PhotoGrid Site 1663911507663

ಸಿಕ್ಕಾಪಟ್ಟೆ ಟಿ ಆರ್ ಪಿ ತಂದು ಕೊಟ್ಟ ವಂಶಿಕಾಗೆ ಸಾಕು ಸಾಕು ಅನ್ನುವಷ್ಟು ಹಣ ನೀಡಿದ ವಾಹಿನಿ! ಕೊಟ್ಟ ಹಣ್ಣ ಬರೋಬ್ಬರಿ ಎಷ್ಟು ಗೊತ್ತಾ?

ಸುದ್ದಿ

ಪುಟ್ಟ ಮಕ್ಕಳು ತೆರೆಯ ಮೇಲೆ ಬಂದರೆ ಅವರನ್ನು ನೋಡುವುದೇ ಚೆಂದ. ಅದರಲ್ಲೂ ಅತ್ಯಂತ ಚೂಟಿಯಾಗಿ ಪಟಪಟ ಅಂತ ಮಾತನಾಡುತ್ತಾ ಜನರನ್ನ ಗಮನ ಸೆಳೆಯುವ ಪುಟ್ಟ ಮಕ್ಕಳು ಜನರ ಮನಸ್ಸಿನಲ್ಲಿ ಉಳಿದುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆ ಲೋಕದಲ್ಲಿ ಜನರನ್ನ ಹೆಚ್ಚು ಆಕರ್ಷಿಸಿದ್ದು ಹಾಗೂ ಜನರಿಗೆ ತುಂಬಾನೇ ಇಷ್ಟವಾದ ಪುಟಾಣಿ ಅಂದ್ರೆ ಅದು ವಂಶಿಕ.

ಕನ್ನಡ ಸಿನಿಮಾ ಗಳಲ್ಲಿ ಹಾಗೂ ಕಿರುತರ ಲೋಕದಲ್ಲಿ ಹೆಸರು ಮಾಡಿರುವ ಮಾಸ್ಟರ್ ಆನಂದ ಅವರ ಪುತ್ರಿ ವಂಶಿಕ. ಈ ಪುಟ್ಟ ಪುಟಾಣಿ ಇದೀಗ ಹೆಚ್ಚು ಬೇಡಿಕೆಯನ್ನು ಗಳಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಅವರಲ್ಲಿರುವ ಪ್ರತಿಭೆ. ತನ್ನ ತಂದೆಯಲ್ಲಿರುವ ಕಲೆಯೇ ತನಗೆ ರಕ್ತಗತವಾಗಿ ಬಂದಿದೆ ಎನ್ನುವಂತೆ ವಂಶಿಕ ಅತ್ಯುತ್ತಮ ನಟಿಯಾಗಿ ಇಂದು ಕಾಣಿಸಿಕೊಳ್ಳುತ್ತಿದ್ದಾರೆ.

ಪುಟಾಣಿ ವಂಶಿಕ ಮೊದಲು ತೆರೆ ಮೇಲೆ ಬಂದಿದ್ದು, ತಾಯಿ ಯಶಸ್ವಿನಿ ಅವರ ಜೊತೆ ನಮ್ಮಮ್ಮ ಸೂಪರ್ ಸ್ಟಾರ್ ಎನ್ನುವ ರಿಯಾಲಿಟಿ ಶೋ ಮೂಲಕ. ಈ ಕಾರ್ಯಕ್ರಮ ಆರಂಭವಾಗಿ ಮೊದಲ ದಿನವೇ ಎಲ್ಲರ ಗಮನ ಸೆಳೆದರು ವಂಶಿಕ ಅಷ್ಟೇ ಅಲ್ಲ ನಮ್ಮಮ್ಮ ಸೂಪರ್ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡಿದ್ದು ಕೂಡ ವಂಶಿಕ ಹಾಗೂ ಅವರ ತಾಯಿ ಯಶಸ್ವಿನಿ. ವಂಶಿಕಾ ಹೆಚ್ಚು ರೀಲ್ ಗಳನ್ನು ಕೂಡ ಮಾಡುತ್ತಾರೆ.

ಹಾಗಾಗಿ ಇನ್ಸ್ಟಾಗ್ರಾಮ್ ನಲ್ಲಿ ಈ ಪುಟ್ಟ ಪೋರಿಗೆ ಈಗಾಗಲೇ ಸಾಕಷ್ಟು ಫಾಲೋವರ್ಸ್ ಕೂಡ ಇದ್ದಾರೆ. ಪುಟಾಣಿ ವಂಶಿಕ ಅವರ ಫೇಮ್ ಹೆಚ್ಚಾಗುತ್ತಿದ್ದಂತೆ ಅವರಿಗೆ ಸಿನಿಮಾ ಹಾಗೂ ಜಾಹೀರಾತುಗಳಲ್ಲಿ ನಟಿಸುವ ಅವಕಾಶಗಳು ಕೂಡ ಒಲಿದು ಬರುತ್ತವೆ ಈಗಾಗಲೇ ವಿಕ್ಸ್ ಜಾಹಿರಾತಿನಲ್ಲಿ ಮಾಸ್ಟರ್ ಆನಂದ್ ಅವರ ಪತ್ನಿ ಯಶಸ್ವಿನಿ ಹಾಗೂ ವಂಶಿಕ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಸಾಕಷ್ಟು ಮೆಚ್ಚುಗೆ ಗಳಿಸಿಕೊಂಡಿದ್ದಾರೆ ವಂಶಿಕ.

ಇನ್ನು ಪುಟಾಣಿ ವಂಶಿಕ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದು ಗಿಚ್ಚಿ ಗಿಲಿ ಗಿಲಿ ಎನ್ನುವ ಕಾರ್ಯಕ್ರಮದ ಮೂಲಕ ಹೌದು, ಕನ್ನಡ ಕಿರುತೆರೆ ಲೋಕದಲ್ಲಿ ಸಾಕಷ್ಟು ಸೆನ್ಸೇಶನ್ ಕ್ರಿಯೇಟ್ ಮಾಡಿದ್ದ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮಕ್ಕೆ ಇದೀಗ ತೆರೆ ಬಿದ್ದಿದೆ. ಇದರಲ್ಲಿ ಅಭಿನಯ ಗೊತ್ತಿರುವವರು, ಗೊತ್ತಿಲ್ಲದೇ ಇರುವವರು ಈ ಎಲ್ಲರೂ ಭಾಗವಹಿಸಿದ್ದರು. ಹಾಗಾಗಿ ಆಕ್ಟರ್ ಹಾಗೂ ನಾನ್ ಆಕ್ಟರ್ ಎನ್ನುವ ಎರಡು ರೀತಿಯ ಪ್ರಶಸ್ತಿಗಳನ್ನು ನೀಡಲಾಗಿದೆ.

ನಾನ್ ಆಕ್ಟರ್ ವಿಭಾಗದಲ್ಲಿ ಪುಟಾಣಿ ವಂಶಿಕ ಹಾಗೂ ನಿವೇದಿತಾ ಗೌಡ. ಇನ್ನು ಗಿಜಿ ಗಿಲಿ ಗಿಲಿ ಶೋ ದ ವಿನ್ನರ್ ಆಗಿ ಹೊರಹೊಮ್ಮಿದ್ದು ಶಿವು ಮತ್ತು ವಂಶಿಕ. ಇಷ್ಟೊಂದು ಫೇಮಸ್ ಆಗಿರುವ ಸಾಕಷ್ಟು ಪ್ರಶಸ್ತಿಗಳನ್ನು ಕೂಡ ಪಡೆದುಕೊಳ್ಳುತ್ತಿರುವ ವಂಶಿಕ ಅವರಿಗೆ ಸಾಕಷ್ಟು ಹಣ ಕೂಡ ಬರುತ್ತಿರಬಹುದು ಎನ್ನುವುದು ಹಲವರ ಊಹೆ. ಹೌದು, ವಂಶಿಕ ಫೇಮಸ್ ಆಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸಂಭಾವನೆಯ ರೂಪದಲ್ಲಿ ಹಣವು ಕೂಡ ಸಾಕಷ್ಟು ಬರುತ್ತಿದೆ.

PhotoGrid Site 1663911517777

ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಗೆದ್ದಿದ್ದಕ್ಕೆ ವಂಶಿಕ ಅವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ. ಅದೇ ರೀತಿ ವಂಶಿಕ ಈಗಾಗಲೇ ಸಿನಿಮಾಗಳಲ್ಲಿ ಅಭಿನಯಿಸುವುದಕ್ಕೂ ಕೂಡ ಆರಂಭಿಸಿದ್ದಾರೆ ವಂಶಿಕ ಅವರಿಗೆ ಸಿನಿಮಾದಲ್ಲಿ ಉತ್ತಮ ರೋಲ್ ಕೂಡ ಸಿಕ್ಕಿದೆ. ಬಾಲ ನಟಿಯಾಗಿ ಸಿನಿಮಾಕ್ಕೆ ಎಂಟ್ರಿ ಕೊಟ್ಟಿರುವ ವಂಶಿಕ ಅವರ ಭವಿಷ್ಯ ಇನ್ನಷ್ಟು ಉಜ್ವಲವಾಗಿರಲಿ ಅನ್ನೋದು ಎಲ್ಲರ ಆಶಯ.

Leave a Reply

Your email address will not be published. Required fields are marked *