ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟಿ ಆಶಿಕಾ ರಂಗನಾಥ್. ಈಗಾಗಲೇ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವ ಅಶಿಕಾ ಕರ್ನಾಟಕದ ಕ್ರಷ್. ಮುದ್ದಾದ ಅಶಿಕಾ ಸದ್ಯ ಕನ್ನಡದಲ್ಲಿ ಇರುವ ಟಾಪ್ ನಟಿಯರಲ್ಲಿ ಒಬ್ಬರು. ಅಶಿಕಾ ರಂಗನಾಥ್ ಹಾಗೂ ಅವರ ಸಹೋದರಿ ಇಬರೂ ನಟನೆಯನ್ನೇ ವೃತ್ತಿಯಾಗಿ ಆಯ್ದುಕೊಂಡು ರಾಜ್ಯಾದ್ಯಂತ ಗುರುತಿಸಿಕೊಂಡಿದ್ದಾರೆ. ಕನ್ನಡಿಗರ ಮೆಚ್ಚಿನ ನಟಿಯರು ಎನಿಸಿದ್ದಾರೆ.
ಆಶಿಕಾ ರಂಗನಾಥ್ ಸ್ಯಾಂಡಲ್ ವುಡ್ ನ ಮಿಲ್ಕ್ ಬ್ಯೂಟಿ ಎಂದೇ ಗುರುತಿಸಿಕೊಂಡಿದ್ದಾರೆ. ಬಹಳ ಮುದ್ದಾದ ಹಾಗೂ ಪ್ರತಿಭಾನ್ವಿತ ನಟಿ ಈಕೆ. ಇಂದು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಆಶಿಕಾ ರಂಗನಾಥ್ 2014ರಲ್ಲಿ ‘ ಕ್ಲೀನ್ ಎಂಡ್ ಕ್ಲಿಯರ್ ಬ್ಯೂಟಿ ಸ್ಪರ್ಧೆಯಲ್ಲಿ ರನ್ನರ್ ಅಪ್ ಸ್ಥಾನ ವನ್ನೂ ಕೂಡ ಗಳಿಸಿದ್ದರು.
2016ದಲ್ಲಿ ಕ್ರೇಜಿ ಬಾಯ್ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಸಿನಿಮಾ ಲೋಕಕ್ಕೆ ತೆರೆದುಕೊಂಡರು. ನಿರ್ದೇಶಕ ಮಹೇಶ್ ಬಾಬು ಆಶಿಕಾ ರಂಗನಾಥ್ ಅವರಿಗೆ ಮೊದಲು ಅವಕಾಶ ನೀಡಿದರು. ಆಶಿಕಾ ರಂಗನಾಥ್ ಅವರ ಸಣ್ಣ ಪರಿಚಯ ಮಾಡಿಕೊಡುವುದಾದರೆ, ಜನಿಸಿದ್ದು ಆಗಸ್ಟ್ 5, 1996ರಲ್ಲಿ ಹಾಸನದಲ್ಲಿ.
ಇವರ ತಂದೆ ರಂಗನಾಥ್ ಹಾಗೂ ತಾಯಿ ಸುಧಾ. ರಂಗನಾಥ್ ಅವರು ಸಿವಿಲ್ ಕಾಂಟ್ರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಆಶಿಕಾ ಅವರ ಸಹೋದರಿ ಅನುಷಾ ಕೂಡ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಹೆಸರು ಗಳಿಸಿದವರು. ಆಶಿಕಾ ರಂಗನಾಥ್ ಬೆಂಗಳೂರಿನಲ್ಲಿಯೇ ವಿದ್ಯಾಭ್ಯಾಸ ಮುಗಿಸಿದ್ದಾರೆ. ಮೊದಲ ಸಿನಿಮಾದಲ್ಲೇ ಜನರ ಮನಸ್ಸನ್ನ ಕದ್ದ ಆಶಿಕಾ, ಮಾಸ್ ಲೀಡರ್, ಮುಗುಳು ನಗೆ, ರಾಜು ಕನ್ನಡ ಮೀಡಿಯಂ, ರಾಂಬೋ, ಕಾಣೆಯಾದವರ ಬಗ್ಗೆ ಪ್ರಕಟಣೆ ಮೊದಲಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಆದರೆ ಇವರಿಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಬ್ರೇಕ್ ಕೊಟ್ಟಿದ್ದು ಶರಣ್ ಅಭಿನಯದ ರಾಂಬೊ ಸಿನಿಮಾ. ಶರಣ್ ಹಾಗೂ ಆಶಿಕಾ ಅವರ ಕಾಂಬಿನೇಶನ್ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಇನ್ನು ನಟಿ ಆಶಿಕಾ ರಂಗನಾಥ್ ಕನ್ನಡದಲ್ಲಿ ಮಾತ್ರವಲ್ಲದೆ ಸೌತ್ ನ ಇತರ ಭಾಷಾ ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಈ ವಿಚಾರದ ಬಗ್ಗೆ ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಆಶಿಕಾ ರಂಗನಾಥ್ ಅವರಿಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ 1.6 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಇದ್ದಾರೆ. ಅವರು ಶೇರ್ ಮಾಡುವ ಫೋಟೊಗಳಿಗೆ ಅಭಿಮಾನಿಗಳು ನಿದ್ದೆಗೆಟ್ಟು ಕೂರುತ್ತಾರೆ. ಅಷ್ಟು ಅದ್ಭುತ ಫೊಟೋ ವಿಡಿಯೋಗಳು ಅವರ ವಾಲ್ ನಲ್ಲಿವೆ.
ಇನ್ನು ಇತ್ತೀಚಿಗೆ ತಾವು ಈ ಹಿಂದೆ ಶ್ರೀಲಂಕಾ ಪ್ರವಾಸದಲ್ಲಿದ್ದಾಗ ಎಡ್ವೆಂಚರ್ ಕೆಲಸ ಮಾಡಿದ್ದರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಬೀಚ್ ನಲ್ಲಿ ಉದ್ದವಾದ ಹಗ್ಗ ಹಿಡಿದು ನೇತಾಡುವ ಈ ಸಾಹಸ ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಇದು ನನ್ನ ಉತ್ತಮ ನೆನಪುಗಳಲ್ಲಿ ಒಂದು ಎಂದು ಆಶಿಕಾ ಬರೆದುಕೊಂಡಿದ್ದಾರೆ.
View this post on Instagram