Picsart 22 08 02 11 29 15 105

ವಿಚ್ಛೇದನ ಪಡೆದ ಸ್ಟಾರ್ ನಟಿಯರು ಯಾರ್ಯಾರು ಗೊತ್ತಾ? ಇಲ್ಲಿದೆ ನೋಡಿ ಸ್ವಾಮಿ ದೊಡ್ಡ ಲಿಸ್ಟ್!!

ಸುದ್ದಿ

ಸಿನಿಮಾ ಜಗತ್ತು ಅನ್ನುವ ರಂಗೀನ್ ಲೋಕ ಹೊರಗಡೆ ನೋಡುವವರಿಗೆ ಮಾತ್ರ ಚಂದ. ಕೆಲವರಷ್ಟೆ ಸಿನಿಮಾ ಕ್ಷೇತ್ರದಲ್ಲಿ ಹಾಗೂ ವೈಯುಕ್ತಿಕ ಜೀವನದಲ್ಲಿ ಸುಖವಾಗಿ ಇರುತ್ತಾರೆ‌. ಆದರೆ ಅನೇಕರು ಸಿನಿಮಾ ರಂಗದಲ್ಲಿ ಯಶಸ್ಸು ಗಳಿಸಿದರೂ ವೈಯುಕ್ತಿಕ ಜೀವನದಲ್ಲಿ ಸೋತಿರುತ್ತಾರೆ. ಹೌದು, ಅನೇಕ ಸ್ಟಾರ್ ನಟಿಯರು ರೀಲ್ ನಲ್ಲಿ ಸುಖ ಸಂಸಾರ ನಡೆಸಿದರೆ ರಿಯಲ್ ಲೈಫ್ ನಲ್ಲಿ ಸೋತಿರುತ್ತಾರೆ. ಅನೇಕ ನಟಿಯರು ವಿಚ್ಛೇ-ದನ ಪಡೆದು ಗಂಡನಿಂದ ದೂರ ಆಗಿದ್ದಾರೆ.

ಅಂತಹ ನಟಿಯರ ಬಗ್ಗೆ ನಾವಿವತ್ತು ಹೇಳಲಿದ್ದೇವೆ.‌ ಮೊದಲನೆಯದಾಗಿ ನಟಿ ಅನು ಪ್ರಭಾಕರ್. ಇವರು ಕನ್ನಡದ ಹಿರಿಯ ನಟಿ ಜಯಂತಿ ಅವರ ಮಗ ಕೃಷ್ಣಕುಮಾರ್ ಅವರನ್ನು 2002ರಲ್ಲಿ ಮದುವೆಯಾಗಿದ್ದರು. ಆದರೆ ಇಬ್ಬರ ನಡುವಿನ ಭಿನ್ನಾಭಿಪ್ರಾಯದಿಂದಾಗಿ 2014 ರಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇ-ದನ ವನ್ನು ಪಡೆದಿದ್ದರು. ಅದಾದ ನಂತರ ಅನು ಪ್ರಭಾಕರ್ ಅವರು 2016ರಲ್ಲಿ ರಘು ಮುಖರ್ಜಿ ಅವರನ್ನು ಪ್ರೀತಿಸಿ ಮದುವೆಯಾಗಿ, ಇದೀಗ ಸುಖ ಜೀವನ ನಡೆಸುತ್ತಿದ್ದಾರೆ.

ಇದಕ್ಕೆ ಸಾಕ್ಷಿಯಾಗಿ ಅವರಿಗೆ ಹೆಣ್ಣು ಮಗು ಕೂಡ ಇದೆ. ಇನ್ನೊಬ್ಬ ನಟಿ ಶ್ರುತಿ. ಇವರು ಖ್ಯಾತ ನಿರ್ದೇಶಕ ಎಸ್ ಮಹೇಂದರ್ ಅವರನ್ನು ಪ್ರೀತಿಸಿ. 1998ರಲ್ಲಿ ಮದುವೆ ಆಗಿದ್ದರು. ಆದರೆ ಇವರ ಮಧ್ಯೆ ಕೂಡ ಭಿನ್ನಾಭಿಪ್ರಾಯ ಮೂಡು 2009ರಲ್ಲಿ ವಿಚ್ಛೇ-ದನ ವನ್ನು ಪಡೆದಿದ್ದರು.‌ ನಂತರ 2013ರಲ್ಲಿ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಅವರನ್ನು ಮದುವೆಯಾದರೂ, ಅಲ್ಲಿಯೂ ಸಮಸ್ಯೆ ಎದುರಾಗಿ ಒಂದೇ ವರ್ಷದಲ್ಲಿ ಅವರ ದಾಂಪತ್ಯ ‌ಮುರಿದು ಬಿದ್ದು 2014 ರಲ್ಲಿ ಡಿವೋ-ರ್ಸ್ ಪಡೆಯುತ್ತಾರೆ.

ಇದೀಗ ಶ್ರುತಿ ಮಗಳ‌ ಜೊತೆ ಒಬ್ಬಂಟಿ ಜೀವನ ನಡೆಸುತ್ತಿದ್ದಾರೆ. ‌ಮೂರನೆಯ ನಟಿ ಪ್ರೇಮಾ. ಇವರು 2006ರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಜೀವನ್ ಅಪ್ಪಚ್ಚು ಎಂಬುವವರನ್ನು ಮದುವೆಯಾಗುತ್ತಾರೆ. ಆದರೆ ಹತ್ತು ವರ್ಷ ಸಂಸಾರ ನಡೆಸಿದ ಇವರ ಮಧ್ಯೆ ವೈಮನಸ್ಸು ಉಂಟಾಗಿ 2016ರಲ್ಲಿ ಡಿವೋ-ರ್ಸ್ ಪಡೆದು ಇದೀಗ ಏಕಾಂಗಿ ಜೀವನ ನಡೆಸುತ್ತಿದ್ದಾರೆ.

ಅದೇ ರೀತಿ ನಟಿ ಮಾನ್ಯ ನಾಯ್ಡು ಇವರು 2008ರಲ್ಲಿ ಸತ್ಯ ಪಾಟೀಲ್ ಎಂಬುವವರನ್ನು ಮದುವೆಯಾಗಿದ್ದರು. ಆದರೆ ಸಂಸಾರ ನೌಕೆ ಮುರಿದು ಬಿದ್ದು ಇಬ್ಬರು ಕೂಡ ಡಿವೋ-ರ್ಸ್ ಪಡೆದಿದ್ದರು. ನಂತರ ಮಾನ್ಯ ಅವರು 2013 ರಲ್ಲಿ ವಿಕಾಸ್ ಭಾಜಪೈ ಎಂಬುವವರನ್ನು ಮದುವೆಯಾಗಿ, ಗಂಡ ಹಾಗೂ ಮಗಳೊಂದಿಗೆ ಅಮೇರಿಕಾ ದಲ್ಲಿ ಸುಖ ಜೀವನ ನಡೆಸುತ್ತಿದ್ದಾರೆ. ಹಾಗೆಯೇ ದಕ್ಷಿಣ ಭಾರತದ ನಟಿ ಮೀರಾ ಜಾಸ್ಮಿನ್ ನವೀನ್ ಅನ್ನುವವರ ಜೊತೆ 2014ರಲ್ಲಿ ಮದುವೆ ಆಗಿದ್ದರು. ಆದರೆ ಇಬ್ಬರು ಕೂಡ 2016ರಲ್ಲಿ ವಿಚ್ಛೇ-ದನ ನೀಡುತ್ತಾರೆ.

ಖ್ಯಾತ ನಟಿ ಅಮಲಾ ಪೌಲ್ ಖ್ಯಾತ ನಿರ್ದೇಶಕ ವಿಜಯ್ ಅವರನ್ನು 2014ರಲ್ಲಿ ಪ್ರೀತಿಸಿ ಮದುವೆಯಾದರು ನಂತರ 2016ರಲ್ಲಿ ಕೆಲವು ಕಾರಣಾಂತರಗಳಿಂದ ವಿಚ್ಛೇ-ದನ ನೀಡಿ ದೂರ ಆಗಿದ್ದಾರೆ. ‌ಹಾಗೆಯೇ ನಟಿ ಜಯಮಾಲಾ 1985 ರಲ್ಲಿ ನಟ ಟೈಗರ್ ಪ್ರಭಾಕರ್ ಅವರನ್ನು ಮದುವೆ ಆಗಿದ್ದರು. ಮದುವೆ ಆಗಿ ಮೂರೇ ವರ್ಷಕ್ಕೆ ಸಂಸಾರ ಮುರಿದು ಬಿದ್ದಿತ್ತು. ಜಯಮಾಲಾ ಅವರು 1988 ರಲ್ಲಿ ಡಿವೋ-ರ್ಸ್ ಪಡೆದ ನಂತರ 1990 ರಲ್ಲಿ ರಾಮಚಂದ್ರ ಅವರನ್ನು ಮದುವೆಯಾಗುತ್ತಾರೆ.

ಇನ್ನು ಇದೀಗ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ನಟಿ ಸಮಂತಾ ರುತ್ ಪ್ರಭು ಅವರು 2017 ರಲ್ಲಿ ನಟ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಆದರೆ ಅದು ಯಾವುದೋ ವೈಯುಕ್ತಿಕ ಕಾರಣದಿಂದಾಗಿ 2021 ರಲ್ಲಿ ಡಿವೋ-ರ್ಸ್ ಪಡೆದು ದೂರ ಆಗಿದ್ದಾರೆ. ಈ ಮಾಹಿತಿ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *