ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿ ಬಹಳ ಹೆಸರು, ಹಣ ಗಳಿಸುತ್ತಿದೆ ಬಾಲಿವುಡ್ ನ್ನು ಹಿಂದಿಕ್ಕಿ ದಕ್ಷಿಣ ಭಾರತದ ಸಿನಿಮಾಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿವೆ. ಇನ್ನು ಅತ್ಯದ್ಭುತ ಸಿನಿಮಾಗಳಲ್ಲಿ ನಟಿಸುವ ಸ್ಟಾರ್ ನಟರ ಜೀವನದ ಬಗ್ಗೆ ತಿಳಿದುಕೊಳ್ಳುವುದಕ್ಕೆ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತೆ. ಹಾಗಾದರೆ ಬನ್ನಿ ಸ್ಟಾರ್ ನಟರ ಶ್ರೀಮಂತ ಪತ್ನಿಯರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
ಮೊದಲನೇದಾಗಿ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿರುವ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್. ಇವರು ಸ್ನೇಹ ರೆಡ್ಡಿ ಎನ್ನುವವರನ್ನು 2011ರಲ್ಲಿ ಮದುವೆಯಾಗಿದ್ದಾರೆ. ಸ್ನೇಹ ರೆಡ್ಡಿ ಅವರ ತಂದೆ ಸೈನ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮುಖ್ಯಸ್ಥರಾಗಿದ್ದು ಬಹಳ ಹಣವಂತರು. ಇನ್ನು ತೆಲುಗು ಸಿನಿಮಾದ ಸ್ಟಾರ್ ನಟ ಜೂನಿಯರ್ ಎನ್ಟಿಆರ್ ಇವರ ಪತ್ನಿ ಲಕ್ಷ್ಮಿ ಪ್ರಣತಿ. ಲಕ್ಷ್ಮಿ ಪ್ರಣತಿ ಅವರ ತಂದೆ ದೊಡ್ಡ ಬಿಸಿನೆಸ್ ಮ್ಯಾನ್.
ತೆಲುಗು ವಾಹಿನಿಗಳ ಒಡೆತನವನ್ನು ಕೂಡ ಹೊಂದಿದ್ದಾರೆ. ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಅತಿ ಹೆಚ್ಚು ದುಬಾರಿ ವೆಚ್ಚದಲ್ಲಿ ಮದುವೆಯಾದ ಜೋಡಿ ಇದು ಸುಮಾರು 100 ಕೋಟಿ ಎಷ್ಟು ಹಣ ವಹಿಸಿ ಜೂನಿಯರ್ ಎನ್ಟಿಆರ್ ಲಕ್ಷ್ಮಿ ಪ್ರಣತಿ ಇಬ್ಬರ ವಿವಾಹ ನೆರವೇರಿತ್ತು. ನಟ ರಾಮಚರಣ್. ತೆಲುಗು ಸ್ಟಾರ್ ನಟ ರಾಮಚರಣ್ ಹಿಂದಿಯಲ್ಲಿಯೂ ಕೂಡ ನಟಿಸಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಮಗ ರಾಮ್ ಚರಣ್ ಅವರು ಉಪವಾಸನಾ ಕಮಿನಿ ಎನ್ನುವವರನ್ನು 2012ರಲ್ಲಿ ಮದುವೆಯಾಗಿದ್ದಾರೆ. ಇತ್ತೀಚಿಗೆ ದಶಕದ ಮದುವೆ ವಾರ್ಷಿಕೋತ್ಸವವನ್ನೂ ವಿದೇಶದಲ್ಲಿ ಆಚರಿಸಿಕೊಂಡಿದೆ ಈ ಜೋಡಿ ಉಪಾಸನಾ ಅವರ ತಂದೆ ಅಪೋಲೋ ಆಸ್ಪತ್ರೆಗಳ ಕಮ್ಯುನಿಟಿಯ ಮುಖ್ಯಸ್ಥರು. ಉಪಾಸನಾ ಕೂಡ ಅಪೋಲೋ ಫೌಂಡೇಶನ್ ವೈಸ್ ಚೇರ್ ಪರ್ಸನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತೆಲುಗು ಸಿನಿಮಾ ಇಂಡಸ್ಟ್ರಿಯಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ ಸ್ಟಾರ್ ನಟ ದಳಪತಿ ವಿಜಯ್ ಇವರು 1990ರಲ್ಲಿ ಸಂಗೀತ ಸುವರ್ಣ ಲಿಂಗಮ್ ಎನ್ನುವವರನ್ನು ಮದುವೆಯಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಸಂಗೀತ ಸ್ವರ್ಣ ಲಿಂಗಮ್ ಅವರ ತಂದೆ ಶ್ರೀಲಂಕಾ ಮೂಲದ ದೊಡ್ಡ ಬಿಸಿನೆಸ್ ಮ್ಯಾನ್ ಎಂದು ಹೇಳಲಾಗುತ್ತೆ. ಇನ್ನು ರಾಣಾ ದಗ್ಗುಬಾಟಿ, ಮಿಹಿಕ ಬಜಾಜ್ ಅವರನ್ನು ಮದುವೆಯಾಗಿದ್ದಾರೆ ದಗ್ಗುಬಾಟಿ.
ಮಿಹಿಕ ಅವರು ಇಂಟೀರಿಯರ್ ಡಿಸೈನರ್ ಆಗಿದ್ದಾರೆ ಕಳೆದ ಲಾಕ್ಡೌನ್ ಸಂದರ್ಭದಲ್ಲಿ ಇವರಿಬ್ಬರ ವಿವಾಹ ನೆರವೇರಿತ್ತು. ಇವರ ತಾಯಿ ಪ್ರತಿಷ್ಠಿತ ಕ್ರಿಸಲಾ ಜುವೆಲರ್ಸ್ ಡೈರೆಕ್ಟರ್ ಆಗಿದ್ದಾರೆ. ಖ್ಯಾತ ಮಲಯಾಳಂ ನಟ ಮಮ್ಮುಟಿ ಅವರ ಮಗ ಹಾಗೂ ಇದೀಗ ಮಲಯಾಳಂನ ಲೆಜೆಂಡ್ ಆಕ್ಟರ್ ಎನಿಸಿಕೊಂಡಿರುವ ದುಲ್ಕರ್ ಸಲ್ಮಾನ್ 2011ರಲ್ಲಿ ಅಮಲ್ ಅವರನ್ನು ಮದುವೆಯಾಗಿದ್ದಾರೆ.
ಅಮಲ್ ಕೂಡ ಇಂಟೀರಿಯರ್ ಡಿಸೈನರ್ ಆಗಿದ್ದು ಇವರ ತಂದೆ ದೊಡ್ಡ ಉದ್ಯಮಿ. ಇನ್ನು ನಟ ದರ್ಶನ್, ಇವರು ವಿಜಯಲಕ್ಷ್ಮಿ ಅವರನ್ನು ಪ್ರೀತಿಸಿ ಮದುವೆಯಾದರು. ಇವರಿಗೆ ಒಬ್ಬ ಮಗ ಇದ್ದಾನೆ ವಿಜಯಲಕ್ಷ್ಮಿ ಅವರು ಕೂಡ ತುಂಬಾ ಸ್ಥಿತಿವಂತರು ಎಂದು ಮೂಲಗಳು ಹೇಳುತ್ತವೆ. ಸ್ನೇಹಿತರೆ ಇವಿಷ್ಟು ದಕ್ಷಿಣ ಭಾರತದಲ್ಲಿ ಬಹಳ ಶ್ರೀಮಂತ ಪತ್ನಿಯನ್ನು ಹೊಂದಿರುವ ನಟರ ಹೆಸರುಗಳು. ಇವರಲ್ಲಿ ನಿಮ್ಮನೆಚ್ಚಿನ ಸ್ಟಾರ್ ನಟ ಯಾರು ಅನ್ನುವುದನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.