ಕನ್ನಡ ಕಿರುತೆರೆಯ ಲೋಕ ಇಂದು ಬಹಳ ವಿಸ್ತಾರವಾಗುತ್ತಾ ಹೋಗುತ್ತಿದೆ. ಸಿನಿಮಾಗಳಿಗಿಂತಲೂ ಹೆಚ್ಚಾಗಿ ಜನರಿಗೆ ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳು ಹೆಚ್ಚು ಇಷ್ಟವಾಗುತ್ತಿವೆ. ಅದರಲ್ಲೂ ಸಂಗೀತಕ್ಕೆ ಹೆಚ್ಚು ಮಹತ್ವ ಕೊಡುವ ಸರಿಗಮಪ ಹಾಗೂ ಡ್ಯಾನ್ಸ್ ಶೋಗಳು ಜನರಿಗೆ ತುಂಬಾನೇ ಇಷ್ಟವಾಗುತ್ತಿರುವ ಕಾರ್ಯಕ್ರಮಗಳು.
ಇನ್ನು ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಹಾಗೂ ಡಿಕೆಡಿ ಶೋಗಳು ಇನ್ನಷ್ಟು ಹೆಚ್ಚು ಫೇಮಸ್ ಆಗುತ್ತಾ ಇರೋದಕ್ಕೆ ಮುಖ್ಯ ಕಾರಣ ಅದರ ನಿರೂಪಕಿ ಕೂಡ ಹೌದು. ಹೌದು ನಿರೂಪಕಿ ಅನುಶ್ರೀ ಈ ಎರಡು ಕಾರ್ಯಕ್ರಮಗಳನ್ನು ಬಹಳ ವರ್ಷಗಳಿಂದ ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಕನ್ನಡ ಕಿರುತೆರೆ ಲೋಕದಲ್ಲಿ ನಿರೂಪಕಿಯ ಎಂದರೆ ಫಸ್ಟ್ ಗೆ ಎಲ್ಲರ ಬಾಯಲ್ಲೂ ಹೆಸರು ಬರೋದೇ ಅನುಶ್ರೀ ಅವರದ್ದು.
ಬಹಳ ಕಷ್ಟದ ಜೀವನವನ್ನು ನೋಡಿ ಇದೀಗ ಈ ಮಟ್ಟಿನ ಸಾಧನೆ ಮಾಡಿದ್ದಾರೆ ಅನುಶ್ರೀ. ಇವರು ಇಂದು ಕನ್ನಡ ಕಿರುತೆರೆ ಜಗತ್ತಿನಲ್ಲಿ ಉತ್ತಮ ಹೆಸರು ಮಾಡಿದ್ದಾರೆ ಅಂದ್ರೆ ಅದಕ್ಕೆ ಮುಖ್ಯ ಕಾರಣ ಅವರ ಪರಿಶ್ರಮ. ಬಹಳ ಚಿಕ್ಕ ವಯಸ್ಸಿನಲ್ಲಿ ಅನುಶ್ರೀ ಅವರಿಗೆ ಮನೆಯ ಜವಾಬ್ದಾರಿ ಮೈ ಮೇಲೆ ಬೀಳುತ್ತೆ. ಅನುಶ್ರೀ ಅವರು ತಾಯಿ ಹಾಗೂ ತಮ್ಮನ ಜೊತೆ ವಾಸಿಸುತ್ತಿದ್ದರು.
ಮಂಗಳೂರಿನ ಮೂಲದವರಾದ ಇವರು ತಮ್ಮನನ್ನು ಓದಿಸುವ ಸಲುವಾಗಿ 2005ರಲ್ಲಿ ಅಲ್ಲಿಯೇ ಇರುವ ಲೋಕಲ್ ಚಾನೆಲ್ ಒಂದರಲ್ಲಿ ನಿರೂಪಣೆಯನ್ನು ಆರಂಭಿಸುತ್ತಾರೆ ಅದಾದ ಬಳಿಕ ಇವರಿಗೆ ಬೆಂಗಳೂರಿನಲ್ಲಿ ಕೆಲಸ ಇರುವುದಾಗಿ ಆಫರ್ ಬರುತ್ತೆ ನಂತರ ಬೆಂಗಳೂರಿಗೆ ಧಾವಿಸುತ್ತಾರೆ ಅನುಶ್ರೀ. ಆದರೆ ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮದ ನಿರೂಪಣೆಗೆ ಕೇವಲ 250 ರೂಪಾಯಿ ಸಿಗುತ್ತೆ ಅಷ್ಟೇ.
ನಂತರ ಬೇರೆ ಬೇರೆ ಕಾರ್ಯಕ್ರಮದ ಆಂಕರಿಂಗ್ ಮಾಡುವ ಕೆಲಸವನ್ನು ಶುರು ಮಾಡುತ್ತಾರೆ. ಬಳಿಕ ಅನುಶ್ರೀ ಅವರಿಗೆ ಬಿಗ್ ಬಾಸ್ ನಲ್ಲಿ ಭಾಗವಹಿಸುವ ಅವಕಾಶವು ಸಿಗುತ್ತೆ. ಇಲ್ಲಿಂದ ಅವರ ಅದೃಷ್ಟ ಬದಲಾಯಿತು ಎಂದೇ ಹೇಳಬಹುದು. ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿ ಹೊರಬಂದ ನಂತರ ಅನುಶ್ರೀ ಅವರಿಗೆ ಸಾಕಷ್ಟು ನಿರೂಪಣ ಬೇಡಿಕೆಗಳು ಬಂದವು ಇದೀಗ ಜೀ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಹಾಗೂ ಡಿಕೆಡಿಯ ಆಂಕರ್ ಇವರೇ.
2018 ರಿಂದಲೂ ಪ್ರಸಾರವಾಗುತ್ತಿರುವ ಸರಿಗಮಪ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ಏಕೈಕ ಆಂಕರ್ ಅನುಶ್ರೀ. ಪಟ ಪಟ ಅಂತ ಮಾತನಾಡುವ ಅನುಶ್ರೀ ಅವರಿಗೆ ಮ್ಯಾನರಿಸಂ ತುಂಬಾ ಚೆನ್ನಾಗಿದೆ. ಹಾಗಾಗಿ ಇಂದು ಕನ್ನಡದ ಯಾವುದೇ ಸಿನಿಮಾ ಇವೆಂಟ್ ಆಗುದಿದ್ರು ಅದರಲ್ಲಿ ಅನುಶ್ರೀ ಅವರದ್ದೇ ನಿರೂಪಣೆ ಇರುತ್ತೆ. ಇದೆಲ್ಲವೂ ಅವರ ಸಾಧನೆಯ, ಅವರ ಬೆಳವಣಿಗೆಯನ್ನು ತೋರಿಸುತ್ತೆ.
ಇನ್ನು 32 ವರ್ಷ ವಯಸ್ಸಾದರೂ ಅನುಶ್ರೀ ಅವರು ಯಾಕೆ ಇನ್ನು ಮದುವೆಯಾಗಿಲ್ಲ ಅನ್ನೋದು ಹಲವರ ಪ್ರಶ್ನೆ. ಆದರೆ ಸದ್ಯ ಕೆರಿಯರ್ ಬಗ್ಗೆ ಹೆಚ್ಚು ಗಮನವಹಿಸುತ್ತಿರುವ ಆಂಕರ್ ಅನುಶ್ರೀ ತನ್ನ ತಾಯಿ ಹಾಗೂ ತಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಆಸೆ ಹೊಂದಿದ್ದಾರೆ ಹಾಗಾಗಿ ಸದ್ಯ ಮದುವೆಯ ಬಗ್ಗೆ ಅವರು ಯೋಚನೆ ಮಾಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಆಂಕರ್ ಅನುಶ್ರೀ ನಿಮಗೂ ಇಷ್ಟವಾಗಿದದ್ರೆ ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.