ಚಂದನವನದಲ್ಲಿ ಹೊಸ ಹೊಸ ಪ್ರಯತ್ನಗಳ ಸಿನಿಮಾಗಳು ಸೆಟ್ಟೇ ಇರುತ್ತವೆ. ಅಂತಹ ಸಿನಿಮಾಗಳೇ ಹಿಟ್ ಆಗುತ್ತಿವೆ. ಇದೀಗ ಅದೇ ದಾರಿಯಲ್ಲಿ ಪೆಟ್ರೋಮ್ಯಾಕ್ಸ್ ಸಿನಿಮಾ ಕೂಡ ಸಾಗುತ್ತಿದೆ. ಪೆಟ್ರೋಮ್ಯಾಕ್ಸ್ ಸಿನಿಮಾದ ಟ್ರೈಲರ್ ನೋಡಿದ್ರೆ ನಿಮಗೂ ಇದು ಅನುಭವವಾಗುತ್ತೆ. ಆದರೆ ಮೊದಲಿಗೆ ಈ ಟ್ರೈನರ್ ಅನ್ನು ನೋಡಿರುವರು ಥೂ ಏನಪ್ಪ ಇದು ಡಬಲ್ ಮೀನಿಂಗ್ ಡೈಲಾಗ್ ಗಳೇ ಇದೆ ಅಂತ ಅನ್ಬಹುದು. ಹೌದು ಪೆಟ್ರೋಮ್ಯಾಕ್ಸ್ ಸಿನಿಮಾದ ಟ್ರೈಲರ್, ಈಗಾಗಲೇ ಬಿಡುಗಡೆಯಾಗಿದೆ ಆರಂಭವಾಗುತ್ತೆ..
ಆದರೆ ಆ ಡೈಲಾಗ್ ಮುಗಿದು ಮುಂದಿನ ಡೈಲಾಗ್ ಕೇಳಿದ್ರೆ ನಿಮ್ಮ ಮನಸ್ಸು ಕದಡುತ್ತೆ. ಹೀರೋ ಹೇಳಿರೋ ಮಾತು ಸತ್ಯ ಅನಿಸುತ್ತೆ. ನಿರ್ದೇಶಕ ವಿಜಯ ಪ್ರಸಾದ್ ಅವರು ನೀರ್ ದೋಸೆ ಎನ್ನುವ ಚಿತ್ರವನ್ನು ನಿರ್ದೇಶಸಿ ಈಗಾಗಲೇ ಕನ್ನಡಿಗರ ಗಮನ ಸೆಳೆದಿದ್ದಾರೆ. ಈ ಚಿತ್ರದಲ್ಲಿಯೂ ಸಾಕಷ್ಟು ಪೋಲಿ ಡೈಲಾಗ್ಗಳು ಇದ್ದವು ಆದರೆ ಸಮಾಜಕ್ಕೆ ಒಂದು ವಿಶೇಷ ಸಂದೇಶವನ್ನು ಕೊಡುತ್ತಿತ್ತು.
ಅದೇ ರೀತಿ ನಿರ್ದೇಶಕ ವಿಜಯ್ ಪ್ರಸಾದ ಅವರು ಪೆಟ್ರೋಮ್ಯಾಕ್ಸ್ ನಲ್ಲಿಯೂ ಕೂಡ ಹೊಸ ಪ್ರಯತ್ನ ಒಂದನ್ನು ಮಾಡಿದ್ದಾರೆ. ಎಲ್ಲಾ ಸಿನಿಮಾಗಳಿಗಿಂತಲೂ ವಿಭಿನ್ನವಾದ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದಾರೆ. ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ನೀನಾಸಂ ಸತೀಶ್ ಹಾಗೂ ಹರಿಪ್ರಿಯಾ ಒಟ್ಟಾಗಿ ಅಭಿನಯಿಸಿದ್ದಾರೆ. ನಟ ನೀನಾಸಂ ಸತೀಶ್ ಕನ್ನಡದಲ್ಲಿ ಒಬ್ಬ ಪ್ರತಿಭಾನ್ವಿತ ನಟ ಎನಿಸಿಕೊಂಡವರು. ಲೂಸಿಯಾ ಚಿತ್ರದ ಮೂಲಕ ಗುರುತಿಸಿಕೊಂಡ ಸತೀಶ್ ನೀನಾಸಂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು ಹಲವಾರು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಇರುವ ಸತೀಶ್ ನೀನಾಸ ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ನಟಿ ಹರಿಪ್ರಿಯಾ ಕೂಡ ಕನನ್ಡದಲ್ಲಿ ಹೆಚ್ಚು ಖ್ಯಾತಿಯನ್ನ ಗಳಿಸಿಕೊಂಡಿರುವ ನಟಿ. ತನ್ನ ಪಾತ್ರಕ್ಕೆ ಪ್ರಾಧಾನ್ಯತೆ ಇರುವ ಸಿನಿಮಾಗಳನ್ನೇ ಆಯ್ದುಕೊಳ್ಳುವ ನಟಿ ಹರಿಪ್ರಿಯಾ ಕೂಡ ಪೆಟ್ರೋ ಮ್ಯಾಕ್ಸ್ ನಲ್ಲಿ ಚಾಲೆಂಜಿಂಗ್ ಪಾತ್ರವನ್ನ ನಿಭಾಯಿಸಿದ್ದಾರೆ.
ಇನ್ನು ಪೆಟ್ರೋಮ್ಯಾಕ್ಸ್ ಟ್ರೈಲರ್ ಬಗ್ಗೆ ಹೇಳುವುದಾದರೆ. ಮೊದಲಿಗೆ ಹರಿಪ್ರಿಯಾ ಹಾಗೂ ನೀನಾಸಂ ಸತೀಶ್ ಮಲಗಿದ್ದಲಿಂದಲೇ ಡಬ್ಬಲ್ ಮೀ’ನಿಂಗ್ ಎನಿಸುವ ಡೈಲಾಗ್ ಹೊಡೆಯುತ್ತಾರೆ. ಅದಾದ ಬಳಿಕ ಸೀರಿಯಸ್ ಮ್ಯಾಟರ್ ಗೆ ಬರುತ್ತೆ ಸೀನ್. ಹರಿಪ್ರಿಯಾ ಹೀರೋ ನನ್ನ ಅಶ್ಲೀಲ ಎಂದರೆ ಏನು ಅಂತ ಕೇಳುತ್ತಾಳೆ. ಅದಕ್ಕೆ ಹೀರೋ ’ಸ್ವಂತ ಮನೆ ಇದ್ರು ಹೆತ್ತ ತಂದೆ ತಾಯಿಗಳನ್ನು ವೃದ್ದಾಶ್ರಮಕ್ಕೆ ಬಿಡುತ್ತಾರಲ್ಲ ಮಕ್ಕಳು ಅದು ಅಶ್ಲೀಲ, ಒಳಗೆ ಜಾತಿ ಜಾತಿ ಅಂತ ಹೊರಗೆ ನಾವೆಲ್ಲ ಒಂದೇ ಎಂದು ಹೇಳ್ಕೋತೀವಲ್ಲ ಅದು ಅ’ಶ್ಲೀಲ’ ಅಂತ ಸತೀಶ್ ಹೇಳುತ್ತಾರೆ. ಈ ರೀತಿ ಗಮನಸೆಳೆಯುವ ಡೈಲಾಗ್ ಗಳ ಮೂಲಕ ಟ್ರೈಲರ್ ಜನರ ಮನಸ್ಸು ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ.
ಈ ಟ್ರೈಲರ್ ನೋಡಿದ್ರೆ ಈ ಸಿನಿಮಾದ ತುಂಬಾ ಇಂಥ ಡೈಲಾಗ್ ಗಳು ಹಾಸ್ಯ ವಿಷಯಗಳು ಸಾಕಷ್ಟು ಇದೆ ಅನ್ನೋದು ಗಮನಕ್ಕೆ ಬರುತ್ತೆ. ಇನ್ನು ಈ ಸಿನಿಮಾ ಸತೀಶ್ ಪಿಕ್ಚರ್ ಹೌಸ್, ಸ್ಟುಡಿಯೋ 18 ಹಾಗೂ ಪೆಟ್ರೋಮ್ಯಾಕ್ಸ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ನೀನಾಸಂ ಸತೀಶ್ ಹರಿಪ್ರಿಯಾ ಈ ಸಿನಿಮಾದಲ್ಲಿ ಮುಖ್ಯ ಭೂಮಿಯಲ್ಲಿ ಕಾಣಿಸಿಕೊಂಡಿದ್ದು ಅದರ ಜೊತೆಗೆ ಕಾರುಣ್ಯ ರಾಮ್, ವಿಜಯಲಕ್ಷ್ಮಿ ಸಿಂಗ್, ಅಚ್ಚುತ್ ಕುಮಾರ್, ನಾಗಭೂಷಣ್ ಮೊದಲಾದ ಕಲಾವಿದರು ಕೂಡ ಅಭಿನಯಿಸಿದ್ದಾರೆ. ಇನ್ನೇನು ತೆರೆ ಕಾಣಲು ಸಿದ್ಧವಾಗಿರುವ ಪೆಟ್ರೋಮ್ಯಾಕ್ಸ್ ಜನರಲ್ಲಿ ಈ ಟೈಲರ್ ಮೂಲಕ ಇನ್ನಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ.