ಯಕೃಷ್ಣ ಅವರು ಸಿನಿಮಾದಲ್ಲಿ ದೊಡ್ಡ ಬ್ರೇಕ್ ಪಡೆದುಕೊಂಡಿದ್ದೇ ಈ ಸಿನಿಮಾದಿಂದ. ಅದಾದ ಮೇಲೆ ರಮ್ಯಕೃಷ್ಣ ಅವರ ಬೇಡಿಕೆ ಹಾಗೂ ಸಂಭಾವನೆ ಎರಡು ಹೆಚ್ಚಾದವು. ಇನ್ನು ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ನಟಿಯರಮ್ಯಕೃಷ್ಣ ಸಿನಿಮಾ ರಂಗದಲ್ಲಿ ಮುಂದೆ ಬರುವುದು ಎಷ್ಟು ಕಷ್ಟ ಎನ್ನುವುದರ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.
ಸಿನೆಮಾ ರಂಗದಲ್ಲಿ ಹೀರೋಯಿನ್ ಪಟ್ಟ ಸಿಕ್ಕ ಮೇಲು ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಅನ್ನೋದನ್ನ ಅವರು ಹೇಳಿದ್ದಾರೆ. ಅಲ್ಲದೆ ಸಿನಿಮಾ ರಂಗದಲ್ಲಿ ಉಳಿದುಕೊಳ್ಳಬೇಕಾದರೆ ಕೆಲವು ವಿಚಾರಗಳಿಗೆ ತಲೆಬಾಗಲೇಬೇಕು ಎಂಬುದನ್ನು ಹೇಳಿದ್ದಾರೆ. ಇದೆಲ್ಲದಕ್ಕೂ ಸಿದ್ಧವಾಗಿರುವವರು ಸಿನಿಮಾರಂಗದಲ್ಲಿ ಹೆಚ್ಚು ಸಮಯ ಉಳಿಯುತ್ತಾರೆ ಎನ್ನುವುದು ರಮ್ಯಾ ಕೃಷ್ಣ ಅವರ ಮಾತು.
ಹಾಗಾದರೆ ಈಗಾಗಲೇ ಹೀರೋಯಿನ್ ಪಟ್ಟ ಪಡೆದ ಎಲ್ಲರೂ ಇದೇ ರೀತಿ ನಡೆದುಕೊಳ್ಳುತ್ತಾರಾ? ಎಲ್ಲರಿಗೆ ಸ್ಪಂದಿಸುತ್ತ ಸಿನಿಮಾದಲ್ಲಿ ಅವಕಾಶ ಪಡೆದುಕೊಳ್ಳುತ್ತಾರಾ? ಹಾಗಾದರೆ ಪ್ರತಿಭೆಗೆ ಅಂತಹ ಬೆಲೆ ಇಲ್ವಾ? ಅಂತ ರಮ್ಯಕೃಷ್ಣ ಆಡಿದ ಮಾತಿಗೆ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.