ಸ್ನೇಹಿತರೆ, ಬರೋಬ್ಬರಿ ಎರಡು ವಾರಗಳಿಂದ ಕನ್ನಡದ ಬಿಗ್ ಬಾಸ್ ಓಟಿಟಿ ಸೀಸನ್ 1 ವೂಟ್ ಸೆಲೆಕ್ಟ್ನಲ್ಲಿ ಅತ್ಯದ್ಭುತ ಪ್ರದರ್ಶನ ಕಾಣುವ ಮೂಲಕ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಆಗಿರುವುದು ಕೇವಲ ಎರಡು ವಾರವಾದರೂ ಮನೆಯಿಂದ ಅದಾಗಲೇ ನಾಲ್ಕು ಸ್ಪರ್ದಿಗಳು ಕಾರ್ಯಕ್ರಮದಿಂದ ಹೊರ ಬಿದ್ದಿದ್ದು, ಕೇವಲ 14 ದಿನಗಳಲ್ಲಿ ಮನೆ ಒಳಗೆ ಎಂಟ್ರಿ ನೀಡಿರುವಂತಹ ಸ್ಪರ್ಧಿಗಳ ಅಸಲಿ ಮುಖ ಅನಾವರಣವಾಗುತ್ತಿದೆ. ಹೌದು ಗೆಳೆಯರೇ ಮನಸ್ಸಿನಲ್ಲಿಯೇ ಕಾ’ಡಿಗೆಚನ್ನು ಇಟ್ಟುಕೊಂಡು ಕಾರ್ಯಕ್ರಮ ಗೆಲ್ಲಲೇ ಬೇಕು ಎಂದು ಪ್ರತಿಯೊಬ್ಬ ಸ್ಪರ್ಧಿ ಬಹಳ ಅತ್ಯದ್ಭುತವಾಗಿ ಆಟವಾಡುತ್ತಿದ್ದಾರೆ.
ಹೀಗಿರುವಾಗ ಉದಯ್ ಅವರು ಸಾನಿಯಾರವರ ಒಳ ಉಡು’ಪಿನ ಬಗ್ಗೆ ಕಮೆಂಟ್ ಮಾಡುವ ಮೂಲಕ ಬಾರಿ ಟ್ರೋಲ್ಗಳಿಗೆ ಒಳಗಾಗುತ್ತಿದ್ದು, ಇದರ ಕುರಿತು ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೆ ಉದಯ್ ಬಿಗ್ ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳೊಡನೆ ಮಾತನಾಡುತ್ತಾ ಒಬ್ಬರಿಂದ ಮತ್ತೊಬ್ಬರಿಗೆ ಸಂದೇಶ ರವಾನಿಸುವ ಕೆಲಸ ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯ ಸ್ಪರ್ಧಿಗಳೆಲ್ಲರೂ ಇವರನ್ನು ಪೋಸ್ಟ್ ಮಾಸ್ಟರ್ ಎಂದೆ ಕರೆಯುತ್ತಿರುವುದನ್ನು ನೀವೆಲ್ಲರೂ ಗಮನಿಸಿರುತ್ತೀರಾ.
ಈ ಕುರಿತು ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಮಾತನಾಡಿದಂತಹ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಉದಯ್ ಕುಮಾರ್ ಅವರನ್ನು ಮಾತನಾಡಿಸುವಾಗ ಈ ಮನೆಯಲ್ಲಿ ನಿಮಗೊಂದು ಅಡ್ಡ ಹೆಸರಿದೆ, ಅದರ ಕುರಿತು ನಿಮಗೆ ಗೊತ್ತೇ? ಎಂದು ಕೇಳಿದಾಗ ಉದಯ್ ಇಲ್ಲ ಸರ್ ಎಂದು ಹೇಳುತ್ತಾರೆ. ಆಗ ಕಿಚ್ಚ ಮನೆಯ ಇತರ ಸ್ಪರ್ಧಿಗಳನ್ನು ಮಾತನಾಡಿಸುತ್ತಾ ಈ ಬಗ್ಗೆ ಯಾರಿಗಾದರೂ ಗೊತ್ತೇ? ಎಂದು ಕೇಳಿದಾಗ ಆರ್ಯವರ್ಧನ್ ಗುರೂಜಿ ನನಗೆ ಗೊತ್ತು ಸರ್ ಪೋಸ್ಟ್ ಮ್ಯಾನ್ ಕೆಲಸ. ಅವರ ಬಾಯಿ ಸುಮ್ಮನೆ ಇರಲ್ಲ. ಅಲ್ಲಿ ಇಲ್ಲಿ ಹೋಗಿ ಏನೇನೋ ಮಾತನಾಡಿ ಬಿಡುತ್ತಾರೆ. ಇದಕ್ಕೆ ಬೇರೆ ಸ್ಪರ್ಧಿಗಳೊಡನೆ ಬೈಸ್ಕೊಂಡು ಇದ್ದಾರೆ ಎಂದು ಪ್ರತ್ಯುತ್ತರ ನೀಡುತ್ತಾರೆ.
ಆಗ ಕಿಚ್ಚ ಉದಯ್ ಅವರೇ ಚೈತ್ರ ಬಳಿ ಹೋಗಿ ಸಾನಿಯಾ ಉಡುಪಿನ ಬಗ್ಗೆ ಹಾಗೂ ಯಶ್ವಂತ ಹಾಗು ನಂದಿನಿ ಅವರ ರಿಲೇಶನ್ಶಿಪ್ ಬಗ್ಗೆ ನೀವು ಹೇಳಿರುವ ಮಾತು ಹೊರಗಡೆ ಗೊಂದಲಕ್ಕೆಡೆ ಮಾಡಿಕೊಟ್ಟಿದೆ. ಈ ಒಂದು ಶೋ ಅನ್ನೂ ಹೊರಗಡೆ ಜನರು ನೋಡುತ್ತಿದ್ದಾರೆ. ನಾವು ನೋಡುತ್ತಿದ್ದೇವೆ ಅವರಿಗೆಲ್ಲ ಒಂದು ಕ್ಲಾರಿಟಿ ಇದೆ. ಆದರೆ ಮನೆಯವರ ನಡುವೆಯೇ ಕ್ಲಾರಿಟಿ ಇಲ್ಲ. ಹೀಗಾಗಿ ಹೇಳಿ ಉದಯ್ ಚೈತ್ರ ಬಳಿ ಹೋಗಿ ಹೇಳಿದ್ದೇನು? ಎಂದು ಕೇಳಿದಾಗ ಉದಯ್ ತಡ ಬಡಿಸುತ್ತಾ ನನ್ನ ಮತ್ತು ಸಾನಿಯಾ ನಡುವೆ ಒಂದು ಕ್ಲೋಸ್ನೆಸ್ ಇತ್ತು.
ಅದು ಯಾವ ಮಟ್ಟಕ್ಕಿತ್ತು ಎಂಬುದಕ್ಕೆ ನಾನು ಚೈತ್ರಾಗೆ ಒಂದು ಉದಾಹರಣೆ ಕೊಟ್ಟು ಹೇಳಿದೆ ಎನ್ನುತ್ತಾ ಉದಯ್ ತೊದಲಿಸಿದರು. ಅದಕ್ಕೆ ಉದಾಹರಣೆಯೇ ನಮಗಿಲ್ಲಿ ಬಹಳ ಮುಖ್ಯವಾಗಿರುವುದು. ಅದ್ಯಾವ ಉದಾಹರಣೆ ಕೊಟ್ಟು ಹೇಳಿದ್ರಿ? ಎಂದು ಕೇಳಿದ್ದಕ್ಕೆ ಉದಯ್ “ನಾನು ಪ್ರತಿ ದಿನವೂ ಬಟ್ಟೆ ಹಾಕುವ ಮುನ್ನ ಗುರೂಜಿಯವರ ಬಳಿ ಯಾವ ಕಲರ್ ಹಾಕುವುದು ಎಂದು ಕೇಳಿನೇ ಹಾಕೋದು. ಆ ದಿನ ಸಾನಿಯಾ ಕೂಡ ನನ್ನ ಪಕ್ಕದಲ್ಲಿ ಇದ್ದರೂ, ಆ ಕಲರ್ದು ಒಳಉಡು-ಪು ತೋರಿಸಿದರು. ಆಗ ನಾನು ಗುರೂಜಿಯತ್ರ ಹೋಗಿ ತೋರಿಸಿ ಅವರು ಖುಷಿಖುಷಿಯಾಗಿ ಒಪ್ಪಿಕೊಳ್ಳುತ್ತಾರೆ ಎಂದೆ.
ಎಂಬ ಕಾನ್ವರ್ಸೇಷನ್ ಅನ್ನು ನಾನು ಚೈತ್ರ ಬಳಿ ಹೇಳಿಕೊಂಡೆ. ಆಗ ಚೈತ್ರ ಈ ತರ ಎಲ್ಲ ಮಾತನಾಡುವ ಹಾಗಿಲ್ಲ ಎಂದು ನನ್ನನ್ನು ಸುಮ್ಮನಾಗಿಸಿದರು” ಎಂದು ಉದಯ್ ನಡೆದ ಘಟನೆಯನ್ನು ಕಿಚ್ಚನ ಮುಂದೆ ವಿವರಿಸಿದರು. ಆ ಸಂದರ್ಭದಲ್ಲಿ ಕಿಚ್ಚ ಚೈತ್ರ ಅವರೇ ಈ ವಿಚಾರದಲ್ಲಿ ನಾನು ನಿಮ್ಮನ್ನು ಗೌರವಿಸುತ್ತೇನೆ ಎಂದು ಅವರನ್ನು ಶ್ಲಾಾಗಿಸಿದರು. ಇನ್ನು ನಿಮ್ಮ ಪ್ರಕಾರ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸ್ಪರ್ಧಿಗಳು ಯಾರ್ಯಾರು ಎಂಬುದನ್ನು ತಪ್ಪದೇ ನಮಗೆ ಕಮೆಂಟ್ ಮೂಲಕ ತಿಳಿಸಿ.