ಸ್ನೇಹಿತರೆ ಹಲವು ಯುವತಿಯರಿಗೆ ತಾವು ಕೂಡ ಗಗನಸಖಿ ಆಗಬೇಕು ಎನ್ನುವ ಕನಸು ಇರುತ್ತೆ ಇದಕ್ಕೆ ಮುಖ್ಯ ಕಾರಣ ಏರ್ ಹೋಸ್ಟರ್ಸ್ ಅಥವಾ ಗಗನಸಳಿಯರು ಸಾಕಷ್ಟು ದೇಶ ಸುತ್ತುತ್ತಾರೆ ಪ್ರಪಂಚ ನೋಡುತ್ತಾರೆ. ಇದು ಒಂದು ಅರ್ಥದಲ್ಲಿ ನಿಜವೇ ಆದರೂ ಗಗನಸಖಿಯರು ಸಾಕಷ್ಟು ಕಷ್ಟದ ಟ್ರೈನಿಂಗ್ ಕೂಡ ಮುಗಿಸಿ ಬರಬೇಕಾಗಿರುತ್ತದೆ. ಅಲ್ಲದೆ ಅವರ ಜೀವಕ್ಕೆ ಅವರೇ ಜವಾಬ್ದಾರರು.
ಏನಾದರೂ ಸಂಭವಿಸಿದರೆ ಸ್ವಲ್ಪ ಮಟ್ಟಿಗೆ ಪರಿಹಾರ ಸಿಗಬಹುದು ಆದರೆ ಅವರ ಜೀವಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ ಹಾಗಾಗಿ ಗಗನಸಖಿ ಎನ್ನುವ ಜಾಬ್ ಸ್ವಲ್ಪ ರಿಸ್ಕ್ ಕೂಡ ಹೌದು. ಫ್ಲೈಟ್ ಅನ್ನು ನೀವು ಏರಿದರೆ ಮೊದಲಿಗೆ ನಿಮ್ಮನ್ನ ಕೈ ಮುಗಿದು ಮುಗುಳ್ನಗೆಯೊಂದಿಗೆ ಸ್ವಾಗತಿಸುವುದೇ ಈ ಗಗನಸಖಿಯರು.
ನೋಡುವುದಕ್ಕೂ ಬಹಳ ಚೆನ್ನಾಗಿ ಇರುವ, ಹಾಗೇನೆ ನೀಟ್ ಆಗಿ ಡ್ರೆಸ್ ಮಾಡಿಕೊಂಡಿರುವ ಇವರ ಮುಖವನ್ನು ನೋಡಿದರೆ ನಮ್ಮ ಮುಖದಲ್ಲಿಯೂ ಕೂಡ ಒಂದು ಸಲ ಮುಗುಳ್ನಗೆ ಮೂಡದೆ ಇರುವುದಕ್ಕೆ ಸಾಧ್ಯವೇ ಇಲ್ಲ. ಇನ್ನು ಗಗನಸಖಿಯರು ಫ್ಲೈಟ್ ನಲ್ಲಿ ಏನು ಮಾಡುತ್ತಾರೆ ಯಾವ ರೀತಿಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.
ಹೌದು ಸ್ನೇಹಿತರೆ, ಕೆಲವು ಗಗನಸಖಿಯರು ಕೈಮುಗಿದು ಪ್ರಯಾಣಿಕರನ್ನ ಒಳಗೆ ಬರುವಂತೆ ಆಮಂತ್ರಿಸಿದರೆ ಕೆಲವು ಗಗನಸಖಿಯರು ಕೈಯನ್ನು ಹಿಂದೆ ಕಟ್ಟಿರುತ್ತಾರೆ ಹಿಂದೆ ಕೈ ಕಟ್ಟಿಕೊಂಡು, ಎಷ್ಟು ಪ್ರಯಾಣಿಕರು ಬಂದಿದ್ದಾರೆ ಎಂಬುದನ್ನು ಎಣಿಸಿಕೊಳ್ಳುತ್ತಾರಂತೆ. ಇದು ಎಲ್ಲರ ಎದುರಿನಲ್ಲಿ ಮಾಡಿದರೆ ಸರಿ ಹೋಗುವುದಿಲ್ಲ ಎಂಬ ಕಾರಣಕ್ಕೆ ಈ ರೀತಿ ಟ್ರಿಕ್ಸ್ ಬಳಸುತ್ತಾರೆ ಎಂದು ಹೇಳಲಾಗುತ್ತದೆ. ಇನ್ನು ಕೆಲವು ಫ್ಲೈಟ್ ಗಳು ಲಾಂಗ್ ಜರ್ನಿದ್ದಾಗಿರುತ್ತದೆ.
ಎರಡು-ಮೂರು ಹಗಲು ರಾತ್ರಿ ಫ್ಲೈಟ್ ನಲ್ಲಿ ಕಳೆಯಬೇಕು ಎಲ್ಲಾ ಪ್ರಯಾಣಿಕರು ನಿದ್ದೆ ಮಾಡುವಾಗ ಗಗನಸಖಿಯರು ನಿದ್ದೆ ಮಾಡುವುದಕ್ಕೆ ಅವಕಾಶವೇ ಇಲ್ವಾ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಖಂಡಿತ ಇದೆ ಫ್ಲೈಟ್ ನಲ್ಲಿ ಸಾಕಷ್ಟು ಗಗನಸಖಿಯರು ಇರುತ್ತಾರೆ ಇವರೆಲ್ಲರೂ ಶಿಫ್ಟ್ ಮೇಲೆ ವರ್ಕ್ ಮಾಡುತ್ತಾರೆ. ಒಂದಷ್ಟು ಜನರು ಶಿಫ್ಟ್ ಮುಗಿಯುತ್ತಿದ್ದ ಹಾಗೆ ಅವರು ಕ್ಯಾಬಿನ್ ಗೆ ಹೋಗಿ ರೆಸ್ಟ್ ಮಾಡುತ್ತಾರೆ.
ತಕ್ಷಣವೇ ಇನ್ನೊಂದಿಷ್ಟು ಗಗನಸಖಿಯರು ಬಂದು ಪ್ರಯಾಣಿಕರ ಸೇವೆಯಲ್ಲಿ ತೊಡಗಿ ಕೊಳ್ಳುತ್ತಾರೆ. ಇನ್ನು ವಿಮಾನಯಾನದ ಪ್ರಯಾಣದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಅಹಿತಕರ ಘಟನೆಗಳು ನಡೆದಂತೆ ಗಗನಸಖಿಯರೇ ನೋಡಿಕೊಳ್ಳಬೇಕು ಅವೆಲ್ಲಕ್ಕೂ ಸರಿಯಾದ ತರಬೇತಿ ನೀಡಲಾಗಿರುತ್ತದೆ. ಕೆಲವೊಮ್ಮೆ ವಿಮಾನದಲ್ಲಿ ಕೆಲವು ಪ್ಯಾಸೆಂಜರ್ ಗಳು ಹೇಳಿದ್ದನ್ನ ಕೇಳುವುದಿಲ್ಲ.
ಆ ಸಮಯದಲ್ಲಿ ಅವರು ನಿಯಮವನ್ನು ಸರಿಯಾಗಿ ಪಾಲಿಸುವಂತೆ ಮಾಡುವ ಭಾದ್ಯತೆ ಗಗನಸಖಿಯರದ್ದು. ಅಷ್ಟೇ ಅಲ್ಲ ಪ್ರಯಾಣಿಕರಲ್ಲಿ ಯಾರಿಗಾದರೂ ತಕ್ಷಣಕ್ಕೆ ಹುಷಾರು ತಪ್ಪಿದ್ದರೆ ಫಸ್ಟ್ ಎಡ್ ನಂತಹ ಪ್ರಾಥಮಿಕ ಚಿಕಿತ್ಸೆ ನೀಡುವುದಕ್ಕೂ ಕೂಡ ಗಗನಸಖಿಯರಿಗೆ ತರಬೇತಿ ನೀಡಿರಲಾಗುತ್ತದೆ. ಇನ್ನು ಗಗನಸಖಿಯರಿಗೆ ಪ್ರಯಾಣಿಕರು ಯಾವುದೇ ರೀತಿಯಲ್ಲಿಯೂ ತೊಂದರೆ ಕೊಡದೆ ಇರುವ ರೀತಿಯಲ್ಲಿ ಸೆಲ್ಫ್ ಡಿಫೆನ್ಸ್ ತರಬೇತಿಯನ್ನು ಕೂಡ ನೀಡಲಾಗುತ್ತೆ.
ಇನ್ನು ಗಗನಸಖಿಯರಿಗೆ ಭಾರತದಲ್ಲಿ ಹೆಚ್ಚು ಸಂಬಳ ಕೂಡ ಇದೆ. ಎರಡು ಲಕ್ಷದಿಂದ 20 ಲಕ್ಷದವರೆಗೆ ಗಗನಸಖಿಯರು ಸಂಬಳ ಗಳಿಸುತ್ತಾರೆ. ಹೆಚ್ಚಾಗಿ ವಿಮಾನಗಳಲ್ಲಿಯೇ ತಮ್ಮ ಜೀವನ ಕಳೆಯುವ ಗಗನಸಖಿಯರು ಫ್ಲೈಟ್ ನ ಪೈಲೆಟ್ ಗಳನ್ನೇ ಮದುವೆ ಆಗಿರುವ ಸಾಕಷ್ಟು ಉದಾಹರಣೆಗಳಿವೆ. ಒಟ್ಟಿನಲ್ಲಿ ಗಗನಸಖಿಯರ ಕೆಲಸ ಹೆಚ್ಚು ಆಸಕ್ತಿ ಇರುವವರಿಗೆ ಹಾಗೂ ದೇಶ ವಿದೇಶ ಸುತ್ತಬೇಕು ಎನ್ನುವ ಕನಸು ಇರುವವರಿಗೆ ಹೇಳಿ ಮಾಡಿಸಿದಂತಹ ಕೆಲಸ.