ಮದುವೆ ಎನ್ನುವುದು ಒಂದು ಅದ್ಭುತ ಬಂಧ. ಗಂಡ ಹೆಂಡತಿ ಈ ಬಂಧನದಲ್ಲಿ ಬಂಧಿಯಾಗಿ ಒಟ್ಟಿಗೆ ಜೀವನ ನಡೆಸುತ್ತಾರೆ. ಕಷ್ಟ ಸುಖ ಎಲ್ಲವನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ. ಆದರೆ ದುರದೃಷ್ಟವಶಾತ್ ಎಲ್ಲರ ಜೀವನದಲ್ಲಿಯೂ ಸಂಸಾರ ಎನ್ನುವುದು ಸುಖವಾಗಿ ಇರುವುದಿಲ್ಲ. ಎಷ್ಟು ಜನರಿಗೆ ಅದು ಕಬ್ಬಿಣದ ಕಡಲೆ. ಸಂಸಾರದಲ್ಲಿ ಗಂಡಸರು ಮಾತ್ರ ಎಲ್ಲವನ್ನು ಸರಿದೂಗಿಸಿಕೊಂಡು ಹೋಗಬೇಕು ಎನ್ನುವ ಸಾಕಷ್ಟು ಮಹಿಳೆಯರಿದ್ದಾರೆ.
ಆದರೆ ಇದು ಖಂಡಿತವಾಗಿಯೂ ತಪ್ಪು. ಸಂಸಾರದಲ್ಲಿ ಹೆಣ್ಣಿನ ಪಾತ್ರ ಬಹಳ ಮುಖ್ಯ ಆಗಿರುತ್ತೆ ಇದನ್ನು ಅರ್ಥಮಾಡಿಕೊಳ್ಳದೆ ಇದ್ರೆ ಸಂಸಾರದಲ್ಲಿ ಎಡವುದು ಖಂಡಿತ. ಒಂದು ಹೆಣ್ಣು ಮದುವೆಯಾಗಿ ಗಂಡರ ಮನೆಗೆ ಹೋದ ಬಳಿಕ ಆಕೆಯ ಸರ್ವಸ್ವವು ಆತನೆ. ಅವರ ಮನೆಯವರ ಜೊತೆ ಚೆನ್ನಾಗಿ ಬೆರೆತು ಅವರೊಂದಿಗೆ ಕಾಲ ಕಳೆಯುತ್ತಾಳೆ.
ಇದೇ ರೀತಿ ಗಂಡಿಗೂ ಕೂಡ ಆಗುತ್ತೆ ಬೇರೆ ಮನೆಯ ಹುಡುಗಿಯನ್ನ ಮನೆಗೆ ಕರೆದುಕೊಂಡು ಬಂದು ಅವಳ ಬಹುದೊಡ್ಡ ಜವಾಬ್ದಾರಿಯನ್ನ ಆತ ನಿಭಾಯಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸಂಸಾರ ಮುರಿಯುವುದಕ್ಕೆ ಹೆಣ್ಣು ಕೂಡ ಅಷ್ಟೇ ಕಾರಣ. ಅದೆಷ್ಟೋ ಕುಟುಂಬಗಳಲ್ಲಿ ಗಂಡು ಎಷ್ಟೇ ಪ್ರಯತ್ನ ಪಟ್ರು ಹೆಂಡತಿಯನ್ನು ಸರಿಯಾಗಿ ಇಟ್ಟುಕೊಳ್ಳುವುದಕ್ಕೆ ಆಗುವುದಿಲ್ಲ. ಆಕೆಯ ಆಕರ್ಷಣೆಯೇ ಬೇರೆ ಆಗಿರುತ್ತೆ.
ಇಂತಹ ಸಂದರ್ಭದಲ್ಲಿ ಮದುವೆಯಾದ ಗಂಡಸು ಸಾಕಷ್ಟು ಕಷ್ಟವನ್ನು ಕೂಡ ಅನುಭವಿಸುತ್ತಾನೆ. ಹೌದು, ಗಂಡು ಮಕ್ಕಳ ಕಷ್ಟ ಯಾರ ಅನುಭವಕ್ಕೂ ಬರುವುದಿಲ್ಲ. ಮನೆಯಲ್ಲಿ ಏನಾದರೂ ಮಾಡಿದರೆ ನೀನೆ ಅನುಸರಿಸಿಕೊಂಡು ಹೋಗು ಎನ್ನುತ್ತಾರೆ. ಆದರೆ ಮದುವೆಯಾದ ಹೆಂಡತಿ ಕೂಡ ಗಂಡನ ಜೊತೆ ಅಷ್ಟೇ ಸರಿಯಾಗಿ ಇರಬೇಕು.
ಇಲ್ಲವಾದರೆ ಆತನಿಗೆ ಸಾಕಷ್ಟು ತೊಂದರೆ ಆಗುತ್ತೆ ಇದೇ ಕಾರಣಕ್ಕೆ ಇಂದು ವಿ-ಚ್ಛೇದನದ ಕೇಸ್ ಗಳು ಕೂಡ ಜಾಸ್ತಿಯಾಗುತ್ತಿವೆ. ಹೌದು ಸ್ನೇಹಿತರೆ, ವಿ-ಚ್ಛೇದನ ಎಂದ ಕೂಡಲೇ ಗಂಡಿನಿಂದ ಹೆಣ್ಣಿಗೆ ತೊಂದರೆ ಆಗುತ್ತಿದೆ ಎಂದೇ ಎಲ್ಲರೂ ಊಹಿಸುತ್ತಾರೆ ಆದರೆ ಹಲವಾರು ಪ್ರಕರಣಗಳಲ್ಲಿ ಇದು ಉಲ್ಟಾಆಗಿರುತ್ತೆ. ಎಷ್ಟೋ ವಿ-ಚ್ಛೇದನದ ಕೇಸ್ ಗಳಲ್ಲಿ ಹೆಂಡತಿಯಿಂದ ಗಂಡನಿಗೆ ಸಾಕಷ್ಟು ಸಮಸ್ಯೆ ಉಂಟಾಗಿರುತ್ತೆ.
ಆ ಕಾರಣಕ್ಕಾಗಿ ಆತ ವಿಚ್ಛೇದನದ ಮೊರೆ ಹೋಗಿರುತ್ತಾನೆ. ಇನ್ನು ಕೆಲವು ವಿ-ಚ್ಛೇಧಿತ ಗಂಡಸರನ್ನ ಯಾವುದಾದರು ಮಹಿಳೆ ಮದುವೆಯಾಗಲು ಮುಂದಾದರೆ ಅದು ನಿಜಕ್ಕೂ ಅದೃಷ್ಟ. ವಿ-ಚ್ಛೇಧಿತ ಗಂಡಸರ ಮನಸ್ಸು ಬಹಳ ಮೃದುವಾಗಿರುತ್ತದೆ. ತಾನು ಇನ್ನೊಂದು ಸಂಬಂಧದಲ್ಲಿ ಎಡವಬಾರದು ಎನ್ನುವ ಕಲ್ಪನೆ ಅವರಲ್ಲಿರುತ್ತದೆ.
ಹಾಗಾಗಿ ವಿ-ಚ್ಛೇದನಗೊಂಡ ಪುರುಷರನ್ನ ಮದುವೆಯಾದರೆ ಅವರು ಆ ಹೆಣ್ಣನ್ನು ಬಹಳ ಸಂತೋಷವಾಗಿ ನೋಡಿಕೊಳ್ಳುತ್ತಾರೆ. ಅವರಿಗೆ ನಿಜವಾಗಿ ಬೇಕಾದ ಎಲ್ಲಾ ಸಪೋರ್ಟ್ ನೀಡುತ್ತಾರೆ. ಅಷ್ಟೇ ಅಲ್ಲ ಆತನ ಮನೆಯವರು ಕೂಡ ಎರಡನೇ ಸೊಸೆಯಾಗಿ ಬಂದರು ಆಕೆಯನ್ನ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.
ಮೊದಲನೆಯ ಸಂಬಂಧದಲ್ಲಿ ಆದಂತಹ ತೊಂದರೆ ಆಗದ ರೀತಿಯಲ್ಲಿ ಎರಡನೇ ಮದುವೆಯಾಗಿ ಬಂದ ಹೆಣ್ಣನ್ನ ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ. ಹಾಗಾಗಿ ವಿಚ್ಛೇದಿತ ಪುರುಷರನ್ನ ಮದುವೆಯಾಗುವುದು ನಿಜಕ್ಕೂ ಒಳ್ಳೆಯದು. ಅವರಿಗೆ ಸಂಸಾರದ ಬಗ್ಗೆ ಹೆಚ್ಚು ಅರಿವಿರುತ್ತೆ. ಅವರಲ್ಲಿರುವ ತಾಳ್ಮೆ ಉತ್ತಮ ಮನೋಭಾವ ಎರಡನೇ ಸಂಬಂಧದಲ್ಲಿ ಇನ್ನಷ್ಟು ಗಟ್ಟಿಯಾಗುತ್ತೆ. ಜೊತೆಗೆ ಸಂಸಾರ ಸುಖವಾಗಿ ಸಾಗುತ್ತದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.