PhotoGrid Site 1672648179450

ಶ್ರೀಕೃಷ್ಣನ ಮೇಲೆ ಮುಸ್ಲಿಂ ಯುವತಿಯ ಪ್ರೀತಿ! ಅಂತಿಂಥಾ ಪ್ರೀತಿ ಅಲ್ಲ ಸ್ವಾಮಿ, ಶ್ರೀಕೃಷ್ಣನಿಗೋಸ್ಕರ ಈಕೆ ಏನು ಮಾಡಿದ್ದಾಳೆ ನೋಡಿ!!

ಸುದ್ದಿ

ನಮ್ಮಲ್ಲಿ ಸಾಕಷ್ಟು ಜಾತಿ ಧರ್ಮಗಳು ಇವೆ ಎಲ್ಲರೂ ವಿಭಿನ್ನವಾದ ಆಚರಣೆಗಳನ್ನು ಮಾಡುತ್ತಾರೆ. ಆದರೂ ಸಹಬಾಳ್ವೆ ಎನ್ನುವುದು ನಮಗೆ ಗೊತ್ತಿದೆ. ಅದರಲ್ಲೂ ಕಲೆ (Art)ಗೆ ಮಾತ್ರ ಜಾತಿ ಧರ್ಮ (caste religion)ದ ಚೌಕಟ್ಟಿಲ್ಲ. ನಾವು ಈಗಾಗಲೇ ಅದೆಷ್ಟೋ ಮುಸ್ಲಿಂ ಯುವತಿಯರು (Muslim Girls) ಹಿಂದೂ ದೇವರ (Hindu God) ಹಾಡುಗಳನ್ನು ಹಾಡಿದ್ದನ್ನು ಕೇಳಿದ್ದೇವೆ. ಇದೀಗ ಒಬ್ಬಳು ಮುಸ್ಲಿಂ ಯುವತಿ ತನ್ನು ಸುಂದರ ಕಲಾ ಕೃತಿಗಳನ್ನು ದೇವಸ್ಥಾನ(Temple)ಕ್ಕೆ ನೀಡಿದ್ದಾಳೆ.

ಅದರಲ್ಲೂ ಆಕೆಯ ಕುಂಚದಲ್ಲಿ ಮೂಡಿ ಬಂದಿರುವ ಭಗವಾನ್ ಶ್ರೀ ಕೃಷ್ಣನ ಆ ಚಿತ್ರಗಳು ಮೈಮನ ಸೆಳೆಯುತ್ತವೆ. ಕೇರಳದ ಕೊಯಿಕ್ಕೊಡ್ (Koyikkod, Kerala) ನ ತಾಮರಸ್ಸೆರಿಯ ಮುಸ್ಲಿಂ ಯುವತಿ ಜಸ್ನಾ ಸಲೀಂ (Jansna Saleem) ಅವರು, ತಾವೇ ಬಿಡಿಸಿದ ಸುಂದರ 101 ಶ್ರೀ ಕೃಷ್ಣನ (Shree Krisna) ಕಲಾಕೃತಿ ರಚನೆಯನ್ನು ಗುರುವಯೂರು ದೇವಸ್ಥಾನಕ್ಕೆ ನೀಡಿದ್ದಾರೆ. – ಎಂಟು ವರ್ಷ (8 years) ಗಳಲ್ಲಿ ಸುಮಾರು 500 ಕಲಾಕೃತಿ (Panting) ಗಳನ್ನು ಈಕೆ ಬಿಡಿಸಿದ್ದಾರೆ.

ಹೌದು ಗುರುವಾಯೂರು ದೇವಾಲಯದ ತಂತ್ರಿಕರು ನೇತೃತ್ವದಲ್ಲಿ ತಾನೇ ತನ್ನ ಕೈಯಾರೆ ಬಿಡಿಸಿದ ಸುಂದರವಾದ ಶ್ರೀ ಕೃಷ್ಣನ 101 ಚಿತ್ರಗಳನ್ನು ದೇವಾಲಯಕ್ಕೆ ಹಸ್ತಾಂತರಿಸಿದ್ದಾರೆ. ಜಸ್ನಾ ಸಲೀಂ ಎಂಬ ಮುಸ್ಲಿಂ ಯುವತಿ ಕೇರಳದ ಕೊಯಿಕ್ಕೊಡು ಜಿಲ್ಲೆಯ ತಾಮಸ್ಸೆರಿಯ ನಿವಾಸಿ. ಇನ್ನು ಈಕೆ ಶ್ರೀ ಕೃಷ್ಣನ ಕಲಾಕೃತಿಯನ್ನು ಬಿಡಿಸುವುದಕ್ಕೂ ಒಂದು ಹಿನ್ನೆಲೆ ಇದೆ.

ತಮ್ಮ ಮನೆ ನಿರ್ಮಾಣದ ಸಂದರ್ಭದಲ್ಲಿ ನಿರ್ಮಿಸಲಾದ ಶೆಡ್ ಒಂದರಲ್ಲಿ ಕೃಷ್ಣನ ಕಲಾಕೃತಿಯನ್ನು ನೋಡುತ್ತಾಳೆ. ಇದರಿಂದ ಸಾಕಷ್ಟು ಆಕರ್ಷಿತಳಾದ ಜಸ್ನ ಅದೇ ಕಲಾಕೃತಿಯನ್ನು ತನ್ನ ಕೈಚಳಕದಲ್ಲಿ ಚಿತ್ರಿಸುತ್ತಾಳೆ. ಆಕೆಯ ಈ ಪ್ರತಿಭೆಯನ್ನು ನೋಡಿ ಆಕೆಯ ಪತಿ ಶ್ಲಾಘಿಸುತ್ತಾರೆ ಆದರೂ ಮನೆಯವರಿಗೆ ತಿಳಿದರೆ ತೊಂದರೆ ಆಗುತ್ತೆ ಎಂದು ಆ ಕಲಾಕೃತಿಯನ್ನು ಹಾಳು ಮಾಡುವಂತೆ ಸೂಚಿಸುತ್ತಾನೆ.

ಆದರೆ ಒಬ್ಬ ಅತ್ಯುತ್ತಮ ಕಲಾಕಾರ್ತಿ ಆಗಿರುವ ಜಸ್ನ ಇದನ್ನು ಒಪ್ಪುವುದಿಲ್ಲ. ಕೊನೆಗೆ ತಮ್ಮ ಕೈ ಕುಂಚದಲ್ಲಿ ಮೂಡಿದ ಕಲಾಕೃತಿಯನ್ನು ತಾಮಸ್ಸೇರಿಯಾದ ನಂಬುವುದರಿ ಕುಟುಂಬಕ್ಕೆ ಉಡುಗೊರೆಯಾಗಿ ನೀಡುತ್ತಾರೆ. ಮುಸ್ಲಿಂ ಯುವತಿಯೊಬ್ಬಳು ಹೀಗೆ ಅತ್ಯಂತ ಅದ್ಭುತವಾಗಿ ಶ್ರೀ ಕೃಷ್ಣನ ಕಲಾಕೃತಿ ರಚಿಸಿದ್ದನು ನಂಬುದರಿ ಕುಟುಂಬದ ಮೂಲಕ ಇಡೀ ಗ್ರಾಮಕ್ಕೆ ತಿಳಿಯುತ್ತದೆ. ಕೊನೆಗೆ ಕೃಷ್ಣನ ಕಲಾಕೃತಿಯನ್ನು ಬಿಡಿಸಿ ಕೊಡುವಂತೆ ಸಾಕಷ್ಟು ಬೇಡಿಕೆಯು ಕೂಡ ಬರುತ್ತಿದೆ.

ಈವರಿಗೆ ಕೇವಲ ಹವ್ಯಾಸವಾಗಿಸಿಕೊಂಡಿದ್ದ ಜಸ್ನ ಇದೀಗ ಚಿತ್ರ ಬಿಡಿಸುವುದನ್ನು ತಮ್ಮ ಜೀವನ ಆಧಾರವಾಗಿಯೂ ಮಾಡಿಕೊಂಡಿದ್ದಾರೆ. ಕಳೆದ 8 ವರ್ಷಗಳಲ್ಲಿ 500ಕ್ಕೂ ಹೆಚ್ಚು ಕಲಾ ಕೃತಿಯನ್ನು ರಚಿಸಿ ಬೇಕಾದವರಿಗೆ ನೀಡಿದ್ದಾರೆ ಜಸ್ನ. ಇನ್ನು ಇದೀಗ ಮನೆಯವರ ಬೆಂಬಲದೊಂದಿಗೆ ಜಸ್ನ 101 ಶ್ರೀ ಕೃಷ್ಣನ ಬೇರೆ ಬೇರೆ ಗಾತ್ರದ ಕಲಾಕೃತಿಯನ್ನು ನಿರ್ಮಾಣ ಮಾಡಿ ಅದನ್ನ ಗುರುವಾಯುರು ದೇವಾಲಯಕ್ಕೆ ಉಡುಗೊರೆಯಾಗಿ ನೀಡಿದ್ದಾರೆ.

101 ಕಲಾಕೃತಿಯನ್ನು ನಿರ್ಮಿಸಲು ನಾಲ್ಕು ತಿಂಗಳ ಕಾಲಾವಧಿ ತೆಗೆದುಕೊಂಡಿದ್ದಾರೆ ಜಸ್ನಾ. ಪತ್ತನಂಟಿಟ್ಟ ಜಿಲ್ಲೆಯ ಶ್ರೀ ಕೃಷ್ಣನ ದೇವಾಲಯಕ್ಕೆ ಭೇಟಿ ನೀಡುಲು ಅವಕಾಶ ದೊರೆತಿರುವುದಕ್ಕೆ ನಿಜಕ್ಕೂ ಸಂತೋಷವಾಗುತ್ತದೆ ಎಂದು ಜಸ್ನ ಹೇಳಿದ್ದಾರೆ. ಕೃಷ್ಣನ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದ ನಂತರ ಜಸ್ನ ಮುಂದಿನದ್ದನ್ನು ಕೃಷ್ಣನೆ ನೋಡಿಕೊಳ್ಳುತ್ತಾನೆ ಎನ್ನುವಂತಹ ಮಾತನ್ನ ಆಡಿದ್ದಾರೆ.

PhotoGrid Site 1672648201387

ಇದನ್ನು ಕೇಳಿಸಿಕೊಂಡ ಶ್ರೀ ಕೃಷ್ಣನ ಭಕ್ತಾದಿಗಳಿಗೆ ಹಾಗೂ ಹಿಂದೂ ಧರ್ಮ ಪರಿಪಾಲಕರಿಗೆ ನಿಜಕ್ಕೂ ಸಂತೋಷವಾಗಿದೆ. ಜಾತಿ ಜಾತಿ ಎಂದು ಹೊಡೆದಾಡಿಕೊಳ್ಳುವ ಸಂದರ್ಭದಲ್ಲಿ ಇಂತಹ ಜಾತಿಯನ್ನು ಮೀರಿದ ಕಲೆಯನ್ನು ಪ್ರೀತಿಸುವ ಮುಸ್ಲಿಂ ಜನತೆ ಕೂಡ ಗಮನ ಸೆಳೆಯುತ್ತಾರೆ. ಸ್ನೇಹಿತರೆ ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆಯ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *