ಇತ್ತೀಚಿಗೆ ಟಾಲಿವುಡ್ ನಟ ವಿಜಯ್ ದೇವರಕೊಂಡ ಹೆಚ್ಚು ಚರ್ಚೆಯಲ್ಲಿದ್ದಾರೆ ಒಂದಾದರೂ ಮೇಲೆ ಒಂದರಂತೆ ಉತ್ತಮ ಸಿನಿಮಾಗಳನ್ನು ನೀಡುತ್ತಿರುವ ವಿಜಯ ದೇವರಕೊಂಡ ತಮ್ಮ ಆಟಿಟ್ಯೂಡ್ ನಿಂದಲೂ ಕೂಡ ಫೇಮಸ್ ಆಗಿದ್ದಾರೆ. ಯಾಕಂದ್ರೆ ತುಂಬಾ ಫೇಮಸ್ ನಟ ಆಗಿದ್ರು ಕೂಡ ವಿಜಯ ದೇವರಕೊಂಡ ಬಹಳ ಸರಳ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಇತ್ತೀಚಿಗೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ವಿಜಯ ದೇವರಕೊಂಡ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಇನ್ನು ವಿಜಯ ದೇವರಕೊಂಡ ಅವರಿಗೆ ಮಹಿಳಾ ಅಭಿಮಾನಿಗಳೇ ಜಾಸ್ತಿ. ಹ್ಯಾಂಡ್ಸಮ್ ಹಂಕ್ ಆಗಿರುವ ವಿಜಯ ದೇವರಕೊಂಡ ಅರ್ಜುನ್ ರೆಡ್ಡಿ ಸಿನಿಮಾದ ಮೂಲಕ ತಮ್ಮ ಚರ್ಮ ಬದಲಿಸಿಕೊಂಡಿದ್ದಾರೆ. ಈ ಸಿನಿಮಾದ ನಂತರ ವಿಜಯ್ ದೇವರಕೊಂಡ ಅವರಿಗೆ ಸಿಗುವ ಅವಕಾಶಗಳು ಕೂಡ ಜಾಸ್ತಿಯಾಗಿವೆ. ಇತ್ತೀಚಿಗೆ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ ತೆರೆ ಕಂಡಿದೆ. ಇದು ಬಾಲಿವುಡ್ ಅಂಗಳದಲ್ಲಿ ವಿಜಯ ಅವರ ಮೊದಲ ಪ್ರಯತ್ನ.
ಇನ್ನು ಈ ಸಿನಿಮಾದ ನಿರ್ಮಾಣ ಹಾಗೂ ಪ್ರಚಾರದ ಹೊಣೆಯನ್ನ ಬಾಲಿವುಡ್ ನ ನಿರ್ಮಾಪಕ ಕರಣ್ ಜೋಹರ್ ಹಾಗೂ ರಣಧೀರ ಸಿಂಗ್ ಹೊತ್ತಿದ್ದರು. ಈ ಹಿಂದೆ ಲೈಗರ್ ಪೋಸ್ಟರ್ ನೋಡಿ ಜನ ಥ್ರಿಲ್ ಆಗಿದ್ದರು ಇನ್ನು ಲೈಗರ್ ಸಿನಿಮಾದ ಟ್ರೈಲರ್ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿತ್ತು. ಆದರೆ ದುರದೃಷ್ಟವಶಾತ ಲೈಗರ್ ಸಿನಿಮಾ ನಿರೀಕ್ಷೆಯ ಮಟ್ಟವನ್ನ ತಲುಪಲಿಲ್ಲ. ಬಾಲಿವುಡ್ ನಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರಲ್ಲಿ ಲೈಗರ್ ಸಿನಿಮಾ ಸೋತಿದೆ. ಇದರಿಂದ ಚಿತ್ರ ತಂಡ ಹಾಗೂ ವಿಜಯ ದೇವರಕೊಂಡ ತುಸು ಬೇಸರಗೊಂಡಿದ್ದಂತೂ ಸತ್ಯ.
ಆದರೆ ವಿಜಯ್ ದೇವರಕೊಂಡ ಅವರ ಲೈಗರ್ ಸಿನಿಮಾದ ಸೋಲನ್ನ ಇಲ್ಲೊಬ್ಬರು ಸಂಭ್ರಮಿಸಿದ್ದಾರೆ ಯಾರು ಗೊತ್ತಾ? ಅವರೇ ನಟಿ ಹಾಗೂ ನಿರೂಪಕಿ ಅನಸೂಯ. ಹೌದು ಇಬ್ಬರು ತೆಲುಗು ಚಿತ್ರರಂಗದಲ್ಲಿಯೇ ಹೆಸರು ಗಳಿಸಿರುವ ಕಲಾವಿದರಾಗಿದ್ದು ಯಾಕೆ ಒಬ್ರ ಮೇಲೆ ಒಬ್ಬರಿಗೆ ಕೋಪ ಅಂತ ನಿಮಗೆ ಅನುಮಾನ ಇರಬಹುದು. ಇದಕ್ಕೂ ಕಾರಣವಿದೆ. ವಿಜಯ್ ದೇವರಕೊಂಡ ಅವರ ನಟನೆಯ ಅರ್ಜುನ್ ರೆಡ್ಡಿ ಸಿನಿಮಾದ ಕಾರ್ಯಕ್ರಮ ಒಂದರಲ್ಲಿ ಅನಸೂಯ ಅವರು ನಿರೂಪಣೆ ಮಾಡುತ್ತಿದ್ದರು.
ಈ ಸಂದರ್ಭದಲ್ಲಿ ವಿಜಯ್ ದೇವರಕೊಂಡ ಅವರ ಜೊತೆ ತುಸು ಮಾತಿನ ಚಕಮಕಿಯಾಗಿತ್ತು. ಮಹಿಳೆಯರ ಬಗ್ಗೆ ವಿಜಯ್ ದೇವರಕೊಂಡ ಅವಮಾನಕರ ಸಂಭಾಷಣೆ ಮಾಡಿದ್ದಾರೆ ಅಂತ ಅನಸೂಯ ಬೇಸರ ವ್ಯಕ್ತಪಡಿಸಿದ್ರು. ವೇದಿಕೆಯಲ್ಲಿ ಅನುಸೂಯ ಅವರು ಆಡಿದ ಮಾತು ವಿಜಯ ದೇವರಕೊಂಡ ಅವರಿಗೆ ಮುಜುಗರವನ್ನು ಕೂಡ ತಂದಿತ್ತು. ಅದಾದ ಬಳಿಕ ಇವರಿಬ್ಬರ ನಡುವೆ ಹೆಚ್ಚು ಕಡಿಮೆ ಮಾತುಕತೆ ಇರಲಿಲ್ಲ ಏನು ವಿಜಯ್ ದೇವರಕೊಂಡ ಅವರ ಯಾವುದೇ ಕಾರ್ಯಕ್ರಮಕ್ಕೆ ಅನುಸೂಯ ಅವರ ಉಪಸ್ಥಿತಿ ಇರುತ್ತಿರಲಿಲ್ಲ.
ಇನ್ನು ವಿಜಯ ದೇವರಕೊಂಡ ಅವರು ಹೆಣ್ಣು ಮಕ್ಕಳ ವಿರುದ್ಧ ಮಾತನಾಡಿದ್ದಾರೆ ಅಂತ ಧ್ವನಿ ಎತ್ತಿದ್ದಕ್ಕೆ ಅನುಸೂಯ ಸಾಕಷ್ಟ ಅವಮಾನ ಹಾಗೂ ನೋವನ್ನು ಕೂಡ ಅನುಭವಿಸಿದ್ದರಂತೆ. ಇದೇ ಕಾರಣಕ್ಕೆ ವಿಜಯ ದೇವರಕೊಂಡ ಅವರಿಂದ ಬಹಳ ದೂರ ಉಳಿದಿದ್ರು ಅನಸೂಯ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋಲುತ್ತಿದ್ದಂತೆ.
ಅನುಸೂಯ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖಾತೆಯಲ್ಲಿ ಕರ್ಮ ಹಿಂದಿರುಗಿ ಬರುತ್ತೆ ಎನ್ನುವಂತಹ ಪೋಸ್ಟ್ ಹಾಕಿಕೊಂಡಿದ್ದಾರೆ. ಹಾಗಾಗಿ ಸದ್ಯಕ್ಕೆ ಲೈಗರ್ ಸಿನಿಮಾ ಸೋತಿದ್ದಕ್ಕೆ ಅನುಸೂಯ ಕೂಡ ತುಸು ಸಂತಸಪಟ್ಟಿದ್ದಾರೆ ಎನ್ನಬಹುದು. ವಿಜಯ್ ದೇವರಕೊಂಡ ಅವರ ಸೋಲಿನ ಮೂಲಕ ಅನುಸೂಯ ಅವರ ಕೋಪ ತಣ್ಣಗಾಗಿರಬಹುದು ಅಂತ ಟಾಲಿವುಡ್ ಮಾತನಾಡಿಕೊಳ್ಳುತ್ತಿದೆ.