ಕನ್ನಡ ಬಿಗ್ ಬಾಸ್ ಸೀಸನ್ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಇನ್ನು ಫೈನಲ್ ತಲುಪುವುದಕ್ಕೆ ಇರುವುದು ಅದರಲ್ಲೂ ಕಳೆದ ವಾರ ಹಾಗೂ ರಿಯಲ್ ಎನ್ನುವ ಟಾಸ್ಕ್ ನಲ್ಲಿ ನಡೆದ ಘಟನೆಗಳ ಬಗ್ಗೆ ಕ್ಲಾರಿಫೈ ಮಾಡಿದ್ರು ಕಿಚ್ಚ ಸುದೀಪ್. ಸದ್ಯ ಬಿಗ್ ಬಾಸ್ ಮನೆಯಲ್ಲಿ ರೂಪ ರಾಜಣ್ಣ ಉಳಿದ ಎಲ್ಲಾ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಈಗಾಗಲೇ ದಿವ್ಯ ಉರುಡುಗ, ಅಮೂಲ್ಯ ಗೌಡ ಮೊದಲಾದವರ ಜೊತೆ ಮಾತಿನ ಚಕಮುಕಿ ನಡೆದಿದೆ.
ರೂಪೇಶ ರಾಜಣ್ಣ ಅವರ ಬಗ್ಗೆ ದಿವ್ಯ ಉರುಡುಗ ಸಾಕಷ್ಟು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ನನಗೆ ಮನಸ್ಸಿನಲ್ಲಿ ಒಬ್ಬರ ಬಗ್ಗೆ ಕೆಟ್ಟ ಭಾವನೆಗಳನ್ನು ಇಟ್ಟುಕೊಂಡು ಅವರ ಎದುರಲ್ಲಿ ಚೆನ್ನಾಗಿ ಮಾತನಾಡೋದಕ್ಕೆ ಬರೋದಿಲ್ಲ. ನಾನು ರೂಪೇಶ್ ರಾಜಣ್ಣ ಅವರ ಬಳಿ ಚೆನ್ನಾಗಿಯೇ ಇದ್ದೆ. ಆದರೆ ಅವರು ಒಂದು ಹಾಡಿನ ವಿಷಯಕ್ಕೆ ಅವರಿಗೆ ನನ್ನ ಬಗ್ಗೆ ಇರುವ ಕೆಟ್ಟ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
ನನಗೆ ಅವರ ತರ ಇರೋದಕ್ಕೆ ಬರಲ್ಲ ಎಂದು ಕಿಚ್ಚ ಸುದೀಪ್ ಅವರ ಎದುರು ನಡೆದ ಘಟನೆಯನ್ನು ವಿವರಿಸಿದ್ರು ದಿವ್ಯ ಉರುಡುಗ. ಅದೇ ರೀತಿ ರೂಪೇಶ್ ರಾಜಣ್ಣ ಕೂಡ ದಿವ್ಯ ಉರುಡುಗ ಅವರ ಮೇಲೆ ಸಾಕಷ್ಟು ಕಂಪ್ಲೇಂಟ್ ಮಾಡಿದ್ದಾರೆ ಅವರು ಬರೆದ ಹಾಡಿಗೆ ರೂಪೇಶ ರಾಜಣ್ಣ ಮಾಡಿದ್ದಾರೆ ಎಂದು ಎಲ್ಲಿಯೂ ಹೇಳಲಿಲ್ಲ ಅಂತ ದಿವ್ಯ ಅವರ ಮೇಲೆ ಆರೋಪ ಮಾಡಿದ್ದಾರೆ.
ಇನ್ನು ಅಮೂಲ್ಯ ಗೌಡ ಅವರ ವಿಚಾರಕ್ಕೆ ಬಂದ್ರೆ ರೂಪೇಶ್ ರಾಜಣ್ಣ ಅವರು, ತೀರ್ಪುಗಾರರ ಸೀಟ್ ಮೇಲೆ ಕುಳಿತು ಅಮೂಲ್ಯ ಗೌಡ ಫೇಕ್ ಎಂದು ಹೇಳಿದ್ದರು. ನಂತರ ಅದೇ ರೀತಿ ಟಾಸ್ಕ್ ಆಡಿ ತೀರ್ಪುಗಾರರ ಸೀಟ್ ಮೇಲೆ ಕುಳಿತುಕೊಳ್ಳಲು ಅವಕಾಶ ಗೆಟ್ಟಿಸಿಕೊಂಡ ಅಮೂಲ್ಯ ರೂಪೇಶ್ ರಾಜಣ್ಣ ಅವರನ್ನು ದೊಡ್ಡ ಫೇಕ್ ಎಂದು ಹೇಳುವುದರ ಮೂಲಕ ರೂಪೇಶ್ ರಾಜಣ್ಣ ಅವರಿಗೆ ಟಾಂಗ್ ಕೊಟ್ಟಿದ್ರು.
ಇನ್ನು ಕಿಚ್ಚ ಸುದೀಪ ಅವರ ಎದುರು ಈ ವಿಷಯ ಬಂದಾಗ ರೂಪೇಶ್ ರಾಜಣ್ಣ ಅಮೂಲ್ಯ ಅವರ ಬಗ್ಗೆ ಈ ರೀತಿ ಹೇಳಿದ್ದಾರೆ. ಅವಕಾಶ ಸಿಕ್ರೆ ಎಲ್ಲರ ಮುಖವಾಡ ಕಳಚಿ ಇಡ್ತೀನಿ ಅಂತ ರೂಪೇಶ್ ರಾಜಣ್ಣ ಹೇಳಿದ್ರು. ವೇದಿಕೆಯ ಮೇಲೆ ನಿಂತು ಕಿಚ್ಚ ಸುದೀಪ್ ನಿಮಗೆ ಈಗ ಅವಕಾಶ ಕೊಡ್ತೀನಿ ಯಾರ್ಯಾರು ಮುಖವಾಡ ಕಾಣುತ್ತೀರಿ ಹೇಳಿ ನೋಡೋಣ ಎಂದರು.
ಆಗ ಅಮೂಲ್ಯ ಗೌಡ ಅವರ ಬಗ್ಗೆ ರೂಪೇಶ್ ರಾಜಣ್ಣ ಅವರಿಗೆ ತಾವೇ ಹೇಳಿದ್ದು ಕರೆಕ್ಟ್ ಎನ್ನುವ ಭಾವನೆ ಇದೆ ಎಂದು ಅಮೂಲ್ಯ ಗೌಡ ಅವರ ಬಗ್ಗೆ ಹೇಳಿದ್ದಾರೆ. ಇದಾದ ಬಳಿಕ ರೂಪ ರಾಜಣ್ಣ ಹಾಗೂ ಅಮೂಲ್ಯ ನಡುವೆ ಮತ್ತೆ ಮಾತಿನ ಚಕಮಕಿ ನಡೆದಿತ್ತು ನಿಮ್ಮ ಮನಸ್ಸಿನಲ್ಲಿ ಇಷ್ಟೊಂದನ್ನ ಇಟ್ಟುಕೊಂಡು ನನ್ನ ಬಳಿ ಹೇಳಲೇ ಇಲ್ಲ ಸುದೀಪ್ ಅವರ ಎದುರು ಹೇಳಿದ್ರಿ.
ನಿಮ್ಮ ಹಾಗೆ ನನಗೆ ಒಳಗೊಂದು ಹೊರಗೊಂದು ಮಾಡೋದಕ್ಕೆ ಬರೋದಿಲ್ಲ ಮೂರು ಸಾರಿ ನಿಮ್ಮ ಜೊತೆ ಮಾತನಾಡಿದರೂ ನೀವು ನಿಮ್ಮ ಮನಸ್ಸಿನಲ್ಲಿ ಇಂತಹ ಭಾವನೆ ಇದೆ ಅಂತ ಹೇಳಲಿಲ್ಲ. ಇನ್ಮೇಲೆ ನನ್ನ ಬಳಿ ಮಾತನಾಡಲೇಬೇಡಿ, ಎಂದು ಅಮೂಲ್ಯ ಖಡಕ್ ಆಗಿ ಹೇಳಿದ್ದಾರೆ. ಅದೇ ರೂಪೇಶ್ ರಾಜಣ್ಣ ನಿನ್ನಿಂದ ನನಗೆ ಏನೂ ಆಗಬೇಕಾದ್ದು ಇಲ್ಲ ನೀನೇ ಕರೆಕ್ಟ್ ಬಿಡು ಎಂದು ಸುಮ್ಮನಾದರು.