ಸಿನಿಮಾ ರಂಗದಲ್ಲಿ ಅದೃಷ್ಟ ಪರೀಕ್ಷೆಯಲ್ಲಿ ಕೆಲವರು ಸೋಲುತ್ತಾರೆ. ಕೆಲವರು ಗೆಲ್ಲುತ್ತಾರೆ. ಹಲವರು ಪ್ರತಿಭೆ ಇದ್ದರೂ ಮುಂದೆ ಬರುವುದಕ್ಕೆ ಸಾಧ್ಯವಾಗುವುದಿಲ್ಲ ಆದರೆ ಇನ್ನೂ ಕೆಲವರಿಗೆ ಸಿನಿಮಾದಲ್ಲಿ ನೆಲೆ ಊರೋದು ಬಹಳ ಸುಲಭ. ಒಂದೆರಡು ಸಿನಿಮಾಗಳನ್ನ ಮಾಡಿ ಅದರಲ್ಲಿ ಸಕ್ಸಸ್ ಸಿಕ್ಕರೆ ಅವರ ಬೇಡಿಕೆಯು ಹೆಚ್ಚಾಗುತ್ತೆ ಸಂಭಾವನೆಯೂ ದುಪ್ಪಟ್ಟಾಗುತ್ತೆ. ಅಷ್ಟೇ ಅಲ್ಲ ಇತರ ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸುವ ಅವಕಾಶವೂ ಕೂಡ ಹುಡುಕಿಕೊಂಡು ಬರುತ್ತೆ.
ಮೊದಲ ಸಿನಿಮಾದಲ್ಲಿ ಪಾನ್ ಇಂಡಿಯಾ ಗುರುತಿಸಿಕೊಳ್ಳುವ ಅದೃಷ್ಟ ಎಲ್ಲರಿಗೂ ಇರಲ್ಲ. ಹಾಗೆ ನೋಡಿದ್ರೆ ನಟಿ ಶ್ರೀನಿಧಿ ಶೆಟ್ಟಿ ಬಹಳ ಲಕ್ಕಿ ಅಂತಾನೆ ಹೇಳಬಹುದು. ಹೌದು, ಮಾಡಲಿಂಗ್ ಕ್ಷೇತ್ರದಲ್ಲಿದ್ದ ಶ್ರೀನಿಧಿ ಶೆಟ್ಟಿ, ಧಿಡೀರ್ ಅಂತ ಕೆಜಿಫ್ ಸಿನಿಮಾಕ್ಕೆ ಸೆಲೆಕ್ಟ್ ಆಗುತ್ತಾರೆ. ಕೆಜಿಎಫ್ ಸಿನಿಮಾ ಯುನಿವರ್ಸಲ್ ಸಿನಿಮಾ ಎನಿಸಿದ್ದು ನಿಮಗೆ ಗೊತ್ತೇ ಇದೆ. ಈ ವರೆಗಿನ ಸ್ಯಾಂಡಲ್ವುಡ್ ಸಿನಿಮಾಗಳಿಗೆ ಹೋಲಿಸಿದರೆ ಕೆಜಿಎಫ್ ನ ಖ್ಯಾತಿ ಬಹಳ ದೊಡ್ಡದು.
ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಟ ಯಶ್ ಅವರ ಜೊತೆಗೆ ಇನ್ನೂ ಹಲವರ ಎಫರ್ಟ್ ಈ ಸಿನಿಮಾದ ಗೆಲುವಿಗೆ ಕಾರಣ. ಕೆಜಿಎಫ್ ಪಾರ್ಟ್ 1 ಹಾಗೂ 2 ಎರಡು ಅತ್ಯುತ್ತಮ ಯಶಸ್ಸನ್ನು ಕಂಡಿದೆ. ಈ ಸಿನಿಮಾದ ಮೂಲಕ ನಟನಾ ವೃತ್ತಿ ಜೀವನವನ್ನು ಆರಂಭಿಸಿದ್ದು ನಟಿ ಶ್ರೀನಿಧಿ ಶೆಟ್ಟಿ. ಕೆಜಿಎಫ್ ಮೊದಲ ಭಾಗದಲ್ಲಿ ಶ್ರೀನಿಧಿ ಶೆಟ್ಟಿ ಅವರ ಪಾತ್ರಕ್ಕೆ ಹೆಚ್ಚಿನ ಇಂಪಾರ್ಟೆನ್ಸ್ ಇರಲಿಲ್ಲ.
ಆದರೆ ಕೆಜಿಎಫ್ ಪಾರ್ಟ್ 2 ನಲ್ಲಿ ಶೆಟ್ರ ನಟನಾ ಸಾಮರ್ಥ್ಯವನ್ನು ನೋಡೋದಕ್ಕೂ ಕೂಡ ಸಾಧ್ಯವಾಯಿತು. ಹಾಗಾಗಿ ಇತರ ಭಾಷಾ ನಿರ್ಮಾಪಕರು ಕೂಡ ಶ್ರೀನಿಧಿ ಶೆಟ್ಟಿ ಅವರ ಕಾಲ್ ಶೀಟ್ ಕೇಳಿಕೊಂಡು ಬಂದ್ರು. ಹೌದು, ಇಂದು ಬೀಟೌನ್ ಟಾಕ್ ಶುರುವಾಗಿದ್ದು ಶ್ರೀನಿಧಿ ಶೆಟ್ಟಿ ಅವರ ಬಗ್ಗೆ. ಕೆಜಿಎಫ್ ಸಿನಿಮಾದ ಬಳಿಕ ಶ್ರೀನಿಧಿ ಶೆಟ್ಟಿಗೆ ಅವಕಾಶಗಳು ಹೆಚ್ಚಾದವು. ಈ ಸಿನಿಮಾ ಮುಗಿಯುತಿದ್ದ ಹಾಗೆ ಕೋಬ್ರಾ ಎನ್ನುವ ತೆಲುಗು ಸಿನಿಮಾದಲ್ಲಿ ನಟಿಸುವ ಅವಕಾಶ ಶ್ರೀನಿಧಿ ಶೆಟ್ಟಿ ಅವರಿಗೆ ಸಿಕ್ತು.
ಆದರೆ ಈ ಸಿನಿಮಾ ಭಾರಿ ಯಶಸ್ಸನ್ನು ಕಾಣಲಿಲ್ಲ. ಇನ್ನೂ ಒಂದೆರಡು ಪ್ರಾಜೆಕ್ಟ್ ಕೈಯಲ್ಲಿ ಹಿಡಿದಿರುವ ಶ್ರೀನಿಧಿ ಶೆಟ್ಟಿ ಅವರ ಸಂಭಾವನೆಯ ಬೇಡಿಕೆಯು ಹೆಚ್ಚಾಗಿದೆ ಅನ್ನೋದು ಟಾಲಿವುಡ್ ತುಂಬಾ ಹರಡಿದೆ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಇದೀಗ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯರು ಅಂದ್ರೆ ರಶ್ಮಿಕ ಮಂದಣ್ಣ ಹಾಗೂ ಪೂಜಾ ಹೆಗ್ಡೆ. ನಟಿ ರಶ್ಮಿಕ ಮಂದಣ್ಣ 4-5 ಕೋಟಿ ರೂಪಾಯಿ ಸಂಭಾವನೆಯ ಪಡೆಯುತ್ತಿದ್ದರೆ ಪೂಜಾ ಹೆಗ್ಡೆ ಮೂರು ಕೋಟಿ ಸಂಭಾವನೆ ಪಡೆಯುತ್ತಾರೆ.
ಆದರೆ ಶ್ರೀನಿಧಿ ಶೆಟ್ಟಿ ಇವರಿಬ್ಬರನ್ನು ಮೀರಿಸುವ ಸಂಭಾವನೆ ಕೇಳಿದ್ದಾರೆ ಅನ್ನುವ ಮಾತು ಕೇಳಿ ಬರ್ತಾ ಇದೆ.ಹೌದು, ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿ ಗೆದ್ದಿರುವ ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗಡೆಗಿಂತ ಕೇವಲ ಒಂದೆರಡು ಸಿನಿಮಾಗಳಲ್ಲಿ ನಟಿಸಿರುವ ಶ್ರೀನಿಧಿ ಶೆಟ್ಟಿ ಇಷ್ಟು ದೊಡ್ಡ ಮೊತ್ತದ ಬೇಡಿಕೆ ಇಟ್ಟಿದ್ದು ಎಲ್ಲರೂ ಹೌಹಾರುವಂತೆ ಮಾಡಿದೆ.
ಶ್ರೀನಿಧಿ ಶೆಟ್ಟಿ ಅವರ ಬೇಡಿಕೆಯನ್ನು ಕೇಳಿ ಹಲವು ನಿರ್ಮಾಪಕರು ಅವರನ್ನ ಸಿನಿಮಾದಲ್ಲಿ ಹಾಕಿಕೊಳ್ಳುವುದಕ್ಕೆ ಯೋಚನೆ ಮಾಡುತ್ತಿದ್ದಾರೆ. ಇನ್ನು ಆ ಮಟ್ಟಿನ ಯಶಸ್ಸು ಸಿಕ್ಕಿಲ್ಲ ಆಗಲೇ ಇಷ್ಟೊಂದು ಸಂಭಾವನೆಯ ಬೇಡಿಕೆ ಇಟ್ಟಿದ್ದು ತಪ್ಪು ಅನ್ನೋದು ಚಿತ್ರರಂಗದಲ್ಲಿ ಇರುವವರ ಮಾತು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.