ಇತ್ತೀಚಿಗೆ, ಜನರು ತುಂಬಾ ಮೆಚ್ಚಿಕೊಂಡಿದ್ದ ಕನ್ನಡದ ಕೆಲವು ಕಿರುತೆರೆ ನಟಿಯರು ಧಾರಾವಾಹಿಗಳಲ್ಲಿ ನಟಿಸುವುದನ್ನೇ ಬಿಟ್ಟಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರದ ಸಂಗತಿ ಆದರೆ ಸೋಶಿಯಲ್ ಮೀಡಿಯಾದ ಮೂಲಕ ಆಕ್ಟಿವ್ ಆಗಿದ್ದು ಜನರ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ ಲಕ್ಷ್ಮಿ ಬಾರಮ್ಮ ಧಾರವಾಹಿ ಖ್ಯಾತಿಯ ಚಿನ್ನು ಅಲಿಯಾಸ್ ಕವಿತ ಗೌಡ ನೇಹಾ ಗೌಡ, ಕಾವ್ಯಾ ಗೌಡ ಹಾಗೂ ಇತರ ಕಲಾವಿದರು ಯಾವ ಧಾರಾವಾಹಿಗಳಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಿಲ್ಲ.
ಆದರೂ ಇನ್ಸ್ಟಾಗ್ರಾಮ್ ನಲ್ಲಿ ಆಕ್ಟಿವ್ ಆಗಿರುತ್ತಾರೆ ಅಂತಹ ನಟಿಯರಲ್ಲಿ ವೈಷ್ಣವಿ ಗೌಡ ಕೂಡ ಒಬ್ಬರು. ಅಗ್ನಿಸಾಕ್ಷಿ ಜಾತಿಯ ವೈಷ್ಣವಿ ಗೌಡ ಅಂದ್ರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು, ಗುಳಿಕೆನ್ನೆಯ ಬೆಡಗಿ ವೈಷ್ಣವಿ ಗೌಡ ಅವರು ಸನ್ನಿಧಿ ಎಂದೇ ಫೇಮಸ್ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ಪಾತ್ರದಲ್ಲಿ ಜನರನ್ನ ರಂಜಿಸಿದ್ದ ವೈಷ್ಣವಿ ಗೌಡ ಕಳೆದ ಬಾರಿ ಬಿಗ್ ಬಾಸ್ ಗೂ ಕೂಡ ಹೋಗಿದ್ದರು.
ವೈಷ್ಣವಿ ಗೌಡ ಅವರು ಉತ್ತಮ ಡ್ಯಾನ್ಸರ್, ಯೋಗಪಟು ಕೂಡ ಹೌದು. ಆಗಾಗ ಇಂತಹ ಹಲವು ಫೋಟೋ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಪ್ರಮೋಷನಲ್ ವಿಡಿಯೋಗಳನ್ನು ಮಾಡುವ ವೈಷ್ಣವಿ ಗೌಡ ಅವರಿಗೆ ಸುಮಾರು ಒಂದು ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಇದ್ದಾರೆ. ಹೌದು, ವೈಷ್ಣವಿ ಗೌಡ ಅವರು ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಬೇರೆಬೇರೆ ಉತ್ಪನ್ನಗಳ ಪ್ರಮೋಷನ್ ವಿಡಿಯೋ ಮಾಡುತ್ತಾರೆ.
ಇತ್ತೀಚಿಗೆ ತನ್ನ ತಾಯಿಯ ಜೊತೆ ಸೇರಿಕೊಂಡು ಮೊಮ್ಸ್ ಮ್ಯಾಜಿಕ್ ಎನ್ನುವ ಬ್ರಾಂಡ್ ನ ಕುಕ್ಕೀಸ್ ಪ್ರಮೋಶನ್ ವಿಡಿಯೋ ಮಾಡಿ ಇನ್ಸ್ಟಾನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಲೈಕ್ ಹಾಗೂ ಕಮೆಂಟ್ ಗಳು ಬಂದಿವೆ. ಸುಮಾರು 21 ಸಾವಿರಕ್ಕೂ ಅಧಿಕ ಜನ ಈ ಕುಕ್ಕಿ ಜಾಹೀರಾತನು ಇಷ್ಟಪಟ್ಟಿದ್ದಾರೆ. ಇನ್ನು ಬಹಳ ಸಮಯದಿಂದ ಧಾರಾವಾಹಿ ನಟನೆಯಿಂದ ಕೂಡ ವೈಷ್ಣವಿ ಗೌಡ ದೂರ ಸರಿದಿದ್ರು.
ಇದು ಅವರ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿತ್ತು. ಆಗಾಗ ವೈಷ್ಣವಿ ಗೌಡ ಅವರನ್ನ ಮತ್ತೆ ಧಾರಾವಾಹಿ ಅಥವಾ ಸಿನಿಮಾಕ್ಕೆ ಬರುವಂತೆ ಅಭಿಮಾನಿಗಳು ಕೇಳುತ್ತಿದ್ದರು. ಈಗ ಆ ಸುಸಂದರ್ಭ ಒದಗಿ ಬಂದಿದೆ. ಹೌದು ವೈಷ್ಣವಿ ಗೌಡ ಲಕ್ಷಣ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ವೈಷ್ಣವಿ ಗೌಡ ಅವರ ಗ್ರಾಂಡ್ ಎಂಟ್ರಿಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಮೆಂಟ್ ಮಾಡಿ ವಿಶ್ ಮಾಡಿದ್ದಾರೆ. ಇನ್ನು ವೈಷ್ಣವಿ ಗೌಡ ನೋಡುವುದಕ್ಕೆ ಅತ್ಯಂತ ಮುದ್ದಾಗಿದ್ದಾರೆ. ಹಾಗಾಗಿ ಅವರು ಧರಿಸುವ ಔಟ್ ಫಿಟ್ ಗಳು ಬಹಳ ಅದ್ಭುತವಾಗಿರುತ್ತೆ. ಈವರೆಗೆ ಆಧುನಿಕ ಹಾಗೂ ಸಾಂಪ್ರದಾಯಿಕ ಎರಡು ರೀತಿಯ ಉಡುಗೆಗಳಲ್ಲಿ ಮಿಂಚಿರುವ ವೈಷ್ಣವಿ ಗೌಡ ಇತ್ತೀಚಿಗೆ ಕುಕ್ಕೀಸ್ ಜಾಹೀರಾತಿನಲ್ಲಿ ತೊಟ್ಟ ಉಡುಗೆಯ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ.
ಹೌದು, ಗೋಲ್ಡನ್ ಬ್ರೌನ್ ಕಲರ್ ಸ್ಕರ್ಟ್ ಹಾಗೂ ಕ್ರೀಮ್ ಕಲರ್ ಸ್ಲೀವ್ಲೆಸ್ ಟೀ ಶರ್ಟ್ ಧರಿಸಿರುವ ವೈಷ್ಣವಿ ಗೌಡ ಈ ಫೋಟೋಗಳಲ್ಲಿ ನೋಡೋದಕ್ಕೆ ಅತ್ಯಂತ ಮುದ್ದಾಗಿ ಕಾಣುತ್ತಾರೆ. ವೈಷ್ಣವಿ ಗೌಡ ಅವರ ಈ ಹೊಸ ಲುಕ್ ನೋಡಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. 65 ಸಾವಿರದಷ್ಟು ಜನ ಈ ಫೋಟೋಗಳನ್ನ ಲೈಕ್ ಮಾಡಿದ್ದಾರೆ. ನೀವು ಕೂಡ ವೈಷ್ಣವಿ ಗೌಡ ಅವರ ಆಫೀಶಿಯಲ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರ ಮುದ್ದಾದ ಫೋಟೋಗಳನ್ನು ನೋಡಬಹುದು.