PhotoGrid Site 1663417607612

ವಿಷ್ಣು ಆತ ಒಬ್ಬ ಹೀರೋ ಅವನಿಗೆ ಕೊಡಬೇಕಾದ ಗೌರವ ಕೊಡಲಿಲ್ಲ, ಅಂದಿನ ಘಟನೆ ನೆನೆದು ಅಸಲಿ ಸತ್ಯ ಹೊರ ಹಾಕಿದ ನಟ ದ್ವಾರಕೀಶ್ ಹೇಳಿದ್ದೇನು ನೋಡಿ!!

ಸುದ್ದಿ

ಗಂಧದ ಗುಡಿ ನೆಲದಲ್ಲಿ ಅಭಿನಯದ ಜೊತೆಗೆ ನಿರ್ಮಾಪಕರಾಗಿ, ನಿರ್ದೇಶಕರಾಗಿ ಬಹಳ ದೊಡ್ಡ ಸಕ್ಸೆಸ್ ಕಂಡಿದ್ದು ದ್ವಾರಕೀಶ್ ಅವರು. ನಟ ದ್ವಾರಕೀಶ್ ಅಂದ್ರೆ ನೆನಪಿಗೆ ಬರುವುದೇ ಅವರ ಹಾಸ್ಯ ನಟನೆ. ಆದರೆ ಅವರು ಬಹಳ ದೊಡ್ಡ ಸಕ್ಸಸ್ ಕಾಣುವುದಕ್ಕೆ ಮುಖ್ಯವಾಗಿದ್ದು ಅವರ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿಬಂದ ಸಿನಿಮಾಗಳು. ಒಂದು ಕಾಲದಲ್ಲಿ ದ್ವಾರಕೀಶ್ ಅಂದ್ರೆ ಎಲ್ಲರೂ ಬಹಳ ಸಂತೋಷದಿಂದ ಅವರ ಸಿನಿಮಾಗಳನ್ನ ವೀಕ್ಷಿಸುತ್ತಿದ್ದರು.

ಒಂದು ಸಿನಿಮಾದಲ್ಲಿ ಮೂರು ಗಂಟೆ ಪ್ರೇಕ್ಷಕನನ್ನ ಹಿಡಿದಿಟ್ಟುಕೊಳ್ಳುವ ತಾಕತ್ತು ಅವರಿಗಿತ್ತು. ಕರ್ನಾಟಕದ ಕುಳ್ಳ ದ್ವಾರಕೀಶ್ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ಪರದೆಯ ಮೇಲೆ ಬಂದ್ರು ಅಂದ್ರೆ ಎದುರಿಗಿದ್ದ ಪ್ರೇಕ್ಷಕರಿಗೆ ಹಬ್ಬವೋ ಹಬ್ಬ. ದ್ವಾರಕೀಶ್ ಹಾಗೂ ವಿಷ್ಣು ದಾದಾ ಅವರ ಸ್ನೇಹದ ಬಗ್ಗೆ ಎಲ್ಲರಿಗೂ ಗೊತ್ತು. ಇಬ್ಬರು ಗಳಸ್ಯ ಕಂಠಸ್ಯ ಎನ್ನುವಂತಹ ಸ್ನೇಹ ಹೊಂದಿದ್ದು ಒಟ್ಟಾಗಿ ಸಾಕಷ್ಟು ಸಿನಿಮಾಗಳ ಮೂಲಕ ಜನರನ್ನ ರಂಜಿಸಿದ್ದಾರೆ.

ವಿಷ್ಣುವರ್ಧನ್ ಅವರಿಂದಲೇ ದ್ವಾರಕೀಶ್ ಅವರು ಸಾಕಷ್ಟು ಹಣ ಹೆಸರು ನೋಡುವಂತಾಗಿತ್ತು. ಆದರೆ ಕಾಲ ಎಲ್ಲಾ ಸಮಯದಲ್ಲಿಯೂ ಒಂದೇ ರೀತಿ ಇರುವುದಿಲ್ಲ. ಮನುಷ್ಯನ ಜೀವನದಲ್ಲಿ ಏರಿಳಿತಗಳು ಸಹಜ. ತನಗೆ ಹೆಸರು ಹಣ ಬರುತ್ತಿದ್ದ ಹಾಗೆ ದ್ವಾರಕೀಶ್ ಅವರಿಗೆ ಅಹಂಕಾರ, ದರ್ಪ ತಲೆಗೇರಿತ್ತು. ತನ್ನ ಜೊತೆ ತಮ್ಮ ಮನೆಯಲ್ಲಿಯೇ ಓಡಾಡಿಕೊಂಡಿದ್ದ ಒಬ್ಬ ಅತ್ಯದ್ಭುತ ನಾಯಕ ನಟನನ್ನ ತಮ್ಮ ದರ್ಪದಿಂದಲೇ ಕಳೆದುಕೊಂಡರು.

ಈ ಬಗ್ಗೆ ಇತ್ತೀಚಿಗೆ ಸಂದರ್ಶನ ಒಂದರಲ್ಲಿ ದ್ವಾರಕೀಶ್ ಮನ ಬಿಚ್ಚಿ ಮಾತನಾಡಿದ್ದಾರೆ. ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಅತ್ಯುತ್ತಮ ಸ್ನೇಹಿತರು ಅವರನ್ನು ಬೇರೆ ಮಾಡಬೇಕು ಅಂತ ಹಲವರು ಅಂದುಕೊಂಡಿದ್ರು. ಇವರ ನಡುವೆ ಮನಸ್ತಾಪ ತಂದು ಯಾರೋ ದೂರ ಮಾಡಿದ್ದಾರೆ ಅಂದ್ರೆ ಜನರು ಕೂಡ ಭಾವಿಸಿದ್ದರು. ಆದರೆ ನಟ ದ್ವಾರಕೀಶ್ ಕರಾಳ ಸತ್ಯವೊಂದನ್ನ ಬಿಚ್ಚಿಟ್ಟಿದ್ದಾರೆ. ಒಬ್ಬ ನಾಯಕ ನಟನಿಗೆ ಕೊಡಬೇಕಾದ ಮರ್ಯಾದೆಯನ್ನು ನಾನು ಕೊಟ್ಟಿಲ್ಲ ನನ್ನ ದರ್ಪ ಹಾಗೂ ದುರಹಂಕಾರವೇ ನನ್ನ ಹಾಗೂ ವಿಷ್ಣುವರ್ಧನ್ ಅವರ ನಡುವೆ ಬಿರುಕು ಮೂಡಿಸಿತು ಅಂತ ಹೇಳಿದ್ದಾರೆ.

ಹೌದು, ಬಹಳ ಚಿಕ್ಕ ವಯಸ್ಸಿಗೆ ಸಾಕಷ್ಟು ಯಶಸ್ಸನ್ನ ಕಂಡಿದ್ದ ದ್ವಾರಕೀಶ್ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳ ಐಷಾರಾಮಿ ಜೀವನವನ್ನು ಕಂಡರು. ಆ ಸಮಯದಲ್ಲಿ ತನ್ನೊಂದಿಗಿದ್ದ ನಟ ವಿಷ್ಣುವರ್ಧನ್ ಅವರಿಗೆ ನಾನು ಸರಿಯಾಗಿ ಗೌರವ ನೀಡಲಿಲ್ಲ ಅಂತ ಹೇಳಿಕೊಂಡಿದ್ದಾರೆ. ಒಬ್ಬ ನಾಯಕನಟ ಆಗಿದ್ರು ಕೂಡ ನನ್ನ ಎಲ್ಲಾ ಸಿನಿಮಾದಲ್ಲಿಯೂ ಅವರು ಕಥೆಯನ್ನೇ ಕೇಳದೆ ಒಪ್ಪಿಕೊಂಡಿದ್ದಾರೆ.

ನನ್ನ ನಿರ್ಮಾಣದ ಇಂದಿನ ರಾಮಾಯಣ ಎನ್ನುವ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರು ಹೀರೋಯಿನ್ ಇಲ್ಲದೆ ಫೈಟಿಂಗ್ ಇಲ್ಲದೆ ಸಾಮಾನ್ಯ ಒಬ್ಬ ಕಲಾವಿದನಾಗಿ ಅಭಿನಯಿಸಿದ್ರು ಇದು ಅವರು ನನಗೆ ಕೊಟ್ಟ ಗೌರವ. ವಿಷ್ಣುವರ್ಧನ್ ಅವರು ಕಥೆ ಕೇಳಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದರು ಇಲ್ಲ ತಿರಸ್ಕರಿಸುತ್ತಿದ್ದರು ಎನ್ನುವುದು ಖಂಡಿತವಾಗಿಯೂ ಸುಳ್ಳು. ನನ್ನ ಯಾವ ಸಿನಿಮಾದ ಕಥೆಯನ್ನು ಅವರು ಕೇಳದೆ ನನ್ನ ಮಾತಿಗೆ ಬೆಲೆಕೊಟ್ಟು ಅಭಿನಯಿಸುತ್ತಿದ್ದರು.

ನಾನು ಮಾಡಿದ ದೊಡ್ಡ ತಪ್ಪು ವಿಷ್ಣುವರ್ಧನ್ ಅವರಿಗೆ ಅ ಗೌರವ ತೋರಿಸಿದ್ದು ಅಂತ ದ್ವಾರಕೀಶ್ ನೊಂದುಕೊಳ್ಳುತ್ತಾರೆ.ನಟ ವಿಷ್ಣುವರ್ಧನ್ ಅವರನ್ನು ಸರಿಯಾಗಿ ನಡೆಸಿಕೊಳ್ಳದೆ ಅವರಿವರ ಮಾತು ಕೇಳಿ ನಾನು ಎಲ್ಲವನ್ನು ಕಳೆದುಕೊಂಡೆ ಮತ್ತೆ ನನ್ನನ್ನ ಮೇಲಕ್ಕೆ ಎತ್ತಿದ್ದು ಕೂಡ ವಿಷ್ಣುವರ್ಧನ್ ಅವರೇ ಅವರೊಂದಿಗೆ ಆಪ್ತಮಿತ್ರ ಸಿನಿಮಾ ಮಾಡಿದ ನಂತರ ನನಗೆ ಮತ್ತೆ ಗೆಲುವು ಸಿಕ್ತು ಅಂತ ದ್ವಾರಕೀಶ್, ವಿಷ್ಣುವರ್ಧನ್ ಅವರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾರೆ.

Leave a Reply

Your email address will not be published. Required fields are marked *