ಸಿನಿಮಾಗಳಲ್ಲಿ ನಾಯಕ ನಟರಿಗೆ ಎಷ್ಟು ಮಹತ್ವ ಇರುತ್ತೋ ಅಷ್ಟೇ ಹಾಸ್ಯ ಕಲಾವಿದರು ಕೂಡ ಇಂಪಾರ್ಟೆನ್ಸ್ ನೀಡಲಾಗುತ್ತೆ. ಯಾಕಂದ್ರೆ ಒಂದು ಸಿನಿಮಾ ಕಂಪ್ಲೀಟ್ ಆಗಬೇಕು ಅಂದ್ರೆ ಅಲ್ಲಿ ಹಾಡು, ಎಮೋಷನ್ಸ್, ರೋಮ್ಯಾನ್ಸ್ ಹಾಸ್ಯ, ಫೈಟಿಂಗ್ ಎಲ್ಲವೂ ಬೇಕೇ ಬೇಕು. ಅದರಲ್ಲೂ ಹಾಸ್ಯ ಇರುವ ಸಿನಿಮಾಗಳನ್ನ ಜನರು ಹೆಚ್ಚು ಇಷ್ಟಪಡುತ್ತಾರೆ. ಆದರೆ ಸಿನಿಮಾದಲ್ಲಿ ಹಾಸ್ಯ ಮಾಡಿ ಜನರನ್ನ ನಗಿಸುವುದು ಅಷ್ಟು ಸುಲಭವಲ್ಲ ಅದಕ್ಕೂ ಕೂಡ ಪಕ್ವತೆ ಬೇಕು.
ಎಲ್ಲರೂ ಸುಲಭವಾಗಿ ಎಲ್ಲರನ್ನೂ ನಗಿಸಲು ಸಾಧ್ಯವಿಲ್ಲ. ಹಾಸ್ಯ ಅಷ್ಟು ಸುಲಭವಾಗಿ ಎಲ್ಲರಿಗೂ ಬರುವ ಕಲೆ ಅಲ್ಲ. ಆದರೆ ಹಾಸ್ಯಗಾರಿಕೆಯನ್ನು ಅರೆದುಕುಡಿದ ಹಾಗಿರುವ ನಟ ಅಂದ್ರೆ ಅದು ಚಿಕ್ಕಣ್ಣ. ಹೌದು, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆಯ ಹಾಸ್ಯ ಕಲಾವಿದ ಅಂದ್ರೆ ಚಿಕ್ಕಣ್ಣ. ಇಂದು ಕೈನಲ್ಲಿ ಸಾಕಷ್ಟು ಸಿನಿಮಾ ಪ್ರಾಜೆಕ್ಟ್ ಇಟ್ಟುಕೊಂಡಿರುವ ಚಿಕ್ಕಣ್ಣ ಸಿಕ್ಕಾಪಟ್ಟೆ ಬ್ಯುಸಿ.
ಕನ್ನಡದಲ್ಲಿ ಇಂದು ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆಗೆ ಹಾಸ್ಯ ನಟನಾಗಿ ಚಿಕ್ಕಣ್ಣ ನಟಿಸಿದ್ದಾರೆ. ಕೆಲವು ಸಿನಿಮಾಗಳಲ್ಲಂತು ನಾಯಕನಿಗಿಂತಲೂ ಹೆಚ್ಚು ಚಿಕ್ಕಣ್ಣ ಅವರ ಪಾತ್ರಕ್ಕೆ ಮಹತ್ವ ನೀಡಲಾಗಿದೆ. ಮೈಸೂರಿನ ಮೂಲದವರಾದ ಚಿಕ್ಕಣ್ಣ ಅವರು ಬಾಲ್ಯದಿಂದಲೂ ಹಾಸ್ಯ ಪ್ರಜ್ಞೆಯನ್ನು ಹೊಂದಿದವರಾಗಿದ್ದು ಸಾಕಷ್ಟು ನಾಟಕಗಳಲ್ಲಿ ಹಾಗೂ ಇತರ ವೇದಿಕೆಗಳಲ್ಲಿ ಹಾಸ್ಯ ಪ್ರದರ್ಶನ ಮಾಡುತ್ತಿದ್ದರು.
ಹೀಗೆ ಮೈಸೂರಿನ ವೇದಿಕೆ ಒಂದರಲ್ಲಿ ಚಿಕ್ಕಣ್ಣ ಅವರು ತಮ್ಮ ಟ್ಯಾಲೆಂಟ್ ಪ್ರದರ್ಶನ ಮಾಡುತ್ತಿರುವ ಸಂದರ್ಭದಲ್ಲಿ ಯಶ್ ಅವರನ್ನು ನೋಡುತ್ತಾರೆ. ನಂತರ ಯಶ್ ಅಭಿನಯದ ಕಿರಾತಕ ಸಿನಿಮಾದಲ್ಲಿ ಹಾಸ್ಯ ಪಾತ್ರವೊಂದರಲ್ಲಿ ಅಭಿನಯಿಸುವ ಅವಕಾಶ ಸಿಗುತ್ತೆ. ಅದಾದ ಬಳಿಕ ಚಿಕ್ಕಣ್ಣ ಅವರು ರಾಜಾಹುಲಿ, ಅಧ್ಯಕ್ಷ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ನಾಡಿನಲ್ಲಿ ಹಾಸ್ಯ ನಟ ಎಂದು ಗುರುತಿಸಿಕೊಳ್ಳುತ್ತಾರೆ.
ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿರುವ ಚಿಕ್ಕಣ್ಣ, ಇಂದು ಕನ್ನಡದ ಏಕೈಕ ಬಹು ಬೇಡಿಕೆಯ ಹಾಸ್ಯ ನಟ. ಹಾಸ್ಯ ನಟನಾಗಿ ಮಾತ್ರವಲ್ಲದೆ ಚಿಕ್ಕಣ್ಣ ಗೀತರಚನೆಕಾರನಾಗಿ ಹಾಗೂ ಹಿನ್ನೆಲೆ ಗಾಯಕನಾಗಿಯು ಕೂಡ ಕಾರ್ಯನಿರ್ವಹಿಸಿದ್ದಾರೆ. ಇದೀಗ ನಟನೆಯಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟ ಚಿಕ್ಕಣ್ಣ ನಾಯಕ ನಟನಾಗಿಯೂ ಕೂಡ ಅಭಿನಯಿಸುತ್ತಿದ್ದಾರೆ. ಹೌದು ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಸಿನಿಮಾ ಈಗಾಗಲೇ ಚಿತ್ರೀಕರಣ ಮುಗಿಸಿದೆ.
ಈ ಚಿತ್ರದ ಪ್ರಮೋಷನ್ ಸಮಯದಲ್ಲಿ ಚಿಕ್ಕಣ್ಣ ಕೆಲವು ಸಂದರ್ಶನಗಳನ್ನು ನೀಡಿದ್ದಾರೆ. ಸಂದರ್ಶನದ ಸಮಯದಲ್ಲಿ ಚಿಕ್ಕಣ್ಣ ಅವರ ಮದುವೆ ವಿಚಾರವಾಗಿ ಪ್ರಶ್ನೆಗಳನ್ನು ಕೇಳಲಾಗಿದೆ ಇದಕ್ಕೆ ಚಿಕ್ಕಣ್ಣ ಉತ್ತರಿಸಿದ್ದೇನು ಗೊತ್ತಾ? ಚಿಕ್ಕಣ್ಣ ಅವರು ತಾವು ನಾಯಕನಟನಾಗಿ ಅಭಿನಯಿಸುತ್ತಿರುವ ಉಪಾಧ್ಯಕ್ಷ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಚಿಕ್ಕಣ್ಣ ಅವರು 35 ವರ್ಷ ಕಳೆದರೂ ಇನ್ನು ಯಾಕೆ ಮದುವೆಯಾಗಿಲ್ಲ ಅಂತ ಅವರ ಅಭಿಮಾನಿಗಳ ಪ್ರಶ್ನೆ.
ಈ ಹಿಂದೆಯೂ ಚಿಕ್ಕಣ್ಣ ಅವರ ಮದುವೆಯ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಕೆಲವು ಊಹಾಪೋಹಗಳು ಹರಿದಾಡಿದ್ದವು. ಇನ್ನು ಸಂದರ್ಶಕರು ಅವರ ಮದುವೆಯ ಬಗ್ಗೆ ಕೇಳಿದ ಪ್ರಶ್ನೆಗೆ ಯಾವಾಗ ಕಂಕಣ ಭಾಗ್ಯ ಕೂಡಿ ಬರುವುದು ಆಗ ನನ್ನ ಮದುವೆ ಅಂತ ಚಿಕ್ಕಣ್ಣ ಉತ್ತರಿಸಿದ್ದಾರೆ. ಹಾಗಾಗಿ ಚಿಕ್ಕಣ್ಣ ಅವರ ಮದುವೆಯ ಗಾಸಿಪ್ ಗಳ ಬಗ್ಗೆ ಇನ್ನು ತೆರೆಬಿದ್ದಿಲ್ಲ. ಒಟ್ಟಿನಲ್ಲಿ ಅಭಿಮಾನಿಗಳಿಗೆ ಚಿಕ್ಕಣ್ಣ ಅವರ ಮದುವೆಯ ವಿಚಾರದ ಬಗ್ಗೆ ಇನ್ನೂ ಕುತೂಹಲ ಹಾಗೆಯೇ ಉಳಿದಿದೆ. ನಟ ಚಿಕ್ಕಣ್ಣ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.