PhotoGrid Site 1668406595886

ಸಾಯುವ ಒಂದು ವಾರದ ಮುಂಚೆ ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅವರು ಡಿ ಬಾಸ್ ದರ್ಶನ್ ಅವರ ಬಗ್ಗೆ ಹೇಳಿದ ಆ ಒಂದು ಮಾತು ಅಕ್ಷರಶಃ ನಿಜವಾಗಿದೆ! ಏನು ಹೇಳಿದ್ದರು ನೋಡಿ!!

ಸುದ್ದಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡಿಗರು ಮೆಚ್ಚಿನ ನಟ ಇವರು. ದರ್ಶನ್ ಅವರ ಬಹುತೇಕ ಕ ಎಲ್ಲಾ ಸಿನಿಮಾಗಳೂ ಸೂಪರ್ ಡೂಪರ್ ಹಿಟ್ ಆಗುತ್ತದೆ. ಇದಕ್ಕೆ ಮುಖ್ಯ ಕಾರಣ ದರ್ಶನ್ ಅವರ ಮೇಲಿನ ಅಭಿಮಾನ ಹಾಗೂ ಪ್ರೀತಿ. ಡಿ ಬಾಸ್ ಅಭಿನಯದ ಕ್ರಾಂತಿ ಸಿನಿಮಾ ಇನ್ನೇನು ತೆರೆ ಕಾಣಲು ಸಿದ್ಧವಾಗಿದೆ.

ಬಹಳ ದೀರ್ಘ ಸಮಯದ ಗ್ಯಾಪ್ ಬಳಿಕ ಡಿ ಬಾಸ್ ಮತ್ತೆ ಅದ್ಭುತ ಸಿನಿಮಾ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಅಭಿಮಾನಿಗಳ ಪ್ರಚಾರ ಮಾಡುತ್ತಿರುವ ಈ ಸಿನಿಮಾದ ಬಗ್ಗೆ ನಿರೀಕ್ಷೆಗಳು ಕೂಡ ದುಪ್ಪಟ್ಟಾಗುತ್ತಿವೆ. ಹೌದು ದರ್ಶನ್ ಹಾಗೂ ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಕ್ರಾಂತಿ ಸಿನಿಮಾ ಇದೆ ಬರುವ ಜನವರಿ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ.

ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡದ ಮತ್ತೊಂದು ಸಿನಿಮಾ ದೇಶಾದ್ಯಂತ ಗಮನ ಸೆಳೆಯಲಿದೆ. ಇನ್ನು ನಟ ದರ್ಶನ್ ಅವರಿಗೆ ಡಿ ಬಾಸ್, ಬಾಕ್ಸ್ ಆಫೀಸ್ ಸುಲ್ತಾನ್ ಎನ್ನುವ ಹೆಸರುಗಳು ಸುಖಾ ಸುಮ್ಮನೆ ಬಂದಿದ್ದಲ್ಲ. ಅದರ ಹಿಂದೆ ಅವರ ಪರಿಶ್ರಮ ಬಹಳ ದೊಡ್ಡದು. ಯಾಕಂದ್ರೆ ಸಿನಿಮಾದಲ್ಲಿ ಸುಲಭವಾಗಿ ಅವಕಾಶ ಗಿಟ್ಟಿಸಿಕೊಂಡವರಲ್ಲ ದರ್ಶನ್.

ನಟ ದರ್ಶನ್ ಅವರು ಖ್ಯಾತ ನಟ ತೂಗುದೀಪ್ ಶ್ರೀನಿವಾಸ್ ಅವರ ಮಗ ಎನ್ನುವುದು ಎಲ್ಲರಿಗೂ ಗೊತ್ತು ಆದರೆ ಎಲ್ಲಿಯೂ ತಂದೆಯ ಹೆಸರು ಹೇಳಿಕೊಂಡು ಸಿನಿಮಾದಲ್ಲಿ ಅವಕಾಶ ಪಡೆದುಕೊಂಡ ನಟ ಇವರಲ್ಲ ತಾವಾಗಿ ತಮ್ಮ ಸ್ವಂತ ಪರಿಶ್ರಮದಿಂದ ಒಬ್ಬ ಅತ್ಯುತ್ತಮ ನಟ ಎಂದು ಗುರುತಿಸಿಕೊಂಡಿದ್ದಾರೆ.

ತಂದೆಯನ್ನು ಕಳೆದುಕೊಂಡ ನಂತರ ಸಣ್ಣ ವಯಸ್ಸಿನಲ್ಲಿಯೇ ಮನೆಯ ಜವಾಬ್ದಾರಿ ಹೊತ್ತ ದರ್ಶನ್ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಒಬ್ಬ ಲೈಟ್ ಮ್ಯಾನ್ ಆಗಿಯೂ ಕೂಡ ಕಾರ್ಯನಿರ್ವಹಿಸಿದ್ದಾರೆ ಅಂದ್ರೆ ನೀವು ನಂಬಲೇಬೇಕು. ಅವರು ಅಂದು ಪಟ್ಟ ಕಷ್ಟ, ಗೆಲ್ಲಲೇ ಬೇಕು ಎನ್ನುವ ಅವರ ಹಠ, ಛಲ ಇದೀಗ ಡಿ ಬಾಸ್ ಎನ್ನುವ ಪಟ್ಟಕ್ಕೆ ಅವರನ್ನು ತಂದು ನಿಲ್ಲಿಸಿದೆ.

ಸಾಮಾನ್ಯವಾಗಿ ದರ್ಶನ್ ಅವರ ಬಗ್ಗೆ ಎಲ್ಲರೂ ಒಳ್ಳೆಯ ಮಾತುಗಳನ್ನು ಆಡುತ್ತಾರೆ. ನಮ್ಮನ್ನ ಅಗಲಿರುವ ರವಿ ಬೆಳಗೆರೆ ಅವರು ಕೂಡ ಇದಕ್ಕೆ ಹೊರತಲ್ಲ. ಹೌದು ರವಿ ಬೆಳಗೆರೆ ಎನ್ನುವ ಅದ್ಭುತ ಸಾಹಿತಿ, ಜರ್ನಲ್ ಲಿಸ್ಟ್, ಬರಹಗಾರ ಇಂದು ನಮ್ಮೊಂದಿಗಿಲ್ಲ ಆದರೆ ಅವರು ಕೆಲವರ ಬಗ್ಗೆ ಹೇಳಿರುವ ಮಾತುಗಳು ಇಂದಿಗೂ ಕೂಡ ಪ್ರಸ್ತುತ. ಹೌದು, ರವಿ ಬೆಳಗೆರೆ ಅವರು ನಟ ದರ್ಶನ್ ಅವರ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದರು.

ಕಳೆದ ಎರಡು ವರ್ಷಗಳ ಹಿಂದೆ ದರ್ಶನ್ ಅವರ ಬಗ್ಗೆ ರವಿ ಬೆಳಗೆರೆ ಆಡಿರುವ ಮಾತುಗಳು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಂದರ್ಶನ ಒಂದರಲ್ಲಿ ಸಂದರ್ಶಕರು ನೀವು ಆಗಾಗ ದರ್ಶನ್ ಬಗ್ಗೆ ಮಾತನಾಡುತ್ತಾ ಇರುತ್ತೀರಿ ಯಾಕೆ ಎಂದು ಕೇಳುತ್ತಾರೆ. ಆಗ ನಗುತ್ತಲೆ ಉತ್ತರಿಸಿದ ರವಿ ಬೆಳಗೆರೆ, ‘ದರ್ಶನ್ ಒಬ್ಬ ಹ್ಯಾಂಡ್ ಸಮ್ ಹುಡುಗ ಅವನ ಹೈಟ್ ಲುಕ್ ಎಲ್ಲವೂ ತುಂಬಾನೇ ಚೆನ್ನಾಗಿದೆ.

ಅವನನ್ನ ನಾನು ವೈಯಕ್ತಿಕವಾಗಿ ಭೇಟಿ ಆಗದೆ ಇದ್ದರೂ ಅವರನ್ನು ಕಂಡ್ರೆ ನನಗೆ ಇಷ್ಟ. ಆತ ಕನ್ನಡದಲ್ಲಿ ಬಹು ಎತ್ತರಕ್ಕೆ ಬೆಳೆಯುತ್ತಾನೆ ಅತ್ಯುತ್ತಮ ನಟ ಎನಿಸಿಕೊಳ್ಳುತ್ತಾನೆ’. ಹೀಗೆ ದರ್ಶನ್ ಅವರನ್ನು ನೋಡಿದ ರವಿ ಬೆಳಗೆರೆ ಆಡಿರುವ ಮಾತುಗಳು ಇವು. ಹೌದು ನಿಜಕ್ಕೂ ಕೂಡ ದರ್ಶನ್ ಅವರು ಇಂದಿಗೂ ಕರ್ನಾಟಕದಲ್ಲಿ ಅತೀ ದೊಡ್ಡ ಅಭಿಮಾನಿ ಬಳಗ ಹೊಂದಿದ್ದು ಅದೇ ಗತ್ತನ್ನು ಉಳಿಸಿಕೊಂಡು ಬಂದಿದ್ದಾರೆ.

Leave a Reply

Your email address will not be published. Required fields are marked *