ಬಾಲಿವುಡ್ ನಟ ಅಮೀರ್ ಖಾನ್ ಸಾಕಷ್ಟು ವಿಭಿನ್ನ ಪಾತ್ರಗಳ ಮೂಲಕ ಫೇಮಸ್ ಆದವರು ಒಂದು ಕಾಲದಲ್ಲಿ ಅಮೀರ್ ಖಾನ್ ಅವರ ಸಿನಿಮಾ ವನ್ನ ಬರಿ ಹಿಂದಿ ಭಾಷೆಕರು ಮಾತ್ರವಲ್ಲ ಇತರ ಸಿನಿಪ್ರಿಯರು ಕೂಡ ಮುಗಿಬಿದ್ದು ನೋಡುತ್ತಿದ್ದರು. ಬಾಲಿವುಡ್ ನಲ್ಲಿ ಅಮೀರ್ ಖಾನ್ ಅವರ ಬಹುತೇಕ ಎಲ್ಲಾ ಸಿನಿಮಾಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿವೆ. ಆದರೆ ಇತ್ತೀಚಿಗೆ ಬಾಲಿವುಡ್ ಎಲ್ಲಾ ಸಿನಿಮಾಗಳು ಸೋಲುತ್ತಿವೆ.
ಅದರಂತೆ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡ ಸಿನಿಮಾದ ಬಗ್ಗೆ ಹೆಚ್ಚು ನಿರೀಕ್ಷೆ ಇತ್ತು, ಆದರೆ ಆ ಸಿನಿಮಾ ಕೂಡ ಮಕಾಡೆ ಮಲಗಿತು. ಅಮೀರ್ ಖಾನ್ ಅವರ ಸಿನಿಮಾ ಇದೀಗ ನೋಡುವುದಕ್ಕೂ ಮೊದಲೇ ಬಾಯ್ ಕಾಟ್ ಗೆ ಗುರಿ ಆಗುತ್ತಿದೆ. ಲಾಲ್ ಸಿಂಗ್ ಚಡ್ದಾ, ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ಸಿನಿಮಾದ ರಿಮೇಕ್ ಆದರೆ ಬಾಲಿವುಡ್ ನಲ್ಲಿ ಮಾತ್ರ ಹೇಳ ಹೆಸರಿಲ್ಲದಂತೆ ಸೈಡ್ ಲೈನ್ ಆಗಿದೆ.
ಇನ್ನು ಅಮೀರ್ ಖಾನ್ ಅವರ ಸಿನಿಮಾ ಸೋಲಿಗೆ ಮುಖ್ಯವಾಗಿ ಅವರು ಮಾಡಿರುವ ಸಿನಿಮಾ ಚೆನ್ನಾಗಿಲ್ಲ ಎನ್ನುವುದಕ್ಕಿಂತಲೂ ಅವರು ಹಿಂದೂ ಧರ್ಮದ ಬಗ್ಗೆ ಆಡಿದ ಮಾತು ಅವರನ್ನ ಎಲ್ಲರೂ ವಿರೋಧ ಮಾಡುವಂತೆ ಮಾಡಿದೆ. 2015ರಲ್ಲಿ ಅಮೀರ್ ಖಾನ್ ಒಂದು ಹೇಳಿಕೆಯನ್ನು ನೀಡಿದರು ಭಾರತ ದೇಶದ ಅಸಹಿಷ್ಮತೆ ಬಗ್ಗೆ ಮಾತನಾಡಿದರು ಇದೇ ಕಾರಣಕ್ಕೆ ಈಗಲೂ ಅಮೀರ್ ಖಾನ್ ಅವರನ್ನ ಜನ ವಿರೋಧ ಮಾಡುತ್ತಾರೆ.
ಅವರ ಹೇಳಿಕೆಯ ವಿರುದ್ಧ ಕಿಡಿ ಕಾರುತ್ತಾರೆ ಸಿನಿಮಾ ಕೂಡ ಅಮೀರ್ ಖಾನ್ ಅವರ ಕರಿಯರ್ ನಲ್ಲಿ ದೊಡ್ಡ ಸೋಲನ್ನ ನೀಡಿದೆ. ಇದೀಗ ಅಮೀರ್ ಖಾನ್ ಸಿನಿಮಾ ಸೋಲನ್ನು ಅನುಭವಿಸಿದ ನಂತರ ಹೊಸ ಉದ್ಯಮಕ್ಕೆ ಕೈ ಹಾಕುತ್ತಿದ್ದಾರೆ. ಹೌದು, ಸಿನಿಮಾ ಇಂಡಸ್ಟ್ರಿಯಲ್ಲಿ ನಿರ್ಮಾಪಕನಾಗಿ ಮುಂದುವರಿಯುವುದಕ್ಕೆ ಅಮೀರ್ ಖಾನ್ ನಿರ್ಧಾರ ಮಾಡಿದ್ದಾರಂತೆ.
ಇತ್ತೀಚಿಗೆ ಅವರು ತಮ್ಮ ಹೊಸ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ ಆದರೆ ಇಲ್ಲಿ ಆಶ್ಚರ್ಯ ಎನ್ನುವ ವಿಷಯ ಏನು ಅಂದ್ರೆ ನಿರ್ಮಾಣ ಸಂಸ್ಥೆಯ ಮೊದಲ ದಿನ ಪೂಜೆ ನಡೆಸಿದ್ದಾರೆ. ಅದು ಹಿಂದೂ ಸಂಪ್ರದಾಯದಂತೆ ಕಲಶಕ್ಕೆ ಪೂಜೆ ಮಾಡಿ ಆರತಿ ಬೆಳಗುವುದರ ಮೂಲಕ ನಿರ್ಮಾಣ ಸಂಸ್ಥೆಯ ಉದ್ಘಾಟನೆ ಮಾಡಿದ್ದಾರೆ. ಅಮೀರ್ ಖಾನ್ ಹೀಗೆ ಹಿಂದು ಧರ್ಮದಂತೆ ಪೂಜೆ ಪುನಸ್ಕಾರ ನಡೆಸುತ್ತಿರುವುದು ಅವರು ಮಾಡಿರುವ ತಪ್ಪಿಗೆ ಕ್ಷಮೆ ಕೇಳುವ ರೀತಿನ ಅಂತ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.