ತೆಲುಗು ಟೆಲಿವಿಷನ್ ನಲ್ಲಿ ಹೆಚ್ಚು ಬೇಡಿಕೆ ಇರುವ ನಿರೂಪಕಿ ರಶ್ಮಿ ಗೌತಮ್ ತೆಲುಗು ಕಿರುತೆರೆ ಲೋಕದಲ್ಲಿ ನಿರೂಪಣೆಯ ಮೂಲಕ ಹೆಚ್ಚು ಫೇಮಸ್ ಆಗಿದ್ದಾರೆ. ಜಬರ್ದಸ್ತ್ ಎನ್ನುವ ಕಾಮಿಡಿ ಶೋ ಅನ್ನು ಜಬರ್ದಸ್ತ್ ಆಗಿಯೇ ನಡೆಸಿಕೊಡುತ್ತಾರೆ ರಶ್ಮಿ ಗೌತಮ್ ಈ ರಿಯಾಲಿಟಿ ಶೋ ನ ಟಿ ಆರ್ ಪಿ ರೇಟ್ ಗಗನಕ್ಕೆ ಏರುವಂತೆ ಮಾಡಿದ್ದೆ ರಶ್ಮಿ ಗೌತಮ್ ಅವರ ನಿರೂಪಣೆ ಅಂದ್ರೆ ತಪ್ಪಾಗಲಿಕ್ಕಿಲ್ಲ.
ಹೌದು, ನೋಡುವುದಕ್ಕೆ ಅತ್ಯಂತ ಸುಂದರವಾಗಿರುವ ರಶ್ಮಿ ಗೌತಮ್ ಅವರಿಗೆ ತೆಲುಗು ಕಿರುತೆರೆ ಲೋಕದಲ್ಲಿ ಬಹು ಬೇಡಿಕೆ ಇದೆ ಜೊತೆಗೆ ಯಾವುದೇ ಸಿನಿಮಾ ಆದರೂ ರಶ್ಮಿ ಗೌತಮ್ ಅವರ ನಿರೂಪಣೆ ಇದ್ದೇ ಇರುತ್ತೆ. ಇನ್ನು ಜಬರ್ದಸ್ತ್ ರಿಯಾಲಿಟಿ ಶೋ ನಡೆಸಿಕೊಡುವ ರಶ್ಮಿ ಗೌತಮ್ ಅವರಿಗೆ ಎಪಿಸೋಡ್ ಒಂದಕ್ಕೆ ಸುಮಾರು ಒಂದರಿಂದ ಎರಡು ಲಕ್ಷ ರೂಪಾಯಿ ಸಂಭಾವನೆ ಇದೆ ಎನ್ನುವ ಮಾಹಿತಿ ಇದೆ.
ಇನ್ನು ರಶ್ಮಿ ಗೌತಮ್ ಕೇವಲ ನಿರೂಪಣೆ ಮಾಡುವುದು ಮಾತ್ರವಲ್ಲ. ಅವರು ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸುತ್ತಾರೆ. ಇತ್ತೀಚಿಗೆ ಸಿನಿಮಾದಲ್ಲಿ ಅವರ ಬೇಡಿಕೆ ಹೆಚ್ಚಿದ್ದು ಕೆಲವು ಪ್ರಾಜೆಕ್ಟ್ ಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗುತ್ತಿದೆ. ರಶ್ಮಿ ಗೌತಮ್ ತೆಲುಗು ಕಿರುತೆರೆ ಲೋಕದಲ್ಲಿ ಮಾತ್ರವಲ್ಲ ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಅಷ್ಟೇ ಫೇಮಸ್.
ಇನ್ಸ್ಟಾಗ್ರಾಮ್ ನಲ್ಲಿ ರಶ್ಮಿ ಗೌತಮ್ ಅವರಿಗೆ ಸುಮಾರು 5 ಮಿಲಿಯನ್ ಫಾಲೋವರ್ಸ್ ಇದ್ದಾರೆ ಅಂದ್ರೆ ನೀವು ನಂಬಲೇಬೇಕು. ಸಾಕಷ್ಟು ಫೋಟೋ ಹಾಗೂ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡುತ್ತಾರೆ. ಹಾಗಾಗಿ ಅವರ ಫೋಟೋ ಹಾಗೂ ವಿಡಿಯೋಗಳಿಗೆ ಲಕ್ಷಾಂತರ ಲೈಕ್ ಹಾಗೂ ಕಮೆಂಟ್ ಗಳು ಬರುತ್ತವೆ. ಇನ್ನು ರಶ್ಮಿ ಗೌತಮ್ ಗಳಿಂದಲೂ ಗಾಸಿಪ್ ಗಳಿಂದಲೂ ಕೂಡ ಹೊರತಾಗಿಲ್ಲ.
ಜಬರ್ದಸ್ತ್ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿ ಒಬ್ಬರ ಜೊತೆಗೆ ರಶ್ಮಿ ಗೌತಮ್ ರಿಲೇಶನ್ ಶಿಪ್ ನಲ್ಲಿ ಇದ್ದಾರೆ ಎಂದು ಬಿಂಬಿಸಲಾಗಿತ್ತು. ಆದರೆ ಕೊನೆಗೆ ಇದು ಕೇವಲ ಉಹಾಪೋಹಾ ಅಷ್ಟೇ ಎಂದು ಸ್ಪಷ್ಟನೆ ನೀಡಿದರು ರಶ್ಮಿ. ನಾನು ಇಂಡಸ್ಟ್ರಿಗೆ ಸೇರದೆ ಇರುವ ಇನ್ನೊಬ್ಬ ವ್ಯಕ್ತಿಯ ಜೊತೆಗೆ ಡೇಟಿಂಗ್ ನಲ್ಲಿ ಇದ್ದೇನೆ ಎಂದು ರಶ್ಮಿ ಒಮ್ಮೆ ಹೇಳಿಕೊಂಡಿದ್ದರು.
ಅಲ್ಲದೆ ರಶ್ಮಿ ಜನರಿಗೆ ಪರಿಚಯ ಆಗುವುದಕ್ಕೂ ಮೊದಲೇ ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ ಎನ್ನುವ ಮಾತುಗಳು ಕೂಡ ಇತ್ತು. ಆದರೆ ಇದನ್ನ ರಶ್ಮಿ ತಳ್ಳಿ ಹಾಕಿದ್ದಾರೆ. ಇದೀಗ ಸ್ನೇಹಿತರೆ ಜೊತೆಗೆ ಟ್ರಿಪ್ ಹೋಗಿರುವ ರಶ್ಮಿ ಗೌತಮ್ ಸಕ್ಕತ್ ಎಂಜಾಯ್ ಮಾಡುತ್ತಿದ್ದಾರೆ. ಇನ್ಸ್ಟಾ ಖಾತೆಯಲ್ಲಿ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ.
ವಿಡಿಯೋಗೊಂದು ಹಾಕಿ ನನ್ನ ಪ್ರಯಾಣದ ಉದ್ದಕ್ಕೂ ಒಂದೇ ಒಂದು ಫೋಟೋ ಅಥವಾ ವಿಡಿಯೋವನ್ನ ನಾನು ಸ್ನೇಹಿತರು ಚೆನ್ನಾಗಿ ತೆಗೆದಿರಲಿಲ್ಲ ಇದರಿಂದ ನನಗೆ ಅಪ್ಸೆಟ್ ಆಗಿತ್ತು. ಆದರೆ ಫೈನಲಿ ಒಂದು ಅದ್ಭುತ ಫೋಟೋ ಸಿಕ್ಕಿದೆ ಅಂತ ವಿಡಿಯೋ ಹಾಗೂ ಫೋಟೋವನ್ನು ಅಪ್ಲೋಡ್ ಮಾಡಿ ಪೋಸ್ಟ್ ಬರೆದುಕೊಂಡಿದ್ದಾರೆ. ನೀವು ಕೂಡ ರಶ್ಮಿ ಗೌತಮ್ ಅವರ ವಿಡಿಯೋವನ್ನು ಇಲ್ಲಿ ನೋಡಬಹುದು.
View this post on Instagram