ಸಾಮಾನ್ಯವಾಗಿ ಇತ್ತೀಚಿನ ಚಿತ್ರಗಳು ಹೇಗಿರುತ್ತವೆ ಅಂದರೆ ಒಂದು ಸಲದ ಎಂಟರ್ಟೈನ್ಮೆಂಟ್ ಅಷ್ಟೇ. ನೀವು ಥಿಯೇಟರ್ ಗೆ ಹೋಗಿ ಒಮ್ಮೆ ಸಿನಿಮಾ ನೋಡಿದ್ರೆ ಮತ್ತೆ ಅದನ್ನ ಮರೆತುಬಿಡುತ್ತೀರಿ. ಆದರೆ ಮೊದಲಿನ ಚಿತ್ರಗಳು ಹಾಗಿರಲಿಲ್ಲ ದಶಕದ ಹಿಂದಿನ ಚಿತ್ರಗಳನ್ನೆಲ್ಲ ನೋಡಿದರೆ ಮತ್ತೊಮ್ಮೆ ನೋಡಬೇಕು ಅನ್ನಿಸುತ್ತೆ ಅಲ್ಲ ಒಮ್ಮೆ ನೋಡಿದರೆ ಸದಾ ನೆನಪಿನಲ್ಲೂ ಇರುತ್ತೆ. ಅಲ್ಲದೆ ಆ ಸಮಯದಲ್ಲಿ ನಟಿಸುತ್ತಿದ್ದ ಹೀರೋಯಿನ್ ಗಳ ಅಭಿನಯವು ಕೂಡ ಅಷ್ಟೇ ಅದ್ಭುತವಾಗಿ ಇರುತ್ತಿತ್ತು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಇರುತ್ತಿತ್ತು.. ಹಾಗೆ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಒಂದು ಸುಂದರವಾದ ಮುಖ ಅಂದ್ರೆ ಮೊನಾಲಿಸಾ ಸಿನಿಮಾ ಖ್ಯಾತಿಯ ಸದಾ ಅವರದ್ದು.
ನಟಿ ಸದಾ ಕನ್ನಡದಲ್ಲಿ ಮೊನಾಲಿಸಾ, ಮೈಲಾರಿ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರು ಹೆಚ್ಚು ಗುರುತಿಸಿಕೊಂಡಿದ್ದು ತಮಿಳು ಸಿನಿಮಾಗಳಲ್ಲಿ. ತಮಿಳಿನಲ್ಲಿ ಅನ್ನಿಯನ್ ಸಿನಿಮಾದ ಮೂಲಕ ದೊಡ್ಡ ಬ್ರೇಕ್ ಪಡೆದುಕೊಂಡು ಬಹು ಬೇಡಿಕೆಯ ನಟಿ ಎನಿಸಿಕೊಂಡರು. ಆದರೆ ಕ್ರಮೇಣ ತಮ್ಮ ವೃತ್ತಿ ಜೀವನದ ಕಡೆಗೆ ಹೆಚ್ಚು ಗಮನಹರಿಸಲಿಲ್ಲ ಸದಾ. ಹಾಗಾಗಿ ಅವರಿಗೆ ಸಿನಿಮಾಗಳ ಆಫರ್ ಗಳು ಕೂಡ ಕಡಿಮೆಯಾದವು. ಆದರೆ ಸದಾಅವರ ಬಗ್ಗೆ ಜನರಿಗೆ ಆಸಕ್ತಿಯೇನೂ ಕಡಿಮೆಯಾಗಿಲ್ಲ. ಅವರು ಈಗಲೂ ಸಿನಿಮಾ ಒಪ್ಪಿಕೊಂಡರೆ ಅವರ ಅಭಿಮಾನಿಗಳು ಸಂತಸಪಡುತ್ತಾರೆ.
ನಟಿ ಸದಾ ಈಗ ಸಿನಿಮಾರಂಗದಲ್ಲಿ ಅಷ್ಟು ಆಕ್ಟಿವ್ ಇಲ್ಲ. ಆದರೆ ಅವರು ಯಾವಾಗಲೂ ಸುದ್ದಿಯಲ್ಲಿ ಇರುತ್ತಾರೆ. ತಮ್ಮ ಸೌಂದರ್ಯದಿಂದ ಸಾಕಷ್ಟು ಜನರನ್ನ ಅಟ್ರಾಕ್ಟ್ ಮಾಡಬಲ್ಲ ಸದಾ ಸಾಮಾಜಿಕ ಜಾಲತಾಣದಲ್ಲಿಯೂ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಆ ಮೂಲಕ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ ಸದಾ.
ಇತ್ತೀಚಿಗೆ ಮದುವೆಯಾಗಬೇಕೆಂದರೆ ಆ ಹುಡುಗನ ಗುಣ ಹೇಗಿರಬೇಕು ಎನ್ನುವ ವಿಷಯದ ಬಗ್ಗೆ ಮಾತನಾಡಿದ ಸದಾ ಅವರ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಗಳು ಬಂದಿದ್ದವು. ಇದೀಗ ಸದಾ ಅವರಿಗೆ 38 ವರ್ಷ ನೋಡಿದರೆ ಹಾಗೆ ಅನ್ನಿಸುವುದಿಲ್ಲ ಬಿಡಿ. ಆದರೂ ಮದುವೆಯಾಗದೆ ದೂರ ಇರೋದಕ್ಕೆ ಕಾರಣ ಏನು ಅಂತ ಎಲ್ಲರಿಗೂ ಕುತೂಹಲವಿತ್ತು. ಇದೀಗ ಆ ಕುತೂಹಲಕ್ಕೆ ಸದಾ ಉತ್ತರ ನೀಡಿದ್ದಾರೆ.
ಸದಾ ಹೇಳಿದ್ದೇನು! ‘ಒಬ್ಬರನ್ನ ಅವಲಂಬಿಸಿ ಮದುವೆಯಾದರೆ ಅಲ್ಲಿ ಸುಖ ಇರೋದಿಲ್ಲ, ಒಬ್ಬರಿಗೆ ಇನ್ನೊಬ್ಬರ ಅವಲಂಬನೆ ಯಾಕೆ ಬೇಕು ತಾನು ಮದುವೆಯಾಗಲು ಬಯಸುವವನು ಸಸ್ಯಾಹಾರಿ ಆಗಿರಬೇಕು ಶ್ರೀಮಂತನಾಗಿರಬೇಕು ಎನ್ನುವ ಆಸೆ ಅಲ್ಲ ಆದರೆ ಯಾರನ್ನಾದರೂ ಅವಲಂಬಿಸದೆ ಇದ್ದರೆ ಸಾಕು’ ಎನ್ನುವುದು ಸದಾ ಅವರ ಬಯಕೆ. ಇನ್ನು ಹತ್ತು ಜನರು ಮದುವೆಯಾದರೆ ಅದರಲ್ಲಿ ಐದು ಜನ ಸುಖವಾಗಿ ಇರಬಹುದು ಮದುವೆ ನಂತರ ಎಲ್ಲರ ಜೀವನ ಖುಷಿಯಾಗಿ ಇರುವುದಿಲ್ಲ ಎನ್ನುವ ಸದಾ ಅವರ ಹೇಳಿಕೆ ಈಗಾಗಲೇ ತುಂಬಾ ಚರ್ಚೆಗೆ ಕಾರಣವಾಗಿದೆ.
ನಟಿ ಸದಾ ಸಿನಿಮಾಗಳಲ್ಲಿ ನಟಿಸದೆ ಇದ್ದರೂ ಸಾಕಷ್ಟು ರಿಯಾಲಿಟಿ ಶೋಗಳ ಮೂಲಕ ನೃತ್ಯ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಹೆಚ್ಚು ಚಾಲ್ತಿಯಲ್ಲಿದ್ದಾರೆ ಅಲ್ಲದೆ ಕೆಲವು ಡ್ಯಾನ್ಸ್ ಶೋಗಳ ತೀರ್ಪುಗಾರರಾಗಿಯು ಕಾಣಿಸಿಕೊಳ್ಳುತ್ತಿದ್ದಾರೆ. ಕಿರುತೆರೆಯ ಪ್ರೇಕ್ಷಕರಿಂದ ಮೆಚ್ಚುಗೆಯ ಪಡೆದುಕೊಂಡಿರುವ ಸದಾ ಆಗಾಗ ತಮ್ಮ ಲೇಟೆಸ್ಟ್ ಫೋಟೋ ಶೂಟ್ ಗಳನ್ನ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.