ನಿವೇದಿತಾ ಗೌಡ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಜೂಮ್ ನಲ್ಲಿ ಇದ್ದಾರೆ. ಅವರ ಹವಾ ಜೋರಾಗಿದೆ. ದಿನವೂ ಸಾಕಷ್ಟು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ ನಿವೇದಿತಾ ಗೌಡ. ನಿವೇದಿತಾ ಗೌಡ ಬಿಗ್ ಬಾಸ್ ನಂತರ ಕನ್ನಡದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ ಮೈಸೂರಿನ ಈ ಚಂದುಳ್ಳಿ ಚೆಲುವೆ ಇನ್ಸ್ಟಾಗ್ರಾಮ್ ನಲ್ಲಿ ಇಂದು ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ.
ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರು ಬಿಗ್ ಬಾಸ್ ಮನೆಯಲ್ಲಿ ಭೇಟಿಯಾದವರು. ನಂತರ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ 2019 ರಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇದಾದ ಬಳಿಕ ನಿವೇದಿತ ಗೌಡ ಕಿರುತೆರೆಯಲ್ಲಿ ತುಂಬಾನೇ ಬ್ಯುಸಿಯಾಗಿದ್ದಾರೆ. ಒಂದಲ್ಲ ಒಂದು ರಿಯಾಲಿಟಿ ಶೋ ಗಳಲ್ಲಿ ನಿವೇದಿತಾ ಗೌಡ ಕಾಣಿಸಿಕೊಳ್ಳುತ್ತಾರೆ.
ಚಂದನ್ ಶೆಟ್ಟಿ ಕೂಡ ರಾಪರ್ ಹಾಡುಗಳನ್ನು ಮಾಡುವುದರ ಜೊತೆಗೆ ಇತ್ತೀಚಿಗೆ ಸಿನಿಮಾಗಳಲ್ಲಿಯೂ ಕೂಡ ನಟಿಸುತ್ತಿದ್ದಾರೆ. ನಿವೇದಿತಾ ಗೌಡ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇನ್ನು ಇತ್ತೀಚಿಗೆ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ವಿಶೇಷ ಸಂಚಿಕೆಯಲ್ಲಿ ನಿವೇದಿತಾ ಭಾಗವಹಿಸಿದ್ದರು. ಇದೀಗ ಹಾಸ್ಯಮಯ ಮಾತುಗಳನ್ನ ಹೆಚ್ಚಾಗಿ ಅಭ್ಯಾಸ ಮಾಡಿಕೊಂಡಿರುವ ನಿವೇದಿತ ಗೌಡ ಎಲ್ಲರ ನಗಿಸುವಲ್ಲಿಯೂ ಕೂಡ ಗೆದ್ದಿದ್ದಾರೆ.
ಇನ್ನು ನಿವೇದಿತಾ ಗೌಡ, ಚಂದನ್ ಶೆಟ್ಟಿ ಜೊತೆ ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ವಿಡಿಯೋಗಳನ್ನು ಮಾಡಿ ಹಂಚಿಕೊಳ್ಳುತ್ತಾರೆ. ಇತ್ತೀಚಿಗೆ ನಿವೇದಿತಾ ಗೌಡ ತನ್ನ ಪತಿ ಚಂದನ್ ಶೆಟ್ಟಿ ಜೊತೆ ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದರು. ಇದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ವಿಡಿಯೋ ನೋಡಿ ಕೆಲವು ಜನರು ಸೂಪರ್ ಜೋಡಿ ಎಂದು ಹೊಗಳಿದರೆ ಇನ್ನು ಕೆಲವರು ಚೆನ್ನಾಗಿ ಬೈದಿದ್ದಾರೆ.
ಇತ್ತೀಚಿಗೆ ಚಂದನ್ ಶೆಟ್ಟಿ ಬೇರೆ ಕಡೆ ಟ್ರಾವೆಲ್ ಮಾಡಲು ಹೊರಟಿದ್ದರು. ಈ ಸಮಯದಲ್ಲಿ ನಿವೇದಿತಾ ಗೌಡ ಪತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಟ್ಯಾಗ್ ಲೈನ್ ಬರೆದು ಒಂದು ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಇಂಗ್ಲಿಷ್ ಹಾಡೊಂದಕ್ಕೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಆಕ್ಟ್ ಮಾಡಿದ್ದು, ಇದರಲ್ಲಿ ನಿವಿ ಹಾಗೂ ಚಂದನ್ ಇಬ್ಬರು ತುಟಿಗೆ ತುಟಿ ತಾಗಿಸಿ ಮುತ್ತಿಕುವ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಇವರಿಬ್ಬರ ನಡುವೆ ಆಳವಾದ ಪ್ರೀತಿ ಇದೆ ಎನ್ನುವುದು ಈ ವಿಡಿಯೋ ನೋಡಿದ್ರೆ ಅರ್ಥವಾಗುತ್ತೆ. ಈ ವಿಡಿಯೋವನ್ನು ನೋಡಿ ನಿವೇದಿತ ಗೌಡ ಅವರ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಆಹಾ.. ಎಂತಹ ಅದ್ಭುತ ಪ್ರೀತಿ ನೋಡಿ ಅಂತ ಕಮೆಂಟ್ ಮಾಡಿದ್ದಾರೆ.
ಇದರ ಜೊತೆಗೆ ಇನ್ನೂ ಒಂದಿಷ್ಟು ಜನ ಇಂತಹ ವಿಡಿಯೋಗಳನ್ನು ಸೋಶಿಯಲ್ ಜಾಲತಾಣದಲ್ಲಿ ಹಾಕಬಾರದು ಎಂದು ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರನ್ನ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿವೇದಿತಾ ಗೌಡ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೀವು ಈ ವಿಡಿಯೋವನ್ನು ವೀಕ್ಷಿಸಬಹುದು. ಈ ಸುದ್ದಿ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ನಮಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ.
View this post on Instagram