ಸಿನಿಮಾ ನಟ ನಟಿಯರ ಕುರಿತಾಗಿ ಗಾಸಿಪ್ ಗಳು ಹರಡುತ್ತಲೇ ಇರುತ್ತವೆ. ಅದರಲ್ಲೂ ಸ್ಟಾರ್ ನಟ ನಟಿಯರ ಕುರಿತಾಗಿ ಸ್ವಲ್ಪ ಹೆಚ್ಚಾಗಿಯೇ ಗಾಸಿಪ್ ಗಳು ಕೇಳಿ ಬರುತ್ತವೆ. ಇನ್ನು ಒಬ್ಬ ನಟಿ ಅಥವಾ ನಟರ ಅಫೇರ್ ಗಳ ಬಗ್ಗೆ ಅಥವಾ ಪ್ರೀತಿಯ ಬಗ್ಗೆ ರಿಲೇಷನ್ ಶಿಪ್ ಬಗ್ಗೆ ಸ್ವಲ್ಪ ಸುಳಿವು ಸಿಕ್ಕರೂ ಸಾಕು ಸೋಶಿಯಲ್ ಮೀಡಿಯಾಗಳಲ್ಲಿ ಅವರ ಸುದ್ದಿಯೇ ಹರಿದಾಡಲು ಆರಂಭ ಆಗುತ್ತದೆ. ಪಾಪರಾಜಿಗಳ ಕ್ಯಾಮರಾ ಅಂತೂ ಅವರ ಸುತ್ತನೇ ಸುತ್ತುತ್ತಿರುತ್ತವೆ.
ಇದೇ ರೀತಿ ಇದೀಗ ಸ್ಟಾರ್ ನಟ ನಾಗಚೈತನ್ಯ ಕುರಿತಾದ ಒಂದು ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಹೌದು, ನಾಗಚೈತನ್ಯ ಅವರು ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇದೀಗ ಒಬ್ಬ ಖ್ಯಾತ ನಟಿಯ ಜೊತೆ ಅವರ ಹೆಸರು ತಳುಕು ಹಾಕಿಕೊಂಡಿದೆ. ಅದುವೇ ಪಾರ್ವತಿ ತಿರುವೋತು ಅವರ ಜೊತೆ. ಪಾರ್ವತಿ ತಿರುವೋತು ಮೂಲತಃ ಕೇರಳದ ಸ್ಟಾರ್ ನಟಿ. ಇವರು ಕನ್ನಡದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಹೌದು, ಪುನೀತ್ ರಾಜ್ಕುಮಾರ್ ಜತೆ ಎರಡು ಬ್ಲಾಕ್ಬಸ್ಟರ್ ಚಿತ್ರಗಳಾದ ‘ಮಿಲನ’ ಹಾಗೂ ‘ಪೃಥ್ವಿ’ಯಲ್ಲಿ ಪಾರ್ವತಿ ಬಣ್ಣಹಚ್ಚಿದ್ದರು. ಅದೇ ರೀತಿ, ‘ಮಳೆ ಬರಲಿ ಮಂಜೂ ಇರಲಿ’, ‘ಅಂದರ್ ಬಾಹರ್’ ಚಿತ್ರಗಳಲ್ಲೂ ಪಾರ್ವತಿ ನಟಿಸಿದ್ದರು. ಮಲಯಾಳಂ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸುವ ಪಾರ್ವತಿ, ‘ಎನ್ನು ನಿಂಟೆ ಮೊಯ್ದೀನ್’ ‘ಟೇಕಾಫ್’ ಹಾಗೂ ‘ಚಾರ್ಲಿ’ ಚಿತ್ರಗಳಲ್ಲಿ ನಟಿಸಿ, ಅದರಲ್ಲಿನ ಅಭಿನಯಕ್ಕೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಅದೇ ರೀತಿ ಪಾರ್ವತಿ ತಿರುವೋತು ಅವರು ನಾಗಚೈತನ್ಯ ಅವರ ಜೊತೆ ಧೂತ ಅನ್ನುವ ವೆಬ್ ಸಿರೀಸ್ ನಲ್ಲಿ ನಟಿಸಿದ್ದಾರೆ. ಇದರ ಲಾಂಚಿಂಗ್ ಕಾರ್ಯಕ್ರಮದ ವೇದಿಕೆಯಲ್ಲಿ ನಟ ನಾಗಚೈತನ್ಯ ಹಾಗೂ ನಟಿ ಪಾರ್ವತಿ ತಿರುವೊತು ಕಾಣಿಸಿಕೊಂಡಿದ್ದರು. ಈ ವೇಳೆಯಲ್ಲಿ ಇಬ್ಬರು ಒಬ್ಬರೊನೊಬ್ಬರು ನೋಡಿಕೊಂಡು ನಸು ನಕ್ಕು ನಂತರ ಇಬ್ಬರೂ ಹತ್ತಿರ ಬಂದು ಕೈ ಕೈ ಹಿಡಿದು ಕೊಂಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದಲ್ಲದೆ.
ಇಬ್ಬರ ನಡುವೆ ಏನಾದರೂ ಇದೆಯಾ ಅನ್ನುವ ಸುದ್ದಿ ಹರಿದಾಡಲು ಶುರುವಾಗಿದೆ. ಆದರೆ ವಿಡಿಯೋ ವನ್ನು ಸರಿಯಾಗಿ ಗಮನಿಸಿದರೆ ಅದು ಸಹಜವಾದ ನಡವಳಿಕೆ ಅನ್ನುವಂತೆ ಭಾಸವಾಗುತ್ತಿದೆ. ಇನ್ನು ನಾಗಚೈತನ್ಯ ಅವರ ಜೊತೆ ತಳುಕು ಹಾಕಿಕೊಂಡ ನಟಿ ಇವರೇ ಮೊದಲಲ್ಲ. ನಾಗಚೈತನ್ಯ ಅವರು ಸಮಂತಾಗೆ ವಿಚ್ಛೇದನ ನೀಡಿದ ಬಳಿಕ ಮತ್ತೋರ್ವ ನಟಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.
ಮೇಡ್ ಇನ್ ಹೆವನ್ ಖ್ಯಾತಿಯ ನಟಿ ಶೋಭಿತಾ ದುಲಿಪಾಲಾ ಜೊತೆ ನಾಗಚೈತನ್ಯ ಪ್ರೀತಿಯಲ್ಲಿದ್ದಾರೆ, ನಾಗ್ ಮತ್ತು ಶೋಭಿತಾ ಒಬ್ಬರಿಗೊಬ್ಬರು ಪ್ರೀತಿ ಮಾಡುತ್ತಿದ್ದು ಇಬ್ಬರು ಕದ್ದು ಮುಚ್ಚಿ ಓಡಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದಕ್ಕೆ ಕಾರಣ ಶೋಭಿತಾ ಅವರು ನಾಗಚೈತನ್ಯ ಅವರ ಜುಬ್ಲಿಹಿಲ್ಸ್‌ನಲ್ಲಿರುವ ನಿವಾಸದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ ಅನೇಕ ಕಡೆ ಜೊತೆಯಾಗಿ ಕಾಣಿಸಿ ಕೊಂಡಿದ್ದರು. ಅವರಿಬ್ಬರು ಮದುವೆ ಆಗಲಿದ್ದಾರೆ ಎಂದು ಕೂಡ ಸುದ್ದಿಯಾಗಿತ್ತು.
ಆದರೆ ಈ ಬಗ್ಗೆ ನಾಗ್ ಆಗಲಿ ಶೋಭಿತಾ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಮಂತಾ ಮತ್ತು ನಾಗಚೈತನ್ಯಾ ದೂರ ದೂರ ಆಗಿ ಅನೇಕ ತಿಂಗಳುಗಳೇ ಕಳೆದಿವೆ. ಸಮಂತಾ ಪ್ಯಾನ್ ಇಂಡಿಯಾ ಸ್ಟಾರ್ ಮೆರೆಯುತ್ತಿದ್ದಾರೆ. ನಾಗಚೈತನ್ಯ ಕೂಡ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಗಚೈತನ್ಯ ನಟಿಸಿದ್ದು, ಈ ಸಿನಿಮಾ ಮೂಲಕ ನಾಗಚೈತನ್ಯ ಮೊದಲ ಬಾರಿಗೆ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾ ಆಗಸ್ಟ್ 11ರಂದು ತೆರೆಗೆ ಬರಲಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.