ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ಸಿನಿಮಾರಂಗದ ಹಿನ್ನೆಲೆ ಇರುವ ಕಲಾವಿದರೇ ಬೇಗ ಫೇಮಸ್ ಆಗುತ್ತಾರೆ. ಹೌದು, ಬಾಲಿವುಡ್ ನಲ್ಲಿ ಅನೌನ್ ಪರ್ಸನಾಲಿಟಿ ಗಿಂತ ನಟ ಅಥವಾ ನಟಿ ಯಾರ ಮಗ ಅಥವಾ ಯಾರ ಮಗಳು ಎನ್ನುವುದು ಬಹಳ ಮುಖ್ಯ. ಹಾಗಾಗಿಯೇ ಪ್ರತಿಭೆಯ ಜೊತೆಗೆ ಸಿನಿಮಾ ಬ್ಯಾಕ್ ಗ್ರೌಂಡ್ ಇರುವ ಕಲಾವಿದರೇ ಹೆಚ್ಚಾಗಿ ಗುರುತಿಸಿಕೊಳ್ಳುತ್ತಾರೆ. ಇದೀಗ ಬಾಲಿವುಡ್ ನ ಲೆಜೆಂಡ್ ಆಕ್ಟರ್, ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವರ ಮಗಳು ಚಿತ್ರರಂಗದತ್ತ ಮುಖ ಮಾಡಿದ್ದಾರೆ.
ಹೌದು ಅಪ್ಪನ ಹೆಸರಿನಿಂದಲೇ ಹೆಚ್ಚು ಗುರುತಿಸಿಕೊಂಡವರು ಇವರು. ಬಾಲಿವುಡ್ ನ ಸ್ಟಾರ್ ನಟ ಶಾರೂಖ್ ಖಾನ್ ಅವರ ಮಗಳು ಸುಹಾನಾ ಖಾನ್. ಇತ್ತೀಚಿಗೆ ಹೆಚ್ಚಾಗಿ ಸುಹಾನಾ ಖಾನ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸುಹಾನಾ ಖಾನ್ ಅವರು ತಂದೆ ತಾಯಿಗೆ ಬಹಳ ಗೌರವ ಕೊಡುತ್ತಾರೆ. ಅದರಲ್ಲೂ ತಾಯಿ ಅಂದ್ರೆ ಬಹಳ ಪ್ರೀತಿ. ಹೆಚ್ಚಾಗಿ ಹೆಚ್ಚಾಗಿ ಸುಹಾನಾ, ಅಮ್ಮನ ಜೊತೆ ಹೆಚ್ಚು ಕಾಲ ಕಳೆಯುತ್ತಾಳೆ.
ಇನ್ನು ಸಿನಿಮಾ ಟ್ರೈನಿಂಗ್ ಇರಲಿ, ಫಿಟ್ನೆಸ್ ಇರಲಿ ಅಥವಾ ಇತರೆ ಯಾವುದೇ ವಿಷಯ ಇರಲಿ ಸುಹಾನ ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಅವರ ತಾಯಿ ಗೌರಿ ಖಾನ್. ಸುಹಾನ ಖಾನ್ ಪಾಪ್ ನೃತ್ಯವನ್ನು ಕರಗತ ಮಾಡಿಕೊಂಡಿದ್ದಾರೆ. ಧೀರೂ ಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಪಡೆದಿರುವ ಸುಹಾನ ಇದೀಗ 22 ವರ್ಷಕ್ಕೆ ಕಾಲಿಟ್ಟಿದ್ದಾರೆ. ಇನ್ನು ಸಿನಿಮಾದಲ್ಲಿ ಅಪ್ಪನಂತೆ ಉತ್ತಮ ಹೆಸರು ಗಳಿಸುವ ಆಸೆ ಹೊಂದಿರುವ ಸುಹಾನ ಈಗಾಗಲೇ ತಮ್ಮ ಅದೃಷ್ಟದ ಪರೀಕ್ಷೆಯನ್ನು ಆರಂಭಿಸಿದ್ದಾರೆ.
ಹೌದು ಸುಹಾನ ಅವರು ವೆಬ್ ಸೀರೀಸ್ ನಲ್ಲಿ ನಟಿಸಲು ಶುರು ಮಾಡಿದ್ದಾರೆ. ಸುಹಾನ ಖಾನ್ ಅಭಿನಯದ ಆರ್ಚಿಸ್ ಎನ್ನುವ ಸೀರೀಸ್ ಈಗಾಗಲೇ ನೆಟ್ ಫ್ಲಿಕ್ಸ್ ನಲ್ಲಿ ಉತ್ತಮ ರೆಸ್ಪಾನ್ಸ್ ಪಡೆದಿದೆ. ಇನ್ನು ಸುಹಾನಾ ಸಖತ್ ಬೋಲ್ಡ್ ಆಗಿರುವ ಹುಡುಗಿ. ಸಾಕಷ್ಟು ಬೋಲ್ಡ್ ಆಗಿಯೇ ಡ್ರೆಸ್ ಮಾಡುವ ಸುಹಾನ ಖಾನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಗಾಗ ಇಂತಹ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ.
ಅವರ ಬೋಲ್ಡ್ ಹಾಗೂ ಹಾಟ್ ಲುಕ್ಕಿಗೆ ಜನ ಫಿದಾ ಆಗಿದ್ದಾರೆ. ಸುಹಾನ ಖಾನ್ ಅವರಿಗೆ ಇನ್ಸ್ಟಾಗ್ರಾಮ್ ಮೂರು ಮಿಲಿಯನ್ ಅಷ್ಟು ಜನ ಫಾಲೋವರ್ಸ್ ಇದ್ದಾರೆ. ಸಿನಿಮಾ ರಂಗದಲ್ಲಿ ಇನ್ನೂ ಫೇಮಸ್ ಆಗುವುದಕ್ಕೂ ಮೊದಲೇ ಸುಹಾನ ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ. ಇನ್ನು ತಾಯಿಯ ಸಲಹೆಯನ್ನು ಪ್ರತಿಯೊಂದು ವಿಷಯದಲ್ಲಿಯೂ ತೆಗೆದುಕೊಳ್ಳುವ ಸುಹಾನ ಅವರಿಗೆ ಇತ್ತೀಚಿಗೆ ಗೌರಿ ಖಾನ್ ಪಬ್ಲಿಕ್ ಆಗಿ ಒಂದು ಸಲಹೆ ನೀಡಿದ್ದಾರೆ.
ಆದರೆ ಇದು ಸಾಕಷ್ಟು ಟ್ರೋಲ್ ಕೂಡ ಆಗಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಹೌದು ಸುಹಾನ ಖಾನ್ ಅವರ ತಾಯಿ ಗೌರಿ ಖಾನ್ ಇತ್ತೀಚಿಗೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಡೆಟಿಂಗ್ ಬಗ್ಗೆ ಕರಣ್ ಕೇಳಿದ ಪ್ರಶ್ನೆಯೊಂದಕ್ಕೆ ಒಂದೇ ಸಮಯದಲ್ಲಿ ಇಬ್ಬರು ಹುಡುಗರ ಜೊತೆ ಡೇಟಿಂಗ್ ಮಾಡಬೇಡ ಅಂತ ಸಲಹೆ ಕೊಡ್ತೀನಿ ಎಂದಿದ್ದಾರೆ. ಅದೇನೇ ಇರಲಿ ಸದ್ಯ ಸುಹಾನಾ ಮಾತ್ರ ಜನರ ಗಮನ ಸೆಳೆಯುತ್ತಿದ್ದಾರೆ ಇತ್ತೀಚಿಗೆ ಏರ್ಪೋರ್ಟ್ ನಲ್ಲಿ ಸಹನಾ ಅವರು ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದ್ರು. ವೈಟ್ ಟೀ ಶರ್ಟ್ ಧರಿಸಿದ್ದ ಸುಹಾನ ಅವರ ಹಾಟ್ ಲುಕ್ ಗೆ ಏರ್ಪೋರ್ಟ್ ನಲ್ಲಿ ಇದ್ದವರೆ ಶಾಕ್ ಆಗಿದ್ದಾರೆ.
View this post on Instagram