ಕನ್ನಡ ಕಿರುತೆರೆಯ ಲೋಕದಲ್ಲಿ ಮಿಂಚಿದ ನಟಿ ವೈಷ್ಣವಿ ಗೌಡ. ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಪಾತ್ರದ ಮೂಲಕ ಜನರನ್ನ ಹೆಚ್ಚು ಆಕರ್ಷಿಸಿದ್ದ ನಟಿ ವೈಷ್ಣವಿ ಅವರು ಇದೀಗ ಜೀವನದಲ್ಲಿ ಹೊಸ ಹೆಜ್ಜೆ ಒಂದನ್ನು ಇಟ್ಟಿದ್ದಾರೆ. ವೈಷ್ಣವಿ ಗೌಡ ಅವರ ಒಂದು ವಿಶೇಷವಾದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿದವರಿಗೆ ವೈಷ್ಣವಿ ಗೌಡ ಮದುವೆಯಾಗುತ್ತಿದ್ದಾರೆ ಎನ್ನುವ ಡೌಟ್ ಬರೋದು ಸಹಜ.
ಹೌದು ವೈಷ್ಣವಿ ಗೌಡ ಹಾಗೂ ಅವರ ಪಕ್ಕದಲ್ಲಿ ವಿರಾಜ್ ಅವರು ಹಾರ ಹಾಕಿಕೊಂಡು ನಿಂತಿದ್ದಾರೆ. ಇನ್ನು ಇವರ ಜೊತೆಗೆ ಮನೆಯ ಗುರು ಹಿರಿಯರು ಕೂಡ ಇದ್ದಾರೆ. ಅಲ್ಲದೆ ವೈಷ್ಣವಿ ಗೌಡ ಹಾಗೂ ವಿರಾಜ್ ಅವರ ಕುತ್ತಿಗೆಯಲ್ಲಿ ನಿಶ್ಚಿತಾರ್ಥದ ಸಮಯದಲ್ಲಿ ಹಾಕಿಕೊಳ್ಳುವಂತಹ ಹಾರವಿದೆ. ಎದುರಿನ ಟೇಬಲ್ ನಲ್ಲಿ ತಾಂಬೂಲಗಳಿವೆ.
ಬಹಳ ಸಂತೋಷವಾಗಿ ವೈಷ್ಣವಿ ಗೌಡ ಹಾಗೂ ವಿರಾಜ್ ನಿಂತಿದ್ದು ಇದು ಇವರ ಎಂಗೇಜ್ಮೆಂಟ್ ಫೋಟೋ ಎಂದು ಎಲ್ಲರೂ ಹೇಳುತ್ತಿದ್ದಾರೆ. ವೈಷ್ಣವಿ ಗೌಡ ಅವರಿಗೆ ಈಗಾಗಲೇ ಸಾಕಷ್ಟು ಶುಭ ಹಾರೈಕೆಗಳು ಕೂಡ ಕಮೆಂಟ್ ಮೂಲಕ ಬರುತ್ತವೆ. ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ ಆಗಿದೆ ಎಂದು ಎಲ್ಲರೂ ಭಾವಿಸಿದ್ದಾರೆ ಆದರೆ ಈ ಬಗ್ಗೆ ಅಧಿಕೃತವಾದ ಮಾಹಿತಿ ಇಲ್ಲ. ವೈಷ್ಣವಿ ಗೌಡ ಅವರ ವೈರಲ್ ಆಗಿರುವ ಫೋಟೋದಲ್ಲಿ ಶಂಕರ್ ಬಿದರಿ ಕೂಡ ಇದ್ದಾರೆ.
ಹಾಗಾಗಿ ಈ ಫೋಟೋದ ಬಗ್ಗೆ ಸಂಪೂರ್ಣವಾದ ಕ್ಲಾರಿಟಿ ಇಲ್ಲ. ಇದು ವೈಷ್ಣವಿ ಗೌಡ ಅವರ ನಿಶ್ಚಿತಾರ್ಥದ ಫೋಟೋ ಅಂತ ಅವರ ಅಭಿಮಾನಿಗಳು ಕಂಗ್ರಾಟ್ಸ್ ಎಂದು ಕಮೆಂಟ್ ಮಾಡುತ್ತಿದ್ದಾರೆ ವೈಷ್ಣವಿ ಅವರ ಮನ ಗೆದ್ದ ಚೋರ ಇರಬಹುದು ಎಂದು ಅಭಿಮಾನಿಗಳ ಊಹೆ. ವೈಷ್ಣವಿ ಗೌಡ ಆಗಲಿ, ಅವರ ಕುಟುಂಬಸ್ಥರಾಗಲಿ ಈ ವಿಷಯದ ಬಗ್ಗೆ ಅಧಿಕೃತ ಮಾಹಿತಿಯನ್ನು ಇನ್ನು ಕೊಟ್ಟಿಲ್ಲ.
ವೈಷ್ಣವಿ ಗೌಡ ಅವರು ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ಆಗಿದ್ದವರು. ಈ ಕಾರ್ಯಕ್ರಮದ ಸಮಯದಲ್ಲಿಯೇ ವೈಷ್ಣವಿ ಅವರಿಗೆ 200 ರಿಂದ 300 ಮದುವೆ ಪ್ರೋಪೋಸಲ್ ಬಂದಿತ್ತಂತೆ. ಈ ಬಗ್ಗೆ ಕಿಚ್ಚ ಸುದೀಪ್ ಅವರ ಬಳಿ ಮನಬಿಚ್ಚಿ ಮಾತನಾಡಿದ್ದರು ವೈಷ್ಣವಿ ಗೌಡ. ಅಷ್ಟೇ ಅಲ್ಲದೆ ತಾನು ಮದುವೆಯಾಗುವ ಹುಡುಗ ಹೇಗೆ ಇರಬೇಕು ಎಂಬುದನ್ನು ಕೂಡ ತಿಳಿಸಿದ್ದರು.
ನಾನು ಮದುವೆಯಾಗುವ ಹುಡುಗನಿಗೆ ಮೀಸೆ, ದಾಡಿ ಇರಬೇಕು. ಆಡಂಬರ ಇಲ್ಲದ ಸರಳ ಜೀವನ ನಡೆಸುವುದಕ್ಕೆ ಆತನಿಗೆ ಗೊತ್ತಿರಬೇಕು. ಯಾವುದೇ ವಿಷಯವನ್ನು ಸಿಂಪಲ್ ಆಗಿ ಲೈಟ್ ಆಗಿ ತಗೋಬೇಕು. ನಗುನಗುತ್ತ ಆರಾಮಾಗಿದ್ದರೆ ಸಾಕು ಮಿಕ್ಕಿದ್ದೆಲ್ಲ ನಾನು ನೋಡಿಕೊಳ್ಳುತ್ತೇನೆ ಅಂತ ವೈಷ್ಣವಿ ಗೌಡ ಹೇಳಿಕೊಂಡಿದ್ದರು.
ಸದ್ಯ ವೈಷ್ಣವಿ ಅವರ ವೈರಲ್ ಆಗಿರುವ ಫೋಟೋ ನೋಡಿದ್ರೆ ಅವರ ನಿರೀಕ್ಷೆಯಂತೆಯೇ ಎಲ್ಲಾ ಕ್ವಾಲಿಟಿ ಇರುವ ಹುಡುಗ ಸಿಕ್ಕಿದ್ದಾನೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ವೈಷ್ಣವಿ ಅವರೇ ಅಧಿಕೃತ ಮಾಹಿತಿ ನೀಡಿದ ಮೇಲೆ ನಮ್ಮೆಲ್ಲರ ಕುತೂಹಲ, ಅನುಮಾನಕ್ಕೆ ಉತ್ತರ ಸಿಗಬೇಕು ಅಷ್ಟೇ.